Home
ಸುದ್ದಿಜಾಲ

ಐಟಿ ಹಬ್ ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತಿದೆ ಒನ್‌ಪ್ಲಸ್ ಸ್ಟೋರ್‌..!

By Gizbot Bureau

ಚೀನಾದ ಮೊಬೈಲ್ ತಯಾರಿಕಾ ಕಂಪೆನಿ ಒನ್ ಪ್ಲಸ್ ಗೆ ಭಾರತವು ಎರಡನೇ ಅತೀದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿ ತನ್ನ ಎರಡನೇ ಪ್ರಧಾನ ಕಛೇರಿಯನ್ನು ಭಾರತದಲ್ಲೇ ನಿರ್ಮಿಸಲು ಮುಂದಾಗುತ್ತಿದೆ. ಬೆಂಗಳೂರು, ಕೋಲ್ಕತ್ತಾ ಮತ್ತು ಮುಂಬೈ ನಲ್ಲಿ ಜುಲೈ 28ಕ್ಕೆ ಮೂರು ಹೊಸ ಒನ್ ಪ್ಲಸ್ ಮಳಿಗೆಗಳನ್ನು ತೆರೆಯಲಾಗುತ್ತಿದೆ.

ಆಫ್ ಲೈನ್ ಕೇಂದ್ರಗಳನ್ನು ಮತ್ತು ಸೇವಾಕೇಂದ್ರಗಳನ್ನು ತೆರೆಯುವ ಮುಖಾಂತರ ಗ್ರಾಹಕರ ಸೇವಾ ಲಭ್ಯತೆಯನ್ನು ಹೆಚ್ಚಿಸಿ ಕಂಪೆನಿಯ ಬಗ್ಗೆ ಅನುಭವವನ್ನು ಗ್ರಾಹಕರಿಂದ ಪಡೆಯುವ ಉದ್ದೇಶವನ್ನು ಒನ್ ಪ್ಲಸ್ ಸಂಸ್ಥೆ ಹೊಂದಿದೆ. ಶೇನ್ಝೆನ್ ಮೂಲದ ಸಂಸ್ಥೆ ಇನ್ನೂ 10 ಕೇಂದ್ರಗಳನ್ನು ಭಾರತದಲ್ಲಿ ಈ ವರ್ಷ ತೆರೆಯುವ ಉದ್ದೇಶವನ್ನು ಇಟ್ಟುಕೊಂಡಿದೆ ಎಂದು ತಿಳಿದುಬಂದಿದೆ. ಆ ಮೂಲಕ ಕಂಪೆನಿಯ ಮುಂದಿನ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ ಎಂಬ ವರದಿಗಳು ಈ ಹಿಂದೆಯೇ ಕೇಳಿಬಂದಿತ್ತು.

ಐಟಿ ಹಬ್ ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತಿದೆ ಒನ್‌ಪ್ಲಸ್ ಸ್ಟೋರ್‌..!

ನಾವು ನಮ್ಮ ಆಫ್ಲೈನ್ ಕೇಂದ್ರಗಳ ಬಗ್ಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸುತ್ತಿದ್ದೇವೆ. ಯಾಕೆಂದರೆ ಭಾರತೀಯ ಗ್ರಾಹಕರು ತಾವು ಖರೀದಿಸುವ ಮೊಬೈಲ್ ನ್ನು ಸ್ಪರ್ಶಿಸಿ ನಂತರ ಹೇಗಿದೆ ಎಂದು ಅನುಭವ ಪಡೆದು ನಂತರ ಖರೀದಿ ಮಾಡಲು ಹೆಚ್ಚು ಆಸಕ್ತರಾಗಿರುತ್ತಾರೆ. ಹಾಗಾಗಿ ಈ ಉದ್ದೇಶ ಹೊಂದಿದ್ದೇವೆ. ಆದರೆ ಡಿಜಿಟಲ್ ಸೇವೆಯೂ ಕೂಡ ಮುಂದುವರಿಯಲಿದೆ ಎಂದು ಒನ್ ಪ್ಲಸ್ ಇಂಡಿಯಾದ ಜನರಲ್ ಮ್ಯಾನೇಜರ್ ಆಗಿರುವ ವಿಕಾಸ್ ಅಗರ್ ವಾಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ವರ್ಷವೇ ಒನ್ ಪ್ಲಸ್ ಸಂಸ್ಥೆ ಒನ್ ಪ್ಲಸ್ ಎಕ್ಸ್ ಪೀರಿಯನ್ಸ್ ಸ್ಟೋರ್ ಒಂದನ್ನು ತೆರೆದಿದೆ. ಈಗ ಕಂಪೆನಿಯು ಬೆಂಗಳೂರಿನಲ್ಲಿ ಹೊಸದಾಗಿ ತೆರೆಯುತ್ತಿರುವ ಕೇಂದ್ರದ ವಿಳಾಸವನ್ನು ಕೂಡ ಪ್ರಕಟಿಸಿದೆ. ಅದು ಬೆಂಗಳೂರಿನ ಜಯನಗರದ 4th ಬ್ಲಾಕ್ ನಲ್ಲಿ ಇರಲಿದೆ. ಕೋಲ್ಕತ್ತಾದಲ್ಲಿ ಪ್ರಿನ್ಸ್ ಅನ್ವಾರ್ ಶಾ ರೋಡ್ ನ ಸೌತ್ ಸಿಟಿ ಮಾಲ್ ನಲ್ಲಿ ಇರಲಿದೆ. ಮುಂಬೈ ನಲ್ಲಿ ಸೀವುಡ್ ಗ್ರ್ಯಾಂಡ್ ಸೆಂಟ್ರಲ್ ಮಾಲ್ ನಲ್ಲಿ ಒನ್ ಪ್ಲಸ್ ಸದ್ಯದಲ್ಲೇ ತೆರೆಯಲಾಗುತ್ತದೆ .

ಜೂನ್ 28 ರ ಭಾರತೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ ಈ ಮೂರು ಪ್ರದೇಶದಲ್ಲಿ ಹೊಸ ಕೇಂದ್ರಗಳು ಉದ್ಘಾಟನೆಗೊಳ್ಳಲಿದೆ. ಬಿಡುಗಡೆಯಂದು ಗ್ರಾಹಕರು ಖರೀದಿಗೆ ರಿಜಿಸ್ಟರ್ ಮಾಡಿಕೊಂಡರೆ ಅವರಿಗೆ ಬಂಪರ್ ಆಫರ್ ಗಳು ಸಿಗುತ್ತದೆ. ಉಚಿತವಾಗಿ ಒಂದು ಒನ್ ಪ್ಲಸ್ 6 ಮಾರ್ವೆಲ್ ಆವೆಂಜರ್ಸ್ ಐರನ್ ಮ್ಯಾನ್ ಕೇಸ್, ಒನ್ ಪ್ಲಸ್ ಬ್ರ್ಯಾಂಡೆಂಡ್ ಟೀಶರ್ಟ್ಸ್, ಬ್ಯಾಕ್ ಟು ಸ್ಕೂಲ್ ಪ್ಯಾಕೇಜ್, ಒನ್ ಪ್ಲಸ್ 5/5ಟಿ ಆಕ್ಸಸರೀಗಳನ್ನು ಗೆಲ್ಲುವ ಅವಕಾಶವಿರುತ್ತದೆ.

ಒನ್ ಪ್ಲಸ್ ನ ಮಾರಾಟವು ಒನ್ ಪ್ಲಸ್ 5 ಮತ್ತು ಒನ್ ಪ್ಲಸ್ 6 ಫೋನ್ ಗಳ ಮುಖಾಂತರ ಅಗಾಧವಾಗಿ ಬೆಳೆದಿವೆ. ಆಫ್ ಲೈನ್ ಸ್ಟೋರ್ ಗಳಲ್ಲಿ ಶೇಕಡಾ 91 ರ ಹೆಚ್ಚಳವನ್ನು ಕಂಪೆನಿ ಗಮನಿಸಿದೆ. ಆ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕಂಪೆನಿ ತೆಗೆದುಕೊಂಡಿದ್ದು, ಹೆಚ್ಚಿನ ಮಾರಾಟವನ್ನು ಮುಂದಿನ ದಿನಗಳಲ್ಲಿ ಬಯಸುತ್ತಿದೆ. ಒಟ್ಟಿನಲ್ಲಿ ಒನ್ ಪ್ಲಸ್ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ನೆಲೆಯೂರಿ ನಿಲ್ಲಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಅನ್ನುವುದು ಗ್ಯಾರೆಂಟಿ. ಇದುವರೆಗೂ ಗ್ರಾಹಕ ನೀಡಿರುವ ಬೆಂಬಲವೇ ಮುಂದಿನ ದಿನಗಳಲ್ಲಿ ಮುಂದುವರಿದದ್ದೇ ಆದಲ್ಲಿ, ಚೀನಾದ ಮತ್ತೊಂದು ಕಂಪೆನಿಗೆ ಭಾರತವು ಜಾಗ ಕಲ್ಪಿಸಿದಂತಾಗುತ್ತದೆ.

Best Mobiles in India

English summary
OnePlus India to Open 3 New Retail Stores, in Bengaluru, Kolkata, and Mumbai. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+