Home
ಸುದ್ದಿಜಾಲ

OnePlus Nord 5 ಸರಣಿ ಫೋನ್‌ಗಳ ಬಿಡುಗಡೆ ದಿನಾಂಕ ಸೋರಿಕೆ!

OnePlus Nord 4 ಉತ್ತರಾಧಿಕಾರಿಯಾಗಿ ಬರಲಿರುವ ಮುಂಬರುವ OnePlus Nord 5 ಸರಣಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಕುರಿತಂತೆ ಜನಪ್ರಿಯ ಟಿಪ್‌ಸ್ಟಾರ್ ಯೋಗೇಶ್ ಬ್ರಾರ್ ಅವರು ಪ್ರಮುಖ ಮಾಹಿತಿಯನ್ನು ಹೊರಹಾಕಿದ್ದಾರೆ. OnePlus Nord 5 ಸರಣಿಯಲ್ಲಿ OnePlus Nord 5 ಮತ್ತು OnePlus Nord CE 5 ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ದಿನಾಂಕದ ಬಗ್ಗೆ ಯೋಗೇಶ್ ಬ್ರಾರ್ ಅವರು ಸುಳಿವು ನೀಡಿದ್ದು, ಹಲವಾರು ವದಂತಿಗಳ ಸಾಲಿಗೆ ಈ ಹೊಸ ವಿಷಯವು ಸೇರಿಕೊಂಡಿದೆ ಮತ್ತು ತಂತ್ರಜ್ಞಾನ ವಲಯದಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

ಯೋಗೇಶ್ ಬ್ರಾರ್ ಅವರು X (ಹಿಂದೆ ಟ್ವಿಟರ್) ನಲ್ಲಿನ ತಮ್ಮ ಪೋಸ್ಟ್‌ನಲ್ಲಿ, OnePlus Nord 5 ಮತ್ತುOnePlus Nord CE 5 ಸ್ಮಾರ್ಟ್‌ಫೋನ್‌ಗಳು ಜುಲೈ 8 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಈ ಬಿಡುಗಡೆಯು ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಒಂದೇ ದಿನಾಂಕದಂದು ನಡೆಯಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಮಾಹಿತಿ ಲೀಕ್ ಆಗಿದ್ದರೂ, ಒನ್‌ಪ್ಲಸ್ ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಹಲವಾರು ವರದಿಗಳು ಈಗಾಗಲೇ OnePlus Nord 5 ಸರಣಿ ಫೋನ್‌ಗಳ ಫೀಚರ್ಸ್ ಅನ್ನು ಬಹಿರಂಗಪಡಿಸಿವೆ.

OnePlus Nord 5: ನಿರೀಕ್ಷಿತ ವೈಶಿಷ್ಟ್ಯಗಳು
ವರದಿಗಳ ಪ್ರಕಾರ, OnePlus Nord 5 ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್‌ನೊಂದಿಗೆ ಫ್ಲಾಟ್ OLED ಪರದೆಯನ್ನು ಹೊಂದಿರಬಹುದು. ಇದು MediaTek Dimensity 9400e ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕ್ಯಾಮೆರಾಗಳ ವಿಷಯದಲ್ಲಿ, ಇದು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಇದು 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿರಬಹುದು. ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ, ಇದು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,650mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು ಎಂದು ಅಂದಾಜಿಸಲಾಗಿದೆ.

OnePlus Nord 5 ಸರಣಿ ಫೋನ್‌ಗಳ ಬಿಡುಗಡೆ ದಿನಾಂಕ ಸೋರಿಕೆ!

OnePlus Nord CE 5: ನಿರೀಕ್ಷಿತ ವೈಶಿಷ್ಟ್ಯಗಳು
ಮತ್ತೊಂದೆಡೆ, OnePlus Nord CE 5 ಸ್ಮಾರ್ಟ್‌ಫೋನ್ 1080p ರೆಸಲ್ಯೂಶನ್‌ನೊಂದಿಗೆ 6.7-ಇಂಚಿನ ಫ್ಲಾಟ್ OLED ಪ್ಯಾನೆಲ್‌ನೊಂದಿಗೆ ಬರಬಹುದು ಎಂದು ಊಹಿಸಲಾಗಿದೆ. ಈ ಹ್ಯಾಂಡ್‌ಸೆಟ್‌ಗೆ 4nm ಡೈಮೆನ್ಸಿಟಿ 8350 SoC ನೀಡಬಹುದಾಗಿದ್ದು, ಇದು 8GB RAM ಮತ್ತು 256GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಡುತ್ತದೆ. ಕ್ಯಾಮೆರಾ ವಿಭಾಗದಲ್ಲಿ, ಇದು ಸೋನಿ LYT-600 ಅಥವಾ IMX882 ಸಂವೇದಕದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿರಬಹುದು. ಸೆಲ್ಫಿಗಳಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇರಬಹುದು. ಬ್ಯಾಟರಿ ಸಾಮರ್ಥ್ಯವು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 7,100mAh ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಒನ್‌ಪ್ಲಸ್ ನಾರ್ಡ್ 5 ಬೆಲೆ (ನಿರೀಕ್ಷಿತ)
ಕೆಲವು ವರದಿಗಳು ಭಾರತದಲ್ಲಿ ಒನ್‌ಪ್ಲಸ್ ನಾರ್ಡ್ 5 ನ ಬೆಲೆ ಸುಮಾರು ರೂ. 30,000 ಆಗಿರಬಹುದು ಎಂದು ಸೂಚಿಸಿವೆ. ಆದಾಗ್ಯೂ, ಇದು ಕೇವಲ ನಿರೀಕ್ಷಿತ ಬೆಲೆಯಾಗಿದ್ದು, ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಎಲ್ಲಾ ಮಾಹಿತಿ ಲೀಕ್‌ಗಳು ಮತ್ತು ವದಂತಿಗಳು ಒನ್‌ಪ್ಲಸ್ ನಾರ್ಡ್ 5 ಸರಣಿಯ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಅಧಿಕೃತ ಬಿಡುಗಡೆಗಾಗಿ ಕಾಯಬೇಕಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
A tipster has suggested a potential launch date for the OnePlus Nord 5 and Nord CE 5K smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+