ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್!
ಒನ್‌ಪ್ಲಸ್ ಸಂಸ್ಥೆ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ತನ್ನ ವೈವಿಧ್ಯ ಮಯ ಫೀಚರ್ಸ್ ಹಾಗೂ ವಿಶೇಷ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಒನ್‌ಪ್ಲಸ್ ಸಂಸ್ಥೆ ಶೀಘ್ರದಲ್ಲೇ ತನ್ನ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್ ಅನ್ನು ಒನ್‌ಪ್ಲಸ್ 8T ಎಂದು ಗುರುತಿಸಲಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್ ತನ್ನ ವಿನ್ಯಾಸ ಮತ್ತು ಫೀಚರ್ಸ್‌ಗಳಲ್ಲಿ ಭಾರಿ ಬದಲಾವಣೆಯನ್ನು ತರಲಿದೆ ಎಂದು ವರದಿಯಾಗಿದೆ.

ಹೌದು, ಒನ್‌ಪ್ಲಸ್ ಸಂಸ್ಥೆ ತನ್ನ ಹೊಸ ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇನ್ನು ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್ ಬಾಗಿದ ಅಂಚಿನ ಡಿಸ್‌ಪ್ಲೇ ವಿನ್ಯಾಸವನ್ನು ಕೈಬಿಟ್ಟು ಫ್ಲಾಟ್-ಎಡ್ಜ್ ಡಿಸ್‌ಪ್ಲೇ ವಿನ್ಯಾಸಕ್ಕೆ ಬದಲಾಯಿಸಿರುವ ಸಾಧ್ಯತೆ ಇದೆ. ಇನ್ನು ಈ ಡಿಸ್‌ಪ್ಲೇ ಫುಲ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಹೊಂದಿರುವ 6.5 ಇಂಚಿನ ಡಿಸ್‌ಪ್ಲೇ ಆಗಿರಲಿದೆ. ಅಲ್ಲದೆ ಇದು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿನ್ಯಾಸ ಏನು ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ವಿಶೇಷ
ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 402 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಪ್ರೊಸೆಸರ್ ಬಲ
ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865ಚಿಪ್ ಸೆಟ್ ಪ್ರೊಸೆಸರ್ ಅನ್ನು ಹೊಂದಿರುವ ಸಾಧ್ಯತೆ ಇದೆ. ಜೊತೆಗೆ ಇದು ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಇದರ ಬೇಸ್ ಮಾಡೆಲ್ 8GB RAM ಮತ್ತು 128GB ಸಂಗ್ರಹ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರ ಟಾಪ್-ಎಂಡ್ ರೂಪಾಂತರವು 12GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ.

ಕ್ಯಾಮೆರಾ ವಿನ್ಯಾಸ
ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾವೈಡ್ ಕ್ಯಾಮೆರಾ, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್, ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿರಲಿದೆ ಎಂದು ಹೇಳಲಾಗ್ತಿದೆ.

ಬ್ಯಾಟರಿ ಮತ್ತು ಇತರೆ
ಇದು 4500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿರಲಿದೆ. ಇದು 65W ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದ್ದರಿಂದ, 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಬ್ಯಾಟರಿ ಸಂಪೂರ್ಣವಾಗಿ ರೀಚಾರ್ಜ್ ಆಗುತ್ತದೆ ಎಂದು ನೀವು ನಿರೀಕ್ಷಿಸಬಹುದು. ಸದ್ಯ ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಆರಂಭದಲ್ಲಿ ಫೋನ್ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಅನ್ನೊದ ಮಾತ್ರ ಇನ್ನು ಲಭ್ಯವಾಗಿಲ್ಲ.


Click it and Unblock the Notifications