ಒನ್‌ಪ್ಲಸ್ ಬುಲೆಟ್ಸ್‌ ವಾಯರ್‌ಲೆಸ್‌ Z ಇಯರ್‌ಫೋನ್‌ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವೈವಿಧ್ಯಮಯವಾದ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕಿವೆ. ನಿಮಗೆಲ್ಲಾ ತಿಳಿದಿರುವಂತೆ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಯಾವುದೇ ಹೆಡ್‌ಫೋನ್‌ಗಳನ್ನ ಸ್ಮಾರ್ಟ್‌ಫೋನ್‌ ಕಂಪೆನಿಗಳು ನಿಡುತ್ತಿಲ್ಲ. ಇದೇ ಕಾರಣಕ್ಕೆ ಗ್ರಾಹಕರು ತಮಗೆ ಇಷ್ಟವಾದ ಇಯರ್‌ಫೋನ್‌ಗಳನ್ನ ಖರೀದಿಸುತ್ತಿದ್ದಾರೆ. ಇದಲ್ಲದೆ ಹಲವು ಕಂಪೆನಿಗಳು ಕೂಡ ಸಾಕಷ್ಟು ಭಿನ್ನ ಮಾದರಿಯ ಇಯರ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿವೆ. ಇವುಗಳಲ್ಲಿ ಒನ್‌ಪ್ಲಸ್‌ ಕಂಪೆನಿ ಕೂಡ ಒಂದಾಗಿದ್ದು, ಇದೀಗ ತನ್ನ ಹೊಸ ಇಯರ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಭಾರತದ

ಹೌದು, ಭಾರತದ ನಂಬರ್‌ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಒನ್‌ಪ್ಲಸ್ ಕಂಪೆನಿ ತನ್ನ ಹೊಸ ಒನ್‌ಪ್ಲಸ್‌ ಬುಲೆಟ್ಸ್‌ ವಾಯರ್‌ಲೆಸ್‌ Z ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ವಾಯರ್‌ಲೆಸ್‌ ಇಯರ್‌ಫೋನ್‌ ಅನ್ನು ಒನ್‌ಪ್ಲಸ್‌ ಬುಲೆಟ್ಸ್‌ ವಾಯರ್‌ಲೆಸ್‌ 2ಗೆ ಹೋಲಿಕೆ ಮಾಡಿದರೆ ಇದು ವಾರ್ಪ್‌ ಚಾರ್ಜ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಇಯರ್‌ಫೊನ್‌ ದೀರ್ಘಾವಧಿಯ ಬ್ಯಾಟರಿ ಶಕ್ತಿಯನ್ನ ಹೊಂದಿದೆ ಎಂದು ಕಂಪೆ ನಿ ಹೇಳಿ ಕೊಂಡಿದೆ. ಸದ್ಯ ಈ ಇಯರ್‌ಫೋನ್‌ಗಳ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಇಯರ್‌ಫೋನ್‌

ಇನ್ನು ಈ ಇಯರ್‌ಫೋನ್‌ ಅನ್ನು ಒನ್‌ಪ್ಲಸ್ 8 ಪ್ರೊ ಮತ್ತು ಒನ್‌ಪ್ಲಸ್ 8 ಸ್ಮಾರ್ಟ್‌ಫೋನ್‌ಗಳ ಜೊತೆಗೆ ಬಿಡುಗಡೆ ಮಾಡಲಾಗಿದೆ. ಸದ್ಯ ಈ ವಾಯರ್‌ಲೆಸ್‌ ಇಯರ್‌ಫೋನ್‌ ವಾರ್ಪ್ ಚಾರ್ಜ್ ಫೀಚರ್ಸ್‌ ಹೊಂದಿದ್ದು, 10 ನಿಮಿಷಗಳ ಚಾರ್ಜ್‌ನೊಂದಿಗೆ 10 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಅಲ್ಲದೆ ಫುಲ್‌ಚಾರ್ಜ್ ಆದ ನಂತರ ಇದು 20 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಅಲ್ಲದೆ ಒನ್‌ಪ್ಲಸ್ ತನ್ನ ಈ ಹಿಂದಿನ ತಲೆಮಾರಿನ ವಾಯರ್‌‌ಲೆಸ್ ಹೆಡ್‌ಫೋನ್‌ಗಳಾದ ಮ್ಯಾಗ್ನೆಟಿಕ್ ಕಂಟ್ರೋಲ್, ಕ್ವಿಕ್ ಪೇರ್ ಮತ್ತು ಕ್ವಿಕ್ ಸ್ವಿಚ್‌ನ ಫೀಚರ್ಸ್‌ಗಳನ್ನ ಈ ಇಯರ್‌ಫೋನ್‌ನಲ್ಲೂ ಕಾಣಬಹುದಾಗಿದೆ.

ಒನ್‌ಪ್ಲಸ್

ಇದಲ್ಲದೆ ಒನ್‌ಪ್ಲಸ್ ಬುಲೆಟ್ಸ್ ವಾಯರ್‌ಲೆಸ್ Z ಇಯರ್‌ಫೋನ್‌ ಬೆವರು ಮತ್ತು ವಾಟರ್‌ ಪ್ರೊಟೆಕ್ಷನ್‌ಗಾಗಿ ಐಪಿ 55 ರೇಟಿಂಗ್ ಅನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಅಲ್ಲದೆ ಸೂಪರ್ ಬಾಸ್ ಟೋನ್ ಹೊರತುಪಡಿಸಿ 9.2 ಎಂಎಂ ಡೈನಾಮಿಕ್ ಡ್ರೈವರ್ ಅನ್ನು ಸಹ ಹೊಂದಿದ್ದು, ಇದರಲ್ಲಿ ಕಡಿಮೆ ಲ್ಯಾಟೆನ್ಸಿ ಮೋಡ್ ಇದೆ, ಇದರಿಂದ ಲೇಟೆನ್ಸಿ 110 ಎಂಎಸ್‌ಗೆ ಕಡಿಮೆಯಾಗುತ್ತದೆ. ಇನ್ನು ಈ ಇಯರ್‌ಫೋನ್‌ 10ಮೀಟರ್‌ ಅಂತರದ ವಾಯರ್‌ಲೆಸ್‌ ರೇಂಜ್‌ ಅನ್ನು ಹೊಂದಿದ್ದು, ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸಲಿದೆ.

ಇನ್ನು

ಇನ್ನು ಈ ಇಯರ್‌ಫೋನ್‌ ಯುಎಸ್‌ಬಿ ಟೈಪ್-ಸಿ ಪೋರ್ಟ್ ಬಳಸಿ ಚಾರ್ಜ್ ಮಾಡಬಹುದಾಗಿದ್ದು, ಒಂದೇ ಪ್ಯಾಕ್‌ನಲ್ಲಿ ಮೂರು ಸಿಲಿಕಾನ್ ಇಯರ್‌ಬಡ್‌ಗಳು ಬರುತ್ತವೆ. ಇದಲ್ಲದೆ ಈ ಇಯರ್‌ಬಡ್ಸ್‌ ನಲ್ಲಿ ಮ್ಯೂಸಿಕ್‌ ಅನ್ನು ಸ್ಟಾಪ್‌ ಮಾಡುವ ಮತ್ತು ಸ್ಟಾರ್ಟ್‌ ಮಾಡುವ ಮ್ಯಾಗ್ನೆಟಿಕ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ಗಳನ್ನು ವೇಗವಾಗಿ ಜೋಡಿಸಲು ಮತ್ತು ತ್ವರಿತ ಡಿವೈಸ್‌ಗಾಗಿ ಎರಡು ಸಾಧನಗಳ ನಡುವೆ ಸುಲಭವಾಗಿ ಬದಲಾಯಿಸಲು ಸಹ ಮುಂದಾಗಿದೆ. ಇನ್ನು ಈ ವಾಯರ್‌ಲೆಸ್‌ ಬೆಲೆ. $49.95 (ಸುಮಾರು 3,800 ರೂ.) ಆಗಿದೆ. ಇನ್ನ ಈ ಇಯರ್‌ಬಡ್ಸ್‌ಗಳು ಒನ್‌ಪ್ಲಸ್ 8 ಪ್ರೊ ಮತ್ತು ಒನ್‌ಪ್ಲಸ್ 8 ಜೊತೆಗೆ ಯುಕೆ ಯಲ್ಲಿ ಏಪ್ರಿಲ್ 21 ರಂದು ಮತ್ತು ಯುಎಸ್‌ನಲ್ಲಿ ಏಪ್ರಿಲ್ 29 ರಂದು ಬಿಡುಗಡೆಯಾಗುತ್ತದೆ.

Best Mobiles in India

English summary
OnePlus Bullets Wireless Z have been priced at $49.95 (roughly Rs. 3,800), which is significantly lower than the OnePlus Bullets Wireless 2.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X