ಭಾರತದಲ್ಲಿ ಒನ್‌ಪ್ಲಸ್ 55U1, 43Y1, ಮತ್ತು 32Y1 ಸ್ಮಾರ್ಟ್‌ಟಿವಿ ಬಿಡುಗಡೆ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಆಗಿರುವ ಒನ್‌ಪ್ಲಸ್‌ ಕಂಪೆನಿ ತನ್ನ ವಿವಿಧ ಸ್ಮಾರ್ಟ್‌ಟಿವಿಗಳ ಮೂಲಕವೂ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಗಟ್ಟಿಗೊಳಿಸಿಕೊಂಡಿದೆ. ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿ ಸ್ಮಾರ್ಟ್‌ಟಿವಿ ಪ್ರಿಯರ ನೆಚ್ಚಿನ ಬ್ರಾಂಡ್‌ಗಳಲ್ಲಿ ಒಂದೆನಿಸಿದೆ. ಇನ್ನು ಟಿವಿ ಲೋಕ ಕೂಡ ಸಾಕಷ್ಟು ಕಲರ್‌ಫುಲ್‌ ಆಗಿರೋದು ನಿಮಗೆಲ್ಲಾ ಗೊತ್ತೆ ಇದೆ. ದಿನಿದಿಂದ ದಿನಕ್ಕೆ ಟಿವಿ ಲೋಕ್‌ ಸಾಕಷ್ಟು ವಿಸ್ತಾರವಾಗುತ್ತಿದೆ. ಸದ್ಯ ಇದೀಗ ತನ್ನ ಬಜೆಟ್‌ ಸರಣಿಯ ಮೂರು ಹೊಸ ಸ್ಮಾರ್ಟ್‌ಟಿವಿಗಳನ್ನ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಹೌದು, ಒನ್‌ಪ್ಲಸ್ ಕಂಪೆನಿ ಭಾರತದಲ್ಲಿ ತನ್ನ ಹೊಸ ಮೂರು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ಸದ್ಯ ಭಾರತದಲ್ಲಿ ತನ್ನ 'ಬಜೆಟ್‌ಬೆಲೆಯ' ಸ್ಮಾರ್ಟ್ ಟಿವಿ ಶ್ರೇಣಿಯನ್ನು ಅನಾವರಣಗೊಳಿಸಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳಲ್ಲಿ 55U1 ಸ್ಮಾರ್ಟ್‌ಟಿವಿ ಒಂದಾಗಿದ್ದು, ಇದು ಯು ಸರಣಿಯ ಮೊದಲ ಸ್ಮಾರ್ಟ್ ಟಿವಿ. ಇನ್ನು 43Y1 ಮತ್ತು 3Y1 ಸ್ಮಾರ್ಟ್‌ಟಿವಿ ಅನ್ನು Y ಸರಣಿಯಲ್ಲಿ ಪರಿಚಯಿಸಿದೆ. ಅಲ್ಲದೆ ಈ ಮೂರು ಮಾದರಿಯ ಸ್ಮಾರ್ಟ್‌ಟಿವಿಗಳು 55, 43 ಮತ್ತು 32-ಇಂಚಿನ ಪರದೆಯ ಗಾತ್ರದ ಆಯ್ಕೆಗಳಲ್ಲಿ ಲಬ್ಯವಾಗಲಿವೆ. ಇನ್ನು ಈ ಹೊಸ ಸ್ಮಾರ್ಟ್‌ಟಿವಿಗಳ ವಿನ್ಯಾಸ ಹಾಗೂ ವಿಶೇಷತೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಒದಿರಿ.

ಒನ್‌ಪ್ಲಸ್ 55U1 ಸ್ಮಾರ್ಟ್‌ಟಿವಿ

ಒನ್‌ಪ್ಲಸ್ 55U1 ಸ್ಮಾರ್ಟ್‌ಟಿವಿ

ಒನ್‌ಪ್ಲಸ್‌ನ 55U1 ಮಾದರಿಯ ಸ್ಮಾರ್ಟ್‌ಟಿವಿಯು 55 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಯಲ್ಲಿ ಬರುತ್ತದೆ. ಇದು 4K LCD ಪ್ಯಾನಲ್ ಅನ್ನು ಹೊಂದಿದೆ ಮತ್ತು ಡಾಲ್ಬಿ ವಿಷನ್ ಅನ್ನು ಒಳಗೊಂಡಿದೆ. HDR10 + ಬೆಂಬಲವನ್ನು ಹೊಂದಿದೆ. ಇನ್ನು ಸೌಂಡ್‌ ಸಿಸ್ಟಂ ವಿಷಯದಲ್ಲಿ, ಇದು 30W ಆಡಿಯೊ ಸಿಸ್ಟಮ್ ಅನ್ನು ಹೊಂದಿದೆ, ಇದು ಡಾಲ್ಬಿ ಅಟ್ಮೋಸ್ ಅನ್ನು ಬೆಂಬಲಿಸುವ 4 ಸ್ಪೀಕರ್ ಘಟಕಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ ಟಿವಿ ಬಾಡಿ ರೇಷನ್‌ನಲ್ಲಿ 95% ಪರದೆಯನ್ನು ಹೊಂದಿದೆ. ಇದು 6.9 ಮಿಮೀ ದಪ್ಪ ಮತ್ತು ಲೋಹದ ದೇಹವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ 9ಪೈ ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಯೂಟ್ಯೂಬ್ ಗಳನ್ನ ಬೆಂಬಲಿಸಲಿದೆ.

ಒನ್‌ಪ್ಲಸ್ 43Y1,ಮತ್ತು 32Y1 ಸ್ಮಾರ್ಟ್‌ಟಿವಿ

ಒನ್‌ಪ್ಲಸ್ 43Y1,ಮತ್ತು 32Y1 ಸ್ಮಾರ್ಟ್‌ಟಿವಿ

ಇನ್ನು ಒನ್‌ಪ್ಲಸ್‌ ಪರಿಚಯಿಸಿರುವ ಇತರೆ ಎರಡು ಟಿವಿಗಳಲ್ಲಿ 43Y1 ಸ್ಮಾರ್ಟ್‌ಟಿವಿ ಮತ್ತು 32Y1 ಸ್ಮಾರ್ಟ್‌ಟಿವಿ ಕೂಡ ಒಂದಾಗಿದೆ. ಇದರಲ್ಲಿ 43Y1 ಸ್ಮಾರ್ಟ್‌ಟಿವಿ ಮಾದರಿಯು 1,920 x 1,080 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 43 ಇಂಚಿನ ಪರದೆಯನ್ನು ಹೊಂದಿದೆ. ಇನ್ನು 32Y1 ಸ್ಮಾರ್ಟ್‌ಟಿವಿ ಮಾದರಿಯು 1,366 x 768 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 32 ಇಂಚಿನ ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳಲ್ಲಿ 43 Y1 ಮತ್ತು 32Y1 ಎರಡೂ ಮಾದರಿಗಳು ಎಲ್‌ಸಿಡಿ ಪ್ಯಾನೆಲ್‌ ಅನ್ನು ಹೊಂದಿದೆ. ಅಲ್ಲದೆ ಈ ಎರಡೂ ಮಾದರಿಗಳು 93% ಡಿಸಿಐ-ಪಿ 3 ಬಣ್ಣ ವ್ಯಾಪ್ತಿಯನ್ನು ಬೆಂಬಲಿಸುತ್ತವೆ.

ಸ್ಮಾರ್ಟ್‌ಟಿವಿ

ಇನ್ನು ಈ ಎರಡು ಮಾದರಿಗಳು ಒಂದೇ 20W ಸ್ಪೀಕರ್ ಸಿಸ್ಟಮ್‌ನೊಂದಿಗೆ ಬರುತ್ತವೆ, ಇದು ಡಾಲ್ಬಿ ಆಡಿಯೊವನ್ನು ಬೆಂಬಲಿಸುತ್ತದೆ. ಜೊತೆಗೆ ಈ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್ 9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಯೂಟ್ಯೂಬ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಗಳು ಕೂಡ ಇಂಟರ್‌ಬಿಲ್ಟ್‌ ಕ್ರೋಮ್‌ಕಾಸ್ಟ್ ಅನ್ನು ಹೊಂದಿದೆ. ಜೊತೆಗೆ ಒನ್‌ಪ್ಲಸ್ ಡಾಟಾ ಸೇವರ್ ಮೋಡ್‌ನಂತಹ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ಮಿತಿಯನ್ನು ನಿಗದಿಪಡಿಸುವ ಮೂಲಕ ಡೇಟಾ ಬಳಕೆಯನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದರ ಜೊತೆಗೆ, ಈ ಮೂರು ಮಾದರಿಗಳು ಒನ್‌ಪ್ಲಸ್ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಬರಲಿದ್ದು, ಬಳಕೆದಾರರು ಒಂದೇ ಸಮಯದಲ್ಲಿ ಅನೇಕ ಸಾಧನಗಳನ್ನು ಟಿವಿಯೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

Most Read Articles
Best Mobiles in India

English summary
OnePlus has finally unveiled its 'affordable' smart TV lineup in India by launching three models.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X