ಒನ್‌ಪ್ಲಸ್ ಏಟಿಗೆ ಆಪಲ್, ಸ್ಯಾಮ್‌ಸಂಗ್ ಉಡೀಸ್!..ಇದೀಗ ಮತ್ತೊಂದು ದಾಖಲೆ!

|

ಭಾರತದಲ್ಲಿ ಅತಿ ಹೆಚ್ಚು ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಚೀನಾ ಮೂಲದ ಮೊಬೈಲ್‌ ಕಂಪೆನಿ ಒನ್‌ಪ್ಲಸ್ ಮತ್ತೊಂದು ದಾಖಲೆ ನಿರ್ಮಿಸಿದೆ. ಇತ್ತೀಚಿಗಷ್ಟೇ ಕೌಂಟರ್ ಪಾಯಿಂಟ್ ಮಾರ್ಕೆಟ್ ಮಾನಿಟರ್ ಸರ್ವೀಸ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2018ರಲ್ಲಿ ಭಾರತದ ಪ್ರೀಮಿಯಂ ಸ್ಮಾರ್ಟ್‌ಪೋನ್ ವಿಭಾಗದಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಮೊಬೈಲ್‌ ಕಂಪೆನಿಗಳನ್ನು ಮೀರಿಸಿ ಒನ್‌ಪ್ಲಸ್ ಕಂಪೆನಿ ಗಮನಸೆಳೆದಿದೆ.

ಇದೀಗ ಭಾರತದಲ್ಲಿ ಒನ್‍ಪ್ಲಸ್ ವಾರ್ಷಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಸ್ಮಾರ್ಟ್‌ಪೋನ್ ಬ್ರ್ಯಾಂಡ್ ಎನಿಸಿದ್ದು, ಕಳೆದ ವರ್ಷಗಳಿಗೆ ಹೋಲಿಸಿದರೆ ಶೇ.85 ರಷ್ಟು ಬೆಳವಣಿಗೆ ಕಂಡಿದೆ. 2018ರಲ್ಲಿ ಪ್ರೀಮಿಯಂ ವರ್ಗದಲ್ಲಿ ಅತ್ಯಧಿಕ ಮಾರಾಟವಾದ ಸ್ಮಾರ್ಟ್‌ಫೋನ್ ಆಗಿ ಒನ್‍ಪ್ಲಸ್ 6 ಮತ್ತು ಎರಡನೇ ಸ್ಥಾನದಲ್ಲಿ ಒನ್‍ಪ್ಲಸ್ 6ಟಿ ಮಾರಾಟವಾಗಿ ಅಚ್ಚರಿ ಮೂಡಿಸಿವೆ. ಇದರಿಂದ ಒನ್‍ಪ್ಲಸ್ 2018ನೇ ಸಾಲಿನ ಮಾರುಕಟ್ಟೆಯ ಪಾಲನ್ನು ಹೆಚ್ಚಿಸಿಕೊಂಡಿದೆ.

 ಒನ್‌ಪ್ಲಸ್ ಏಟಿಗೆ ಆಪಲ್, ಸ್ಯಾಮ್‌ಸಂಗ್ ಉಡೀಸ್!..ಇದೀಗ ಮತ್ತೊಂದು ದಾಖಲೆ!

ಹಿಂದೆಂದಿಗಿಂತಲೂ ಅತ್ಯಧಿಕ ಮಾರಾಟವನ್ನು ಕಾಣುವ ಮೂಲಕ ಪ್ರೀಮಿಯಂ ಸ್ಮಾರ್ಟ್‌ಫೋನ್ ವರ್ಗದಲ್ಲಿ ಒನ್‍ಪ್ಲಸ್ ಸತತ ಮೂರು ತ್ರೈಮಾಸಿಕಗಳಲ್ಲಿ ಮೊದಲ ಸ್ಥಾನವನ್ನು ಹೊಂದಿದೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ಸಂಶೋಧನಾ ವಿಶ್ಲೇಷಕರಾದ ಕಾರ್ನ್ ಚೌಹಾಣ್ ಅವರು ತಿಳಿಸಿದ್ದಾರೆ. ಹಾಗಾದರೆ, ಭಾರತದ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗ ಒನ್‌ಪ್ಲಸ್ ಸ್ಥಾನ ಹೇಗಿದೆ?, ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ಕಥೆ ಏನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೇಗಿದೆ?

ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೇಗಿದೆ?

ಕೌಂಟರ್ ಪಾಯಿಂಟ್ ಬಿಡುಗಡೆ ಮಾಡಿರುವ 2018ರ 4ನೇ ತ್ರೈಮಾಸಿಕ ವರದಿಯ ಪ್ರಕಾರ, ಒನ್‍ಪ್ಲಸ್ ಕಂಪನಿಯು ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಶೇ.36 ರಷ್ಟು ಪಾಲನ್ನು ಹೊಂದುವ ಮೂಲಕ ವರ್ಷದ ಎಲ್ಲಾ ತ್ರೈಮಾಸಿಕಗಳಲ್ಲಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇದೇ ಅವಧಿಯಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಭಾರತದಲ್ಲಿ ಕ್ರಮವಾಗಿ ಶೇ. 30 ಮತ್ತು ಶೇ.26 ರಷ್ಟು ಪಾಲನ್ನು ಹೊಂದಿವೆ ಎಂದು ರಿಪೋರ್ಟ್‌ನಲ್ಲಿ ಹೇಳಲಾಗಿದೆ.

ಅಂತರ ಶೇ. 10 ಕ್ಕೆ ಏರಿಕೆ!

ಅಂತರ ಶೇ. 10 ಕ್ಕೆ ಏರಿಕೆ!

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಒನ್‌ಪ್ಲಸ್ ಶೇ.85 ರಷ್ಟು ಬೆಳವಣಿಗೆ ಕಂಡಿದೆ. 2018ನೇ ಸಾಲಿನ 4ನೇ ತ್ರೈಮಾಸಿಕದಲ್ಲಿ ಒನ್‍ಪ್ಲಸ್ 6ಟಿ ಮಾರುಕಟ್ಟೆಯ ಪಾಲನ್ನು ಹೆಚ್ಚಿಸಿಕೊಳ್ಳಲು ನೆರವಾಗಿದ್ದು, ಹತ್ತಿರದ ಪ್ರತಿಸ್ಪರ್ಧಿಯ ನಡುವೆ ಇದ್ದ ಅಂತರವನ್ನು ಕಡಿಮೆ ಮಾಡಿದೆ. ಇದೀಗ ಇತರೆ ಪ್ರೀಮಿಯಮ್ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಿಗಿಂತ ಒನ್‌ಪ್ಲಸ್‌ನ ಅಂತರ ಈಗ ಶೇ. 10 ಕ್ಕೆ ಬಂದು ತಲುಪಿದೆ ಎಂದು ತಿಳಿದುಬಂದಿದೆ.

ಟಾಪ್ 5 ಪ್ರೀಮಿಯಮ್ ಸ್ಮಾರ್ಟ್‌ಫೋನ್!

ಟಾಪ್ 5 ಪ್ರೀಮಿಯಮ್ ಸ್ಮಾರ್ಟ್‌ಫೋನ್!

ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗಿರುವ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಒನ್‌ಪ್ಲಸ್ ಕಂಪೆನಿಯ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಮೊದಲ ಸ್ಥಾನದಲ್ಲಿದೆ. ಇನ್ನು ಒನ್‌ಪ್ಲಸ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಎರಡನೇ ಸ್ಥಾನವನ್ನು ಪಡೆದಿದೆ. ಇದಾದ ನಂತರದಲ್ಲಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 9, ಆಪಲ್ ಎಕ್ಸ್, ಗೂಗಲ್ ಪಿಕ್ಸೆಲ್ ಎಕ್ಸ್ 2 ಸ್ಮಾರ್ಟ್‌ಫೋನ್‌ಗಳು ಸ್ಥಾನ ಪಡೆದಿವೆ.

ಮನೆ ಮಾತಾಗಿದೆ ಒನ್‌ಪ್ಲಸ್!

ಮನೆ ಮಾತಾಗಿದೆ ಒನ್‌ಪ್ಲಸ್!

ಒನ್‌ಪ್ಲಸ್ ಕಂಪೆನಿ ಗ್ರಾಹಕರಿಂದ ಅತ್ಯುತ್ತಮವಾದ ಪ್ರತಿಕ್ರಿಯೆಯನ್ನೂ ಪಡೆಯುತ್ತಿದ್ದು ಇದೀಗ ಮೊಬೈಲ್ ಪ್ರಿಯರ ಮನೆ ಮಾತಾಗಿದೆ.ಕಂಪನಿಯ ಎಕ್ಸ್‌ಪೀರಿಯನ್ಸ್ ಸ್ಟೋರ್‍‌ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಪರಿಣಾಮ ಮುಂದಿನ ತ್ರೈಮಾಸಿಕಗಳಲ್ಲಿ ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆಗೆ ನೆರವಾಗಲಿದೆ ಎಂದು ಹೇಳಲಾಗಿದೆ. ಒನ್‍ಪ್ಲಸ್.ಇನ್, ಅಮೆಜಾನ್.ಇನ್, ರಿಲಾಯನ್ಸ್ ಡಿಜಿಟಲ್ ಮಳಿಗೆಗಳಲ್ಲೂ ಲಭ್ಯವಿರುವ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಈಗ ಗ್ರಾಹಕರ ಕೈಸೇರಲು ತಯಾರಾಗಿವೆ.

ಸಂಶೋಧನಾ ವಿಶ್ಲೇಷಕರು ಹೇಳಿದ್ದೇನು?

ಸಂಶೋಧನಾ ವಿಶ್ಲೇಷಕರು ಹೇಳಿದ್ದೇನು?

ಹಿಂದೆಂದಿಗಿಂತಲೂ ಅತ್ಯಧಿಕ ಮಾರಾಟವನ್ನು ಕಾಣುವ ಮೂಲಕ ಪ್ರೀಮಿಯಂ ಸ್ಮಾರ್ಟ್‌ಫೋನ್ ವರ್ಗದಲ್ಲಿ ಒನ್‍ಪ್ಲಸ್ ಸತತ ಮೂರು ತ್ರೈಮಾಸಿಕಗಳಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಕೇವಲ ಒಂದು ವರ್ಷದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಒನ್‍ಪ್ಲಸ್ ಒಟ್ಟಾರೆ ಉತ್ತಮ ಫಲಿತಾಂಶವನ್ನು ಪಡೆದಿದ್ದು, ಹಬ್ಬಗಳ ಸಂದರ್ಭದಲ್ಲಿ ಇತ್ತೀಚಿನ ಒನ್‍ಪ್ಲಸ್ 6ಟಿಗೆ ಭಾರೀ ಬೇಡಿಕೆ ಕಂಡುಬಂದಿದೆ ಎಂದು ಸಂಶೋಧನಾ ವಿಶ್ಲೇಷಕರಾದ ಕಾರ್ನ್ ಚೌಹಾಣ್ ಅವರು ಹೇಳಿದ್ದಾರೆ.

Best Mobiles in India

English summary
OnePlus recorded its highest-ever shipments in a single quarter (Q4), capturing 36 per cent market share to lead premium smartphone segment for three successive quarters. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X