Home
ಸುದ್ದಿಜಾಲ

ಒನ್‌ಪ್ಲಸ್‌ 12, ಒನ್‌ಪ್ಲಸ್‌ 11 ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್! AI ರೀತಿಯ ಸೌಲಭ್ಯ..

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ಫೋನ್‌ಗಳು ಪ್ರೀಮಿಯಂ ಫೀಚರ್ಸ್‌ ಮೂಲಕ ಬಳಕೆದಾರರಿಗೆ ಅಗತ್ಯ ಸೇವೆಗಳನ್ನು ನೀಡುತ್ತವೆ. ಈ ಮೂಲಕ ಉತ್ತಮ ಬಳಕೆದಾರರ ಅನುಭವ ನೀಡುವ ಉದ್ದೇಶ ಹೊಂದಿವೆ. ಈ ಬೆಳವಣಿಗೆ ನಡುವೆ ಒನ್‌ಪ್ಲಸ್‌ 12, ಒನ್‌ಪ್ಲಸ್‌ 11 ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್ ನೀಡಲಾಗಿದೆ.

ಹೌದು, ಒನ್‌ಪ್ಲಸ್‌ ತನ್ನ ಪ್ರಮುಖ ಶ್ರೇಣಿ ಫೋನ್‌ಗಳಿಗಾಗಿ ಈಗ ಎಐ ರೀತಿಯ ಫೀಚರ್ಸ್‌ ಅನ್ನು ಘೋಷಣೆ ಮಾಡಿದೆ. ಈ ಇತ್ತೀಚಿನ ನವೀಕರಣವು ಒನ್‌ಪ್ಲಸ್‌ 12 ಮತ್ತು 11 ಗಾಗಿ ಲಭ್ಯ ಇದ್ದು, ಇದು ಪಿಕ್ಸೆಲ್‌ 8 ಮತ್ತು ಗ್ಯಾಲಕ್ಸಿ S24 ನಲ್ಲಿ ಇರುವ ಎಐ ಫೀಚರ್ಸ್‌ ಅನುಭವವನ್ನು ನೀಡಲಿದೆ. ಹಾಗಿದ್ರೆ, ತಡಯಾಕೆ ಬನ್ನಿ ಈ ಹೊಸ ನವೀಕರಣದಿಂದ ಫೋನ್‌ಗಳಲ್ಲಿ ಏನೆಲ್ಲಾ ಲಭ್ಯ ಆಗಲಿದೆ ನೋಡೋಣ.

ಒನ್‌ಪ್ಲಸ್‌ 12, ಒನ್‌ಪ್ಲಸ್‌ 11 ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್!

ಒನ್‌ಪ್ಲಸ್‌ 12, ಒನ್‌ಪ್ಲಸ್‌ 11 ಫೋನ್‌ ನವೀಕರಣ: ಒನ್‌ಪ್ಲಸ್‌ ಆಗಾಗ್ಗೆ ಭದ್ರತೆ ದೃಷ್ಟಿಯಿಂದ ಹಾಗೂ ಬಳಕೆದಾರರಿಗೆ ಇನ್ನಷ್ಟು ವಿಶೇಷ ಫೀಚರ್ಸ್‌ ಲಭ್ಯವಾಗಿಸುವ ಉದ್ದೇಶದಿಂದ ಆಗಾಗ್ಗೆ ನವೀಕರಣ ನೀಡುತ್ತಿರುತ್ತದೆ. ಅದಂತೆ ಈಗ ಮತ್ತೊಂದು ಹೊಸ ನವೀಕರಣ ನೀಡಲಾಗಿದ್ದು, ಮೊದಲೇ ತಿಳಿಸಿದಂತೆ ಇದು ಪ್ರೀಮಿಯಂ ಎಐ ಫೀಚರ್ಸ್‌ ಅನುಭವ ನೀಡಲಿದೆ.

ಅದರಲ್ಲೂ ಈ ಎಐ ಫೀಚರ್ಸ್‌ ಇತ್ತೀಚೆಗೆ ಲಾಂಚ್‌ ಆಗಿರುವ ಗೂಗಲ್‌ನ ಪಿಕ್ಸೆಲ್ ಫೋನ್‌ ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿಯಲ್ಲಿ ಇರುವಂತೆಯೇ ಇವೆ ಎಂದು ಒನ್‌ಪ್ಲಸ್‌ ಹೇಳಿಕೊಂಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಆಪಲ್‌ ಸಹ ನಾವೇನು ಕಡಿಮೆ ಇಲ್ಲ ಎಂಬಂತೆ ಆಪಲ್ ಐಒಎಸ್ 18 ನೊಂದಿಗೆ ಜನರೇಟಿವ್ ಎಐ ಫೀಚರ್ಸ್‌ ಅನ್ನು ಪರಿಚಯಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ.

ಒನ್‌ಪ್ಲಸ್‌ 12, ಒನ್‌ಪ್ಲಸ್‌ 11 ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್!

ಇನ್ನು ಒನ್‌ಪ್ಲಸ್‌ನ ಹೊಸ ಎಐ ಫೀಚರ್ಸ್‌ ಇರುವ ಸಾಫ್ಟ್‌ವೇರ್ ಅಪ್‌ಡೇಟ್ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಭ್ಯವಿದೆ ಅನ್ನೋದು ನಿಮ್ಮ ಗಮನಕ್ಕೆ ಇರಲಿ. ಅದೂ ಸಹ ಒನ್‌ಪ್ಲಸ್ 12 ಮತ್ತು ಒನ್‌ಪ್ಲಸ್ 11 ಗಾಗಿ ಮಾತ್ರ ಲಭ್ಯ ಇದೆ. ಹಾಗೆಯೇ ಇತ್ತೀಚಿನ ಸಾಫ್ಟ್‌ವೇರ್ ನವೀಕರಣವು PHB110_14.0.0.403 (CN01) ಆವೃತ್ತಿಯಾಗಿದ್ದು, ಈ ಬಗ್ಗೆ ಮಿಶಾಲ್ ರೆಹಮಾನ್ ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದಾದ ನಂತರದಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೆ ಇತ್ತೀಚಿನ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಹೊಸ ನವೀಕರಣದಲ್ಲಿ ಏನೆಲ್ಲಾ ಲಭ್ಯ ಇರಲಿದೆ?: ಒನ್‌ಪ್ಲಸ್ 12, ಒನ್‌ಪ್ಲಸ್ 11 ಗಾಗಿ ಹೊಸ ಎಐ ಫೀಚರ್ಸ್‌ ಬಳಕೆದಾರರಿಗೆ ಭಾರೀ ಸೌಲಭ್ಯ ಕಲ್ಪಿಸಿಕೊಡಲಿದೆ. ಹೊಸ ಅಪ್‌ಡೇಟ್ ನಿಮ್ಮ ಫೋನ್ ಕರೆಗಳಿಂದ ಸಮಯ, ಸ್ಥಳ ಮತ್ತು ಕ್ರಿಯೆ ಸೇರಿದಂತೆ ಪ್ರಮುಖ ವಿವರಗಳನ್ನು ದಾಖಲು ಮಾಡುತ್ತದೆ. ಈ ಮೂಲಕ ಕರೆ ಸಾರಾಂಶಗಳನ್ನು ರಚಿಸುವ ಕೆಲಸ ಮಾಡುತ್ತದೆ.

ಇದರೊಂದಿಗೆ ಗೂಗಲ್‌ನ ಮ್ಯಾಜಿಕ್ ಎರೇಸರ್‌ನಂತೆಯೇ, ಒನ್‌ಪ್ಲಸ್ 'AIGC ರಿಮೂವರ್' ಫೀಚರ್ಸ್‌ ಅನ್ನು ಹೊರತಂದಿದೆ. ಇದು ಫೋಟೋಗಳಿಂದ ಅನಗತ್ಯ ವಸ್ತುಗಳನ್ನು ಅಥವಾ ಜನರನ್ನು ತೆಗೆದುಹಾಕಲು ನಿಮಗೆ ಅನುಮತಿಸುತ್ತದೆ. ಇದರ ಜೊತೆಗೆ ಒಂದೇ ಟ್ಯಾಪ್‌ನೊಂದಿಗೆ ಯಾವುದೇ ಲೇಖನಗಳಿಂದ ಸಾರಾಂಶ ರಚಿಸುವ ಕೆಲಸ ಮಾಡುತ್ತದೆ.

ಒನ್‌ಪ್ಲಸ್‌ 12, ಒನ್‌ಪ್ಲಸ್‌ 11 ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್!

ಒನ್‌ಪ್ಲಸ್ 11 ಮತ್ತು ಒನ್‌ಪ್ಲಸ್ 12 ಗಾಗಿ ಬ್ರೀನೋ ಟಚ್ ಅನ್ನು ಈ ಅಪ್‌ಡೇಟ್‌ನೊಂದಿಗೆ ಅಪ್‌ಗ್ರೇಡ್ ಮಾಡಲಾಗಿದೆ. ಈ ಫೀಚರ್ಸ್‌ ಆನ್‌ಸ್ಕ್ರೀನ್ ಕಂಟೆಂಟ್‌ ಅನ್ನು ಗುರುತಿಸುತ್ತದೆ ಮತ್ತು ಸಂಬಂಧಿತ ಸೇವೆಗಳಿಗೆ ತ್ವರಿತ ಪ್ರವೇಶವನ್ನು ನೀಡುವ ಕೆಲಸ ಮಾಡುತ್ತದೆ.

ಇದೆಲ್ಲದರ ಜೊತೆಗೆ ಡಿವೈಸ್ ಮೋಶನ್ & ಓರಿಯೆಂಟೇಷನ್ ಅನುಮತಿಯನ್ನು ಸಹ ಸೇರಿಸುತ್ತದೆ. ಈ ನವೀಕರಣದ ನಂತರ, ನೀವು ಡಿಸ್‌ಪ್ಲೇಯನ್ನು ಎಚ್ಚರಗೊಳಿಸದೆಯೇ ಫಿಂಗರ್‌ಪ್ರಿಂಟ್ ಅನ್‌ಲಾಕ್ ಅನ್ನು ಬಳಕೆ ಮಾಡಬಹುದಾಗಿದೆ. ಅಲ್ಲದೆ ಫ್ಲೋಟಿಂಗ್ ವಿಂಡೋ ಅಥವಾ ಸ್ಟೇಟಸ್ ಬಾರ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ ಸೂಚಕವನ್ನು ನೋಡಬಹುದಾಗಿದೆ.

Best Mobiles in India

English summary
OnePlus has now announced AI-like features for its flagship phones, OnePlus 12, OnePlus 11.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+