Home
ಸುದ್ದಿಜಾಲ

ಇಂದಿನಿಂದ OnePlus ದೀಪಾವಳಿ ಸೇಲ್ 2025 ಆರಂಭ: ಭರ್ಜರಿ ಕೊಡುಗೆಗಳು!

ಭಾರತೀಯರ ನೆಚ್ಚಿನ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಒಂದಾದ OnePlus ತನ್ನ ದೀಪಾವಳಿ ಸೇಲ್ ಅನ್ನು ಘೋಷಿಸಿದೆ. ದೇಶದಲ್ಲಿ ಇದೇ ಅಕ್ಟೋಬರ್ 17 ರಿಂದ ದೀಪಾವಳು ಹಬ್ಬದ ವಿಶೇಷ ಸೇಲ್ ಆರಂಭವಾಗಲಿದ್ದು, ಈ ಮಾರಾಟದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು, ನಾರ್ಡ್ ಸರಣಿ, ಆಡಿಯೋ ಉತ್ಪನ್ನಗಳು ಮತ್ತು ಟ್ಯಾಬ್ಲೆಟ್‌ಗಳ ಮೇಲೆ ಭಾರಿ ಬೆಲೆ ಕಡಿತ ಲಭ್ಯವಿರಲಿದೆ, ಹಾಗೂ ಗ್ರಾಹಕರು ಹಬ್ಬದ ಬೆಲೆ ಕಡಿತದ ಜೊತೆಗೆ ತತ್‌ಕ್ಷಣದ ಬ್ಯಾಂಕ್ ರಿಯಾಯಿತಿಗಳನ್ನು ಸಹ ಪಡೆಯಬಹುದು ಎಂದು OnePlus ಕಂಪೆನಿ ತಿಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

ಫ್ಲ್ಯಾಗ್‌ಶಿಪ್ ಫೋನ್‌ಗಳ ಮೇಲೆ ಭಾರೀ ರಿಯಾಯಿತಿ.
2025 ರOnePlus ದೀಪಾವಳಿ ಸೇಲ್‌ನಲ್ಲಿ OnePlus ಕಂಪೆನಿಯ ಫ್ಲಾಗ್‌ಶಿಪ್ ಫೋನ್ OnePlus 13 ಗಮನಾರ್ಹ ಹಬ್ಬದ ರಿಯಾಯಿತಿಯನ್ನು ಪಡೆಯುತ್ತಿದೆ. ದೇಶದಲ್ಲಿ ₹69,999 ರೂ. ಬೆಲೆಯಲ್ಲಿ ಪರಿಚಯಗೊಂಡಿದ್ದ ಈ ಫೋನ್ ₹4,000 ಇನ್‌ಸ್ಟೆಂಟ್ ಬ್ಯಾಂಕ್ ರಿಯಾಯಿತಿ ಮತ್ತು ₹250 EMI ಕೊಡುಗೆಯೊಂದಿಗೆ ಪರಿಣಾಮಕಾರಿಯಾಗಿ ₹57,749 ಕ್ಕೆ ಇಳಿಯಲಿದೆ. ಇದರ ಸಹೋದರ ಫೋನ್, OnePlus 13R ಫೋನ್ ರಿಯಾಯಿತಿಗಳ ನಂತರ ₹35,749 ಬೆಲೆಗೆ ಸಿಗಲಿದೆ. ಇತ್ತೀಚಿನ, OnePlus 13s ಫೋನ್ ಮೇಲೆ ಬ್ಯಾಂಕ್ ಆಫರ್ ಅನ್ವಯಿಸಿದರೆ, ಪರಿಣಾಮಕಾರಿ ₹47,749 ಬೆಲೆಗೆ ಲಭ್ಯವಾಗಲಿದೆ.

ಗಮನಿಸುವುದಾದರೆ, OnePlus 13 ಶಕ್ತಿಯುತ Snapdragon 8 Elite ಪ್ರೊಸೆಸರ್, 100W ವೇಗದ ಚಾರ್ಜಿಂಗ್ ಮತ್ತು 50MP ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. OnePlus 13R ಸಾಧನವು Snapdragon 8 Gen 3 ಚಿಪ್‌ಸೆಟ್, 80W ಸೂಪರ್‌ವೂಕ್ (SUPERVOOC) ಚಾರ್ಜಿಂಗ್ ಮತ್ತು ದೊಡ್ಡ 6,000 mAh ಬ್ಯಾಟರಿಯನ್ನು ಹೊಂದಿದೆ. ಇನ್ನು ಇತ್ತೀಚಿನ ಜನಪ್ರಿಯ ಫ್ಲಾಗ್‌ಶಿಪ್ ಕಾಂಪ್ಯಾಕ್ಟ್ ಫೋನ್ OnePlus 13s ಸಾಧನವು ಇದು 6.32 ಇಂಚಿನ 120Hz LTPO AMOLED ಡಿಸ್‌ಪ್ಲೇ, Snapdragon 8 Elite ಮತ್ತು 50MP ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ.

OnePlus Nord ಸರಣಿಗೂ ಅತ್ಯುತ್ತಮ ಆಫರ್
ಈ ಮಾರಾಟದ ಸಮಯದಲ್ಲಿ ಜನಪ್ರಿಯ ಫೋನ್ ಪರಿಣಾಮಕಾರಿ ಬೆಲೆ ₹28,999 ಕ್ಕೆ ಇಳಿಯುತ್ತದೆ ಮತ್ತು Nord CE5 ಫೋನ್ ₹21,999 ಕ್ಕೆ ಸಿಗುತ್ತದೆ ಎಂದು OnePlus ಕಂಪೆನಿ ತಿಳಿಸಿದೆ. ಇವುಗಳಲ್ಲಿ OnePlus Nord 5 ಫೋನ್ 6.6-ಇಂಚಿನ ಸೂಪರ್ AMOLED 120Hz ಡಿಸ್‌ಪ್ಲೇ, 50MP ಟ್ರಿಪಲ್ ಕ್ಯಾಮೆರಾ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ. ಇತ್ತ OnePlus Nord CE5 ಪೋನ್Dimensity 8350 Apex ಪ್ರೊಸೆಸರ್, 80W ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ 7,100mAh ಬ್ಯಾಟರಿ ಮತ್ತು OIS ನೊಂದಿಗೆ 50MP ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ.

OnePlus ಟ್ಯಾಬ್ಲೆಟ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ
ಈ ಮಾರಾಟದ ಸಮಯದಲ್ಲಿ OnePlus Pad 2 ಈಗ ಆಫರ್‌ಗಳ ನಂತರ ₹29,999 ರಿಂದ ಪ್ರಾರಂಭವಾಗಲಿದ್ದರೆ, OnePlus Pad Go ₹13,999 ರಿಂದ ಲಭ್ಯವಿದೆ. ಕಾಂಪ್ಯಾಕ್ಟ್ OnePlus Pad Lite ಹಬ್ಬದ ಬೆಲೆಯಲ್ಲಿ ₹11,999 ಕ್ಕೆ ಕಡಿತಗೊಳ್ಳುತ್ತದೆ ಮತ್ತು OnePlus Pad 3 ಬ್ಯಾಂಕ್ ರಿಯಾಯಿತಿಗಳ ನಂತರ ₹42,999 ಕ್ಕೆ ಇಳಿಯುತ್ತದೆ. ಇವುಗಳಲ್ಲಿ,
OnePlus Pad 2 ಸಾಧನವು Snapdragon 8 Gen 3 ಪ್ರೊಸೆಸರ್, 3K ರೆಸಲ್ಯೂಶನ್‌ನ 144Hz ರೀಡ್‌ಫಿಟ್ (ReadFit) ಡಿಸ್‌ಪ್ಲೇ ಮತ್ತು 67W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.
Pad Go ಸಾಧನವು 2.4K 11.35-ಇಂಚಿನ ಐ-ಕೇರ್ (Eye-care) ಡಿಸ್‌ಪ್ಲೇ ಮತ್ತು ಡಾಲ್ಬಿ ಅಟ್ಮೋಸ್ (Dolby Atmos) ಕ್ವಾಡ್ ಸ್ಪೀಕರ್‌ಗಳನ್ನು ಹೊಂದಿರುವ ಕೈಗೆಟುಕುವ ಟ್ಯಾಬ್ಲೆಟ್ ಆಗಿದೆ
OnePlus Pad Lite ಸಾಧನವು 9340 mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, 33W ವೇಗದ ಚಾರ್ಜಿಂಗ್ ಮತ್ತು 11-ಇಂಚಿನ 90Hz ಡಿಸ್‌ಪ್ಲೇಯನ್ನು ಹೊಂದಿದೆ.
OnePlus Pad 3 ಸಾಧನವು ಅಲ್ಟ್ರಾ-ಸ್ಲಿಮ್ ವಿನ್ಯಾಸ, Snapdragon 8 Elite, 3.4K ರೆಸಲ್ಯೂಶನ್‌ನ 144Hz ಡಿಸ್‌ಪ್ಲೇ ಮತ್ತು ಎಂಟು-ಸ್ಪೀಕರ್ ಸೌಂಡ್ ಸಿಸ್ಟಮ್ ಇದರಲ್ಲಿದೆ.

ಇಂದಿನಿಂದ OnePlus ದೀಪಾವಳಿ ಸೇಲ್ 2025 ಆರಂಭ: ಭರ್ಜರಿ ಕೊಡುಗೆಗಳು!

OnePlus ಬಡ್ಸ್ ಮತ್ತು ಬುಲೆಟ್ಸ್ ಹಬ್ಬದ ಬೆಲೆಗಳು
ಆಡಿಯೋ ಉತ್ಸಾಹಿಗಳು, ಈ ಮಾರಾಟದ ಸಮಯದಲ್ಲಿ OnePlus Buds 4 ಸಾಧನವನ್ನು ₹5,999 ಬೆಲೆಯ ಬದಲಾಗಿ ₹4,799 ಕ್ಕೆ ಖರೀದಿಸಬಹುದು. ಹಾಗೆಯೇ, OnePlus Buds Pro 3 ಮೇಲೂ ಭಾರಿ ಬೆಲೆ ಕಡಿತವಿದ್ದು, ₹7,999 ಕ್ಕೆ ಪಡೆಯಬಹುದು. ನೆಕ್‌ಬ್ಯಾಂಡ್ ಬಳಕೆದಾರರಿಗೆ, OnePlus Bullets Wireless Z3 ಬೆಲೆ ₹1,149 ಕ್ಕೆ ಲಭ್ಯವಿದ್ದರೆ, Z2 ANC ರೂಪಾಂತರ ಬೆಲೆ ₹1,499 ಕ್ಕೆ ಇಳಿಯುತ್ತದೆ ಎಂದು ಕಂಪೆನಿ ತಿಳಿಸಿದೆ. ಇವುಗಳಲ್ಲಿ,

OnePlus Buds 4 ಸಾಧನವು ಡ್ಯುಯಲ್ ಡ್ರೈವರ್‌ಗಳು ಮತ್ತು ಡ್ಯುಯಲ್ DAC ಗಳನ್ನು ಹೊಂದಿದ್ದು, 55dB ವರೆಗೆ ರಿಯಲ್-ಟೈಮ್ ಅಡಾಪ್ಟಿವ್ ನೋಯ್ಸ್ ಕ್ಯಾನ್ಸಲೇಶನ್ ನೀಡುತ್ತದೆ.
Buds Pro 3 ಸಾಧನದ ಪ್ರೀಮಿಯಂ ಇಯರ್‌ಬಡ್‌ಗಳು ಡ್ಯುಯಲ್ ಡ್ರೈವರ್‌ಗಳು, 50dB ವರೆಗೆ ಅಡಾಪ್ಟಿವ್ ನೋಯ್ಸ್ ಕ್ಯಾನ್ಸಲೇಶನ್ ಮತ್ತು ಸ್ಪೇಷಿಯಲ್ ಆಡಿಯೋ ವೈಶಿಷ್ಟ್ಯವನ್ನು ಒಳಗೊಂಡಿವೆ.
OnePlus Bullets Wireless Z3 ನೆಕ್‌ಬ್ಯಾಂಡ್ ಹೆಡ್‌ಫೋನ್‌ 12.4mm ಡೈನಾಮಿಕ್ ಬಾಸ್ ಡ್ರೈವರ್‌ಗಳು ಮತ್ತು 3D ಸ್ಪೇಷಿಯಲ್ ಆಡಿಯೋದೊಂದಿಗೆ 36 ಗಂಟೆಗಳವರೆಗೆ ಪ್ಲೇಬ್ಯಾಕ್ ನೀಡುತ್ತವೆ.
Bullets Wireless Z2 ANC ಸಾಧನವು 45dB ಹೈಬ್ರಿಡ್ ಆಕ್ಟಿವ್ ನೋಯ್ಸ್ ಕ್ಯಾನ್ಸಲೇಶನ್ ಮತ್ತು ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 20 ಗಂಟೆಗಳ ಪ್ಲೇಬ್ಯಾಕ್‌ ನೀಡುವ ಸಾಮರ್ಥ್ಯ ಹೊಂದಿದೆ. |

ಅಕ್ಟೋಬರ್ 17 ರಿಂದ ಪ್ರಾರಂಭವಾಗುವ ಈ ಸೇಲ್‌ನ ಕೊಡುಗೆಗಳು Amazon, Flipkart, OnePlus.in ಮತ್ತು ಆಫ್‌ಲೈನ್ ಪಾಲುದಾರ ಮಳಿಗೆಗಳಲ್ಲಿ ಲಭ್ಯವಿರುತ್ತವೆ. ಆಕ್ರಮಣಕಾರಿ ಬೆಲೆ ಮತ್ತು ಬ್ಯಾಂಕ್ ಕೊಡುಗೆಗಳಿಂದಾಗಿ, ಹೊಸ OnePlus ಸಾಧನಗಳಿಗೆ ಅಪ್‌ಗ್ರೇಡ್ ಮಾಡಲು ಇದು ಉತ್ತಮ ಅವಕಾಶ ಎಂಬುದು ನಮ್ಮ ಅಭಿಪ್ರಾಯ. ಹಾಗಾದರೆ, ಈ ಮೇಲಿನ ಕೊಡುಗೆಗಳಲ್ಲಿ ನಿಮ್ಮನ್ನು ಆಕರ್ಷಿಸಿದ ಕೊಡುಗೆ ಯಾವುದು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
OnePlus Diwali Sale 2025 begins tomorrow with huge discounts on 13 Series, Nord 5 Series, tablets, and more. check here all the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+