Home
ಸುದ್ದಿಜಾಲ

OnePlus: ವರ್ಷಾಂತ್ಯದಲ್ಲಿ ಒನ್‌ಪ್ಲಸ್ ಏಸ್ 3 Pro ಬಿಡುಗಡೆ ಸಾಧ್ಯತೆ ! ಫೀಚರ್ಸ್‌ ಲೀಕ್

ಒನ್‌ಪ್ಲಸ್ (OnePlus) ಸ್ಮಾರ್ಟ್‌ಫೋನ್‌ಗಳಿಗೆ (Smartphones) ಜಾಗತಿಕ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಇದೆ. ತನ್ನ ವಿಶಿಷ್ಟ ಹಾಗೂ ವಿಭಿನ್ನ ಫೀಚರ್ಸ್‌ ಮೂಲಕ ಗ್ರಾಹಕರನ್ನು ಸೆಳೆಯುವ ಈ ಸ್ಮಾರ್ಟ್‌ಫೋನ್‌ ಸಂಸ್ಥೆ ಆಗಾಗ ನೂತನ ಸರಣಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿರುವುದನ್ನು ಗಮನಿಸಿದ್ದೇವೆ. ಇದೀಗ OnePlus Ace 3 Pro ಸರಣಿಯ ನೂತನ ಮೊಬೈಲ್‌ ಒಂದನ್ನು ಈ ವರ್ಷದ ಕೊನೆಯಲ್ಲಿ ಲಾಂಚ್ ಮಾಡಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಹಾಗಾದ್ರೆ ವದಂತಿಯ ಪ್ರಕಾರ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಸೇರಿದಂತೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಇದೀಗ ಹೊರಬಂದಿರುವ ವದಂತಿಯ ಪ್ರಕಾರ, OnePlus Ace 3 Pro ಕಳೆದ ವರ್ಷ ಲಾಂಚ್‌ ಮಾಡಿರುವ OnePlus Ace 2 Proನ ಮುಂದುವರೆದ ಸರಣಿಯಾಗಿರಲಿದೆ ಎಂದು ಊಹಿಸಲಾಗಿದೆ. ಜೊತೆಗೆ ಈ ಮೊಬೈಲ್‌ ಅನ್ನು ಈ ವರ್ಷದ ಕೊನೆಯಲ್ಲಿ ಘೋಷಿಸಲಾಗುವುದು ಎಂದು ಭಾವಿಸಲಾಗಿದೆ. ಸಾಧನದ ಪ್ರೊಸೆಸರ್, ಸ್ಕ್ರೀನ್ ರೆಸಲ್ಯೂಶನ್, ವೇಗದ ಚಾರ್ಜಿಂಗ್ ಸಾಮರ್ಥ್ಯ ಮತ್ತು ಹೆಚ್ಚಿನವುಗಳ ಕುರಿತು ಈಗಾಗಲೇ ಕೆಲವು ವದಂತಿಗಳು ಹರಿದಾಡುತ್ತಿವೆ. ಇತ್ತೀಚೆಗೆ ಸೋರಿಕೆಯಾದ ಸ್ಕೀಮ್ಯಾಟಿಕ್ಸ್ ನಮಗೆ ಒನ್‌ಪ್ಲಸ್ ಏಸ್ 3 Pro ವಿನ್ಯಾಸದ ಕುರಿತು ಮಾಹಿತಿ ನೀಡಿದೆ. ಇದು ಹೋಲ್ ಪಂಚ್ ಡಿಸ್‌ಪ್ಲೇ ವಿನ್ಯಾಸ ಮತ್ತು ಬಾಗಿದ ಅಂಚುಗಳೊಂದಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.

OnePlus: ವರ್ಷಾಂತ್ಯದಲ್ಲಿ ಒನ್‌ಪ್ಲಸ್ ಏಸ್ 3 Pro ಬಿಡುಗಡೆ ಸಾಧ್ಯತೆ !

ವದಂತಿಯ ಪ್ರಕಾರ OnePlus Ace 3 Pro ವಿನ್ಯಾಸ:

ಈ ಸ್ಮಾರ್ಟ್‌ಫೋನ್ ಚೈನೀಸ್ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಒರಟು ಸ್ಕೀಮ್ಯಾಟಿಕ್‌ನಂತೆ ತೋರಲಿದೆ, OnePlus Ace 3 ತರಹದ ವಿನ್ಯಾಸವದ ಜೊತೆಗೆ ಕೆಲವು ಸಣ್ಣ ಬದಲಾವಣೆಗಳೊಂದಿಗೆ ತರುವ ನಿರೀಕ್ಷೆ ಇದೆ. ಇದು ಮುಂಭಾಗದಲ್ಲಿ ಬಾಗಿದ ಎಡ್ಜ್‌ ಡಿಸ್‌ಪ್ಲೇ ಹೊಂದಿರುವಂತೆ ತೋರುತ್ತಿದೆ ಮತ್ತು ಸೆಲ್ಫಿ ಶೂಟರ್‌ಗಾಗಿ ಡಿಸ್‌ಪ್ಲೇ ಕೇಂದ್ರೀಯವಾಗಿ ಇರುವ ರಂಧ್ರ ಪಂಚ್ ಕಟೌಟ್ ಅನ್ನು ಹೊಂದಿದೆ. ಬ್ಯಾಕ್‌ಸೈಡ್‌ನಲ್ಲಿ ಒಂದು ಸುತ್ತಿನ ಕ್ಯಾಮರಾ ಮಾಡ್ಯೂಲ್ ಎಡಭಾಗಕ್ಕೆ ಫ್ಲಾಶ್ ಇರಿಸಿರುವುದು ಕಂಡುಬರುತ್ತದೆ. ಕ್ಯಾಮೆರಾ ಮಾಡ್ಯೂಲ್ ನಾಲ್ಕು ಕಟೌಟ್‌ಗಳು ಮತ್ತು ಮಾತ್ರೆ ಆಕಾರದ ಫ್ಲ್ಯಾಷ್ ಅನ್ನು ಒಳಗೊಂಡಿದೆ. ವಾಲ್ಯೂಮ್ ಬಟನ್ ಮತ್ತು ಪವರ್ ಬಟನ್ ಎಡ ತುದಿಯಲ್ಲಿ ಕಂಡುಬರುತ್ತದೆ, ಆದರೆ ಸೆನ್ಸಾರ್‌ ಬಟನ್‌ ಬಲಭಾಗದಲ್ಲಿ ಜೋಡಿಸಲಾಗಿದೆ.

ಒನ್‌ಪ್ಲಸ್ ಸಂಸ್ಥೆ ನಿರೀಕ್ಷಿತ OnePlus Ace 3 Pro ಬಿಡುಗಡೆ ಕುರಿತು ಖಚಿತಪಡಿಸಿಲ್ಲ, ಆದರೆ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಹ್ಯಾಂಡ್‌ಸೆಟ್ ಅನ್ನು ಬಿಡುಗಡೆ ಮಾಡಬಹುದು ಎಂದು ವದಂತಿಗಳಿವೆ. ಹಾಗಾಗಿ ಈ ಹ್ಯಾಂಡ್‌ಸೆಟ್‌ ಕುರಿತು ನೀಡಿರುವ ಮಾಹಿತಿಯು ಕೇವಲ ವದಂತಿಯನ್ನು ಆಧರಿಸಿವೆ.

ವದಂತಿ ಪ್ರಕಾರ OnePlus Ace 3 Pro ನ ವಿಶೇಷತೆಗಳು:

ಸೋರಿಕೆಯಾದ ಮಾಹಿತಿ ಪ್ರಕಾರ, ಈ ಮೊಬೈಲ್ Snapdragon 8 Gen 3 SoC ನಲ್ಲಿ ರನ್ ಆಗಬಹುದು ಮತ್ತು 1.5K ರೆಸಲ್ಯೂಶನ್ ಜೊತೆಗೆ 8T LTPO ಬಾಗಿದ ಪರದೆಯನ್ನು ಹೊಂದಿರುವ ಸಾಧ್ಯತೆ ಇವೆ. ಮಧ್ಯದ ಚೌಕಟ್ಟು ಲೋಹದಿಂದ ಮತ್ತು ಬಾಡಿ ಗಾಜಿನಿಂದ ಒಳಗೊಂಡಿರುವಂತೆ ಜೋಡಿಸಲಾಗಿದೆ. ಜೊತೆಗೆ 50MP ಪ್ರಾಥಮಿಕ ಸೆನ್ಸಾರ್ ಕ್ಯಾಮೆರಾ ಮತ್ತು 100W ವೇಗದ ಚಾರ್ಜಿಂಗ್ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

OnePlus Ace 2 Pro ಅನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಚೀನಾದಲ್ಲಿ ಲಾಂಚ್ ಮಾಡಲಾಗಿದೆ. ಇದರ 12GB RAM ಮತ್ತು 256GB ಸ್ಟೋರೇಜ್‌ನ ಮೂಲ ವೇರಿಯಂಟ್ CNY 2,999 ಅಂದರೆ ಸುಮಾರು 34,600 ರೂ. ಬೆಲೆ ಹೊಂದಿದೆ. OnePlus Ace 2 Pro ಇದು 6.74 ಇಂಚಿನ ಫುಲ್ HD+ (1,240x2,772 ಪಿಕ್ಸೆಲ್‌) 120Hz ರಿಫ್ರೆಶ್ ರೇಟ್, ಬಾಗಿದ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 8 Gen 2 SoC ಯನ್ನು ಹೊಂದಿದೆ ಮತ್ತು 50MP Sony IMX890 ಸೆನ್ಸಾರ್ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 16MP ಸೆಲ್ಫಿ ಕ್ಯಾಮೆರಾ ಜೊತೆಗೆ 150W SuperVOOC ಚಾರ್ಜಿಂಗ್‌ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿದೆ

Best Mobiles in India

English summary
OnePlus Ace 3 Pro is speculated to be the next generation of OnePlus Ace 2 Pro mobile which was launched last year. Also this mobile is expected to be announced later this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+