ಭಾರತದ ಟಿವಿ ಮಾರುಕಟ್ಟೆಯಲ್ಲಿ ಚಂಡಮಾರುತ ಎಬ್ಬಿಸಲಿದೆ 'ಒನ್‌ಪ್ಲಸ್ ಟಿವಿ'!!
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಅತ್ಯಂತ ವೇಗವಾಗಿ ಬೆಳೆದ ಸ್ಮಾರ್ಟ್‌ಪೋನ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಪಡೆದಿರುವ ಒನ್‌ಪ್ಲಸ್ ಕಂಪೆನಿ ಈಗ ಮತ್ತೊಂದು ಬೃಹತ್ ಹೆಜ್ಜೆಯನ್ನಿಡಲು ಮುಂದಾಗಿದೆ. ಪ್ರೀಮಿಯಮ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ಅತಿರಥ ಕಂಪೆನಿಗಳನ್ನು ಹಿಂದಿಕ್ಕಿದ್ದ ಒನ್‌ಪ್ಲಸ್ ಈಗ ಟಿವಿ ಉದ್ಯಮಕ್ಕೆ ಕಾಲಿಟ್ಟಿದೆ.
ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಮನೆ ಮಾತಾಗಿರುವ ಒನ್‌ಪ್ಲಸ್ ಕಂಪೆನಿ ಸ್ಮಾರ್ಟ್‌ಫೋನ್ ಉದ್ಯಮವನ್ನು ಅಲ್ಪಕಾಲದಲ್ಲಿ ಯಶಸ್ವಿಯಾಗಿ ಮೇಲುಗೈ ಸಾಧಿಸಿದ ನಂತರ, ಇದೀಗ ಪ್ರೀಮಿಯಂ ಸ್ಮಾರ್ಟ್‌ಟಿವಿ ಮೂಲಕ ಭಾರತದ ಟಿವಿ ಮಾರುಕಟ್ಟೆಯಲ್ಲಿ ಬಿರುಗಾಳಿ ಬೀಸಲು ಬರುತ್ತಿದೆ. ಶೀಘ್ರವೇ ಒನ್‌ಪ್ಲಸ್ ಪ್ರೀಮಿಯಮ್ ಟಿವಿ ಬಿಡುಗಡೆಯಾಗುವುದು ಖಚಿತಗೊಂಡಿದೆ.

ದೇಶದಲ್ಲಿ ಪ್ರೀಮಿಯಮ್ ಟಿವಿ ಮಾರುಕಟ್ಟೆಯನ್ನೇ ಗುರಿಯಾಗಿಸಿಕೊಂಡಿರುವ ಒನ್‌ಪ್ಲಸ್ ಕಂಪೆನಿ, ಭಾರತದ ಟಿವಿ ಉದ್ಯಮವನ್ನೇ ಬದಲಾಯಿಸುವ ನಿರೀಕ್ಷೆಯನ್ನು ಹೊಂದಿದೆ. ಹಾಗಾದರೆ, ಪ್ರೀಮಿಯಮ್ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್‌ಪ್ಲಸ್ ಕಂಪೆನಿಯ ಭಾರತದ ಮಾರುಕಟ್ಟೆಗೆ ತರುತ್ತಿರುವ ಪ್ರೀಮಿಯಮ್ ಸ್ಮಾರ್ಟ್ ಟಿವಿ ಹೇಗಿರಲಿದೆ ಎಂಬುದನ್ನು ಮುಂದೆ ತಿಳಿಯಿರಿ.

ಒನ್‌ಪ್ಲಸ್ ಮುಂದಿನ ನಡೆಯೇನು?
ಭಾರತದ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ದಿಗ್ಗಜ ಒನ್‌ಪ್ಲಸ್ ಮತ್ತೊಂದು ಹೆಜ್ಜೆಯನ್ನು ಇಡುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ, ನಮ್ಮ ಕಲ್ಪನೆಯು ಅಂತ್ಯವಿಲ್ಲ. ನಾವು ಭವಿಷ್ಯದ ಮುಂದೆ ನೋಡುತ್ತಿದ್ದೇವೆ ಎಂದುಒನ್‌ಪ್ಲಸ್ ಕಂಪೆನಿ ಸಹ ಸಂಸ್ಥಾಪಕ ಪೀಟ್ ಲೌ ಅವರು ಹೇಳಿದ್ದಾರೆ. ಹಾಗಾಗಿ, ಒನ್‌ಪ್ಲಸ್ ಪ್ರೀಮಿಯಮ್ ಟಿವಿ ಕುತೋಹಲ ಮೂಡಿಸಿದೆ.

ನಿರೀಕ್ಷೆಗೂ ಮೀರಿದ ಸ್ಮಾರ್ಟ್‌ಟಿವಿ!
ಮೊಬೈಲ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಕಂಪೆನಿಯಷ್ಟು ಅರ್ಥಮಾಡಿಕೊಂಡ ಮತ್ತೊಂದು ಕಂಪೆನಿ ಇಲ್ಲ ಎನ್ನುತ್ತಾರೆ. ಅದೇ ದೃಷ್ಟಿಯಲ್ಲಿ ನೋಡುವುದಾದರೆ, ಒನ್‌ಪ್ಲಸ್ ಕಂಪೆನಿ ಟೆಲಿವಿಷನ್ ಉದ್ಯಮದಲ್ಲಿ ಅಂತರವನ್ನು ಪರಿಹರಿಸಲು ಸಿದ್ಧವಾಗಿರುವುದಾಗಿ ಹೇಳೀಕೊಂಡಿದೆ. ಇದು ಪ್ರೀಮಿಯಂ ಟಿವಿ ವಿಭಾಗದಲ್ಲಿ ನಿರೀಕ್ಷೆಯನ್ನು ಮೀರಿರುವ ಸಾಧ್ಯತೆಯಗಳನ್ನು ಹೊಂದಿದೆ.

ಮಿತಿಯಿಲ್ಲದ ತಂತ್ರಜ್ಞಾನಗಳು
ಇಂದು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಟಿವಿಗಳು ಕೇವಲ ಟಿವಿಗಳಾಗಿ ಉಳಿದಿಲ್ಲ. ಹಾಗಾಗಿ, ಒನ್‌ಪ್ಲಸ್ ಕಂಪೆನಿ ತನ್ನ ಮುಂಬರುವ ಪ್ರೀಮಿಯಂ ಟಿವಿ ವಿಭಾಗದಲ್ಲಿ ಉತ್ತಮ ಗುಣಮಟ್ಟದ ಹಾರ್ಡ್ವೇರ್ಗಳನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಕೃತಕ ಬುದ್ದಿಮತ್ತೆ ತಂತ್ರಜ್ಞಾನಮಿತಿಯಿಲ್ಲದ ಬಳಕೆದಾರರ ಅನುಭವವನ್ನು ಸೃಷ್ಟಿಸುತ್ತವೆ ಎಂದು ಒನ್‌ಪ್ಲಸ್ ಕಂಪೆನಿಯೇ ಹೇಳಿಕೊಂಡಿದೆ.

ವಿನ್ಯಾಸಕ್ಕೆ ಸಾಟಿಯೇ ಇಲ್ಲವಂತೆ.!
ಭಾರತದ ಟಿವಿ ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಆವೃತ್ತಿಯಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿರುವ ಒನ್‌ಪ್ಲಸ್ ಈ ವರೆಗೂ ಟಿವಿಗೆ ಹೆಸರನ್ನು ನಿಗದಿಪಡಿಸಿಲ್ಲ. ಆದರೆ, ಒನ್‌ಪ್ಲಸ್ ಕಂಪೆನಿಯ ಟಿವಿ ತನ್ನ ವಿನ್ಯಾಸದಿಂದಲೇ ಹೆಚ್ಚು ಸದ್ದು ಮಾಡಲಿದೆ ಎಂದು ಒನ್‌ಪ್ಲಸ್ ಮಾಹಿತಿ ಬಿಟ್ಟುಕೊಟ್ಟಿದೆ. ಇದು ಸ್ಯಾಮ್‌ಸಂಗ್ ಕಂಪೆನಿಗೆ ನೇರ ಸವಾಲಾಗುವ ನಿರೀಕ್ಷೆಯನ್ನು ಹೊದಲಾಗಿದೆ.

ಏನೆನೆಲ್ಲಾ ನಿರೀಕ್ಷಿಸಬಹುದು?
ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಕಣ್ಣಿಗೆ ಬೇಕಾದಂತಹ ಸ್ಮಾರ್ಟ್‌ಟಿವಿಗಳು ಲಬ್ಯವಿವೆ. ಆದರೆ, ಒನ್‌ಪ್ಲಸ್ ಟಿವಿ ಇಷ್ಟು ಕುತೋಹಲ ಮುಡಿಸಲು ಅದರ ತಂತ್ರಜ್ಞಾನ ಕೂಡ ಕಾರಣ. ಹಾಗಾಗಿ, 4K ಮೀರಿದ ಡಿಸ್‌ಪ್ಲೇ, ಸಂಪೂರ್ಣ ವಾಯ್ಸ್ ಅಸಿಸ್ಟೆಂಟ್, ಬೆಸ್ಟ್ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್‌ಗಳನ್ನು ಒನ್‌ಪ್ಲಸ್ ಅಭಿಮಾನಿಗಳು ನಿರೀಕ್ಷಿಸಬಹುದಾಗಿದೆ.


Click it and Unblock the Notifications








