ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ ಬೆಳೆದಿದ್ದು ಹೇಗೆ ಗೊತ್ತಾ..? ಆಚ್ಚರಿಯ ಮಾಹಿತಿ..!

|

ಒನ್‌ಪ್ಲಸ್ ಇಂದು ಮಾರುಕಟ್ಟೆಯಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಬೆಳವಣಿಯನ್ನು ಸಾಧಿಸುತ್ತಿದ್ದು, ಬಳಕೆದಾರರ ನಂಬಿಕೆ ಮತ್ತು ವಿಶ್ವಾಸ ಎರಡನ್ನು ಗಳಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಅಭಿವೃದ್ಧಿ ಹೊಂದಿದ ರೀತಿಯಲ್ಲಿಯೇ ಅಭಿಮಾನಿಗಳ ವೃಂದವೂ ಹೆಚ್ಚಾಗುತ್ತಲೇ ಸಾಗಿದೆ. ಈಗಾಗಲೇ ಜಾಗತಿಕವಾಗಿ ಗುರುತಿಸಿಕೊಂಡಿರುವ ಒನ್‌ಪ್ಲಸ್ ಉತ್ತಮ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ ಬೆಳೆದಿದ್ದು ಹೇಗೆ ಗೊತ್ತಾ..? ಆಚ್ಚರಿಯ ಮಾಹಿತಿ

2013ರಿಂದ ಮಾರುಕಟ್ಟೆಯಲ್ಲಿ ತನ್ನ ಸ್ಮಾರ್ಟ್‌ಫೋನ್ ಗಳ ವೈಶಿಷ್ಠ್ಯದಿಂದ ಮತ್ತು ಗುಣಮಟ್ಟದಿಂದಲೇ ಸದ್ದು ಮಾಡುತ್ತಿರುವ ಒಪ್‌ಪ್ಲಸ್‌, ಬಳಕೆದಾರರಿಗೆ ಗುಣಮಟ್ಟದ ಸ್ಮಾರ್ಟ್‌ಫೋನ್‌ ಅನ್ನು ಕಡಿಮೆ ಬೆಲೆಗೆ ನೀಡುವುದಲ್ಲದೇ, ತನ್ನ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡು, ಮಾರುಕಟ್ಟೆಯಲ್ಲಿ ಈಗಾಗಲೇ ಭದ್ರವಾಗಿ ತಳವೂರಿರುವ ಟಾಪ್ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ ಆಚ್ಚರಿಯ ಬೆಳವಣಿಗೆ ಕಾಣವಾಗಿರುವ ವ್ಯಕ್ತಿಯ ಪರಿಚಯ ಮಾಡುವ ಪ್ರಯತ್ನ ಇದಾಗಿದೆ.

ಒನ್‌ಪ್ಲಸ್‌ ಹಿಂದಿರುವ ಕಾಣದ ಕೈಗಳು:

ಒನ್‌ಪ್ಲಸ್‌ ಹಿಂದಿರುವ ಕಾಣದ ಕೈಗಳು:

ಮಾರುಕಟ್ಟೆಯಲ್ಲಿ ಒಪ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸದ್ದು ಮಾಡಲು ಅನೇಕ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇವರು ಮುನ್ನಲೆಯಲ್ಲಿ ಕಾಣಿಸಿಕೊಳ್ಳಲಿದ್ದರೂ, ಒನ್‌ಪ್ಲಸ್ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವಲ್ಲಿ ಕಾರಣಕರ್ತರಾಗಿದ್ದಾರೆ. ಅಂತವರಲ್ಲಿ ಒಬ್ಬರು ಪೀಟರ್ ವೆಸ್ಟರ್ಬಾಕಾ.

ಆಂಗ್ರಿ ಬರ್ಡ್ ಹಿಂದಿನ ಶಕ್ತಿ:

ಸ್ಟಾರ್ಟ್‌ಆಪ್ ಕನ್ಸಲ್ಟೆಂಟ್ ಆಗಿರುವ ಪೀಟರ್ ವೆಸ್ಟರ್ಬಾಕಾ, ಒನ್‌ಪ್ಲಸ್ ಹಿಂದಿರುವ ಶಕ್ತಿಯಾಗಿದ್ದಾರೆ. ಈ ಹಿಂದೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದ್ದ ಮೊಬೈಲ್ ಗೇಮ್ ಆಂಗ್ರಿ ಬರ್ಡ್ ಯಶಸ್ಸಿನಲ್ಲಿ ಇವರ ಪಾಲು ಬಹುದೊಡ್ಡದಾಗಿದೆ ಎಂದರೆ ತಪ್ಪಾಗುವುದಿಲ್ಲ.

ಒನ್‌ಪ್ಲಸ್‌ ಬೆನ್ನೆಲುಬು:

ಒನ್‌ಪ್ಲಸ್‌ ಬೆನ್ನೆಲುಬು:

ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಎದುರಿಸಿದ ಸವಾಲುಗಳಿಗೆ ಉತ್ತರ ನೀಡಿದರವರು ಪೀಟರ್ ವೆಸ್ಟರ್ಬಾಕಾ, ಎಲ್ಲಾ ಸ್ಪರ್ಧೆಗಳನ್ನು ಎದುರಿಸಿ ಮಾರುಕಟ್ಟೆಯಲ್ಲಿ ಉತ್ತಮ ಬ್ರಾಂಡ್ ಎನ್ನುವ ಖ್ಯಾತಿಯನ್ನು ಪಡೆದುಕೊಳ್ಳಲು ಸಹಕರಿಸಿದ ಪೀಟರ್ ವೆಸ್ಟರ್ಬಾಕಾ, ಒನ್‌ಪ್ಲಸ್ ಬೆನ್ನೆಲುಬು.

ಒನ್‌ಪ್ಲಸ್‌ ಬಳಕೆದಾರರ:

ಒನ್‌ಪ್ಲಸ್‌ ಬಳಕೆದಾರರ:

ಪೀಟರ್ ವೆಸ್ಟರ್ಬಾಕಾ ಸದಾ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್ ಅನ್ನೇ ಬಳಸಲಿದ್ದು, ಹೆಚ್ಚಾಗಿ ಗೇಮ್ ಆಡುವುದರಲ್ಲೆ ಕಾಲ ಕಳೆಯುವ ಅವರು ಗುಣಮಟ್ಟದ ಗೇಮಿಂಗ್ ಅನುಭವಕ್ಕಾಗಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾರೆ ಎನ್ನಲಾಗಿದೆ. ಅಲ್ಲದೇ ಹೆಚ್ಚಿನ ವಿದೇಶಿ ಪ್ರಯಾಣ ಮಾಡುವ ಇರುವ ಅನೇಕ ನೆಟ್‌ವರ್ಕ್ ಸಫೋರ್ಟ್ ಸಾಧ್ಯತೆ ಇರುವ ಕಾರಣ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

What is Jio Cricket Gold Pass? How to Buy it
ನೆವರ್ ಸೆಟ್ಟಲ್:

ನೆವರ್ ಸೆಟ್ಟಲ್:

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸಿಕೊಳ್ಳುವ ನೆವರ್ ಸೆಟ್ಟಲ್ ಎನ್ನುವ ಘೋಷ ವಾಕ್ಯವನ್ನು ನೀಡಿದವರು ಇದೇ ಪೀಟರ್ ವೆಸ್ಟರ್ಬಾಕಾ, ಕೇವಲ ಒನ್‌ಪ್ಲಸ್ ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ಅನೇಕ ಸ್ಟಾರ್ಟಪ್‌ಗಳು ತಮ್ಮ ಸಾಧನೆಯನ್ನು ತುತ್ತತುದಿಗೆ ಏರಿಸಿಕೊಳ್ಳಲು ಪೀಟರ್ ವೆಸ್ಟರ್ಬಾಕಾ ಅವರ ಸಹಾಯವನ್ನು ಪಡೆಯಲು ತುದಿಗಾಲಿನಲ್ಲಿ ನಿಲ್ಲಲಿವೆ,

ಒನ್‌ಪ್ಲಸ್:

ಒನ್‌ಪ್ಲಸ್:

ಮಾರುಕಟ್ಟೆಯಲ್ಲಿ ಗುಣಮಟ್ಟದ ವಸ್ತುವನ್ನು ಬಳಕೆದಾರರಿಗೆ ನೀಡಬೇಕು ಎನ್ನುವ ಉದ್ದೇಶದಿಂದ ಶುರುವಾದ ಒನ್‌ಪ್ಲಸ್, ಅನೇಕರ ಸಹಾಯದಿಂದ ಇದು ವಿಶ್ವದಲ್ಲಿಯೇ ಹೆಚ್ಚಿನ ಪ್ರೀತಿಯನ್ನು ಸಂಪಾದಿಸಿಕೊಂಡಿದೆ. ಲಾಭವೊಂದನ್ನು ಗುರಿಯಾಗಿರಿಸಿಕೊಂಡು ಕೆಲಸ ಮಾಡದೆ, ನಂಬಿಕೆ ಮತ್ತು ಶ್ರೇಷ್ಠತೆಗಾಗಿ ದುಡಿದರೆ ಗೆಲುವು ತಾನಾಗಿಯೇ ಒಲಿಯಲಿದೆ ಎನ್ನುವುದಕ್ಕೇ ಒನ್‌ಪ್ಲಸ್ ಸಾಕ್ಷಿ. ಇದಲ್ಲದೇ ಇನ್ನು ಕೆಲವೇ ದಿನಗಳಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ತುದಿಗಾಲಿನಲ್ಲಿ ನಿಂತಿದೆ.

Best Mobiles in India

English summary
OnePlus: Breaking boundaries of a conventional smartphone brand. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X