ಬಳಕೆದಾರರಿಗೆ ಹೊಸ App ಪರಿಚಯಿಸಿದ Oneplus ಸಂಸ್ಥೆ!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ಅಲ್ಲದೆ ವೈವಿಧ್ಯಮಯ ಪ್ರಾಡಕ್ಟ್‌ಗಳ ಮೂಲಕ ಗಮನ ಸೆಳೆದಿದೆ. ಸದ್ಯ ಇದೀಗ ಒನ್‌ಲ್ಯಾಬ್ಸ್ ಟೀಮ್ ಮೂಲಕ ಕ್ಲಿಪ್ಟ್ ಎನ್ನುವ ಅಪ್ಲಿಕೇಶನ್ ಲಾಂಚ್ ಮಾಡಿದೆ. ಈ ಅಪ್ಲಿಕೇಶನ್ ಅನೇಕ ಡಿವೈಸ್‌ಗಳಲ್ಲಿ ಕ್ಲಿಪ್‌ಬೋರ್ಡ್ ತರಹದ ಕಾರ್ಯವನ್ನು ಸಕ್ರಿಯಗೊಳಿಸುತ್ತದೆ. ನಿಮ್ಮ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ನಡುವೆ ಪಠ್ಯ, ಚಿತ್ರಗಳು ಮತ್ತು ಫೈಲ್‌ಗಳನ್ನು ಶೇರ್ ಮಾಡಲು ಇದು ನಿಮಗೆ ಅವಕಾಶ ನೀಡಿದೆ.

ಹೌದು, ಒನ್‌ಪ್ಲಸ್‌ನಲ್ಲಿ ಒನ್‌ಲ್ಯಾಬ್ಸ್ ಟೀಮ್ ಕ್ಲಿಪ್ಟ್ ಎನ್ನುವ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಕ್ಲಿಪ್ಟ್ ಅಪ್ಲಿಕೇಶನ್ ಮೂಲಕ ಬಳಕೆದಾರರು ತಮ್ಮ ಫೋನ್‌ನಿಂದ ಪಠ್ಯವನ್ನು ಕಾಪಿ ಮಾಡಬಹುದು. ಅಲ್ಲದೆ ಕಾಪಿ ಮಾಡಿದ ಟೆಕ್ಸ್ಟ್ ಅನ್ನು ತಮ್ಮ ಕಂಪ್ಯೂಟರ್‌ಗೆ ಜೋಡಿಸಬಹುದು. ಅಲ್ಲದೆ ಇನ್ನು ಮುಂದೆ ತಮ್ಮ ಮೊಬೈಲ್‌ನಿಂದ ಪಠ್ಯವನ್ನು ತಮ್ಮ ಲ್ಯಾಪ್‌ಟಾಪ್‌ಗೆ ಕಳುಹಿಸಲು ಯಾವುದೇ ಪರಿಹಾರೋಪಾಯವನ್ನು ಹುಡುಕಬೇಕಾದ ಅವಶ್ಯತೆ ಕೂಡ ಇಲ್ಲ. ಹಾಗಾದ್ರೆ ಕ್ಲಿಪ್ಟ್ ಅಪ್ಲಿಕೇಶನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ ಪರಿಚಯಿಸಿರುವ ಹೊಸ ಕ್ಲಿಪ್ಟ್ ಅಪ್ಲಿಕೇಶನ್ ಕ್ಲಿಪ್‌ಬೋರ್ಡ್ ಮಾದರಿಯ ಕಾರ್ಯವನ್ನು ಸಕ್ರಿಯಗೊಳಿಸುತ್ತದೆ. ನಿಮ್ಮ ಫೋನ್‌ನಲ್ಲಿನ ಟೆಕ್ಸ್ಟ್ ಅನ್ನು ಕಾಪಿ ಮಾಡಿ ಲ್ಯಾಪ್‌ಟಾಪ್‌ನಲ್ಲಿ ಸುಲಭವಾಗಿ ಪೇಸ್ಟ್ ಮಾಡಬಹುದಾಗಿದೆ. ಜೊತೆಗೆ ಇಮೇಜ್ ಮತ್ತು ಫೈಲ್‌ಗಳನ್ನು ಶೇರ್ ಮಾಡಲು ಇದು ನಿಮಗೆ ಅವಕಾಶ ನೀಡಿದೆ. ಬಳಕೆದಾರರು ತಮ್ಮ ಡಿವೈಸ್‌ಗಳಲ್ಲಿ ಒಂದೇ ಗೂಗಲ್ ಖಾತೆಯೊಂದಿಗೆ ಲಾಗಿನ್ ಆಗುವವರೆಗೆ ಡಿವೈಸ್‌ಗಳಲ್ಲಿ ಪಠ್ಯ, ಚಿತ್ರಗಳು ಮತ್ತು ಫೈಲ್‌ಗಳನ್ನು ವರ್ಗಾಯಿಸಲು ಕ್ಲಿಪ್ಟ್ ನಿಮ್ಮ ಗೂಗಲ್ ಡ್ರೈವ್ ಅಕೌಂಟ್ ಅನ್ನು ಬಳಸಿಕೊಳ್ಳಲಿದೆ.

ಇನ್ನು ಕ್ಲಿಪ್ಟ್ ಅಪ್ಲಿಕೇಶನ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಿಗಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ವಿಂಡೋಸ್ ಮತ್ತು ಮ್ಯಾಕ್ ಬಳಕೆದಾರರಿಗೆ ಕ್ರೋಮ್ ಎಕ್ಸಟೆನ್ಶನ್ ಮಾದರಿಯಲ್ಲಿ ಲಭ್ಯವಿದೆ. ಐಒಎಸ್ ಬಳಕೆದಾರರಿಗಾಗಿ ಶೀಘ್ರದಲ್ಲೇ ಆಪ್ ಅನ್ನು ಪ್ರಾರಂಭಿಸುವುದಾಗಿ ಒನ್‌ಪ್ಲಸ್ ಹೇಳಿದೆ. ಸದ್ಯ ನಿಮ್ಮ ಕ್ಲಿಪ್‌ಬೋರ್ಡ್ ಅನ್ನು ಕನೆಕ್ಟ್ ಮಾಡಲು ಕ್ಲಿಪ್ಟ್ ಅಪ್ಲಿಕೇಶನ್ ಮತ್ತು ಕ್ರೋಮ್ ಎಕ್ಸಟೆನ್ಶನ್ ನಿಮ್ಮ ಡಿವೈಸ್‌ಗಳ ನಡುವೆ ಲಿಂಕ್ ಅನ್ನು ಕ್ರಿಯೆಟ್ ಮಾಡಲಿದೆ. ಒಮ್ಮೆ ಇನ್‌ಸ್ಟಾಲ್ ಮಾಡಿದ ನಂತರ ನೀವು ಒಂದು ಡಿವೈಸ್‌ನಲ್ಲಿ ನಕಲಿಸಬಹುದು. ಅಲ್ಲದೆ ನೀವು ಬಯಸಿದಷ್ಟು ಡಿವೈಸ್‌ಗಳ ನಡುವೆ ಫೈಲ್‌ಗಳನ್ನು ಸುಲಭವಾಗಿ ಕಳುಹಿಸಲು ಬಳಸಬಹುದು.

ಇದಲ್ಲದೆ ಈ ಹೊಸ ಅಪ್ಲಿಕೇಶನ್ ಟೆಕ್ಸ್ಟ್, ಇಮೇಜ್ ಮತ್ತು ಫೈಲ್ ಶೇರ್ ಅಪ್ಲಿಕೇಶನ್ ಬಳಸುವುದನ್ನು ಇದು ನಿವಾರಿಸುತ್ತದೆ. ಒಂದು ಡಿವೈಸ್‌ನಿಂದ ಇನ್ನೊಂದಕ್ಕೆ ಏನನ್ನಾದರೂ ಪಡೆಯಲು ಚಾಟ್ ಅಪ್ಲಿಕೇಶನ್‌ನಲ್ಲಿ ಸಂದೇಶ ಕಳುಹಿಸಬಹುದು. ನೀವು ಇಮೇಲ್ ಕ್ಲೈಂಟ್‌ಗಳಲ್ಲಿ 25MB ಮಿತಿಗೆ ಪರಿಹಾರವನ್ನು ಹುಡುಕಬೇಕಾಗಿಲ್ಲ, ಮತ್ತು ಡಿವೈಸ್‌ಗಳಲ್ಲಿ ದೊಡ್ಡ ಫೈಲ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಜೊತೆಗೆ ಡೇಟಾವನ್ನು ವರ್ಗಾಯಿಸಲು ಕ್ಲಿಪ್ಟ್ ನಿಮ್ಮ ಸ್ವಂತ ಗೂಗಲ್ ಡ್ರೈವ್ ಅನ್ನು ಬಳಸುತ್ತದೆ. ಇನ್ನು ಕ್ಲಿಪ್ಟ್ ಮೂಲಕ ಹಂಚಿಕೊಂಡ ಡೇಟಾ ಸುರಕ್ಷಿತವಾಗಿರಲಿದೆ ಎಂದು ಒನ್‌ಪ್ಲಸ್ ಸಂಸ್ಥೆ ಹೇಳಿಕೊಂಡಿದೆ. ಕ್ಲಿಪ್ಟ್ ಕ್ರಿಯೆಟ್ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿದಂತೆ ಮಾತ್ರ ಡೌನ್‌ಲೋಡ್ ಮಾಡಬಹುದು ಎಂದು ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದೆ.


Click it and Unblock the Notifications



