ಒನ್‌ಪ್ಲಸ್ 'ಇಂಡಿಪೆಂಡೆನ್ಸ್ ಡೇ ಸೇಲ್' ಆರಂಭ: ಗ್ರಾಹಕರಿಗೆ ಭರ್ಜರಿ ಕೊಡುಗೆಗಳು!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ OnePlus ಭಾರತದಲ್ಲಿ ತನ್ನ ಸ್ವಾತಂತ್ರ್ಯ ದಿನಾಚರಣೆಯ ಮಾರಾಟವನ್ನು ಆರಂಭಿಸಿದೆ.! OnePlus ಸ್ವಾತಂತ್ರ್ಯ ದಿನಾಚರಣೆ ಮಾರಾಟವು ಜುಲೈ 31 ರಂದು ಮಧ್ಯಾಹ್ನ 12 ಗಂಟೆಗೆಯಿಂದ ಆರಂಭವಾಗಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಈ ಮಾರಾಟದಲ್ಲಿ OnePlus ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಆಡಿಯೋ ಸಾಧನಗಳು ಸೇರಿದಂತೆ ಹಲವಾರು ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಪಡೆಯಬಹುದು ಎಂದು ಕಂಪೆನಿಯು ತಿಳಿಸಿದೆ.
OnePlus ಸ್ಮಾರ್ಟ್‌ಫೋನ್ ಮೇಲಿನ ಕೊಡುಗೆಗಳು,
OnePlus 13 ಸರಣಿಯು ಈ ಮಾರಾಟದ ಪ್ರಮುಖ ಆಕರ್ಷಣೆಯಾಗಿದೆ. ಈ ಸೇಲ್‌ನಲ್ಲಿOnePlus 13 ಸ್ಮಾರ್ಟ್‌ಫೋನ್ ₹7,000 ತಾತ್ಕಾಲಿಕ ರಿಯಾಯಿತಿಯೊಂದಿಗೆ ಲಭ್ಯವಿದ್ದು, ಇದರ ಆರಂಭಿಕ ಬೆಲೆ ₹62,999 ಕ್ಕೆ ಇಳಿದಿದೆ. ಇನ್ನು OnePlus 13R ನ 16GB RAM + 512GB ಸ್ಟೋರೇಜ್ ಮಾದರಿಯು ₹5,000 ಅಗ್ಗವಾಗಿದ್ದು, 12GB + 256GB ಮಾದರಿಯು ₹3,000 ಬೆಲೆ ಕಡಿತವನ್ನು ಪಡೆದಿದೆ. ಈ OnePlus 13R ಫೋನ್ ಆರಂಭಿಕ ಬಿಡುಗಡೆ ಬೆಲೆ ₹42,999 ಆಗಿತ್ತು.
ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ OnePlus 13s ಮಾದರಿಯು ₹3,000 ವಿನಿಮಯ ಬೋನಸ್ ಅಥವಾ ₹5,000 ವರೆಗೆ ಬ್ಯಾಂಕ್ ರಿಯಾಯಿತಿಯೊಂದಿಗೆ ಲಭ್ಯವಿದೆ. ಈ ವಿನಿಮಯ ಪ್ರಯೋಜನಗಳು ಆಗಸ್ಟ್ 31 ರ ನಡುವೆ ಎಲ್ಲಾ ರೂಪಾಂತರಗಳಿಗೆ ಸಿಗುತ್ತವೆ. OnePlus 13s ಆರಂಭದಲ್ಲಿ ₹54,999 ಕ್ಕೆ ಬಿಡುಗಡೆಯಾಗಿತ್ತು. ಗಮನಿಸಬೇಕಾದ ಅಂಶವೆಂದರೆ, ಗ್ರಾಹಕರು ವಿನಿಮಯ ಬೋನಸ್‌ಗಳು ಮತ್ತು ಬ್ಯಾಂಕ್ ರಿಯಾಯಿತಿಗಳನ್ನು ಒಟ್ಟಿಗೆ ಪಡೆಯಲು ಸಾಧ್ಯವಿಲ್ಲ.!
ಹಾಗೆಯೇ, ಮಧ್ಯ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಾದ OnePlus Nord 5 ಮತ್ತು OnePlus Nord CE 5 ನ ಎಲ್ಲಾ ರೂಪಾಂತರಗಳು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ₹2,250 ತ್ವರಿತ ಬ್ಯಾಂಕ್ ರಿಯಾಯಿತಿಯೊಂದಿಗೆ ಲಭ್ಯವಿವೆ ಎಂದು ಕಂಪೆನಿಯು ತಿಳಿಸಿದೆ. ಈ ಫೋನ್‌ಗಳನ್ನು ಕ್ರಮವಾಗಿ ₹31,999 ಮತ್ತು ₹24,999 ರ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು.
OnePlus ಟ್ಯಾಬ್ಲೆಟ್‌ಗಳು ಮತ್ತು ಆಡಿಯೋ ಉತ್ಪನ್ನಗಳ ಮೇಲೂ ರಿಯಾಯಿತಿಗಳು
ಈ ಮಾರಾಟ ಅವಧಿಯದಲ್ಲಿ ಟ್ಯಾಬ್ಲೆಟ್‌ಗಳಿಗೂ ವಿಶೇಷ ಕೊಡುಗೆಗಳಿವೆ. ಇತ್ತೀಚೆಗೆ ಬಿಡುಗಡೆಯಾದ OnePlus Pad Lite ಮೊದಲ ಬಾರಿಗೆ ಮಾರಾಟಕ್ಕೆ ಬಂದಿದ್ದು, ಇದರ ಆರಂಭಿಕ ಬೆಲೆ ₹15,999 (6GB + 128GB ವೈ-ಫೈ ಮಾದರಿ) ಆಗಿದ್ದು, ಆಯ್ದ ಬ್ಯಾಂಕ್ ಕಾರ್ಡ್ ಪಾವತಿಗಳ ಮೇಲೆ ₹2,000 ರಿಯಾಯಿತಿ ಲಭ್ಯವಿದೆ. OnePlus Pad 2 ಸಹ ತ್ವರಿತ ಬ್ಯಾಂಕ್ ರಿಯಾಯಿತಿಗಳು ಮತ್ತು ₹2,000 ವರೆಗೆ ಬೆಲೆ ಕಡಿತದೊಂದಿಗೆ ಉಚಿತ ಸ್ಟೈಲೋ 2 ಸ್ಟೈಲಸ್‌ನೊಂದಿಗೆ ಲಭ್ಯವಿದೆ. ಈ OnePlus Pad 2 ಅನ್ನು ₹39,999 ಕ್ಕೆ ಬಿಡುಗಡೆ ಮಾಡಲಾಗಿತ್ತು. OnePlus Pad Go ₹19,999 ಕ್ಕೆ ಪರಿಚಯಿಸಲಾಗಿತ್ತು.

ಇತ್ತ ಆಡಿಯೋ ಉತ್ಪನ್ನಗಳ ವಿಭಾಗದಲ್ಲಿ, OnePlus Buds 4 ಅನ್ನು ₹500 ರಿಯಾಯಿತಿಯೊಂದಿಗೆ (ಆಯ್ದ ಬ್ಯಾಂಕ್‌ಗಳಲ್ಲಿ) ಖರೀದಿಸಬಹುದು. ಇದರ ಮೂಲ ಬೆಲೆ ₹5,999 ಆಗಿತ್ತು. OnePlus Buds Pro 3 ಗೆ ₹2,000 ತ್ವರಿತ ರಿಯಾಯಿತಿ ಜೊತೆಗೆ ಹೆಚ್ಚುವರಿ ₹1,000 ರಿಯಾಯಿತಿ ಲಭ್ಯವಿದೆ . ಇದರ ಮೂಲ ಬೆಲೆ ₹8,999 ಆಗಿತ್ತು. OnePlus Nord Buds 3 Pro ₹400 ಬೆಲೆ ಕಡಿತದ ಜೊತೆಗೆ ಅರ್ಹ ಕಾರ್ಡ್‌ಗಳ ಮೇಲೆ ₹300 ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಪಡೆಯುತ್ತದೆ. ಭಾರತದಲ್ಲಿ ಈ TWS ಇಯರ್‌ಫೋನ್‌ಗಳನ್ನು ₹3,299 ಕ್ಕೆ ಬಿಡುಗಡೆ ಮಾಡಲಾಗಿತ್ತು.
ಮಾರಾಟದ ಲಭ್ಯತೆ ಮತ್ತು ಅವಧಿ
OnePlus ಸ್ವಾತಂತ್ರ್ಯ ದಿನಾಚರಣೆ ಮಾರಾಟವು ಜುಲೈ 31 ರಂದು ಮಧ್ಯಾಹ್ನ 12 ಗಂಟೆಗೆ ಯಿಂದ ಆರಂಭವಾಗಿದೆ. ಇದು OnePlus ಇಂಡಿಯಾ ವೆಬ್‌ಸೈಟ್, Amazon, Flipkart, Myntra ಮತ್ತು Blinkit ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಇದರ ಜೊತೆಗೆ, Croma, Reliance Digital, Vijay Sales ಮತ್ತು OnePlus Experience Stores ಸೇರಿದಂತೆ ಆಫ್‌ಲೈನ್ ಪಾಲುದಾರ ಮಳಿಗೆಗಳಲ್ಲಿಯೂ ಈ ಕೊಡುಗೆಗಳನ್ನು ಪಡೆಯಬಹುದು.
OnePlus ಈ ಮಾರಾಟದ ಮುಕ್ತಾಯ ದಿನಾಂಕವನ್ನು ಸ್ಪಷ್ಟವಾಗಿ ಘೋಷಿಸಿಲ್ಲವಾದರೂ, ಕೆಲವು ಆಯ್ದ ಕೊಡುಗೆಗಳು ಆಗಸ್ಟ್ 31 ರವರೆಗೆ ಮಾನ್ಯವಾಗಿರುತ್ತವೆ. ಈ ಸ್ವಾತಂತ್ರ್ಯ ದಿನಾಚರಣೆಯ ಮಾರಾಟವು ಹೊಸ OnePlus ಸಾಧನಗಳನ್ನು ಖರೀದಿಸಲು ಅಥವಾ ಅಪ್‌ಗ್ರೇಡ್ ಮಾಡಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಉತ್ತಮ ಡೀಲ್‌ಗಳನ್ನು ಪಡೆಯಲು ಲಭ್ಯವಿರುವ ಕೊಡುಗೆಗಳನ್ನು ಪರಿಶೀಲಿಸಿ.


Click it and Unblock the Notifications








