Home
ಸುದ್ದಿಜಾಲ

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಬಿಡುಗಡೆ! ಮಾರುಕಟ್ಟೆಯಲ್ಲಿ ಟ್ರೆಂಡ್‌ ಸೃಷ್ಟಿಸೋದು ಗ್ಯಾರಂಟಿ!

ಭಾರತದ ಟೆಕ್‌ ವಲಯದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಬಿಡುಗಡೆಯಾಗಿದೆ. ಇನ್ನು ಈ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಒಳಗೊಂಡಿದೆ. ಇದರ ಕನೆಕ್ಟಿವಿಟಿ, ಬ್ಯಾಟರಿ ಬ್ಯಾಕ್‌ಅಪ್‌ ಮತ್ತು ಇಯರ್‌ಪೀಸ್‌ಗಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೌದು, ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP55 ರೇಟಿಂಗ್‌ ಅನ್ನು ಒಳಗೊಂಡಿದೆ. ಇದರ ವಿನ್ಯಾಸ ಬೇಸಿಕ್‌ ನಾರ್ಡ್‌ ಬಡ್ಸ್‌ನಂತೆಯೇ ಇದ್ದು, ಇಯರ್‌ಫೀಸ್‌ಗಳಲ್ಲಿ ಕಸ್ಟಮೈಸ್‌ ಮಾಡಬಹುದಾದ ಟಚ್‌ ಕಂಟ್ರೋಲ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಬಿಡುಗಡೆ! ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌!

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಫೀಚರ್ಸ್‌ ಹೇಗಿದೆ?

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ಟ್ರೂಲಿ ವಾಯರ್‌ಲೆಸ್‌ ಹೆಡ್‌ಸೆಟ್‌ ಇದಾಗಿದೆ. ಇನ್ನು ಇಯರ್‌ಬಡ್ಸ್‌ ಇನ್-ಕೆನಾಲ್ ಇಯರ್‌ಫೋನ್‌ಗಳನ್ನು ಧರಿಸಿದಾಗ ಆಂಬಿಯೆಂಟ್‌ ಆಲಿಸುವಿಕೆಗೆ ಸಹಾಯ ಮಾಡುವುದಕ್ಕಾಗಿ ಇಯರ್‌-ಥ್ರೋ ಮೋಡ್ ಅನ್ನು ನೀಡಲಾಗಿದೆ.

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಯಾಕೆ ವಿಭಿನ್ನವಾಗಿದೆ

ಈ ಇಯರ್‌ಫೋನ್‌ಗಳು ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP55 ರೇಟಿಂಗ್‌ ಅನ್ನು ಪಡೆದಿದೆ. ಇದರಲ್ಲಿರುವ ಈಕ್ವಲೈಜರ್ ಸೆಟ್ಟಿಂಗ್‌ಗಳು ಮತ್ತು ಕಡಿಮೆ ಲೇಟೆನ್ಸಿ ಗೇಮ್ ಮೋಡ್ ಆಯ್ಕೆಗಳನ್ನು HeyMelody ಅಪ್ಲಿಕೇಶನ್ ಮೂಲಕ ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗಿದೆ.

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಬಿಡುಗಡೆ! ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌!

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಕನೆಕ್ಟಿವಿಟಿ ಆಯ್ಕೆ ಹೇಗಿದೆ?

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಬ್ಯಾಟರಿ ಬಾಳಿಕೆ ಸಾಕಷ್ಟು ಅಡ್ವಾನ್ಸ್‌ ಆಗಿದೆ. ಇನ್ನು ಕನೆಕ್ಟಿವಿಟಿ ಮತ್ತು ಸೌಂಡ್‌ ಸಿಸ್ಟಂನಲ್ಲಿಯೂ ಸಹ ಸಾಕಷ್ಟು ಸುಧಾರಿತ ಫೀಚರ್ಸ್‌ಗಳನ್ನು ಅಳವಡಿಸಲಾಗಿದೆ. ಈ ಇಯರ್‌ಫೋನ್‌ SBC ಮತ್ತು AAC ಬ್ಲೂಟೂತ್ ಕೊಡೆಕ್‌ಗಳಿಗೆ ಬೆಂಬಲಿಸಲಿದೆ. ಇದಕ್ಕಾಗಿ ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದೆ. ಇದರ ಒನ್‌ಪ್ಲಸ್‌ ಫಾಸ್ಟ್ ಪೇರ್‌ಗೆ ಬೆಂಬಲಿಸಲಿದೆ. ಇದರೊಂದಿಗೆ USB ಟೈಪ್-ಸಿ ಪೋರ್ಟ್ ಮತ್ತು 12.4mm ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಒಳಗೊಂಡಿದೆ.

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಬಿಡುಗಡೆ! ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌!

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2 ಭಾರತದಲ್ಲಿ 2,999ರೂ. ಬೆಲೆಯನ್ನು ಹೊಂದಿದೆ. ಇದು ಇದೇ ಏಪ್ರಿಲ್ 11 ರಂದು ಮಾರಾಟವಾಗಲಿದೆ. ಇದನ್ನು ನೀವು ಬಿಳಿ ಮತ್ತು ಬೂದು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಈ ಇಯರ್‌ಬಡ್ಸ್‌ ಅನ್ನು ಒನ್‌ಪ್ಲಸ್‌ ಆನ್‌ಲೈನ್ ಸ್ಟೋರ್, ಅಮೆಜಾನ್‌, ಫ್ಲಿಪ್‌ಕಾರ್ಟ್‌, Myntra, ಒನ್‌ಪ್ಲಸ್‌ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ಆಯ್ದ ಪಾಲುದಾರ ಸ್ಟೋರ್‌ಗಳ ಮೂಲಕ ಖರೀದಿಗೆ ಬರಲಿದೆ.

ಇದರೊಂದಿಗೆ ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ನಲ್ಲಿ ಆಕ್ಸಿಜನ್‌ OS 13.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ HM6 ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 67W ಸೂಪರ್‌ ವೂಕ್‌ ವೈರ್ಡ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

Best Mobiles in India

English summary
OnePlus Nord Buds 2 are priced slightly higher than the launch price of the original OnePlus Nord Buds.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+