Home
ಸುದ್ದಿಜಾಲ

ಒಮ್ಮೆ ಬೆಂಗಳೂರಿನ ಒನ್‌ಪ್ಲಸ್ ಸ್ಟೋರ್‌ಗೆ ಹೋದರೆ ನಿಜವಾಗಿಯೂ ಶಾಕ್ ಆಗ್ತೀರಾ!..ಏಕೆ ಗೊತ್ತಾ?

ಭಾರತೀಯ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಕಿಂಗ್ ಎನ್ನಿಸಿಕೊಂಡಿರುವ ಒನ್‌ಪ್ಲಸ್, ತನ್ನ ಬಳಕೆದಾರರಿಗೆ ಹೊಸದೊಂದು ಮಾದರಿಯ ಪ್ರೀಮಿಯಮ್ ಸರ್ವೀಸ್ ಅನುಭವನ್ನು ನೀಡಲು ಮುಂದಾಗಿದೆ. ಈಗಾಗಲೇ ದೇಶದಲ್ಲಿ ಹಲವು ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್‌ಗಳನ್ನು ಆರಂಭಿಸಿರುವ ಮಾದರಿಯಲ್ಲಿಯೇ 'ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್' ಎನ್ನುವ ಸರ್ವೀಸ್ ಸೆಂಟರ್‌ಗಳನ್ನು ತೆರೆಯಲು ಮುಂದಾಗಿದೆ. ಇದರಲ್ಲಿ ಬಳಕೆದಾರರಿಗೆ ಪ್ರೀಮಿಯಮ್ ಟ್ರಿಮೆಂಟ್ ದೊರೆಯಲಿದೆ.

ಒಮ್ಮೆ ಬೆಂಗಳೂರಿನ ಒನ್‌ಪ್ಲಸ್ ಸ್ಟೋರ್‌ಗೆ ಹೋದರೆ ನಿಜವಾಗಿಯೂ ಶಾಕ್ ಆಗ್ತೀರಾ!.ಏಕೆ?

'ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್' ಪ್ರೀಮಿಯಮ್ ಮಾದರಿಯ ಸರ್ವಿಸ್ ಸೆಂಟರ್ ಗಳಾಗಲಿದ್ದು, ಇದರಲ್ಲಿ ಒನ್‌ಪ್ಲಸ್ ಬಳಕೆದಾರರು ತಮ್ಮ ಫೋನ್‌ಗಳನ್ನು ರಿಪೇರಿ ಮಾಡಿಸಿಕೊಳ್ಳಲು ಬಂದ ಸಂದರ್ಭದಲ್ಲಿ ಉತ್ತಮ ದರ್ಜೆಯ ಪ್ರೀಮಿಯಮ್ ಕಾಫಿಯನ್ನು ಒನ್‌ಪ್ಲಸ್ ಸರ್ವ್ ಮಾಡಲಿದೆ. ಇದರೊಂದಿಗೆ ಬಳಕೆದಾರರಿಗೆ ತಕ್ಷಣವೇ ಸ್ಮಾರ್ಟ್‌ಫೋನ್‌ಗಳನ್ನು ರಿಪೇರಿ ಮಾಡಿಕೊಡಲಿದೆ.

ಮಾರುಕಟ್ಟೆ ತಂತ್ರ:

ಸದ್ಯ ಮಾರುಕಟ್ಟೆಯಲ್ಲಿ ತಮ್ಮ ಬ್ರಾಂಡ್ ಗಳನ್ನು ಪ್ರೋಮೋಟ್ ಮಾಡಿಕೊಳ್ಳಲು ಹಲವು ಮಾದರಿಯನ್ನು ಅನುಸರಿಸಲು ಕಂಪನಿಗಳು ಮುಂದಾಗುತ್ತವೆ, ಇದೇ ಮಾದರಿಯಲ್ಲಿ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರವೇ ಮಾರಾಟ ಮಾಡುತ್ತಿರುವ ಒನ್‌ಪ್ಲಸ್, ಸಹ ಇದೇ ಮಾದರಿಯಲ್ಲಿ ಪ್ರೀಮಿಯಮ್ ಬಳಕೆದಾರರಿಗೆ ಪ್ರೀಮಿಯಮ್ ಟ್ರಟ್‌ಮೆಂಟ್ ನೀಡಲು ಈ ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್ ಅನ್ನು ಆರಂಭಿಸುತ್ತಿದೆ.

ಪ್ರೀಮಿಯಮ್ ಸರ್ವೀಸ್;

ಪ್ರೀಮಿಯಮ್ ಸರ್ವೀಸ್;

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಸರ್ವೀಸ್ ಮಾಡಿಸಿಕೊಡುವ ವಿಚಾರವೂ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಕಂಪನಿಯೂ ತನ್ನ ಬಳಕೆದಾರರ ವಿಶ್ವಾಸವನ್ನು ಗಳಿಸಿಕೊಳ್ಳುವ ಸಲುವಾಗಿ ಪ್ರೀಮಿಯಮ್ ಸರ್ವೀಸ್ ಸೇವೆಯನ್ನು ಆರಂಭಿಸುತ್ತಿದೆ. ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್ ಇದೇ ಮಾದರಿಯಲ್ಲಿ ಕಾರ್ಯಚರಣೆಯನ್ನು ಆರಂಭಿಸುತ್ತಿದೆ.

ಪ್ರೀಮಿಯಮ್ ಫೋನ್:

ಪ್ರೀಮಿಯಮ್ ಫೋನ್:

ಈಗಾಗಲೇ ಮಾರುಕಟ್ಟೆಗೆ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಒನ್‌ಪ್ಲಸ್, ಗ್ರಾಹಕರ ಮನಸ್ಸಿನಲ್ಲಿ ಇದೇ ಚಹರೆಯನ್ನು ಉಳಿಸಿಕೊಳ್ಳಲು ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮಾದರಿಯಲ್ಲಿಯೇ ಪ್ರೀಮಿಯಮ್ ಸರ್ವೀಸ್‌ಗಳನ್ನು ನೀಡಲು ಮುಂದಾಗಿದೆ.

ಉತ್ತಮ ಸರ್ವೀಸ್:

ಉತ್ತಮ ಸರ್ವೀಸ್:

ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್ ಸರ್ವೀಸ್ ಸೆಂಟರ್‌ಗಳಲ್ಲಿ ನುರಿತ ಸಿಬ್ಬಂದಿ ಒನ್‌ಪ್ಲಸ್ ಬಳಕೆದಾರರಿಗೆ ಗುಣಮಟ್ಟದ ಸರ್ವೀಸ್‌ ಅನ್ನು ನೀಡಲಿದೆ ಎನ್ನಲಾಗಿದೆ. ಅಲ್ಲದೇ ಇಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಸಹಾಯವನ್ನು ಮಾಡಲಿದ್ದಾರೆ.

ಒಂದೇ ಗಂಟೆ:

ಒಂದೇ ಗಂಟೆ:

ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್ ಸರ್ವೀಸ್ ಸೆಂಟರ್‌ಗಳಲ್ಲಿ ಕೇಲವ ಒಂದೇ ಗಂಟೆಯಲ್ಲಿ ಸ್ಮಾರ್ಟ್‌ಫೋನ್ ಸೇವೆಯನ್ನು ಮಾಡಿಕೊಡಲಿದೆ, ಇದೇ ಮಾದರಿಯಲ್ಲಿ ಎರಡು ಗಂಟೆಗಳಲ್ಲಿ ಮಾಕ್ಸಿಮಮ್ ಸೇವೆಯನ್ನು ನೀಡಲಿದೆ. ಇದಲ್ಲದೇ ಪಿಕ್‌ಆಪ್ ಮತ್ತು ಡ್ರಾಪ್ ಸೇವೆಯನ್ನು ನೀಡಲಿದೆ. ಇದಲ್ಲದೇ ಡೋರ್ ಸ್ಟೇಪ್ ಸೇವೆಯೂ ದೊರೆಯಲಿದೆ.

ಏನ್ ಇರುತ್ತೇ..?

ಏನ್ ಇರುತ್ತೇ..?

ಇದಲ್ಲದೇ ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್ ನಲ್ಲಿ ನಿಮಗೆ ಬುಕ್ ಓದುವ ಅವಕಾಶವೂ ದೊರೆಯಲಿದೆ. ಇದಲ್ಲದೇ ಮ್ಯೂಸಿಕ್ ಅನ್ನು ಕೇಳಬಹುದಾಗಿದೆ. ಅಲ್ಲದೇ PS4 ಮೂಲಕ ಗೇಮ್ ಆಡುವ ಅವಕಾಶವು ದೊರೆಯಲಿದೆ ಎನ್ನಲಾಗಿದೆ. ಇದು ನಿಮಗೆ ಪ್ರೀಮಿಯಮ್ ಸೇವೆಯ ಫೀಲ್ ದೊರೆಯಲಿದೆ.

ಒನ್‌ಪ್ಲಸ್ ಕಾಫಿ:

ಒನ್‌ಪ್ಲಸ್ ಕಾಫಿ:

ಇದಲ್ಲದೇ ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್ ಸರ್ವೀಸ್ ಸೆಂಟರ್‌ನಲ್ಲಿ ಒನ್‌ಪ್ಲಸ್ ತನ್ನದೇ ಆದ ಪ್ರೀಮಿಯಮ್ ಕಾಫಿಯನ್ನು ನೀಡಲಿದ್ದು, ಇದು ಸಹ ಪ್ರೀಮಿಯಮ್ ಆಗಿರಲಿದೆ. ಒಟ್ಟು 16 ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್ ಸರ್ವೀಸ್ ಸೆಂಟರ್‌ಗಳು ಆರಂಭವಾಗಲಿದೆ.

ಬೆಂಗಳೂರು:

ಬೆಂಗಳೂರು:

ಇದಲ್ಲದೇ ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್ ಬೆಂಗಳೂರು, ಹೈದ್ರಾಬದ್, ಚೆನ್ನೈ, ಮುಂಬೈ. ಪುಣೆ ಮತ್ತು ದೆಹಲಿಯಲ್ಲಿ ದಿ ಒನ್‌ಪ್ಲಸ್ ಕಾಫಿ ಎಕ್ಸಪೀರಿಯನ್ಸ್' ಸ್ಟೋರ್‌ಗಳು ಆರಂಭವಾಗಲಿದೆ. ಶೀಘ್ರವೇ ದೇಶದ ಎಲ್ಲಾ ಕಡೆಗಳಲ್ಲಿ ಸೇವೆಯೂ ಶುರುವಾಗಲಿದೆ.

Best Mobiles in India

English summary
OnePlus Exclusive Service Centres: Premium smartphone users deserve premium service support. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+