OnePlus Ace 5: ಬರ್ತಿವೆ 2 ಜಬರ್ದಸ್ತ್ ಫೋನ್; 512GB ಸ್ಟೋರೇಜ್.. 6300mAh ಬ್ಯಾಟರಿ.. ಯಾವಾಗ ಲಾಂಚ್?
ಒನ್‌ಪ್ಲಸ್ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಲು ಸಜ್ಜಾಗಿದೆ. ಇತ್ತೀಚೆಗೆ ಬಹುನಿರೀಕ್ಷಿತ ಒನ್‌ಪ್ಲಸ್ 13 (OnePlus 13) ಬಿಡುಗಡೆ ಮಾಡಲಾಗಿದೆ. ಇದು, ಹೊಸ ವರ್ಷಕ್ಕೆ (ಜನವರಿ 2025) ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ಒನ್‌ಪ್ಲಸ್ 13R (OnePlus 13R) ಸಹ ಭಾರತಕ್ಕೆ ಬರಲಿದೆ. ಹೌದು, ಕಂಪನಿಯು ಒನ್‌ಪ್ಲಸ್ 13R ಫೋನನ್ನು ಮೊದಲು ಒನ್‌ಪ್ಲಸ್ ಏಸ್ 5 (OnePlus Ace 5) ಎಂಬ ಹೆಸರಿನೊಂದಿಗೆ ಚೀನಾದಲ್ಲಿ ರಿಲೀಸ್ ಮಾಡಲಿದೆ. ಈಗಾಗಲೇ, ಬಿಡುಗಡೆ ದಿನಾಂಕವನ್ನು ಸಹ ಘೋಷಿಸಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಒನ್‌ಪ್ಲಸ್ ಏಸ್ 5 ಮೊಬೈಲ್ ಭಾರತದಲ್ಲಿ ಒನ್‌ಪ್ಲಸ್ 13R ಹೆಸರಿನೊಂದಿಗೆ ಬಿಡುಗಡೆಯಾಗಲಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿರಲಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರಲಿದೆ. ಹಾಗೆಯೇ 6.78 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿರಲಿದೆ. ಇದರೊಂದಿಗೆ 16GB RAM + 512GB ಸ್ಟೋರೇಜ್, 6300mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಒನ್‌ಪ್ಲಸ್ ಏಸ್ 5 ಫೋನಿನ ಬಿಡುಗಡೆ ದಿನಾಂಕ
ಕಂಪನಿಯು ಒನ್‌ಪ್ಲಸ್ ಏಸ್ 5 ಸರಣಿಯನ್ನು (OnePlus Ace 5 series) ಡಿಸೆಂಬರ್ 12 ರಂದು ಬಿಡುಗಡೆ ಮಾಡಲಿದೆ. ಇದರಲ್ಲಿ ಒನ್‌ಪ್ಲಸ್ ಏಸ್ 5 (OnePlus Ace 5) ಮತ್ತು ಒನ್‌ಪ್ಲಸ್ ಏಸ್ 5 ಪ್ರೊ (OnePlus Ace 5 Pro) ಮೊಬೈಲ್‌ಗಳು ಮಾರುಕಟ್ಟೆಗೆ ಬರಲಿವೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿರಲಿವೆ ಎಂದು ಕಂಪನಿ ತಿಳಿಸಿದೆ. ಚೀನಾದಲ್ಲಿ ಬಿಡುಗಡೆಯಾಗುವ ಒನ್‌ಪ್ಲಸ್ ಏಸ್ 5 ಭಾರತಕ್ಕೆ ಒನ್‌ಪ್ಲಸ್ 13R ಹೆಸರಿನಲ್ಲಿ ಬರಲಿದೆ.
ಒನ್‌ಪ್ಲಸ್ ಏಸ್ 5 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒನ್‌ಪ್ಲಸ್ ಏಸ್ 5 ಮೊಬೈಲ್ 6.78 ಇಂಚಿನ 1.5K ಡಿಸ್ಪ್ಲೇ ಹೊಂದಿರಲಿದೆ. ಇದು BOE X2 ತಂತ್ರಜ್ಞಾನದೊಂದಿಗೆ 8T LTPO ಫ್ಲಾಟ್ ಡಿಸ್ಪ್ಲೇ ಆಗಿರದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು ಹೆಚ್ಚಿನ ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿರಲಿದೆ. ಒನ್‌ಪ್ಲಸ್ ಏಸ್ 5 ಪ್ರೊ ಕರ್ವ್ ಡಿಸ್ಪ್ಲೇ ಹೊಂದಿರುವ ಸಾಧ್ಯತೆಯಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಒನ್‌ಪ್ಲಸ್ ಏಸ್ 5 ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಇದು 3.4GHz ಗಡಿಯಾರದ ವೇಗದಲ್ಲಿ ಕೆಲಸ ನಿರ್ವಹಿಸುತ್ತದೆ. ಒನ್‌ಪ್ಲಸ್ 13R ಸಹ ಇದೇ ಪ್ರೊಸೆಸರ್ ಹೊಂದಿರಲಿದೆ. ಒನ್‌ಪ್ಲಸ್ ಏಸ್ 5 ಪ್ರೊ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರಲಿದೆ.

ಸ್ಟೊರೇಜ್ ಆಯ್ಕೆ
ಮುಂಬರುವ ಒನ್‌ಪ್ಲಸ್ ಏಸ್ 5 ಸ್ಮಾರ್ಟ್‌ಫೋನ್ 12GB RAM + 256GB ಸ್ಟೋರೇಜ್ ಮತ್ತು 16GB RAM + 512GB ಸ್ಟೋರೇಜ್ ಆಯ್ಕೆ ಹೊಂದಿರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಹೆಚ್ಚಿಸುವ ಸೌಲಭ್ಯವೂ ಇರಲಿದೆ.
ಕ್ಯಾಮೆರಾ ಸೆಟಪ್
ಒನ್‌ಪ್ಲಸ್ ಏಸ್ 5 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒನ್‌ಪ್ಲಸ್ ಏಸ್ 5 ಫೋನ್ 6300mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಮತ್ತೊಂದೆಡೆ, ಒನ್‌ಪ್ಲಸ್ ಏಸ್ 5 ಪ್ರೊ ಮೊಬೈಲ್ 6500mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ.


Click it and Unblock the Notifications








