ಭಾರತದಲ್ಲಿ ಒನ್‌ಪ್ಲಸ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! ವಿಶೇಷತೆ ಏನು?

|

ಭಾರತದ ಪ್ರೀಮಿಯಂ ಬ್ಯಾಂಡ್‌ ಒನ್‌ಪ್ಲಸ್‌ ತನ್ನ ಗುಣಮಟ್ಟದ ಇಯರ್‌ಬಡ್ಸ್‌ಗಳಿಗೂ ಹೆಸರುವಾಸಿಯಾಗಿದೆ. ಸದ್ಯ ಇದೀಗ ಒನ್‌ಪ್ಲಸ್ ತನ್ನ ಹೊಸ ಬಡ್ Z ಸ್ಟೀವನ್ ಹ್ಯಾರಿಂಗ್ಟನ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಅನ್ನು ಲಾಸ್ ಏಂಜಲೀಸ್ ಮೂಲದ ಕಲಾವಿದ ಮತ್ತು ವಿನ್ಯಾಸಕ ಸ್ಟೀವನ್ ಹ್ಯಾರಿಂಗ್ಟನ್ ಅವರ ಸಹಯೋಗದೊಂದಿಗೆ ಪ್ರಾರಂಭಿಸಿದೆ. ಹೊಸ ಸೀಮಿತ ಆವೃತ್ತಿಯ ಇಯರ್‌ಬಡ್‌ಗಳು ಎರಡು-ಟೋನ್ ಕೆನ್ನೇರಳೆ ಮತ್ತು ಪುದೀನ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿವೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಸಂಸ್ಥೆ ತನ್ನ ಹೊಸ ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಇಯರ್‌ಬಡ್ಸ್‌ ಹ್ಯಾರಿಂಗ್ಟನ್‌ನ ಸಿಗ್ನೇಚರ್‌ ಸ್ಟೈಲ್‌ ಗ್ರಾಫಿಟಿ ಮತ್ತು ವಿಶಿಷ್ಟ ವ್ಯಂಗ್ಯಚಿತ್ರಗಳು ಮತ್ತು ವಿನ್ಯಾಸಗಳನ್ನು ಒಳಗೊಂಡಿದೆ. ಇನ್ನು ಈ ಒನ್‌ಪ್ಲಸ್ ಬಡ್ಸ್ Z ಸ್ಟೀವನ್ ಹ್ಯಾರಿಂಗ್ಟನ್ ಆವೃತ್ತಿಯು ಸಾಮಾನ್ಯ ಒನ್‌ಪ್ಲಸ್ ಬಡ್ಸ್ Z ಟ್ರೂಲಿ ವಾಯರ್‌ಲೆಸ್‌ಗೆ ಹೋಲುತ್ತದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್

ಒನ್‌ಪ್ಲಸ್ ಬಡ್ಸ್ Z ಸ್ಟೀವನ್ ಹ್ಯಾರಿಂಗ್ಟನ್ ಎಡಿಷನ್ ಇಯರ್‌ಬಡ್ಸ್‌ ಬಾಸ್ ಬೂಸ್ಟ್ ತಂತ್ರಜ್ಞಾನ, ಡಾಲ್ಬಿ ಅಟ್ಮೋಸ್ ವಾಯ್ಸ್‌ ಮತ್ತು ಬೆವರು ನಿರೋದಕ ವ್ಯವಸ್ಥೆ ಹಾಗೂ 11mm ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಒಳಗೊಂಡಿದೆ. ಈ ಇಯರ್‌ಬಡ್ಸ್‌ ಬ್ಲೂಟೂತ್ ವಿ 5.0 ಕನೆಕ್ಟಿವಿಟಿಯೊಂದಿಗೆ ಬರುತ್ತವೆ. ಧ್ವನಿ ಎತ್ತಿಕೊಳ್ಳುವಿಕೆ, ಕ್ವಿಕ್ ಪೇರ್ ಮತ್ತು ಕ್ವಿಕ್ ಸ್ವಿಚ್‌ಗಾಗಿ ಎಕೋ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ಗಳನ್ನು ಒಳಗೊಂಡಿವೆ. ಇದಲ್ಲದೆ, ಒನ್‌ಪ್ಲಸ್ ಬಡ್ಸ್ Z ಸ್ಟೀವನ್ ಹ್ಯಾರಿಂಗ್ಟನ್ ಆವೃತ್ತಿಯು ಸಿಂಗಲ್‌ ಚಾರ್ಜ್‌ನಲ್ಲಿ 20 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ಹೊಂದಿದ್ದು, 10 ನಿಮಿಷಗಳ ಇನ್ಸಟಂಟ್‌ ಚಾರ್ಜ್‌ನಲ್ಲಿ ಮೂರು ಗಂಟೆಗಳ ಪ್ಲೇಬ್ಯಾಕ್‌ ಅನ್ನು ನೀಡಲಿದೆ.

ಒನ್‌ಪ್ಲಸ್

ಇನ್ನು ಈ ಇಯರ್‌ಬಡ್ಸ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. "ಉತ್ತಮ ಧ್ವನಿ ಗುಣಮಟ್ಟ ಮತ್ತು ಸೌಂದರ್ಯದ ವಿನ್ಯಾಸದ ಸರಿಯಾದ ಸಂಯೋಜನೆಯನ್ನು ಹುಡುಕುತ್ತಿರುವ ನಮ್ಮ ಬಳಕೆದಾರರಿಗೆ, ಒನ್‌ಪ್ಲಸ್ ಬಡ್ಸ್ Z ಡ್ ಸ್ಟೀವನ್ ಹ್ಯಾರಿಂಗ್ಟನ್ ಆವೃತ್ತಿಯು ಅಮೂಲ್ಯವಾದ ಸೇರ್ಪಡೆಯಾಗಿದೆ ಎಂದು ಕಂಪೆನಿ ಹೇಳಿದೆ. ಇನ್ನು ಈ ಒನ್‌ಪ್ಲಸ್ ಬಡ್ಸ್ Z ಸ್ಟೀವ್ ಹ್ಯಾರಿಂಗ್ಟನ್ ಆವೃತ್ತಿಯು ಎರಡು-ಟೋನ್ ನೇರಳೆ ಮತ್ತು ಮಿಂಟ್‌ ಬಣ್ಣದ ಕಾಂಬೊದೊಂದಿಗೆ ಬರುತ್ತದೆ. ಜೊತೆಗೆ ಇದು ಗ್ರೇ ಮತ್ತು ವೈಟ್ ಬಣ್ಣ ಆಯ್ಕೆಗಳಲ್ಲಿ ಬರುವ ಸಾಮಾನ್ಯ ಒನ್‌ಪ್ಲಸ್ ಬಡ್ಸ್ Z ಗಿಂತ ಭಿನ್ನವಾಗಿದೆ.

ಒನ್‌ಪ್ಲಸ್

ಸದ್ಯ ಭಾರತದಲ್ಲಿ ಒನ್‌ಪ್ಲಸ್ ಬಡ್ಸ್ Z ಡ್ ಸ್ಟೀವನ್ ಹ್ಯಾರಿಂಗ್ಟನ್ ಆವೃತ್ತಿ ಬೆಲೆ ರೂ. 3,699.ಆಗಿದೆ. ಈ ಇಯರ್‌ಬಡ್ಸ್‌ ಆರಂಭದಲ್ಲಿ ರೆಡ್ ಕೇಬಲ್ ಕ್ಲಬ್ ಸದಸ್ಯರಿಗೆ ಜನವರಿ 26 ರಂದು ರಾತ್ರಿ 11:59 ರ ನಂತರ ಖರೀದಿಸಲು ಅವಕಾಶವಿದೆ. ಒನ್‌ಪ್ಲಸ್ ವೆಬ್‌ಸೈಟ್ ಮತ್ತು ಒನ್‌ಪ್ಲಸ್ ಸ್ಟೋರ್ ಆಪ್ ಮೂಲಕ ಲಭ್ಯವಿದೆ. ಆದಾಗ್ಯೂ, ಸೀಮಿತ ಆವೃತ್ತಿಯ ಕೊಡುಗೆಗಾಗಿ ಮುಕ್ತ ಮಾರಾಟವು ಜನವರಿ 27 ರಿಂದ ಒನ್‌ಪ್ಲಸ್ ಸೈಟ್, ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಒನ್‌ಪ್ಲಸ್ ಆಫ್‌ಲೈನ್ ಮಳಿಗೆಗಳ ಮೂಲಕ ಪ್ರಾರಂಭವಾಗಲಿದೆ.

Most Read Articles
Best Mobiles in India

English summary
OnePlus Buds Z Steven Harrington Edition TWS Earbuds Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X