Home
ಸುದ್ದಿಜಾಲ

OnePlus: ನಾಳೆ 2 ಹೊಸ ಫೋನ್ ಲಾಂಚ್; 6500mAh ಬ್ಯಾಟರಿ.. 512GB ಸ್ಟೋರೇಜ್.. ಬೆಲೆ ಎಷ್ಟು?

ಒನ್‌ಪ್ಲಸ್ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ ಇದೆ. ಕಂಪನಿಯು ಇತ್ತೀಚೆಗೆ ಬಹುನಿರೀಕ್ಷಿತ ಒನ್‌ಪ್ಲಸ್ 13 (OnePlus 13) ಫೋನನ್ನು ಬಿಡುಗಡೆ ಮಾಡಲಾಗಿದೆ. ಇದು, ಭಾರತದಲ್ಲಿ ಜನವರಿ 2025 (ಹೊಸ ವರ್ಷದಂದು) ಬಿಡುಗಡೆಯಾಗಲಿದೆ. ಇದಲ್ಲದೆ, ಒನ್‌ಪ್ಲಸ್‌ 13R (OnePlus 13R) ಮೊಬೈಲ್ ಕೂಡ ಭಾರತಕ್ಕೆ ಎಂಟ್ರಿ ಕೊಡಲಿದೆ. ಹೌದು, ಒನ್‌ಪ್ಲಸ್‌ 13R ಫೋನನ್ನು ನಾಳೆ (ಡಿಸೆಂಬರ್ 12) ಒನ್‌ಪ್ಲಸ್‌ ಏಸ್ 5 (OnePlus Ace 5) ಎಂಬ ಹೆಸರಿನೊಂದಿಗೆ ಚೀನಾದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಬನ್ನಿ ಈ ಫೋನಿನ ವಿಶೇಷತೆಗಳನ್ನು ತಿಳಿಯೋಣ.

ಭಾರತದಲ್ಲಿ ಒನ್‌ಪ್ಲಸ್‌ 13R ಹೆಸರಿನೊಂದಿಗೆ ಒನ್‌ಪ್ಲಸ್‌ ಏಸ್ 5 ಮೊಬೈಲ್ ಬಿಡುಗಡೆಯಾಗಲಿದೆ. ಈ ಫೋನ್‌ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಹಾಗೆಯೇ 6.78 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿರುತ್ತದೆ. ಜೊತೆಗೆ 16GB RAM + 512GB ಸ್ಟೋರೇಜ್, 6300mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನಾಳೆ OnePlus Ace 5 ಸರಣಿ ಲಾಂಚ್; 6500mAh ಬ್ಯಾಟರಿ.. 512GB ಸ್ಟೋರೇಜ್ ಖಚಿತ!

ನಾಳೆ ಒನ್‌ಪ್ಲಸ್‌ ಏಸ್ 5 ಬಿಡುಗಡೆ

ಕಂಪನಿಯು ಒನ್‌ಪ್ಲಸ್‌ ಏಸ್ 5 ಸರಣಿಯನ್ನು (OnePlus Ace 5 series) ಡಿಸೆಂಬರ್ 12 ರಂದು (ನಾಳೆ) ಬಿಡುಗಡೆ ಮಾಡಲಿದೆ. ಇದರಲ್ಲಿ ಒನ್‌ಪ್ಲಸ್‌ ಏಸ್ 5 (OnePlus Ace 5) ಮತ್ತು ಒನ್‌ಪ್ಲಸ್‌ ಏಸ್ 5 ಪ್ರೊ (OnePlus Ace 5 Pro) ಮೊಬೈಲ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಹೊಂದಿವೆ ಎಂದು ಕಂಪನಿ ಖಚಿತಪಡಿಸಿದೆ. ಈ ಫೋನ್‌ ಒನ್‌ಪ್ಲಸ್‌ 13R ಹೆಸರಿನಲ್ಲಿ ಭಾರತಕ್ಕೆ ಬರಲಿದೆ.

ಒನ್‌ಪ್ಲಸ್‌ ಏಸ್ 5 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಒನ್‌ಪ್ಲಸ್‌ ಏಸ್ 5 ಫೋನ್ 6.78 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು BOE X2 ತಂತ್ರಜ್ಞಾನದೊಂದಿಗೆ 8T LTPO ಫ್ಲಾಟ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಒನ್‌ಪ್ಲಸ್‌ ಏಸ್ 5 ಪ್ರೊ ಮೊಬೈಲ್ 6.78 ಇಂಚಿನ ಕರ್ವ್ ಡಿಸ್ಪ್ಲೇ ಹೊಂದಿದೆ.

ಪ್ರೊಸೆಸರ್ ಯಾವುದು?

ಒನ್‌ಪ್ಲಸ್‌ ಏಸ್ 5 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಒನ್‌ಪ್ಲಸ್‌ 13R ಸಹ ಇದೇ ಪ್ರೊಸೆಸರ್ ಹೊಂದಿರಲಿದೆ. ಒನ್‌ಪ್ಲಸ್‌ ಏಸ್ 5 ಪ್ರೊ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ.

512GB ಸ್ಟೋರೇಜ್‌

ಒನ್‌ಪ್ಲಸ್‌ ಏಸ್ 5 ಮೊಬೈಲ್ 12GB RAM + 256GB ಸ್ಟೋರೇಜ್ ಮತ್ತು 16GB RAM + 512GB ಸ್ಟೋರೇಜ್‌ ಆಯ್ಕೆ ಹೊಂದಿದೆ. ನೀವು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಹೆಚ್ಚಿಸಬಹುದು.

ಟ್ರಿಪಲ್ ಕ್ಯಾಮೆರಾ ಸೆಟಪ್

ಒನ್‌ಪ್ಲಸ್‌ ಏಸ್ 5 ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒನ್‌ಪ್ಲಸ್‌ ಏಸ್ 5 ಫೋನ್ 6285mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಒನ್‌ಪ್ಲಸ್‌ ಏಸ್ 5 ಪ್ರೊ ಮೊಬೈಲ್ 6500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

Best Mobiles in India

English summary
OnePlus Ace 5, OnePlus Ace 5 Pro Launch on December 12: Expected specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+