Home
ಸುದ್ದಿಜಾಲ

OnePlus Ace 5 Ultra ಫೀಚರ್ಸ್ ಕುರಿತು ಅಧಿಕೃತ ಮಾಹಿತಿ ಬಿಡುಗಡೆ!

ಟೆಕ್ ದೈತ್ಯ OnePlus ಕಂಪೆನಿಯು ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಾದ OnePlus Ace 5 Ultra ಮತ್ತು OnePlus Ace 5 ರೇಸಿಂಗ್ ಆವೃತ್ತಿಯನ್ನು ಮೇ 27 ರಂದು ಚೀನಾದಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಬಿಡುಗಡೆಗೆ ಮುನ್ನವೇ ಕಂಪನಿಯು ಈ ಹ್ಯಾಂಡ್‌ಸೆಟ್‌ಗಳ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದ್ದು, ತಂತ್ರಜ್ಞಾನ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ನಿರೀಕ್ಷೆಯಂತೆಯೇ, OnePlus Ace 5 Ultra ಮತ್ತು OnePlus Ace 5 ರೇಸಿಂಗ್ ಆವೃತ್ತಿ ಎರಡೂ ಫೋನ್‌ಗಳು MediaTek Dimensity 9400 ಸರಣಿಯ ಚಿಪ್‌ಸೆಟ್‌ಗಳಿಂದ ಚಾಲಿತವಾಗಿರುವುದು ದೃಢಪಟ್ಟಿದೆ. ಹಾಗಾದರೆ, OnePlus Ace 5 Ultra ಮತ್ತು OnePlus Ace 5 ರೇಸಿಂಗ್ ಆವೃತ್ತಿ ಎರಡೂ ಫೋನ್‌ಗಳು ಹೊಂದಿರುವ ಪ್ರಮುಖ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಮೊದಲೇ ತಿಳಿಸಿದಂತೆ, OnePlus Ace 5 Ultra ಮತ್ತು OnePlus Ace 5 ರೇಸಿಂಗ್ ಆವೃತ್ತಿ ಎರಡೂ ಸ್ಮಾರ್ಟ್‌ಫೋನ್‌ಗಳು MediaTek Dimensity 9400 ಸರಣಿಯ ಚಿಪ್‌ಸೆಟ್‌ಗಳಿಂದ ಚಾಲಿತವಾಗಲಿವೆ. ಇದರಲ್ಲಿ OnePlus Ace 5 Ultra ಮಾದರಿಯು Dimensity 9400+ ಚಿಪ್‌ಸೆಟ್‌ನೊಂದಿಗೆ ಬರಲಿದ್ದರೆ, ರೇಸಿಂಗ್ ಆವೃತ್ತಿಯ OnePlus Ace 5 Dimensity 9400e ಚಿಪ್‌ಸೆಟ್ ಅನ್ನು ಹೊಂದಿರುತ್ತದೆ. ಇವೆರಡೂ ಸ್ಮಾರ್ಟ್‌ಫೋನ್‌ಗಳು Android 15 ಆಧಾರಿತ ColorOS 15 ನೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಕಂಪೆನಿಯು ಧೃಢಪಡಿಸಿದೆ. ಆದರೆ, ಇತರೆ ಪ್ರಮುಖ ವೈಶಿಷ್ಟ್ಯಗಳಲ್ಲಿ OnePlus Ace 5 Ultra ಸ್ಮಾರ್ಟ್‌ಫೋನಿನ ಕುರಿತಷ್ಟೇ ಹೆಚ್ಚಿನ ಮಾಹಿತಿ ನೀಡಲಾಗಿದೆ. ಚಿಪ್‌ಸೆಟ್ ಮಾಹಿತಿ ಜೊತೆಗೆ OnePlus Ace 5 Ultra ಫೋನಿನ ಡಿಸ್‌ಪ್ಲೇ, ಕ್ಯಾಮೆರಾ ಮತ್ತು ಬ್ಯಾಟರಿ ಶಕ್ತಿಯ ಮಾಹಿತಿಯು ಹೊರಬಿದ್ದಿದೆ.

OnePlus Ace 5 Ultra ವೈಶಿಷ್ಟ್ಯಗಳು
ಮುಂಬರುವ OnePlus Ace 5 Ultra ಸ್ಮಾರ್ಟ್‌ಫೋನ್ 6.83-ಇಂಚಿನ ಫ್ಲಾಟ್ 1.5K (1,272×2,800 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಡಿಸ್ಪ್ಲೇ 144Hz ರಿಫ್ರೆಶ್ ದರ, 3,840Hz PWM ಡಿಮ್ಮಿಂಗ್ ದರ, HDR10+, HDR ವಿವಿಡ್ ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ ಬರಲಿದೆ. ಕಣ್ಣುಗಳ ಆರೋಗ್ಯವನ್ನು ಕಾಪಾಡಲು, ಪರದೆಯು "ಹಾರ್ಡ್‌ವೇರ್-ಮಟ್ಟದ" ಕಡಿಮೆ ನೀಲಿ ಬೆಳಕಿನ ವೈಶಿಷ್ಟ್ಯ ಮತ್ತು TÜV ರೈನ್‌ಲ್ಯಾಂಡ್ ಐ ಪ್ರೊಟೆಕ್ಷನ್ 4.0 ಪ್ರಮಾಣೀಕರಣವನ್ನು ಸಹ ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಜೊತೆ, ಈ OnePlus Ace 5 Ultra ಸ್ಮಾರ್ಟ್‌ಫೋನ್ 12GB + 256GB, 16GB + 256GB, 12GB + 512GB, 16GB + 512GB, ಮತ್ತು 16GB + 1TB RAM ಮತ್ತು ಶೇಖರಣಾ ಸಂರಚನೆಗಳಲ್ಲಿ ಲಭ್ಯವಿರುತ್ತದೆ. ಇದು ಬ್ರೀಜ್ ಬ್ಲೂ, ಬರ್ನಿಂಗ್ ಟೈಟಾನಿಯಂ ಮತ್ತು ಫ್ಯಾಂಟಮ್ ಬ್ಲ್ಯಾಕ್ ಬಣ್ಣಗಳಲ್ಲಿ ಗ್ರಾಹಕರನ್ನು ತಲುಪಲಿದೆ ಎಂದು ಕಂಪೆನಿ ಹೇಳಿದೆ.

ಕ್ಯಾಮೆರಾ ವಿಭಾಗದಲ್ಲಿ, OnePlus Ace 5 Ultra ದ ಕ್ಯಾಮೆರಾ ಸಾಮರ್ಥ್ಯಗಳು ಬಹು ನಿರೀಕ್ಷಿತವಾಗಿವೆ. ಇದು 50-ಮೆಗಾಪಿಕ್ಸೆಲ್, 1/1.56-ಇಂಚಿನ Sony IMX906 ಪ್ರಾಥಮಿಕ ಹಿಂಭಾಗದ ಸಂವೇದಕವನ್ನು ಹೊಂದಿರಲಿದೆ ಎಂದು ಕಂಪನಿ ದೃಢಪಡಿಸಿದೆ. ಈ ಕ್ಯಾಮೆರಾ "ನೆರಳುರಹಿತ ಸೆರೆಹಿಡಿಯುವಿಕೆ" ವೈಶಿಷ್ಟ್ಯವನ್ನು ನೀಡಲಿದ್ದು, ಇದು ಕಡಿಮೆ ಚಲನೆಯ ಮಸುಕು ಮತ್ತು ಹೆಚ್ಚಿನ ಸ್ಪಷ್ಟತೆಯೊಂದಿಗೆ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಲೈವ್ ಫೋಟೋಗಳ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಬ್ಯಾಟರಿ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ 6,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡಲಿದೆ. ಇದು ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯವನ್ನೂ ಒಳಗೊಂಡಿದೆ. ದೀರ್ಘ ಬಳಕೆಯ ಸಮಯದಲ್ಲಿ ಫೋನ್ ಬಿಸಿಯಾಗುವುದನ್ನು ತಡೆಯಲು "ಗ್ಲೇಸಿಯರ್ ಕೂಲಿಂಗ್ ಸಿಸ್ಟಮ್" ಅನ್ನು ಅಳವಡಿಸಲಾಗಿದೆ.

OnePlus Ace 5 Ultra ಫೀಚರ್ಸ್ ಕುರಿತು ಅಧಿಕೃತ ಮಾಹಿತಿ ಬಿಡುಗಡೆ!

ಒಟ್ಟಾರೆಯಾಗಿ, OnePlus Ace 5 Ultra ಮತ್ತು OnePlus Ace 5 ರೇಸಿಂಗ್ ಆವೃತ್ತಿಗಳು ಅತ್ಯಾಧುನಿಕ ವೈಶಿಷ್ಟ್ಯಗಳು, ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು ಉತ್ತಮ ದೃಶ್ಯ ಅನುಭವವನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸುವ ನಿರೀಕ್ಷೆ ಇದೆ. ಈ ಫೋನ್‌ಗಳು ಮೇ 27 ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ (ಭಾರತೀಯ ಸಮಯ ಮಧ್ಯಾಹ್ನ 12 ಗಂಟೆಗೆ) ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿವೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ. ಮತ್ತು ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
OnePlus
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+