Home
ಸುದ್ದಿಜಾಲ

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಒನ್‌ಪ್ಲಸ್‌ ವಾಚ್‌ 2: ಫೀಚರ್ಸ್‌ ನಿರೀಕ್ಷೆ ಏನು?

ಒನ್‌ಪ್ಲಸ್‌ ಕಂಪೆನಿ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ, ಸ್ಮಾರ್ಟ್‌ವಾಚ್‌ಗಳಿಗೂ ಕೂಡ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ಇದಕ್ಕೆ ಅನುಗುಣವಾಗಿ ಒನ್‌ಪ್ಲಸ್‌ ಸಂಸ್ಥೆ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ. ಇದೀಗ ಹೊಸ ಸ್ಮಾರ್ಟ್‌ವಾಚ್‌ OnePlus Watch 2 ಬಿಡುಗಡೆಗೆ ತಯಾರಿ ನಡೆಸಿದೆ.

ಹೌದು, OnePlus Watch 2 ಸ್ಮಾರ್ಟ್‌ವಾಚ್‌ ಬಿಡುಗಡೆಗೆ ಸಿದ್ದತೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ OnePlus ಸ್ಮಾರ್ಟ್‌ವಾಚ್‌ನ ಹೊಸ ಟೀಸರ್ ಅನ್ನು ಪೋಸ್ಟ್ ಮಾಡಿದೆ. "It's about time" ಎಂಬ ಶೀರ್ಷಿಕೆಯೊಂದಿಗೆ ಪರಿಚಯಿಸಿರುವ ಟೀಸರ್‌ನಲ್ಲಿ ಸ್ಮಾರ್ಟ್‌ವಾಚ್‌ನ ಲುಕ್‌ ಬಹಿರಂಗವಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ ಹೊಂದಿರಲಿದೆ, ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಒನ್‌ಪ್ಲಸ್‌ ವಾಚ್‌ 2: ಫೀಚರ್ಸ್‌ ನಿರೀಕ್ಷೆ ಏನು?

OnePlus Watch 2 ಫೆಬ್ರವರಿ 26 ರಂದು ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಅನಾವರಣಗೊಳ್ಳಲಿದೆ. ಇದು 1.43 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಸ್ಮಾರ್ಟ್ ವಾಚ್ ವೃತ್ತಾಕಾರದ ಡಯಲ್ ಅನ್ನು ಹೊಂದಿರಲಿದ್ದು, ಲೋಹದ ಕವಚವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಬದಿಗಳಲ್ಲಿ ಎರಡು ಬಟನ್‌ಗಳು, ಬ್ಲೂಟೂತ್ ಕರೆಗಾಗಿ ಸ್ಪೀಕರ್ ಗ್ರಿಲ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

OnePlus Watch 2 ಸ್ಮಾರ್ಟ್‌ವಾಚ್‌ WearOS ನಲ್ಲಿ ರನ್‌ ಆಗಲಿದೆ. ಇದು GPS, 5ATM + IP68 ನೀರು ಮತ್ತು ಧೂಳಿನ ನಿರೋಧಕತೆಯನ್ನು ಉಳಿಸಿಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಈ ವಾಚ್‌ ಬಿಗ್‌ ಬ್ಯಾಟರಿ ಬ್ಯಾಕಪ್‌ನೊಂದಿಗೆ ಬರಲಿದೆ ಎನ್ನಲಾಗಿದೆ. ಇದು ಭಾರತದಲ್ಲಿ Samsung Galaxy Watch6 ಸರಣಿ ಮತ್ತು Pixel Watch 2 ದೊಂದಿಗೆ ಪೈಪೋಟಿ ನಡೆಸಲಿದೆ ಎಂದು ಹೇಳಲಾಗಿದೆ.

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಒನ್‌ಪ್ಲಸ್‌ ವಾಚ್‌ 2: ಫೀಚರ್ಸ್‌ ನಿರೀಕ್ಷೆ ಏನು?

ಇದಲ್ಲದೆ ಒನ್‌ಪ್ಲಸ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಒನ್‌ಪ್ಲಸ್‌ ಬಡ್ಸ್ 3 ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ವಿಶೇಷವಾದ ಟಚ್‌ ಕಂಟ್ರೋಲ್‌ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರು ಮ್ಯೂಸಿಕ್ ಅನ್ನು ವಿಭಿನ್ನ ರೀತಿಯಲ್ಲಿ ಕಂಟ್ರೋಲ್‌ ಮಾಡಬಹುದಾಗಿದೆ. ಅಲ್ಲದೆ ಕರೆಗಳಿಗೆ ಉತ್ತರಿಸಲು ಮತ್ತು ಶಬ್ದ ರದ್ದತಿ ಮತ್ತು ಟ್ರಾನ್ಫರೆನ್ಸಿ ಮೋಡ್‌ಗಳ ನಡುವೆ ಸುಲಭವಾಗಿ ಟಾಗಲ್ ಮಾಡಲು ಇದು ಅನುಮತಿಸುತ್ತದೆ. ಜಪಾನ್ ಆಡಿಯೋ ಸೊಸೈಟಿ (JAS) ಪ್ರಮಾಣೀಕರಿಸಿದ ಹೈ-ರೆಸ್ ಆಡಿಯೊ ಬೆಂಬಲವನ್ನು ಇದು ಬೆಂಬಲಿಸುತ್ತದೆ.

ಇನ್ನು ಈ ಬಡ್ಸ್‌ ಪ್ರಮುಖವಾಗಿ ಐಚ್ಛಿಕ ಡ್ಯುಯಲ್ ಕನೆಕ್ಷನ್ ಮೋಡ್ ಒಂದೇ ಟೈಮ್‌ನಲ್ಲಿ ಎರಡು ಡಿವೈಸ್‌ಗಳೊಂದಿಗೆ ಬೆಂಬಲ ಸೌಲಭ್ಯ ನೀಡುತ್ತದೆ. ಇದರೊಂದಿಗೆ ಹೆಚ್ಚಿನ ಅನುಕೂಲಕ್ಕಾಗಿ ಇಯರ್‌ಬಡ್‌ಗಳು ಸ್ಲೈಡಿಂಗ್ ವಾಲ್ಯೂಮ್ ಕಂಟ್ರೋಲ್‌ನೊಂದಿಗೆ ಕಾಣಿಸಿಕೊಂಡಿವೆ. ಅಂದರೆ ನೀವು ಸ್ಪೈಪ್‌ ಮಾಡುವ ಮೂಲಕ ಸೌಂಡ್‌ ಮೇಲೆ ಹಿಡಿತ ಸಾಧಿಸಬಹುದು. ಜೊತೆಗೆ ಈ ಬಡ್ಸ್‌ IP55 ಪ್ರಮಾಣೀಕರಣದೊಂದಿಗೆ ಕಾಣಿಸಿಕೊಂಡಿದ್ದು, ನೀರು ಮತ್ತು ಬೆವರು ನಿರೋಧಕವಾಗಿದೆ. ಇದರಿಂದಾಗಿ ನೀವು ಎಲ್ಲಾ ರೀತಿಯ ಚಟುವಟಿಕೆಯಲ್ಲೂ ಅಥವಾ ಎಲ್ಲಾ ರೀತಿಯ ವಾತಾವರಣದಲ್ಲೂ ಬಳಕೆ ಮಾಡಬಹುದಾಗಿದೆ.

ಈ ಇಯರ್‌ಬಡ್ಸ್‌ ಉತ್ತಮ ಬ್ಯಾಟರಿಯನ್ನು ಹೊಂದಿದ್ದು, ANC ಸೇವೆಯೊಂದಿಗೆ 6.5 ಗಂಟೆಗಳ ಪ್ಲೇಬ್ಯಾಕ್ ಟೈಮ್‌ ಅನ್ನು ನೀಡಲಿದೆ. ಚಾರ್ಜಿಂಗ್ ಕೇಸ್‌ನೊಂದಿಗೆ ಬಳಕೆ ಮಾಡಲು ಮುಂದಾದರೆ 28 ಗಂಟೆಗಳವರೆಗೆ ಬ್ಯಾಕಪ್‌ ಪಡೆಯಲಿದೆ. ಒಟ್ಟಾರೆ ಸಾಮಾನ್ಯ ಬಳಕೆ 44 ಗಂಟೆಗಳವರೆಗೆ ಇರಲಿದೆ. ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್‌-ಸಿ ಪೋರ್ಟ್‌ ಹೊಂದಿದ್ದು, ಪ್ರತಿ ಇಯರ್‌ಬಡ್‌ 58mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಚಾರ್ಜಿಂಗ್ ಕೇಸ್ 520mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಈ ಬಡ್ಸ್‌ 10 ನಿಮಿಷದ ಚಾರ್ಚ್‌ನಲ್ಲಿ 7 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಅನ್ನು ನೀಡಲಿದೆ.

Best Mobiles in India

English summary
OnePlus has posted a new teaser of a OnePlus Watch 2: Expected Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+