ಒನ್ಪ್ಲಸ್ ಬುಲೆಟ್ಸ್ ವೈರ್ಲೆಸ್ Z3: ಜೂನ್ 19 ರಂದು ಭಾರತದಲ್ಲಿ ಬಿಡುಗಡೆ!
ಒನ್ಪ್ಲಸ್ ತನ್ನ ಜನಪ್ರಿಯ ಬುಲೆಟ್ಸ್ ವೈರ್ಲೆಸ್ ಸರಣಿಯ ಆಡಿಯೊ ಸಾಧನಗಳನ್ನು ಮತ್ತೆ ಪ್ರಾರಂಭಿಸಲು ಸಜ್ಜಾಗಿದೆ. ಕಂಪನಿಯು ತನ್ನ ಹೊಸ ನೆಕ್ಬ್ಯಾಂಡ್ ಶೈಲಿಯ ಇಯರ್ಫೋನ್ಗಳಾದ ಒನ್ಪ್ಲಸ್ ಬುಲೆಟ್ಸ್ ವೈರ್ಲೆಸ್ Z3 ಅನ್ನು ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದ್ದು, ಈ ಹೊಸ ಇಯರ್ಫೋನ್ಗಳ ವಿನ್ಯಾಸ, ಬಣ್ಣ ಆಯ್ಕೆಗಳು ಮತ್ತು ಬ್ಯಾಟರಿ ವಿವರಗಳನ್ನು ಒನ್ಪ್ಲಸ್ ಈಗಾಗಲೇ ಬಹಿರಂಗಪಡಿಸಿದೆ. ಈ ಕುರಿತ ಸಂಪೂರ್ಣ ವಿವರಗಳು ಈ ಕೆಳಕಂಡಂತಿವೆ.
ಒನ್ಪ್ಲಸ್ ಬುಲೆಟ್ಸ್ ವೈರ್ಲೆಸ್ Z3:ಭಾರತದಲ್ಲಿ ಬಿಡುಗಡೆ
ಒನ್ಪ್ಲಸ್ ಬುಲೆಟ್ಸ್ ವೈರ್ಲೆಸ್ Z3 ಜೂನ್ 19 ರಂದು ಮಧ್ಯಾಹ್ನ 12 ಗಂಟೆಗೆ IST ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ನೆಕ್ಬ್ಯಾಂಡ್ ಶೈಲಿಯ ವೈರ್ಲೆಸ್ ಇಯರ್ಫೋನ್ಗಳು ಮ್ಯಾಂಬೊ ಮಿಡ್ನೈಟ್ ಮತ್ತು ಸಾಂಬಾ ಸನ್ಸೆಟ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುತ್ತವೆ. ಈ ಕುರಿತಂತೆ ಒನ್ಪ್ಲಸ್ನ ಅಧಿಕೃತ ಇ-ಸ್ಟೋರ್ ಜೊತೆಗೆ, ಅಮೆಜಾನ್ನಲ್ಲಿಯೂ ಲೈವ್ ಮೈಕ್ರೋಸೈಟ್ ಅನ್ನು ರಚಿಸಲಾಗಿದ್ದು, ಬಿಡುಗಡೆಯಾದ ನಂತರ ಇದನ್ನು ಅಮೆಜಾನ್ ಮತ್ತು ಒನ್ಪ್ಲಸ್ ಇ-ಸ್ಟೋರ್ ಮೂಲಕ ಖರೀದಿಸಬಹುದು.
ಒನ್ಪ್ಲಸ್ ಬುಲೆಟ್ಸ್ ವೈರ್ಲೆಸ್ Z3:ಬ್ಯಾಟರಿ ಮತ್ತು ವೈಶಿಷ್ಟ್ಯಗಳು
ಹೊಸದಾಗಿ ಬಿಡುಗಡೆಯಾಗುತ್ತಿರುವ ಒನ್ಪ್ಲಸ್ ಬುಲೆಟ್ಸ್ ವೈರ್ಲೆಸ್ Z3 ಕೇವಲ 10 ನಿಮಿಷಗಳ ಚಾರ್ಜ್ನೊಂದಿಗೆ 27 ಗಂಟೆಗಳ ಬಳಕೆಯ ಸಮಯವನ್ನು ನೀಡುತ್ತದೆ ಎಂದು ಒನ್ಪ್ಲಸ್ ಹೇಳಿಕೊಂಡಿದೆ. ಇದು ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಈ ಆಡಿಯೊ ಸಾಧನದ ಬಗ್ಗೆ ಹೆಚ್ಚಿನ ವಿವರಗಳನ್ನು ಜೂನ್ 19 ರ ಬಿಡುಗಡೆಯ ದಿನದಂದು ಬಹಿರಂಗಪಡಿಸಲಾಗುವುದು. ಆದರೆ, ಈ ಹೊಸ ಮಾದರಿಯು ಹಿಂದಿನ ಮಾದರಿಗಳಾದ ಬುಲೆಟ್ಸ್ ವೈರ್ಲೆಸ್ Z2 ಮತ್ತು ಬುಲೆಟ್ಸ್ ವೈರ್ಲೆಸ್ Z2 ANC ಯಂತೆಯೇ, Z3 ಕೂಡ ಅದೇ ವಿನ್ಯಾಸವನ್ನು ಹೊಂದಿರುವಂತೆ ಕಾಣುತ್ತದೆ.
ಹಿಂದಿನ ಮಾದರಿಗಳ ವೈಶಿಷ್ಟ್ಯಗಳನ್ನು ನೋಡುವುದಾದರೆ, ಒನ್ಪ್ಲಸ್ ಬುಲೆಟ್ಸ್ ವೈರ್ಲೆಸ್ Z2 ಇಯರ್ಫೋನ್ಗಳು 12.4mm ಡ್ರೈವರ್ನೊಂದಿಗೆ ಬಂದಿದ್ದವು. ಇವು 30 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುವ ಸಾಮರ್ಥ್ಯ ಹೊಂದಿದ್ದವು ಮತ್ತು ಧೂಳು ಹಾಗೂ ಸ್ಪ್ಲಾಶ್ ಪ್ರತಿರೋಧಕ್ಕಾಗಿ IP55 ರೇಟಿಂಗ್ ಅನ್ನು ಪಡೆದುಕೊಂಡಿದ್ದವು. ಬಿಡುಗಡೆಯ ಸಮಯದಲ್ಲಿ ಇದರ ಬೆಲೆ ರೂ. 1,999 ಆಗಿತ್ತು.

ಇನ್ನು, ಒನ್ಪ್ಲಸ್ ಬುಲೆಟ್ಸ್ ವೈರ್ಲೆಸ್ Z2 ANC ಮಾದರಿಯು ಸಕ್ರಿಯ ಶಬ್ದ ರದ್ದತಿ (ANC) ವೈಶಿಷ್ಟ್ಯದೊಂದಿಗೆ ರೂ. 2,299 ಕ್ಕೆ ಬಿಡುಗಡೆ ಮಾಡಲಾಗಿತ್ತು. ಇದು 45dB ವರೆಗಿನ ANC ಅನ್ನು ಬೆಂಬಲಿಸುತ್ತದೆ ಮತ್ತು AI-ಸಹಾಯದ ಮೂರು-ಮೈಕ್ ಕಾಲ್ ನಾಯ್ಸ್ ಕ್ಯಾನ್ಸಲೇಶನ್ ಸಿಸ್ಟಮ್ ಅನ್ನು ಹೊಂದಿದೆ. ANC ಆನ್ ಆಗಿರುವಾಗ, ಇದು 20 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ, ಮತ್ತು ANC ಇಲ್ಲದೆ, ಇದು 28 ಗಂಟೆಗಳ ನಿರಂತರ ಪ್ಲೇಬ್ಯಾಕ್ ನೀಡುತ್ತದೆ. ಇತರ ವೈಶಿಷ್ಟ್ಯಗಳು ಪ್ರಮಾಣಿತ ಬುಲೆಟ್ಸ್ ವೈರ್ಲೆಸ್ Z2 ಗೆ ಹೋಲುತ್ತವೆ.
ಒನ್ಪ್ಲಸ್ ಬುಲೆಟ್ಸ್ ವೈರ್ಲೆಸ್ Z3 ಈ ಎಲ್ಲಾ ಉತ್ತಮ ವೈಶಿಷ್ಟ್ಯಗಳನ್ನು ಇನ್ನಷ್ಟು ಉತ್ತಮಗೊಳಿಸಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಮಾದರಿ ಹಿಂದಿನ ಯಶಸ್ವಿ ಆವೃತ್ತಿಗಳ ಪರಂಪರೆಯನ್ನು ಮುಂದುವರೆಸುವ ನಿರೀಕ್ಷೆಯಿದೆ. ಬುಲೆಟ್ಸ್ ವೈರ್ಲೆಸ್ Z2 ಅನ್ನು ಮಾರ್ಚ್ 2022 ರಲ್ಲಿ ಬಿಡುಗಡೆ ಮಾಡಲಾಗಿತ್ತು, ಮತ್ತು ಬುಲೆಟ್ಸ್ ವೈರ್ಲೆಸ್ Z2 ANC ಆಗಸ್ಟ್ 2023 ರಲ್ಲಿ ಮಾರುಕಟ್ಟೆಗೆ ಬಂದಿತ್ತು.


Click it and Unblock the Notifications