ಭಾರತದಲ್ಲಿ ಒನ್‌ಪ್ಲಸ್‌ ಸಂಸ್ಥೆಯ ಹೊಸ ಇಯರ್‌ಬಡ್ಸ್‌ ಬಿಡುಗಡೆ!

|

ಜನಪ್ರಿಯ ಪ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಒನ್‌ಪ್ಲಸ್‌ ತನ್ನ ಹೊಸ ಇಯರ್‌ಬಡ್ಸ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಒನ್‌ಪ್ಲಸ್ ಬಡ್ಸ್ Z ಮತ್ತು ಒನ್‌ಪ್ಲಸ್ ಬುಲೆಟ್ಸ್‌ ವಾಯರ್‌ಲೆಸ್ Z ಬಾಸ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಒನ್‌ಪ್ಲಸ್ ಬಡ್ಸ್ Z ಟ್ರೂಲಿ ವಾಯರ್‌ಲೆಸ್‌ ಸ್ಟಿರಿಯೊ ಇಯರ್‌ಬಡ್ಸ್‌ ಮತ್ತು ಒನ್‌ಪ್ಲಸ್ ಬಡ್ಸ್‌ watered-down version ಆವೃತ್ತಿಯಲ್ಲಿ ಲಭ್ಯವಾಗಲಿದೆ. ಇನ್ನು ಒನ್‌ಪ್ಲಸ್ ಬುಲೆಟ್ಸ್‌ ವಾಯರ್‌ಲೆಸ್‌ Z ಬಾಸ್ ಎಡಿಷನ್ ಇಯರ್‌ಫೋನ್‌ಗಳನ್ನು ಬುಲೆಟ್ಸ್‌ ವಾಯರ್‌ಲೆಸ್ Zಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಸಂಸ್ಥೆ ತನ್ನ ಒನ್‌ಪ್ಲಸ್ ಬಡ್ಸ್ Z ಮತ್ತು ಒನ್‌ಪ್ಲಸ್ ಬುಲೆಟ್ಸ್‌ ವಾಯರ್‌ಲೆಸ್ Z ಬಾಸ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಎರಡೂ ಇಯರ್‌ಬಡ್ಸ್‌ಗಳು ಡೆಪ್ತ್‌ ಬಾಸ್‌ ಮತ್ತು ಸ್ಪಷ್ಟ ಗಾಯನಗಳನ್ನು ಹೊಂದಿವೆ. ಇನ್ನು ಈ ಇಯರ್‌ಬಡ್ಸ್‌ಗಳು ವಾಟರ್‌ಪ್ರೂಪ್‌ ಮತ್ತು ಬೆವರು ನಿರೋದಕ ವ್ಯವಸ್ಥೆಯನ್ನು ಹೊಂದಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ ಬಡ್ಸ್ Z ಇಯರ್‌ಬಡ್ಸ್‌

ಒನ್‌ಪ್ಲಸ್ ಬಡ್ಸ್ Z ಇಯರ್‌ಬಡ್ಸ್‌

ಒನ್‌ಪ್ಲಸ್ ಬಡ್ಸ್ Z ಇಯರ್‌ಬಡ್ಸ್‌ IP55-ರೇಟೆಡ್ ಧೂಳು- ಮತ್ತು ಬೆವರು-ನಿರೋಧಕ ನಿರ್ಮಾಣ ಮತ್ತು ನಿಷ್ಕ್ರಿಯ ಶಬ್ದ ರದ್ದತಿಗಾಗಿ ಸಿಲಿಕೋನ್ ಇಯರ್ ಸುಳಿವುಗಳನ್ನು ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ 10mm ಆಡಿಯೊ ಡ್ರೈವರ್‌ಗಳನ್ನು ಹೊಂದಿದೆ. ಜೊತೆಗೆ ಇದು ಪವರ್‌ಫುಲ್‌ ಬಾಸ್ ಮತ್ತು ಸ್ಪಷ್ಟ ಗಾಯನವನ್ನು ನೀಡಲಿದೆ. ಇದಲ್ಲದೆ ಪ್ರತಿ ಇಯರ್‌ಬಡ್ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ ಐದು ಗಂಟೆಗಳ ಬಳಕೆಯನ್ನು ನೀಡಲಿದೆ. ಇದು ಒಟ್ಟು 20 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದ್ದು, ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಒನ್‌ಪ್ಲಸ್ ಬಡ್ Z ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದೆ. ಆದಾಗ್ಯೂ, ಒನ್‌ಪ್ಲಸ್ ಬಳಕೆದಾರರಿಗೆ ಪ್ರತ್ಯೇಕವಾಗಿ ಹೆಚ್ಚುವರಿ ಫೀಚರ್ಸ್‌ಗಳನ್ನು ಸಹ ನೀಡಿದೆ. ಒನ್‌ಪ್ಲಸ್ ಫೋನ್‌ನಲ್ಲಿ ಗೇಮಿಂಗ್ ಮೋಡ್ ಬಳಸುವಾಗ ಅಲ್ಟ್ರಾ ಕಡಿಮೆ-ಲೇಟೆನ್ಸಿ ಆಡಿಯೊ ಸಹ ಸೇರಿದೆ. ಇಯರ್‌ಬಡ್‌ಗಳು ಪ್ಲೇಬ್ಯಾಕ್ ಮತ್ತು ಧ್ವನಿ ಕರೆಗಳಿಗಾಗಿ ಟಚ್‌ ಕಂಟ್ರೋಲ್‌ಗಳನ್ನು ಸಹ ಬೆಂಬಲಿಸುತ್ತವೆ.

ಒನ್‌ಪ್ಲಸ್ ಬುಲೆಟ್ಸ್‌ ವಾಯರ್‌ಲೆಸ್ Z ಬಾಸ್ ಆವೃತ್ತಿ

ಒನ್‌ಪ್ಲಸ್ ಬುಲೆಟ್ಸ್‌ ವಾಯರ್‌ಲೆಸ್ Z ಬಾಸ್ ಆವೃತ್ತಿ

ಒನ್‌ಪ್ಲಸ್ ಬುಲೆಟ್ಸ್‌ ವಾಯರ್‌ಲೆಸ್ Z ಬಾಸ್ ಆವೃತ್ತಿ ಇನ್-ಇಯರ್ ಹೆಡ್‌ಫೋನ್‌ಗಳು ವರ್ಧಿತ ಬಾಸ್ ಎಫೆಕ್ಟ್‌ ಮತ್ತು ಉತ್ಕೃಷ್ಟ ಗಾಯನಕ್ಕಾಗಿ 9.2 ಎಂಎಂ ಆಡಿಯೋ ಡ್ರೈವರ್‌ಳನ್ನು ಹೊಂದಿದೆ. ಅಲ್ಲದೆ ಈ ಇಯರ್‌ಬಡ್ಸ್‌100ms ಕಡಿಮೆ-ಲೇಟೆನ್ಸಿಯನ್ನು ಒಳಗೊಂಡಿದೆ. ಇನ್ನು ಈ ಆವೃತ್ತಿಯು ವಾರ್ಪ್ ಚಾರ್ಜ್ ಬೆಂಬವನ್ನು ಹೊಂದಿದ್ದು, ಇದು ನಿಮಗೆ 10 ನಿಮಿಷಗಳ ಚಾರ್ಜ್‌ನಲ್ಲಿ 10 ಗಂಟೆಗಳ ಪ್ಲೇಬ್ಯಾಕ್ ಮತ್ತು ಸಿಂಗಲ್‌ ಚಾರ್ಜ್‌ನಲ್ಲಿ 17 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್ ಬಡ್ಸ್ Z ಭಾರತದಲ್ಲಿ 3,190 - ರೂ. ಬೆಲೆಯನ್ನು ಹೊಂದಿದೆ. ಇದು ಪ್ರೀ ಬುಕ್ಕಿಂಗ್‌ ಟೈಂ ನಲ್ಲಿ ವಿಶೇಷ ರಿಯಾಯಿತಿಯಲ್ಲಿ ಒನ್‌ಪ್ಲಸ್.ಇನ್ ಮತ್ತು ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್‌ನಲ್ಲಿ 2,990 ರೂ.ಗಳಿಗೆ ಲಭ್ಯವಾಗಲಿದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಒನ್‌ಪ್ಲಸ್ ಎಕ್ಸ್‌ಕ್ಲೂಸಿವ್ ಆಫ್‌ಲೈನ್ ಮಳಿಗೆಗಳಲ್ಲಿ ಅಕ್ಟೋಬರ್ 26 ರಿಂದ ಪ್ರಿ ಬುಕ್ಕಿಂಗ್‌ ಪ್ರಾರಂಭವಾಗಲಿದೆ. ಅಲ್ಲದೆ ಈ ಇಯರ್‌ಬಡ್‌ಗಳು ನವೆಂಬರ್ 2 ರಿಂದ ಮುಕ್ತ ಮಾರಾಟಕ್ಕೆ ಬರಲಿವೆ.

ಒನ್‌ಪ್ಲಸ್ ಬುಲೆಟ್ಸ್‌ ವಾಯರ್‌ಲೆಸ್ Z-ಬಾಸ್ ಆವೃತ್ತಿ

ಒನ್‌ಪ್ಲಸ್ ಬುಲೆಟ್ಸ್‌ ವಾಯರ್‌ಲೆಸ್ Z-ಬಾಸ್ ಆವೃತ್ತಿಯು ಭಾರತದಲ್ಲಿ ರೂ. 1,999, ಆಗಿದೆ. ಈ ಇಯರ್‌ಫೋನ್‌ಗಳು ಬಾಸ್ ಬ್ಲೂ ಮತ್ತು ರಿವರ್ಬ್ ರೆಡ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಅಕ್ಟೋಬರ್ 15 ರಿಂದ ಕಂಪನಿಯ ಇಂಡಿಯಾ ವೆಬ್‌ಸೈಟ್ ಮತ್ತು ಒನ್‌ಪ್ಲಸ್ ಸ್ಟೋರ್ ಆಪ್ ಮೂಲಕ ಇಯರ್‌ಫೋನ್‌ಗಳು ಸೀಮಿತ ಮಾರಾಟಕ್ಕೆ ಬರಲಿವೆ.

Best Mobiles in India

English summary
OnePlus Buds Z and OnePlus Bullets Wireless Z - Bass Edition have been launched alongside the OnePlus 8T.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X