Home
ಸುದ್ದಿಜಾಲ

OnePlus...ಜೂನ್ 27 ರಂದು OnePlus Ace 3 Pro ಲಾಂಚ್! 6,100mAh ಬ್ಯಾಟರಿ ಸೌಲಭ್ಯ

ತನ್ನದೇ ಆದ ವಿಭಿನ್ನ ವೈಶಿಷ್ಟ್ಯಗಳ ಮೂಲಕ ಒನ್‌ಪ್ಲಸ್ (OnePlus) ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಫೇವರೇಟ್ ಆಗಿವೆ. ಮಾರುಕಟ್ಟೆಗೆ ಆಗಾಗ ಹೊಸ ಹೊಸ ಸರಣಿಯ ಮೊಬೈಲ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿಯೂ ಈ ಒನ್‌ಪ್ಲಸ್ ಸಂಸ್ಥೆ ಯಶಸ್ವಿಯಾಗಿದೆ. ಇದೀಗ ಒನ್‌ಪ್ಲಸ್ ಸಂಸ್ಥೆ ಕೆಲವು ವೆಬ್‌ಸೈಟ್‌ಗಳ ಮೂಲಕ ಗ್ರಾಹಕರ ಕುತೂಹಲ ಹೆಚ್ಚಿಸಿದ್ದ ತನ್ನ ಬಹುನಿರೀಕ್ಷಿತ OnePlus Ace 3 Pro ಸ್ಮಾರ್ಟ್‌ಫೋನ್‌ ಬಿಡುಗಡೆಯ ದಿನಾಂಕವನ್ನು ದೃಢಪಡಿಸಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯ ದಿನಾಂಕ, ಎಲ್ಲಿ ಬಿಡುಗಡೆಯಾಗಲಿದೆ ಎಂಬ ಪೂರ್ತಿ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿ.

OnePlus ಅಂತಿಮವಾಗಿ OnePlus Ace 3 Pro ಬಿಡುಗಡೆ ದಿನಾಂಕವನ್ನು ದೃಢಪಡಿಸಿದೆ. ಚೀನಾದಲ್ಲಿ ಈ OnePlus Pad Pro, OnePlus Buds 3 ಮತ್ತು OnePlus Watch 2 ಜೊತೆಗೆ ಹೊಸ Ace ಸರಣಿಯ ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಲಿದೆ. OnePlus ತನ್ನ ವೆಬ್‌ ಪೇಜ್‌ನಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್‌ನ ವಿನ್ಯಾಸ ಮತ್ತು ವಿಶೇಷಣಗಳ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದೆ. OnePlus Ace 3 Pro ಸ್ನಾಪ್‌ಡ್ರಾಗನ್ 8 Gen 3 SoC ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು 6,100mAh ಬ್ಯಾಟರಿಯನ್ನು ಹೊಂದಿರಲಿದೆ ಎಂದು ತಿಳಿಸಿದೆ.

ಜೂನ್ 27 ರಂದು OnePlus Ace 3 Pro ಲಾಂಚ್!  6,100mAh ಬ್ಯಾಟರಿ ಸೌಲಭ್ಯ

ಚೀನಾದ ಸಾಮಾಜಿಕ ಮಾಧ್ಯಮವಾಗಿರುವ ವೀಬೊ ( Weibo) ದಲ್ಲಿ ಹಲವು ಪೋಸ್ಟ್‌ಗಳ ಮೂಲಕ OnePlus Ace 3 Pro ಜೂನ್ 27 ರಂದು ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು OnePlus ದೃಢಪಡಿಸಿದೆ. OnePlus Pad Pro, OnePlus Buds 3, ಮತ್ತು OnePlus Watch 2 ಸಹ ಅದೇ ಬಿಡುಗಡೆ ಸಮಾರಂಭದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿವೆ ಎಂದು ಸಂಸ್ಥೆ ದೃಢಪಡಿಸಿದೆ.

OnePlus Ace 3 Pro ವಿನ್ಯಾಸ:
ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೂಲಕ ವಿನ್ಯಾಸದ ಕುರಿತು ಮಾಹಿತಿ ಬಹಿರಂಗಪಡಿಸಿದೆ. ಇದು ವೈಟ್‌ ಫಿನಿಶ್‌ ಜೊತೆಗೆ ಸೆರಾಮಿಕ್ ಕಲೆಕ್ಟರ್ಸ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಎಂದು ಸಂಸ್ಥೆ ದೃಢಪಡಿಸಿದೆ. ಇದು Snapdragon 8 Gen 3 SoC ನಿಂದ ರನ್ ಆಗುತ್ತದೆ ಮತ್ತು 8.5mm ಸ್ಕ್ರ್ಯಾಚ್ ರೆಸಿಸ್ಟೆಂಟ್ ಮತ್ತು ವೇರ್ ರೆಸಿಸ್ಟೆಂಟ್ ತಿಕ್ ಪ್ರೊಫೈಲ್ ಅನ್ನು ಹೊಂದಿರಲಿದೆ.

OnePlus ತನ್ನ ನೂತನ Ace ಸರಣಿಯ ಫೋನ್‌ನಲ್ಲಿ ಕೆಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಇದು ಕಂಪನಿಯ ಪ್ರಾಪ್ರೈಟಿ ಗ್ಲೇಸಿಯರ್ ಬ್ಯಾಟರಿ ತಂತ್ರಜ್ಞಾನದ ಆಧಾರದ ಮೇಲೆ 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ 6,100mAh ಬ್ಯಾಟರಿಯನ್ನು ಪಡೆಯಲಿದೆ. ಈ ಬೃಹತ್ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.

OnePlus Ace 3 Pro ನಿರೀಕ್ಷಿತ ಬೆಲೆ, ವಿಶೇಷತೆಗಳು:
ಹಿಂದಿನ ವದಂತಿಗಳ ಆಧಾರದಲ್ಲಿ ನೋಡುವುದಾದರೆ OnePlus Ace 3 Pro CNY 2,999 ಅದರೆ ಸುಮಾರು ರೂ. 34,000 ಆರಂಭಿಕ ಬೆಲೆಯೊಂದಿಗೆ ಪ್ರಾರಂಭಿಸಬಹುದು, ಆದರೆ ಕಲೆಕ್ಟರ್ಸ್ ಆವೃತ್ತಿಯು CNY 4,000 ಅಂದರೆ ಸುಮಾರು ರೂ. 46,000 ಬೆಲೆ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.

OnePlus Ace 3 Pro ಇದು 6.78 ಇಂಚಿನ 8T LTPO ಡಿಸ್‌ಪ್ಲೇ ಜೊತೆಗೆ 1.5K ರೆಸಲ್ಯೂಶನ್ ಅನ್ನು ಹೊಂದಿರುತ್ತದೆ. ಇದು 50MP ಪ್ರಾಥಮಿಕ ಸೆನ್ಸಾರ್, 8 MP ಘಟಕ ಮತ್ತು 2 MP ಸೆನ್ಸಾರ್ ಕ್ಯಾಮೆರಾ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡಬಹುದು. ಇದು ಸೆಲ್ಫಿಗಾಗಿ 16 MP ಕ್ಯಾಮೆರಾವನ್ನು ಪಡೆಯುವ ನಿರೀಕ್ಷೆಯಿದೆ.

Best Mobiles in India

English summary
OnePlus has finally confirmed the OnePlus Ace 3 Pro release date. In China this OnePlus will unveil the new Ace series smartphone along with Pad Pro, OnePlus Buds 3 and OnePlus Watch 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+