ಒನ್‌ಪ್ಲಸ್‌ನಿಂದ ಹೊಸ ವಾಯರ್‌ಲೆಸ್ ಚಾರ್ಜರ್ ಲಾಂಚ್: ಕಾರ್ಯದಕ್ಷತೆ ಕೇಳಿದ್ರೆ ಶಾಕ್ ಆಗ್ತೀರಾ
ಒನ್‌ಪ್ಲಸ್ ಕಂಪೆನಿ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ OnePlus 12 ಜೊತೆಗೆ AIRVOOC 50W ವಾಯರ್‌ಲೆಸ್ ಚಾರ್ಜರ್ ಅನ್ನು ಸಹ ಬಿಡುಗಡೆ ಮಾಡಿದೆ. ಇದು ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗೆ ವೇಗದ ಚಾರ್ಜಿಂಗ್ ಮಾಡಲಿದೆ. ಇದರ ಮೂಲಕ OnePlus 12 ಫೋನ್ ಅನ್ನು 23 ನಿಮಿಷಗಳಲ್ಲಿ 50% ವರೆಗೆ ಮತ್ತು 55 ನಿಮಿಷಗಳಲ್ಲಿ 100% ವರೆಗೆ ಚಾರ್ಜ್ ಮಾಡಬಹುದಾಗಿದೆ.
ಹೌದು, AIRVOOC 50W ವಾಯರ್‌ಲೆಸ್ ಚಾರ್ಜರ್ ಬಾರತದಲ್ಲಿ ಬಿಡುಗಡೆ ಆಗಿದೆ. ಈ ಮೂಲಕ OnePlus 12 ಸ್ಮಾರ್ಟ್‌ಫೋನ್ 50W ವೇಗದ ಚಾರ್ಜಿಂಗ್ ಬೆಂಬಲಿಸುವುದು ಪಕ್ಕಾ ಆಗಿದೆ. ಇದು ಇನ್‌ಬಿಲ್ಟ್ ಡಬಲ್ ಕಾಯಿಲ್ ಹೊಂದಿದ್ದು, ಮೊಬೈಲ್ ಫೋನ್‌ನ ವಾಯರ್‌ಲೆಸ್ ಚಾರ್ಜಿಂಗ್ ವಲಯವನ್ನು ಹೇಗಿಟ್ಟದ್ದರೂ ಕೂಡ ಗ್ರಹಿಸುವ ಬುದ್ದಿವಂತಿಕೆಯನ್ನು ಹೊಂದಿದೆ ಎಂದು ಒನ್‌ಪ್ಲಸ್ ಕಂಪೆನಿ ಹೇಳಿದೆ. ಹಾಗಾದ್ರೆ ಈ ಹೊಸ ಚಾರ್ಜರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ AIRVOOC 50W ವಾಯರ್‌ಲೆಸ್ ಚಾರ್ಜರ್ ಅನ್ನು ಪರಿಚಯಿಸುವ ಮೂಲಕ ಮತ್ತೊಮ್ಮೆ ಒನ್‌ಪ್ಲಸ್ 50W ವೇಗದ ಚಾರ್ಜಿಂಗ್ ಟೆಕ್ನಾಲಜಿಗೆ ಮರಳಿದೆ. ಈ ಚಾರ್ಜರ್ OnePlus 12 ಅನ್ನು 23 ನಿಮಿಷಗಳಲ್ಲಿ 50% ವರೆಗೆ ಮತ್ತು 55 ನಿಮಿಷಗಳಲ್ಲಿ 100% ವರೆಗೆ ಚಾರ್ಜ್ ಮಾಡಲಿದೆ. ಇದರಲ್ಲಿರುವ ಏರ್ ಕೂಲಿಂಗ್ ಟೆಕ್ನಾಲಜಿಯು ಶಾಖದ ಹರಡುವಿಕೆಯನ್ನು 23% ರಷ್ಟು ಸುಧಾರಿಸುತ್ತದೆ. ಅಲ್ಲದೆ ಇದು ವಾಯರ್‌ಲೆಸ್ ಫ್ಲಾಶ್ ಚಾರ್ಜಿಂಗ್ ಸಮಯದಲ್ಲಿ ಫೋನ್ ಅನ್ನು ಕೂಲ್ ಆಗಿರಿಸಲಿದೆ.
ಇದಲ್ಲದೆ ಈ ಚಾರ್ಜರ್‌ನಲ್ಲಿ ಬುದ್ಧಿವಂತ ಸ್ಲೀಪ್ ಮೋಡ್ ಅನ್ನು ಸಹ ನೀಡಲಾಗಿದೆ. ಇದು ಚಾರ್ಜಿಂಗ್ ಪವರ್ ಮತ್ತು ಫ್ಯಾನ್ ವೇಗವನ್ನು ಕಡಿಮೆ ಮಾಡುತ್ತದೆ. ಹಾಗೆಯೆ ತಡರಾತ್ರಿಯಲ್ಲಿ ಫೋನ್ ಅನ್ನು ಮ್ಯೂಟ್‌ನಲ್ಲಿ ಇರಿಸುತ್ತದೆ. ಇನ್ನು ಓವರ್ ವೋಲ್ಟೇಜ್, ಓವರ್ ಕರೆಂಟ್, ಓವರ್ ಟೆಂಪರೇಚರ್, ಎಲೆಕ್ಟ್ರೋಸ್ಟಾಟಿಕ್, ಅಂಡರ್‌ವೋಲ್ಟೇಜ್ ಮತ್ತು ವಿದೇಶಿ ವಸ್ತುಗಳ ರಕ್ಷಣೆ ಸೇರಿದಂತೆ ಆರು ಭದ್ರತಾ ಕ್ರಮಗಳೊಂದಿಗೆ ಚಾರ್ಜರ್ ಅನ್ನು ಪ್ರೊಟೆಕ್ಟ್ ಮಾಡಲಾಗಿದೆ.

ಇನ್ನು ಈ ಚಾರ್ಜರ್ ಫಾರಿನ್ ಆಬ್ಜೆಕ್ಟ್ ಡಿಟೆಕ್ಷನ್ (FOD) ಕೀಗಳು ಮತ್ತು ನಾಣ್ಯಗಳಂತಹ ಫಾರಿನ್ ಮೆಟಲ್ ಪ್ರಾಡಕ್ಟ್‌ಗಳನ್ನು ಬುದ್ಧಿವಂತಿಕೆಯಿಂದ ಗುರುತಿಸುತ್ತದೆ. ಅಲ್ಲದೆ ಆಲರ್ಟ್ ಸಂದೇಶವನ್ನು ಗ್ರಾಹಕರಿಗೆ ಕಳುಹಿಸಲಿದೆ ಮತ್ತು ಸ್ವಯಂಚಾಲಿತವಾಗಿ ಶಕ್ತಿಯನ್ನು ಕಡಿತಗೊಳಿಸುತ್ತದೆ. ಇದಲ್ಲದೆ AIRVOOC ಜೊತೆಗೆ, ವಾಯರ್‌ಲೆಸ್ ಚಾರ್ಜಿಂಗ್ ಪ್ಯಾಡ್ Qi ಪ್ರೋಟೋಕಾಲ್ ಅನ್ನು ಬೆಂಬಲಿಸುವ ಉತ್ಪನ್ನಗಳೊಂದಿಗೆ ಸಹ ಕಾರ್ಯನಿರ್ವಹಿಸುತ್ತದೆ. ಇದು ಬಾಕ್ಸ್‌ನಲ್ಲಿ ಯುಎಸ್‌ಬಿ-ಎ ಟು ಟೈಪ್-ಸಿ ಕೇಬಲ್‌ನೊಂದಿಗೆ ಬರುತ್ತದೆ.

ಬೆಲೆ ಮತ್ತು ಲಭ್ಯತೆ
OnePlus AIRVOOC 50W ವಾಯರ್‌ಲೆಸ್ ಚಾರ್ಜರ್ ಭಾರತದಲ್ಲಿ 5,499ರೂ ಬೆಲೆಯನ್ನು ಹೊಂದಿದೆ. ಇದನ್ನು OnePlus ಇಂಡಿಯಾ ಆನ್‌ಲೈನ್ ಸ್ಟೋರ್‌ನಿಂದ ಖರೀದಿಸಲು ಲಭ್ಯವಿದೆ. ಅಲ್ಲದೆ OnePlus ಸ್ಟೋರ್‌ಗಳ ಮೂಲಕ ಆಫ್‌ಲೈನ್‌ನಲ್ಲಿಯೂ ಕೂಡ ಖರೀದಿಸಬಹುದು. ಇದು ನಿಮಗೆ ಬಿಳಿ ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ.
ಇನ್ನು ಇದೇ ವೇಳೆ ಭಾರತದಲ್ಲಿ OnePlus 12R ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ BOE X1 OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ProXDR ರಿಫ್ರೆಶ್ ರೇಟ್ ಜೊತೆಗೆ LTPO 4.0 ತಂತ್ರಜ್ಞಾನವನ್ನು ಹೊಂದಿದೆ. ಜೊತೆಗೆ ಸೀಮಿತ ರಿಫ್ರೆಶ್ ರೇಟ್‌ಗಳ ಬದಲಿಗೆ ಹೊಸ 90Hz ಮತ್ತು 72Hz ಸೇರಿದಂತೆ ವ್ಯಾಪಕ ಶ್ರೇಣಿಯ ನಡುವೆ ರಿಫ್ರೆಶ್ ರೇಟ್‌ಗಳನ್ನು ಬದಲಾಯಿಸುವುದನ್ನು ಸಕ್ರಿಯಗೊಳಿಸುತ್ತದೆ.
OnePlus 12R ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 14-ಆಧಾರಿತ OxygenOS 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM + 128GB ಮತ್ತು 16GB RAM + 256GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications








