ಒನ್‌ಪ್ಲಸ್‌ ಕಂಪೆನಿಯ ಹೊಸ ಬ್ಯಾಕ್‌ಪ್ಯಾಕ್ ಮಾರಾಟ ಆರಂಭ!..ಬೆಲೆ ಎಷ್ಟು?

|

ಭಾರತದಲ್ಲಿ ಅತಿ ಹೆಚ್ಚು ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳ ಮಾರಾಟ ಮಾಡುತ್ತಿರುವ ಒನ್‌ಪ್ಲಸ್ ನೂತನ ಬ್ಯಾಕ್‌ಪ್ಯಾಕ್ ಒಂದನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಒನ್‌ಪ್ಲಸ್ 5 ಪೋನ್ ಕಾಲಿಟ್ಟಿದ್ದ ಸಮಯದಲ್ಲಿ ತನ್ನ ಮೊದಲ ಬ್ಯಾಕ್‌ಪ್ಯಾಕ್ ಅನ್ನು ಬಿಡುಗಡೆ ಮಾಡಿದ್ದ ಒನ್‌ಪ್ಲಸ್ ಕಂಪೆನಿ, ಇದೀಗ ಮತ್ತೊಂದು ನೂತನ ಸ್ಲೈಲಿಶ್ 'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬ್ಯಾಕ್‌ಪ್ಯಾಕ್‌ ಅನ್ನು ಬಿಡುಗಡೆ ಮಾಡಿ ಗಮನಸೆಳೆದಿದೆ. ಒನ್‌ಪ್ಲಸ್‌ನ ಹೊಸ ಸ್ಟೈಲಿಶ್ ಬ್ಯಾಕ್‌ಪ್ಯಾಕ್‌ ಇಂದಿನಿಂದ ಮಾರಾಟಕ್ಕೆ ಬಂದಿದೆ.

ಇಂದಷ್ಟೇ ಎಂಟ್ರಿ ನೀಡಿರುವ ಒನ್‌ಪ್ಲಸ್‌ನ ನೂತನ 'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬ್ಯಾಕ್‌ಪ್ಯಾಕ್ ಎರಡು ಬಣ್ಣಗಳಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಸ್ಲೇಟ್ ಬ್ಲಾಕ್ ಮತ್ತು ಮೊರಾಂಡಿ ಗ್ರೀನ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಅಮೆಜಾನ್‌ ಡಾಟ್ ಇನ್‌, ಒನ್‌ಪ್ಲಸ್ ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್ ಹಾಗೂ ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಈ ಮೂಲಕ ಮತ್ತೊಮ್ಮೆ ತನ್ನ ಒನ್‌ಪ್ಲಸ್ ಪ್ರಿಯರನ್ನು ಸೆಳೆಯಲು ಒನ್‌ಪ್ಲಸ್ ಕಂಪೆನಿ ತಯಾರಾಗಿದೆ.

ಒನ್‌ಪ್ಲಸ್‌ ಕಂಪೆನಿಯ ಹೊಸ ಬ್ಯಾಕ್‌ಪ್ಯಾಕ್ ಮಾರಾಟ ಆರಂಭ!..ಬೆಲೆ ಎಷ್ಟು?

ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಹೆಸರುವಾಸಿಯಾಗಿರುವ ಒನ್‌ಪ್ಲಸ್ ಕಂಪೆನಿ ತನ್ನೆಲ್ಲಾ ಪ್ರಾಡೆಕ್ಟ್‌ಗಳ ಮೇಲೂ ಅದೇ ಗುಣಮಟ್ಟವನ್ನು ತಂದಿರುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಒನ್‌ಪ್ಲಸ್ ಕಂಪೆನಿ ಬಿಡುಗಡೆ ಮಾಡಿರುವ ಒನ್‌ಪ್ಲಸ್ ನೂತನ ಬ್ಯಾಕ್‌ಪ್ಯಾಪ್ ಹೇಗಿದೆ? ಈ ಬ್ಯಾಕ್‌ಪ್ಯಾಕ್ ಖರೀದಿಸಲು ಇರುವ ಕಾರಣಗಳು ಯಾವುವು? ಈ ಬ್ಯಾಕ್‌ಪ್ಯಾಕ್ ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಅದ್ಬುತವಾಗಿದೆ ಬ್ಯಾಕ್‌ಪ್ಯಾಕ್!

ಅದ್ಬುತವಾಗಿದೆ ಬ್ಯಾಕ್‌ಪ್ಯಾಕ್!

ಮಾರುಕಟ್ಟೆಯಲ್ಲೇ ಲಭ್ಯವಿರುವ ಅತ್ಯುತ್ತಮ ಬ್ಯಾಕ್‌ಪ್ಯಾಕ್‌ಗಳ ಸಾಲಿನಲ್ಲಿ ಒನ್‌ಪ್ಲಸ್ ಕಂಪೆನಿಯ ನೂತನ 'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬ್ಯಾಕ್‌ಪ್ಯಾಕ್ ಕೂಡ ನಿಲ್ಲಲಿದೆ. ಅಸಾಧಾರಣ ಗುಣಮಟ್ಟದಲ್ಲಿ ಅತ್ಯುನ್ನತ ಸುರಕ್ಷತೆಯನ್ನು ಹೊಂದಿರುವ ಅತ್ಯುತ್ತಮ ಸ್ಟೈಲಿಶ್ ಬ್ಯಾಕ್‌ಪ್ಯಾಕ್ ಇದಾಗಿದೆ. ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ತೋರಿರುವ ಗುಣಮಟ್ಟದ ಮುತುವರ್ಜಿಯನ್ನೇ ಈ ನೂತನ 'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬ್ಯಾಕ್‌ಪ್ಯಾಕ್‌ ತಯಾರಿಕೆಯಲ್ಲಿಯೂ ಕಾಣಬಹುದಾಗಿದೆ.

ಬ್ಯಾಕ್‌ಪ್ಯಾಕ್ ಸಾಮರ್ಥ್ಯ ಚೆನ್ನಾಗಿದೆ!

ಬ್ಯಾಕ್‌ಪ್ಯಾಕ್ ಸಾಮರ್ಥ್ಯ ಚೆನ್ನಾಗಿದೆ!

'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬ್ಯಾಕ್‌ಪ್ಯಾಕ್‌ನಲ್ಲಿನ ಪ್ರಮುಖ ವಿಶೇಷತೆ ಎಂದರೆ ಈ ಬ್ಯಾಕ್‌ಅಪ್‌ನ ಸಾಮರ್ಥ್ಯ ಎಂದು ಹೇಳಬಹುದು. ಲ್ಯಾಪ್‌ಟಾಪ್ ಇಡುವಷ್ಟು ಕಂಪಾರ್ಟ್ಮೆಂಟ್ ಸ್ಪೇಸ್ ಹೊಂದಿರುವ ಬ್ಯಾಗ್‌ನಲ್ಲಿ ರಹಸ್ಯ ಪಾಕೆಟ್ ಇರುವದನ್ನು ನೀವು ಗಮನಿಸಬಹುದು. ಮಳೆಗಾಲದಲ್ಲೂ ಈ ಬ್ಯಾಕ್‌ಅಪ್ ಬಳಕೆ ಮಾಡುವಂತೆ ಗಾಳಿ ತುಂಬಿದ ದ್ವಾರಗಳ ಒಂದು ವಿಭಾಗವಿದೆ. ಇದರಲ್ಲಿ ನೀರಿನ ಬಾಟಲ್ ಪಾಕೆಟ್ ಇರುವುದು ವಿಶೇಷವಲ್ಲವಾದರೂ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿರುವುದನ್ನು ನೋಡಬಹುದು.

ಬಾಳಿಕೆ ಬರುತ್ತದೆಯೇ?

ಬಾಳಿಕೆ ಬರುತ್ತದೆಯೇ?

ಇಲ್ಲ ಎಂದು ಹೇಳಲು ಸಹ ಸಾಧ್ಯವಿಲ್ಲದಷ್ಟು ಗುಣಮಟ್ಟದ ಭರವಸೆಯೊಂದಿಗೆ 'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬ್ಯಾಕ್‌ಪ್ಯಾಕ್‌ ಮಾರುಕಟ್ಟೆಗೆ ಬಂದಿದೆ. ಚೈನೀಸ್ ಬ್ರಾಂಡ್‌ನ ಈ ಹೊಸ ಬ್ಯಾಕ್‌ಪ್ಯಾಕ್ ತಯಾರಿಕೆಯಲ್ಲಿ CORDURA ಎಂಬ ಕ್ಲಾಸಿಕ್ ಫ್ಯಾಬ್ರಿಕ್ ಎನ್ನು ಬಳಸಲಾಗಿದೆ. ಈ ಉತ್ಪನ್ನದಿಮದ ತಯಾರಾದ ವಸ್ತುವು ವರ್ಷಗಳಷ್ಟು ಬಾಳಿಕೆ ಬರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾಗಿ, ಬಾಳಿಕೆ ಬರುವ ಭರವಸೆ ಬ್ಯಾಕ್‌ಪ್ಯಾಕ್ ಆಯ್ಕೆಯಾಗಿ 'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಕಾಣಿಸುತ್ತಿದೆ.

ಸುರಕ್ಷತೆಗೆ ಹೇಳಿಮಾಡಿಸಿದಂತಿದೆ!

ಸುರಕ್ಷತೆಗೆ ಹೇಳಿಮಾಡಿಸಿದಂತಿದೆ!

ಸಾಕಷ್ಟು ಸುರಕ್ಷತೆಯನ್ನು ಖಾತರಿಪಡಿಸುವ ಬ್ಯಾಕ್‌ಪ್ಯಾಕ್ ಆಗಿರುವ 'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬಳಕೆದಾರರ ವಸ್ತುಗಳಿಗೆ ಸುರಕ್ಷತೆಯನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ ಎನ್ನಬಹುದು. ಸುರಕ್ಷತೆ ದೃಷ್ಟಿಯಿಂದ ಕೇವಲ ಒಂದೇ ಜಿಪ್ಪರ್ ಅನ್ನು ನೀಡಿರುವ ಒನ್‌ಪ್ಲಸ್ ಕಂಪೆನಿ, ಫಿಡ್‌ಲಾಕ್ ಫೀಚರ್ ಹೊಂದಿರುವುದರಿಂದ ಅಗ್ರ ಫ್ಲಾಪ್ ಅನ್ನು ಸುರಕ್ಷಿತವಾಗಿ ತೆರೆಯಲು ಸುಲಭವಾಗಿದೆ. ಜೊತೆಗ ಸಾಕಷ್ಟು ಗಟ್ಟಮುಟ್ಟಾದ ಜಿಪ್ಪರ್ ವ್ಯವಸ್ಥೆಯನ್ನು ನೋಡಬಹುದಾಗಿದೆ.

'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬೆಲೆ ಎಷ್ಟು?

'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬೆಲೆ ಎಷ್ಟು?

ಮೊದಲೇ ಹೇಳಿದಂತೆ ಮಾರುಕಟ್ಟೆಯಲ್ಲೇ ಲಭ್ಯವಿರುವ ಅತ್ಯುತ್ತಮ ಬ್ಯಾಕ್‌ಪ್ಯಾಕ್‌ಗಳ ಸಾಲಿನಲ್ಲಿ ಒನ್‌ಪ್ಲಸ್ ಕಂಪೆನಿಯ ನೂತನ 'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬ್ಯಾಕ್‌ಪ್ಯಾಕ್ ಕೂಡ ನಿಲ್ಲಲಿದೆ. ಹಾಗೆಯೇ ಬೆಲೆ ಕೂಡ ಆ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಕೂಡ ನಿಗದಿಯಾಗಿದೆ ಎಂದು ಹೇಳಬಹುದು. ಏಕೆಂದರೆ, ಇಂದು ಮಾರುಕಟ್ಟೆಗೆ ಎಂಟ್ರಿ ನೀಡಿರುವ 'ಒನ್‌ಪ್ಲಸ್ ಎಕ್ಸ್‌ಪ್ಲೋರರ್' ಬ್ಯಾಕ್‌ಪ್ಯಾಕ್ ಬೆಲೆಯನ್ನು ಒನ್‌ಪ್ಲಸ್ ಕಂಪೆನಿ 4999 ರೂಪಾಯಿಗಳಿಗೆ ನಿಗದಿಪಡಿಸಿದೆ.

Best Mobiles in India

English summary
OnePlus finally made the Exploree Backpack up for sale in India with a price tag of Rs 4,990. All you need to know about the backpack. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X