OnePlus ಸ್ಮಾರ್ಟ್‌ಫೋನ್ ಖರೀದಿಸುವ ಯೋಜನೆ ಇದೆಯಾ ! ಜೂನ್ 6ರಿಂದ ನಿಮಗೆ ಸಿಗಲಿವೆ ಭರ್ಜರಿ ರಿಯಾಯಿತಿ!
ಸ್ಮಾರ್ಟ್‌ಫೋನ್ ಸಂಸ್ಥೆಗಳು ತಮ್ಮ ಮೊಬೈಲ್‌ಗಳ ಮಾರಾಟ ಹೆಚ್ಚಿಸಿಕೊಳ್ಳಲು ಆಗಾಗ ವಿವಿಧ ಬಗೆಯ ಆಫರ್‌ಗಳನ್ನು ನೀಡುತ್ತಾ ಬಂದಿರುವುದನ್ನು ಗಮನಿಸಿದ್ದೇವೆ ಅದರಂತೆ, ಇದೀಗ ಸ್ಮಾರ್ಟ್‌ಫೋನ್ (Smartphones) ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿರುವ ಹಾಗೂ ವಿಭಿನ್ನ ಫೀಚರ್ಸ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ OnePlus ಸಂಸ್ಥೆ ತನ್ನ ಮೊಬೈಲ್ ಹಾಗೂ ಸಾಧನಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಹಾಗಾದ್ರೆ ಒನ್‌ಪ್ಲಸ್ ಸಂಸ್ಥೆ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ಯಾವ ರೀತಿಯ ರಿಯಾಯಿತಿ ನೀಡುತ್ತಿದೆ ಎಂಬುದನ್ನು ತಿಳಿಯಲು ಈ ಲೇಖನ ಪೂರ್ಣ ಓದಿ
OnePlus ಸದ್ಯ ಜೂನ್ 6ರಿಂದ ಕಮ್ಯುನಿಟಿ ಮಾರಾಟವನ್ನು ಘೋಷಣೆ ಮಾಡಿದೆ. ಈ ಈವೆಂಟ್‌ನಲ್ಲಿ OnePlus 12, OnePlus Nord CE 4, OnePlus Open, OnePlus Buds Pro 2 ಸೇರಿದಂತೆ ಇನ್ನೂ ಅನೇಕ ಸ್ಮಾರ್ಟ್‌ಫೋನ್‌ಗಳು ಹಾಗೂ ಒನ್‌ಪ್ಲಸ್ ಡಿವೈಸ್‌ಗಳ ಮಾರಟ ಇರಲಿದ್ದು ಇವುಗಳ ಮೇಲೆ ರಿಯಾಯಿತಿ ನೀಡಲು ಸಂಸ್ಥೆ ಮುಂದಾಗಿದೆ. ಈ ರಿಯಾಯಿತಿ ಮಾರಾಟವು ಭಾರತದಾದ್ಯಂತ ಆನ್‌ಲೈನ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ. ಈ ಕುರಿತಾದ ವಿವರಣೆ ಇಲ್ಲಿವೆ.

ಕಂಪನಿಯು ತನ್ನ ಡಿವೈಸ್‌ಗಳ ಮೇಲಿನ ನಿಖರವಾದ ಬೆಲೆಗಳ ವಿವರವನ್ನು ಬಹಿರಂಗಪಡಿಸಿಲ್ಲ, ಬದಲಾಗಿ ಅವುಗಳ ಮೇಲೆ ಲಭ್ಯವಿರುವ ರಿಯಾಯಿತಿ ಕೊಡುಗೆಗಳನ್ನು ಮಾತ್ರ ಬಹಿರಂಗಪಡಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.
OnePlus Open: ಇದು ಒನ್‌ಪ್ಲಸ್‌ನ ಜನರೇಷನ್‌ನ ಮೊದಲ ಮಡಿಚಬಹುದಾದ ಸ್ಮಾರ್ಟ್‌ಫೋನ್ ಆಗಿದ್ದು ಈ ಸ್ಮಾರ್ಟ್‌ಫೋನ್ ನ ಮೇಲೆ ICICI ಬ್ಯಾಂಕ್, HDFC ಬ್ಯಾಂಕ್, OneCard, BOBCARD ಮತ್ತು IDFC ಫಸ್ಟ್ ಬ್ಯಾಂಕ್ ಕಾರ್ಡ್‌ಗಳ ಮೇಲೆ ಬರೋಬ್ಬರಿ 5,000 ರೂ. ಗಳ ರಿಯಾಯಿತಿ ಪಡೆಯಬಹುದಾಗಿದೆ. ಹೆಚ್ಚುವರಿಯಾಗಿ ನೀವು ಮಡಚಬಹುದಾದ ಸಾಧನವನ್ನು ಖರೀದಿಸಿದರೆ, ಖರೀದಿದಾರರು OnePlus ವಾಚ್ 2 ಅನ್ನು ಉಚಿತವಾಗಿ ಪಡೆಯುತ್ತಾರೆ. ಒನ್‌ಪ್ಲಸ್ ಓಪನ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ 1,39,999 ರೂ. ಬೆಲೆಯನ್ನು ಹೊಂದಿದೆ ಮತ್ತು ವಾಚ್ ಅನ್ನು ಇತ್ತೀಚೆಗೆ 24,999 ರೂ. ಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಸಾಂಪ್ರದಾಯಿಕ OnePlus 12 ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಬಯಸುವವರು 3,000 ರೂ.ಗಳ ತ್ವರಿತ ಬ್ಯಾಂಕ್ ರಿಯಾಯಿತಿ ಮತ್ತು Amazon.in, OnePlus.in, OnePlus ಸ್ಟೋರ್‌ಗಳು ಮತ್ತು ರಿಲಯನ್ಸ್‌ನಂತಹ ಪ್ರಮುಖ ಆಫ್‌ಲೈನ್ ಪಾಲುದಾರ ಅಂಗಡಿಗಳಲ್ಲಿ 2,000 ರೂ. ಗಳ ವಿಶೇಷ ರಿಯಾಯಿತಿ ಕೂಪನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಡಿಜಿಟಲ್, ಕ್ರೋಮಾ, ವಿಜಯ್ ಸೇಲ್ಸ್ ಸೇರಿದಂತೆ ಇತರೆ ಮಾರಾಟಗಾರ ಸಂಸ್ಥೆಗಳು ಕೂಡ ಈ ಆಫರ್ ನೀಡಲಿವೆ.
OnePlus 12R ಖರೀದಿಸಲು ಭಯವುವವರು 2,000 ರೂ. ಗಳ ತ್ವರಿತ ಬ್ಯಾಂಕ್ ರಿಯಾಯಿತಿ ಮತ್ತು ಆಯ್ದ ವೇರಿಯಂಟ್‌ಗಳ ಮೇಲೆ 2,000 ರೂ.ಗಳ ವಿಶೇಷ ರಿಯಾಯಿತಿ ಕೂಪನ್ ಅನ್ನು ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ. ICICI ಬ್ಯಾಂಕ್, HDFC ಬ್ಯಾಂಕ್, OneCard, BOBCARD ಮತ್ತು IDFC ಫಸ್ಟ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಗೆ ಬ್ಯಾಂಕ್ ರಿಯಾಯಿತಿ ಅನ್ವಯಿಸುತ್ತದೆ. ಬಳಕೆದಾರರು ಒನ್‌ಪ್ಲಸ್ 12 ಮತ್ತು ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್‌ಗಳ ಮೇಲೆ ಕ್ರಮವಾಗಿ 12,000 ಮತ್ತು 6,000 ರೂ.ಗಳವರೆಗಿನ ಹೆಚ್ಚುವರಿ ವಿನಿಮಯ ಬೋನಸ್ ಅನ್ನು ಸಹ ಪಡೆಯಬಹುದು. ಒನ್‌ಪ್ಲಸ್ 12Rನ ಬೆಲೆ 39,999 ರೂ. ಗಳಾಗಿದ್ದು, 2,000 ರೂ. ಗಳರೆಗೆ ಬ್ಯಾಂಕ್ ರಿಯಾಯಿತಿ ಕೊಡುಗೆಯನ್ನೂ ಸಹ ಡೆಯಬಹುದು.
OnePlus ಟ್ಯಾಬ್ಲೆಟ್‌ಗಳು ಸಹ ಈ ರಿಯಾಯಿತಿ ಮಾರಾಟದಲ್ಲಿ ಲಭ್ಯವಿರುತ್ತವೆ. ಒನ್‌ಪ್ಲಸ್ ಪ್ಯಾಡ್ ಖರೀದಿಯ ಮೇಲೆ 5,000 ರೂ. ಗಳ ಬ್ಯಾಂಕ್ ಕಾರ್ಡ್ ರಿಯಾಯಿತಿ ಮತ್ತು ಪ್ಯಾಡ್ ಗೋ ಮೇಲೆ 2,000 ರೂ. ರಿಯಾಯಿತಿ ಸಿಗಲಿದೆ. OnePlus.in ನಂತಹ ಆಯ್ದ ಆನ್‌ಲೈನ್ ಚಾನಲ್‌ಗಳಲ್ಲಿ ವಿದ್ಯಾರ್ಥಿಗಳು ಹೆಚ್ಚುವರಿ ಆಕರ್ಷಕ ಕೊಡುಗೆಗಳನ್ನು ಸಹ ಪಡೆಯಬಹುದು ಎಂದು ಕಂಪನಿ ಭರವಸೆ ನೀಡಿದೆ. ಅದರಂತೆ RCC ಸದಸ್ಯರು ಈ ಟ್ಯಾಬ್ಲೆಟ್‌ಗಳ ಖರೀದಿಯ ಮೇಲೆ ಪ್ರಯೋಜನಗಳನ್ನು ಪಡೆಯಬಹುದು.
OnePlus ವಾಚ್ 2 ಖರೀದಿದಾರರು 2,000 ರೂ. ಗಳ ಬ್ಯಾಂಕ್ ರಿಯಾಯಿತಿ ಪಡೆಯಬಹುದು. OnePlus ಕಮ್ಯುನಿಟಿ ಮಾರಾಟದ ಸಮಯದಲ್ಲಿ ಗ್ರಾಹಕರು ಒನ್‌ಪ್ಲಸ್ BWZ 2, ಒನ್‌ಪ್ಲಸ್ BWZ 2 ANC, ಒನ್‌ಪ್ಲಸ್ ಬಡ್ಸ್ 3, ಒನ್‌ಪ್ಲಸ್ ಬಡ್ಸ್ ಪ್ರೊ 2, ಒನ್‌ಪ್ಲಸ್ ಬಡ್ಸ್ Z2, ಹಾಗೆಯೇ ನಾರ್ಡ್ ಬಡ್ಸ್ 2r ಮತ್ತು ನಾರ್ಡ್ ಬಡ್ಸ್ 2 ನಂತಹ ಆಡಿಯೊ ಸಾಧನಗಳ ಮೇಲೆ ರಿಯಾಯಿತಿ ನೀಡಲಿದ್ದು ಅವುಗಳ ಕುರಿತು ಇನ್ನಷ್ಟೇ ಮಾಹಿತಿ ಬರಬೇಕಿದೆ


Click it and Unblock the Notifications








