Home
ಸುದ್ದಿಜಾಲ

ಭಾರತದಲ್ಲಿ ಒನ್‌ಪ್ಲಸ್‌ ಟಿವಿ 40 Y1 ಬಿಡುಗಡೆ! ಬೆಲೆ ಎಷ್ಟು? ವಿಶೇಷತೆ ಏನು?

ಟೆಕ್‌ ವಲಯದಲ್ಲಿ ಒನ್‌ಪ್ಲಸಸ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲೂ ಗುರುತಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಒನ್‌ಪ್ಲಸ್ ಟಿವಿ 40 Y1 ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್ ಟಿವಿ ಇತರರಲ್ಲಿ 40-ಇಂಚಿನ ಬೆಜೆಲ್‌ ಲೆಸ್‌ ಡಿಸ್‌ಪ್ಲೇ ವಿನ್ಯಾಸ ಹೊಂದಿರುವ ಇದರ ಮುಖ್ಯ ಹೈಲೈಟ್ ಆಗಿದೆ. ಇದು ಡಾಲ್ಬಿ ಅಟ್ಮೋಸ್‌ ಬೆಂಬಲದೊಂದಿಗೆ 20W ಸ್ಟೀರಿಯೋ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಸಂಸ್ಥೆ ಹೊಸ ಒನ್‌ಪ್ಲಸ್‌ ಟಿವಿ 40Yಯನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿ ಹೊಸ ವಿನ್ಯಾಸವನ್ನು ಹೊಂದಿದೆ. ಇದು ಬೆಜೆಲ್‌ ಲೆಸ್‌ ಎಲ್‌ಇಡಿ-ಬ್ಯಾಕ್ಲಿಟ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಎದ್ದು ಕಾಣುವ ಬಣ್ಣಗಳಿಗೆ ಡಿಸಿಐ-ಪಿ 3 93 ರಷ್ಟು ವಿಶಾಲ ಬಣ್ಣದ ಹರವು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ 23,999 ರೂ. ಬೆಲೆಯನ್ನು ಹೊಂದಿದೆ. ಲಾಂಚ್‌ ಆಫರ್‌ನಲ್ಲಿ 21,999 ರೂಗಳಲ್ಲಿ ಲಭ್ಯವಿರುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್

ಒನ್‌ಪ್ಲಸ್ ಟಿವಿ 40 Y1 ಸ್ಮಾರ್ಟ್ ಟಿವಿಯು 40 ಇಂಚಿನ ಅಂಚಿನ-ಕಡಿಮೆ ಎಲ್ಇಡಿ-ಬ್ಯಾಕ್ಲಿಟ್ ಎಲ್ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಸ್ಕ್ರೀನ್-ಟು-ಬಾಡಿ ಅನುಪಾತವು 93% ರಷ್ಟಿದೆ. ಅಲ್ಲದೆ ಎದ್ದುಕಾಣುವ ಬಣ್ಣಗಳಿಗೆ ಡಿಸಿಐ-ಪಿ 3 93 ರಷ್ಟು ವಿಶಾಲ ಬಣ್ಣದ ಹರವು ಹೊಂದಿದೆ. ಇನ್ನು ಸುಧಾರಿತ ದೃಶ್ಯ ಗುಣಮಟ್ಟಕ್ಕಾಗಿ ಇದು ಸುಧಾರಿತ ಗಾಮಾ ಎಂಜಿನ್‌ನೊಂದಿಗೆ ಬರುತ್ತದೆ. ಉತ್ತಮ ಚಿತ್ರ ಗುಣಮಟ್ಟಕ್ಕಾಗಿ ಡೈನಾಮಿಕ್ ಕಾಂಟ್ರಾಸ್ಟ್, ಶಬ್ದ ರದ್ದತಿ ಮತ್ತು ಆಂಟಿ-ಅಲಿಯಾಸಿಂಗ್ ಕಲರ್ ಸ್ಪೇಸ್ ಮ್ಯಾಪಿಂಗ್‌ಗೆ ಬೆಂಬಲವನ್ನು ಹೊಂದಿದೆ.

ಒನ್‌ಪ್ಲಸ್

ಇನ್ನು ಒನ್‌ಪ್ಲಸ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಈ ಹೊಸ ಸ್ಮಾರ್ಟ್‌ಟಿವಿ ಯನ್ನು ನಿಮ್ಮ ಸ್ಮಾರ್ಟ್‌ಫೋನ್ ಮೂಲಕವೂ ನಿಯಂತ್ರಿಸಬಹುದು. ಇದು ಒನ್‌ಪ್ಲಸ್ ಕ್ಯೂ 1 ಟಿವಿ ಸರಣಿಯಂತೆಯೇ ಇದೆ. ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಫೋನ್‌ಗೆ ಚಿತ್ರಗಳನ್ನು ಹಂಚಿಕೊಳ್ಳಲು ನೀವು ಹಂಚಿದ ಆಲ್ಬಮ್ ಫೀಚರ್ಸ್‌ಅನ್ನು ಸಹ ಬಳಸಬಹುದು. ಒನ್‌ಪ್ಲಸ್ ಖಾತೆಯ ಮೂಲಕ ಲಾಗ್ ಇನ್ ಆಗಿದ್ದರೆ ಸುಲಭವಾದ ವಿಷಯ ಶೋಧನೆ ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಾಗಿ 40Y1 ಆಕ್ಸಿಜನ್‌ಪ್ಲೇಯೊಂದಿಗೆ ಬರುತ್ತದೆ. ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಜೀ5, ಅಮೆಜಾನ್ ಪ್ರೈಮ್ ವಿಡಿಯೋ, ಸೋನಿ ಲಿವ್, ನೆಟ್‌ಫ್ಲಿಕ್ಸ್, ಮ್ಯೂಸಿಕ್-ಸ್ಟ್ರೀಮಿಂಗ್ ಅಪ್ಲಿಕೇಶನ್ ಸ್ಪಾಟಿಫೈ ಮತ್ತು ಹೆಚ್ಚಿನದನ್ನು ಬೆಂಬಲಿಸುತ್ತದೆ.

ಒನ್‌ಪ್ಲಸ್

ಇದಲ್ಲದೆ ಒನ್‌ಪ್ಲಸ್ ಟಿವಿ 40 Y1 ಡಾಲ್ಬಿ ಅಟ್ಮೋಸ್‌ ಬೆಂಬಲದೊಂದಿಗೆ 20W ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಿಗೆ ಸಂಬಂಧಿಸಿದಂತೆ, ಟಿವಿ ಎರಡು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ, ಆರ್ಎಫ್, ಆಪ್ಟಿಕಲ್ ಡಿಜಿಟಲ್ ಆಡಿಯೊ ಪೋರ್ಟ್, 3-ಇನ್ -1 ಎವಿ ಕಾಂಪೋಸಿಟ್, ವೈ-ಫೈ, ಬ್ಲೂಟೂತ್ ಆವೃತ್ತಿ 5.0, ಮತ್ತು ಈಥರ್ನೆಟ್ ಹೊಂದಿದೆ. ಜೊತೆಗೆ ಇದು ಆಂಡ್ರಾಯ್ಡ್ 9.0 ಅನ್ನು ಚಾಲನೆ ಮಾಡುತ್ತದೆ. ಇದು ಗೂಗಲ್ ಪ್ಲೇ ಸ್ಟೋರ್, ಗೂಗಲ್ ಅಸಿಸ್ಟೆಂಟ್ ಎನೇಬಲ್ಮೆಂಟ್ (ಇಂಗ್ಲಿಷ್, ಹಿಂದಿ ಮತ್ತು ಎಂಟು ಭಾರತೀಯ ಭಾಷೆಗಳಲ್ಲಿ), ಅಲೆಕ್ಸಾ ಬೆಂಬಲ ಮತ್ತು ಇಂಟರ್‌ಬಿಲ್ಟ್‌ ಕ್ರೋಮ್ಕಾಸ್ಟ್ ಮೂಲಕ ಹಲವಾರು ಅಪ್ಲಿಕೇಶನ್‌ಗಳಿಗೆ ಬೆಂಬಲವನ್ನು ನೀಡುತ್ತದೆ.

ಒನ್‌ಪ್ಲಸ್

ಒನ್‌ಪ್ಲಸ್ ಟಿವಿ 40Y1 ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, ಇದರ ಬೆಲೆ 23,999 ರೂ.ಆಗಿದೆ. ಆದಾಗ್ಯೂ, ಲಾಂಚ್‌ ಆಫರ್‌ನಲ್ಲಿ ಇದು 21,999 ರೂಗಳಲ್ಲಿ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಇದರ ಮೊದಲ ಮಾರಾಟವು ಇದೇ ಮೇ 26 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಮಾರಾಟದ ಭಾಗವಾಗಿ, ಆಸಕ್ತ ಖರೀದಿದಾರರು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳ ಬಳಕೆ ಮತ್ತು ಇಎಂಐ ವಹಿವಾಟಿನ ಮೇಲೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಪಡೆಯಬಹುದು. ಇದಲ್ಲದೆ, ಇದು ಎಂಟು ದಿನಗಳಲ್ಲಿ ಒನ್‌ಪ್ಲಸ್ ಆನ್‌ಲೈನ್ ಸ್ಟೋರ್ ಮೂಲಕ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.

Best Mobiles in India

English summary
OnePlus has added a new smart TV, called the 40Y1 to its affordable Y1 series in India. The TV gets a 40-inch bezel-less screen as one of the highlights.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+