ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಒನ್‌ಪ್ಲಸ್ ಸಂಸ್ಥೆಯ ಮೊದಲ ಮಾನಿಟರ್!
ಒನ್‌ಪ್ಲಸ್ ಕಂಪೆನಿ ಭಿನ್ನ ಮಾದರಿಯ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಇದೀಗ ಭಾರತದಲ್ಲಿ ತನ್ನ ಮೊದಲ ಮಾನಿಟರ್ ಪರಿಚಯಿಸಲು ಪ್ಲಾನ್ ಮಾಡಿದೆ. ಈ ಮೂಲಕ ಮಾನಿಟರ್ ವಲಯಕ್ಕೂ ಕೂಡ ಕಾಲಿಟ್ಟಿದೆ. ಇನ್ನು ಒನ್‌ಪ್ಲಸ್ ಪ್ರಸ್ತುತ ಎರಡು ಹೊಸ ಮಾನಿಟರ್‌ಗಳನ್ನು ಪರಿಚಯಿಸುತ್ತಿದೆ. ಇವುಗಳನ್ನು ಒನ್‌ಪ್ಲಸ್ ಮಾನಿಟರ್ X27 ಮತ್ತು ಒನ್‌ಪ್ಲಸ್ ಮಾನಿಟರ್ E24 ಎಂದು ಹೆಸರಿಸಲಾಗಿದೆ. ಇನ್ನು ಈ ಹೊಸ ಒನ್‌ಪ್ಲಸ್ ಮಾನಿಟರ್‌ಗಳು ಇದೇ ಡಿಸೆಂಬರ್ 12 ರಂದು ಭಾರತದಲ್ಲಿ ಪ್ರಾರಂಭವಾಗಲಿದೆ.

ಹೌದು, ಒನ್‌ಪ್ಲಸ್ ಕಂಪೆನಿ ಭಾರತದಲ್ಲಿ ಹೊಸ ಮಾನಿಟರ್ ಬಿಡುಗಡೆ ಮಾಡಲು ವೇದಿಕೆ ಸಿದ್ದಪಡಿಸಿದೆ. ಇನ್ನು ಈ ಹೊಸ ಡೆಸ್ಕ್‌ಟಾಪ್ ಮಾನಿಟರ್‌ಗಳ ಫೀಚರ್ಸ್ ಬಿಡುಗಡೆಗೂ ಮುನ್ನವೇ ಬಹಿರಂಗವಾಗಿದೆ. ಇದರಿಂದ ಆಸಕ್ತ ಗ್ರಾಹಕರು ಅಧಿಕೃತ ಒನ್‌ಪ್ಲಸ್ ವೆಬ್‌ಸೈಟ್‌ನಲ್ಲಿ "ನನಗೆ ಸೂಚಿಸು" ಆಯ್ಕೆಯನ್ನು ಆಯ್ಕೆ ಮಾಡಬಹುದು. ಇದರಲ್ಲಿ ಹೊಸ ಒನ್‌ಪ್ಲಸ್ ಮಾನಿಟರ್‌ಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹಾಗಾದ್ರೆ ಒನ್‌ಪ್ಲಸ್ ಕಂಪೆನಿಯ ಹೊಸ ಮಾನಿಟರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ ಮಾನಿಟರ್ X27
ಒನ್‌ಪ್ಲಸ್ ಮಾನಿಟರ್ X27 ಪ್ರೀಮಿಯಂ ವಿಭಾಗವನ್ನು ಪೂರೈಸಲಿದೆ. ಇದು ಗೇಮಿಂಗ್ ಅನ್ನು ಆನಂದಿಸುವ ಬಳಕೆದಾರರಿಗೆ ಸೂಕ್ತವಾಗಿರಲಿದೆ. ಇನ್ನು ಈ ಮಾನಿಟರ್ 27 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ ಉತ್ತಮ ಪ್ರದರ್ಶನ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದ್ದು, ಕೆಲಸದ ಯೋಜನೆಗಳು ಮತ್ತು ಗೇಮಿಂಗ್ ಎರಡಕ್ಕೂ ಸೂಕ್ತವಾಗಿದೆ. ಇದಲ್ಲದೆ ಲೋ ರೆಸ್ಪಾನ್ಸ್ ಟೈಂ ನೊಂದಿಗೆ ಹೆಚ್ಚಿನ ರಿಫ್ರೆಶ್ ರೆಟ್ ಪ್ಯಾನಲ್ ಅನ್ನು ಹೊಂದಿದೆ. ಇದರಿಂದ ಈ ಮಾನಿಟರ್ ಅನ್ನು ಗೇಮಿಂಗ್ ಪ್ರಿಯರಿಗಾಗಿ ತಯಾರಿಸಲಾಗಿದೆ ಎಂದು ಹೇಳಬಹುದು.

ಒನ್‌ಪ್ಲಸ್ ಮಾನಿಟರ್ E24
ಒನ್‌ಪ್ಲಸ್ ಮಾನಿಟರ್ E24 ಹೆಸರೇ ಸೂಚಿಸುವಂತೆ 24 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಎಂಟ್ರಿ ಲೆವೆಲ್ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ಗಳನ್ನು ನೀಡುವ ಮಾನಿಟರ್ ಆಗಿದೆ. ಇದು ದೈನಂದಿನ ನಿಯಮಿತ ಕಾರ್ಯಗಳಿಗೆ ಸೂಕ್ತವಾಗುವಂತೆ ಡಿಸೈನ್ ಮಾಡಲಾಗಿದೆ. ಜೊತೆಗೆ ಮನರಂಜನೆಗಾಗಿ ಕೂಡ ಇದನ್ನು ಬಳಸುವುದಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಇನ್ನು ಒನ್‌ಪ್ಲಸ್ ಕಂಪೆನಿ ಭಾರತದಲ್ಲಿ ಹೊಸ ಮಾನಿಟರ್‌ಗಳನ್ನು ಪರಿಚಯಿಸುತ್ತಿರುವುದಕ್ಕೆ ಉತ್ಸುಕವಾಗಿದ್ದೇವೆ ಎಂದು ಟ್ವೀಟ್ ಮಾಡಿದೆ. ಬಳಕೆದಾರರ ಅನುಭವ ಮತ್ತು ನಮ್ಮ ಉತ್ಪನ್ನಗಳ ವೇಗದ ಮತ್ತು ಸುಗಮ ಕಾರ್ಯಕ್ಷಮತೆಯಿಂದಾಗಿ ನಾವು ಭಾರತದಲ್ಲಿ ಜನಪ್ರಿಯ ಬ್ರ್ಯಾಂಡ್ ಆಗಿದ್ದೇವೆ ಎಂದು ಹೇಳಿಕೊಂಡಿದೆ. ಇದೀಗ ಹೊಸ ಡೆಸ್ಕ್‌ಟಾಪ್ ಮಾನಿಟರ್‌ಗಳ ಮೂಲಕ ನಾವು ಸಕಾರಾತ್ಮಕವಾಗಿದ್ದೇವೆ ಎಂದು ಒನ್‌ಪ್ಲಸ್‌ನ ಸಂಸ್ಥಾಪಕ ಪೀಟ್ ಲಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಲ್ಲದೆ ಒನ್‌ಪ್ಲಸ್ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಒನ್‌ಪ್ಲಸ್ ನಾರ್ಡ್ ಬಡ್ಸ್ CE ಇಯರ್‌ಬಡ್ಸ್ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್ ಕರೆಗಳಿಗಾಗಿ AI ನಾಯ್ಸ್ ಕ್ಯಾನ್ಸಲೇಶನ್ ಟೆಕ್ನಾಲಜಿಯನ್ನು ಹೊಂದಿದೆ. ಅಲ್ಲದೆ ನೀರಿನ ಪ್ರತಿರೋಧಕ್ಕಾಗಿ IPX4 ನ ರೇಟಿಂಗ್ ಅನ್ನು ಒಳಗೊಂಡಿದೆ. ಇನ್ನು ಈ ಇಯರ್‌ಬಡ್ಸ್ 50% ವಾಲ್ಯೂಮ್‌ನಲ್ಲಿ 4.5 ಗಂಟೆಗಳವರೆಗೆ ಆಲಿಸುವ ಸಮಯವನ್ನು ಮತ್ತು 3 ಗಂಟೆಗಳವರೆಗೆ ಫೋನ್ ಕರೆ ಸಮಯವನ್ನು ನೀಡಲಿದೆ ಎಂದು ಹೇಳಲಾಗಿದೆ.

ಒನ್‌ಪ್ಲಸ್ ನಾರ್ಡ್ ಬಡ್ಸ್ CE ಇಯರ್‌ಬಡ್ಸ್ ಚಾರ್ಜಿಂಗ್ ಕೇಸ್‌ನೊಂದಿಗೆ 20 ಗಂಟೆಗಳವರೆಗೆ ಮತ್ತು ಕೇಸ್ ಇಲ್ಲದೆ 4.5 ಗಂಟೆಗಳವರೆಗೆ ಕ್ಲೈಮ್ ಮಾಡಲಾದ ಒಟ್ಟು ಆಲಿಸುವ ಸಮಯವನ್ನು ನೀಡಲಿದೆ. ಈ ಎರಡೂ ಇಯರ್‌ಬಡ್‌ಗಳು ತಲಾ ಒಂದು 27mAh ಬ್ಯಾಟರಿಯನ್ನು ಹೊಂದಿವೆ. ಆದರೆ ಚಾರ್ಜಿಂಗ್ ಕೇಸ್ 300mAh ಬ್ಯಾಟರಿಯನ್ನು ಪಡೆಯುತ್ತದೆ.


Click it and Unblock the Notifications








