Home
ಸುದ್ದಿಜಾಲ

ನಾಳೆ OnePlus Ace 5 ಸರಣಿ ಲಾಂಚ್; ಧೂಳೆಬ್ಬಿಸಲಿವೆ ಎರಡು ಸೊಗಸಾದ ಫೋನ್.. ಬೆಲೆ, ವಿಶೇಷತೆಗಳೇನು?

ಒನ್‌ಪ್ಲಸ್‌ ನಾಳೆ ತನ್ನ ಹೊಸ ಒನ್‌ಪ್ಲಸ್‌ ಏಸ್ 5 (OnePlus Ace 5) ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಮೂಲಕ ತನ್ನ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಲಿದೆ. ಹೌದು, ಕಂಪನಿಯು ಈ ಸರಣಿಯಲ್ಲಿ ಒನ್‌ಪ್ಲಸ್‌ ಏಸ್ 5 (OnePlus Ace 5) ಮತ್ತು ಒನ್‌ಪ್ಲಸ್‌ ಏಸ್ 5 ಪ್ರೊ (OnePlus Ace 5 Pro) ಫೋನ್‌ಗಳನ್ನು ಅಧಿಕೃತವಾಗಿ ಅನಾವರಣಗೊಳಿಸಲಿದೆ. ಈ ಹೊಸ ಫೋನ್‌ಗಳ ಮುಂಗಡ ಬುಕಿಂಗ್‌ ಸಹ ಶುರುವಾಗಿದೆ. ಬನ್ನಿ, ಈ ಹೊಸ ಮೊಬೈಲ್‌ಗಳ ಟಾಪ್ 5 ವೈಶಿಷ್ಟ್ಯಗಳನ್ನು ತಿಳಿಯೋಣ.

ಒನ್‌ಪ್ಲಸ್‌ ಏಸ್ 5 ಸರಣಿಯ ಫೋನ್‌ಗಳು 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿವೆ. ಇವು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತವೆ. ಈ ಫೋನಿನಲ್ಲಿ 6.78 ಇಂಚಿನ ದೊಡ್ಡ ಲಭ್ಯವಿರಲಿದೆ. ಜೊತೆಗೆ 16GB RAM + 512GB ಸ್ಟೋರೇಜ್, 6300mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಒಳಗೊಂಡಿರಲಿದೆ. ವಿಶೇಷವೆಂದರೆ, ಒನ್‌ಪ್ಲಸ್‌ ಏಸ್ 5 ಫೋನ್‌ ಭಾರತದಲ್ಲಿ ಒನ್‌ಪ್ಲಸ್‌ 13R (OnePlus 13R) ಹೆಸರಿನಲ್ಲಿ ಬಿಡುಗಡೆಯಾಗಲಿದೆ.

ನಾಳೆ OnePlus Ace 5 ಸರಣಿ ಲಾಂಚ್; ಬರಲಿವೆ 2 ಜಬರ್ದಸ್ತ್ ಫೋನ್.. ವಿಶೇಷತೆಗಳೇನು?

ಒನ್‌ಪ್ಲಸ್‌ ಏಸ್ 5 ಸರಣಿಯ ಮೊಒಬೈಲ್‌ಗಳು ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿವೆ. ಇದು ಫೋನಿನ ಎಡ ಭಾಗದಲ್ಲಿ ಇದೆ. ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಬಲ ಭಾಗದಲ್ಲಿದೆ. ಇನ್ನು ಒನ್‌ಪ್ಲಸ್‌ ಏಸ್ 5 ಫೋನ್ ಬಿಳಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಒನ್‌ಪ್ಲಸ್‌ ಏಸ್ 5 ಪ್ರೊ ಮೊಬೈಲ್ ನೇರಳೆ, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಒನ್‌ಪ್ಲಸ್‌ ಏಸ್ 5 ಸರಣಿ ಬಿಡುಗಡೆ ವಿವರ

ಕಂಪನಿಯು ಒನ್‌ಪ್ಲಸ್‌ ಏಸ್ 5 ಸರಣಿಯನ್ನು ನಾಳೆ (ಡಿಸೆಂಬರ್ 26) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಇದಕ್ಕಾಗಿ ದೊಡ್ಡ ಸಮಾರಂಭವನ್ನು ಆಯೋಜಿಸಿದೆ. ಇದೇ ಜನವರಿ 7 ರಂದು ಭಾರತದಲ್ಲಿ ಒನ್‌ಪ್ಲಸ್‌ 13 (OnePlus 13) ಸರಣಿ ಬಿಡುಗಡೆಯಾಗಲಿದೆ. ಕಂಪನಿಯು ಒನ್‌ಪ್ಲಸ್‌ ಏಸ್ 5 ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ 13R ಆಗಿ ರಿಲೀಸ್ ಮಾಡಲಿದೆ.

ಒನ್‌ಪ್ಲಸ್‌ ಏಸ್ 5 ಸರಣಿ: ಟಾಪ್ 5 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಒನ್‌ಪ್ಲಸ್‌ ಏಸ್ 5 ಸರಣಿ ಫೋನ್‌ಗಳು 6.78 ಇಂಚಿನ ಓಎಲ್‌ಇಡಿ ಡಿಸ್ಪ್ಲೇ ಹೊಂದಿರುತ್ತವೆ. ಇದು 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು ಫ್ಲಾಟ್ ಎಡ್ಜ್‌ ಹೊಂದಿದೆ. ಆದರೆ, ಒನ್‌ಪ್ಲಸ್‌ ಏಸ್ 5 ಪ್ರೊ ಫೋನ್ ಕರ್ವ್ ಡಿಸ್ಪ್ಲೇ ಹೊಂದಿರಲಿದೆ.

ಪ್ರೊಸೆಸರ್ ಯಾವುದು?

ಒನ್‌ಪ್ಲಸ್‌ ಏಸ್ 5 ಮೊಬೈಲ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಒನ್‌ಪ್ಲಸ್‌ 13R ಸಹ ಇದೇ ಪ್ರೊಸೆಸರ್ ಹೊಂದಿದೆ. ಒನ್‌ಪ್ಲಸ್‌ ಏಸ್ 5 ಪ್ರೊ ಮೊಬೈಲ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿರುತ್ತದೆ. ಎರಡು ಫೋನ್‌ಗಳು ಆಂಡ್ರಾಯ್ಡ್‌ 15 ಆಧಾರಿತ ColorOS 15 ನಲ್ಲಿ ಕೆಲಸ ನಿರ್ವಹಿಸಲಿವೆ.

ಸ್ಟೊರೇಜ್ ಆಯ್ಕೆ

ಒನ್‌ಪ್ಲಸ್‌ ಏಸ್ 5 ಸರಣಿಯ ಸ್ಮಾರ್ಟ್‌ಫೋನ್‌ಗಳು 12GB RAM ಮತ್ತು 16GB RAM ಅನ್ನು ಹೊಂದಿರುತ್ತವೆ. ಇದು 256GB ಸ್ಟೋರೇಜ್ ಮತ್ತು 512GB ಸ್ಟೋರೇಜ್‌ ಆಯ್ಕೆ ಒಳಗೊಂಡಿರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ನಾಳೆ OnePlus Ace 5 ಸರಣಿ ಲಾಂಚ್; ಬರಲಿವೆ 2 ಜಬರ್ದಸ್ತ್ ಫೋನ್.. ವಿಶೇಷತೆಗಳೇನು?

ಟ್ರಿಪಲ್ ಕ್ಯಾಮೆರಾ ಸೆಟಪ್

ಒನ್‌ಪ್ಲಸ್‌ ಏಸ್ 5 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಈ ಫೋನ್ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಒನ್‌ಪ್ಲಸ್ 13R ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ.

6415mAh ದೊಡ್ಡ ಬ್ಯಾಟರಿ

ಒನ್‌ಪ್ಲಸ್‌ ಏಸ್ 5 ಫೋನ್ 6300mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗುತ್ತದೆ. ಒನ್‌ಪ್ಲಸ್‌ ಏಸ್ 5 ಪ್ರೊ ಮೊಬೈಲ್ 6100mAh ಸಾಮರ್ಥ್ಯದ ಬ್ಯಾಟರಿ ಹೊಂದಿರುತ್ತದೆ. ಇದನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಇರುತ್ತದೆ.

ಇತರೆ ವೈಶಿಷ್ಟ್ಯಗಳು

ಒನ್‌ಪ್ಲಸ್‌ ಏಸ್ 5 ಸರಣಿಯ ಫೋನ್‌ಗಳು ಅಂಡರ್ ಡಿಸ್ಪ್ಲೇ ಶಾರ್ಟ್ ಫೋಕಸ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುತ್ತವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳು ಇರುತ್ತವೆ.

Best Mobiles in India

English summary
OnePlus Ace 5 series launching on December 26th in China: price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+