Home
ಸುದ್ದಿಜಾಲ

ಜನೇವರಿ 15ಕ್ಕೆ ಒನ್‌ಪ್ಲಸ್‌ನಿಂದ 5G ಸ್ಮಾರ್ಟ್‌ಫೋನ್‌ ಲಾಂಚ್‌..!

By Gizbot Bureau

ಇನ್ನೇನು ಕೆಲವೇ ದಿನದಲ್ಲಿ ಅಂತರ್ಜಾಲ ಸೇವೆಯು 5ಜಿ ವೇಗವನ್ನು ತಲುಪುತ್ತದೆ. ಹಾಗಾಗಿ ನಿಮ್ಮ ಫೋನ್ ಕೂಡ ಅಪ್ ಗ್ರೇಡ್ ಆಗಬೇಕಾಗಬಹುದು. ಹೌದು ಇದುವರೆಗೂ ಯಾವುದೇ ಫೋನ್ ಕೂಡ 5ಜಿ ಗೆ ಸಹಾಯ ಮಾಡುವುದಿಲ್ಲ. ಇದೇ ಜನವರಿಯಲ್ಲಿ ಒನ್ ಪ್ಲಸ್ ಸಂಸ್ಥೆಯು ವಿಶ್ವದ ಮೊದಲ 5ಜಿ ಬೆಂಬಲಿತ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಒನ್ ಪ್ಲಸ್ ಸಂಸ್ಥೆ 5ಜಿ ಫೋನ್ ಬಿಡುಗಡೆಗೆ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದೆ.

ಇದರ ಜೊತೆಗೆ ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಬ್ರ್ಯಾಂಡ್ ಆಗಿರುವ ಒನ್ ಪ್ಲಸ್ 6 ನ ಯಶಸ್ವೀ ಸ್ಮಾರ್ಟ್ ಫೋನ್ ನ್ನು ಮುಂದಿನ ತಿಂಗಳು ಬಿಡುಗಡೆಗೊಳಿಸುವುದಾಗಿ ಹೇಳಿದೆ. ಅದನ್ನು ಒನ್ ಪ್ಲಸ್ 6ಟಿ ಎಂದು ಕರೆಯಲಾಗುವ ಸಾಧ್ಯತೆ ಇದ್ದು ಅಕ್ಟೋಬರ್ ನಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

ಜನೇವರಿ 15ಕ್ಕೆ ಒನ್‌ಪ್ಲಸ್‌ನಿಂದ 5G ಸ್ಮಾರ್ಟ್‌ಫೋನ್‌ ಲಾಂಚ್‌..!

ಆದರೆ, ಕಂಪೆನಿಯು ಸದ್ಯ ದೊಡ್ಡ ಬಿಡುಗಡೆಯೊಂದರ ಬಗ್ಗೆ ಟೀಸರ್ ರಿಲೀಸ್ ಮಾಡಿದೆ. ಆದರೆ ಏನನ್ನು ಜನವರಿಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂಬ ಬಗ್ಗೆ ಕಂಪೆನಿಯು ಯಾವುದೇ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಜನವರಿ 15 ಕ್ಕೆ ಒನ್ ಪ್ಲಸ್ ಮತ್ತೊಂದು ದೊಡ್ಡ ಬಿಡುಗಡೆ ಮಾಡಲಿದ್ದು ಅದುವೇ 5ಜಿ ಫೋನ್ ಎಂಬ ಗುಸುಗುಸು ಸುದ್ದಿಗಳು ಹರಿದಾಡುತ್ತಿದೆ. ಅಂದರೆ ಈ ದಿನಾಂಕದಂದು ಒನ್ ಪ್ಲಸ್ 7 ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

ಚೀನಾದ ಸಾಮಾಜಿಕ ಜಾಲತಾಣ Weiboದಲ್ಲಿ ಒನ್ ಪ್ಲಸ್ ಕಂಪೆನಿಯು ಜನವರಿ 15,2019 ಕ್ಕೆ ಹೊಸ ಗುರಿಯೊಂದಿಗೆ ಕಂಪೆನಿ ಮುನ್ನಡೆಯುತ್ತಿದೆ ಎಂದು ಹೇಳಿದೆ. ಆದರೆ ಆ ಗುರಿ ಏನು ಎಂಬ ಬಗ್ಗೆ ಏನನ್ನೂ ಹೇಳಿಲ್ಲ. ಹಾಗಾಗಿ ಈ ಬಗ್ಗೆ ಹೊಸ ಹೊಸ ನಿರೀಕ್ಷೆಗಳು ಗರಿಗೆದರಿದೆ.

ಟೆಲಿಕಾಂ ಆಪರೇಟರ್ ಗಳು 2018 ರ ಅಂತ್ಯದೊಳಗೆ ಯುಎಸ್ ನಲ್ಲಿ 5ಜಿ ಕನೆಕ್ಷನ್ ನ್ನು ಬಿಡುಗಡೆಗೊಳಿಸಲಿದ್ದಾರೆ. ಭಾರತ 5ಜಿ ಕನೆಕ್ಷನ್ ಗಾಗಿ ಸ್ವಲ್ಪ ಕಾಯಬೇಕಿದೆ.

ಜನೇವರಿ 15ಕ್ಕೆ ಒನ್‌ಪ್ಲಸ್‌ನಿಂದ 5G ಸ್ಮಾರ್ಟ್‌ಫೋನ್‌ ಲಾಂಚ್‌..!

ಹಲವಾರು ಕಂಪೆನಿಗಳು 5ಜಿ ಫೋನ್ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ. ಒನ್ ಪ್ಲಸ್ ನ ಪೇರೆಂಟ್ ಕಂಪೆನಿ ಓಪ್ಪೋ ಕೂಡ 5ಜಿ ಫೋನ್ ಬಗ್ಗೆ ಈಗಾಗಲೇ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಓಪ್ಪೋ ಆರ್ 15 ಸ್ನ್ಯಾಪ್ ಡ್ರ್ಯಾಗನ್ ಎಕ್ಸ್50 LTE ಮಾಡೆಮ್ ನ್ನು 5ಜಿ ವೇಗದ ಪರೀಕ್ಷೆಗಾಗಿ ಬಳಸಿತ್ತು. ಇತ್ತೀಚೆಗೆ ಈ ಮಾಹಿತಿಯನ್ನು BBK ಹಂಚಿಕೊಂಡಿದ್ದು, ಒಪೋ, ಒನ್ ಪ್ಲಸ್ ಸೇರಿದಂತೆ ಇದರ ಸಬ್-ಬ್ರ್ಯಾಂಡ್ ಗಳು ಕೂಡ ನಿರಂತರವಾಗಿ 5ಜಿ ಕನೆಕ್ಟಿವಿಟಿಯ ಬಗ್ಗೆ ಕೆಲಸ ಮಾಡುತ್ತಿದೆ.

ಶಾಂಘೈ ನಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಈ ವರ್ಷ ನಡೆದ ಸಮಾರಂಭದಲ್ಲಿ ಒನ್ ಪ್ಲಸ್ ಸಿಇಓ ಪಿಟೇ ಲೂ ತಮ್ಮ ಕಂಪೆನಿಯು ಮುಂದಿನ ವರ್ಷ 5ಜಿ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸುವ ಬಗ್ಗೆ ಪ್ರಕಟಣೆ ನೀಡಿದ್ದರು. ಇದಕ್ಕಾಗಿ ಕಂಪೆನಿಯು ಈಗಾಗಲೇ ಉತ್ತಮ ಅಮೇರಿಕಾದ ಟೆಲಿಕಾಂ ಆಪರೇಟರ್ ಜೊತೆ ಕಾರ್ಯ ನಿರ್ವಹಿಸುತ್ತಿರುವುದಾಗಿಯೂ ತಿಳಿಸಿದ್ದರು.

ಇದೇ ಸಮಯದಲ್ಲಿ ಒನ್ ಪ್ಲಸ್ ಟಿ ಹ್ಯಾಂಡ್ ಸೆಟ್ ವೇರಿಯಂಟ್ ನ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ನ್ನು ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆ ಇದ್ದೆ. ಅಂದರೆ ಒನ್ ಪ್ಲಸ್ 6ಟಿ ಕೂಡ ಅದೇ ಸಮಯಕ್ಕೆ ಬಿಡುಗಡೆಗೊಂಡರೂ ಆಶ್ಚರ್ಯವಿಲ್ಲ. ಒನ್ ಪ್ಲಸ್ ಕಂಪೆನಿಯು ಭಾರತವೇ ದೊಡ್ಡ ಮಾರುಕಟ್ಟೆಯ ಜಾಗವಾಗಿದೆ.

ಹಾಗಾಗಿ ಒನ್ ಪ್ಲಸ್ ಬಿಡುಗಡೆಗೊಂಡ ಕೂಡಲೇ ಭಾರತದಲ್ಲೂ ಲಭ್ಯವಾಗುತ್ತದೆ ಎಂಬುದರಲ್ಲಿ ಎರಡೂ ಮಾತಿಲ್ಲ. ಒನ್ ಪ್ಲಸ್ 6ಟಿ ಸಣ್ಣಪುಟ್ಟ ಅಪ್ ಗ್ರೇಡ್ ನೊಂದಿಗೆ ಬಿಡುಗಡೆಗೊಳ್ಳುವ ಸಾಧ್ಯತೆ ಇದ್ದು, ಈ ಸ್ಮಾರ್ಟ್ ಫೋನ್ ನಲ್ಲಿ Qualcomm Snapdragon845 ಪ್ರೊಸೆಸರ್ ನ್ನು ಅಳವಡಿಸಲಾಗಿರುತ್ತದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ 4ಜಿ ಸ್ಪೀಡ್ ಸಾಕಾಗುತ್ತಿಲ್ಲ 5ಜಿ ಬಂದಿದ್ದರೆ ಎಂದು ಚಿಂತಿಸುತ್ತಿರುವವರಿಗೆ ಆ ಕಾಲ ಸನ್ನಿಹಿತವಾಗುತ್ತಿದೆ. ಇನ್ನು ಹೆಚ್ಚಿನ ವೇಗದ ಇಂಟರ್ನೆಟ್ ಸೌಲಭ್ಯ ಮನೆಯಂಗಳದಲ್ಲಿ ಲಭ್ಯವಾಗುವ ಕಾಲ ದೂರವಿಲ್ಲ.

Best Mobiles in India

English summary
OnePlus may launch its first 5G smartphone on January 15. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+