Home
ಸುದ್ದಿಜಾಲ

ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌2R ಎಂಟ್ರಿಗೆ ಮುಹೂರ್ತ ಫಿಕ್ಸ್‌!

ಭಾರತದಲ್ಲಿ ಒನ್‌ಪ್ಲಸ್‌ ಕಂಪೆನಿ ಹೊಸ ಒನ್‌ಪ್ಲಸ್‌ ನಾರ್ಡ್‌ 3 ಬಿಡುಗಡೆಗೆ ತಯಾರಿ ನಡೆಸಿದೆ. ಇದೇ ಸಂದರ್ಭದಲ್ಲಿ ಡಬ್ಬಲ್‌ ಧಮಾಕ ಸುದ್ದಿ ನೀಡಿದೆ. ಅದೇನೆಂದರೆ ಒನ್‌ಪ್ಲಸ್‌ ನಾರ್ಡ್‌ 3 ಜೊತೆಗೆ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌2R ಅನ್ನು ಕೂಡ ಭಾರತದಲ್ಲಿ ಲಾಂಚ್‌ ಮಾಡಲು ಪ್ಲ್ಯಾನ್‌ ಮಾಡಿದೆ ಎನ್ನಲಾಗಿದೆ.

ಹೌದು, ಒನ್‌ಪ್ಲಸ್‌ ಕಂಪೆನಿ ಇದೇ ಜುಲೈ 5 ರಂದು ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌2R ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಈಗಾಗಲೇ ಈ ಇಯರ್‌ಬಡ್ಸ್‌ ವಿನ್ಯಾಸ ಮತ್ತು ಕಲರ್‌ ಆಯ್ಕೆಗಳ ಬಗ್ಗೆ ಅಮೆಜಾನ್‌ ಪ್ರಾಡಕ್ಟ್‌ ಲಿಸ್ಟ್‌ನಲ್ಲಿ ಬಹಿರಂಗಪಡಿಸಲಾಗಿದೆ. ಹಾಗಾದ್ರೆ ಅಮೆಜಾನ್‌ನಲ್ಲಿ ಲಿಸ್ಟ್‌ನಲ್ಲಿ ಬಹಿರಂಗವಾದ ಮಾಹಿತಿ ಪ್ರಕಾರ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌2R ಎಂಟ್ರಿಗೆ ಮುಹೂರ್ತ ಫಿಕ್ಸ್‌!

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌2R ವಿಶೇಷತೆ ಏನು?
ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌2R ಇಯರ್‌ಬಡ್ಸ್‌ ಇನ್-ಕೆನಾಲ್ ವಿನ್ಯಾಸವನ್ನು ಹೊಂದಿವೆ ಎನ್ನಲಾಗಿದೆ. ಈ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದು 12.4mm ಟೈಟಾನಿಯಂ ಆಡಿಯೋ ಡ್ರೈವರ್‌ನೊಂದಿಗೆ ಬರಲಿದ್ದು, ದೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP55 ರೇಟಿಂಗ್ ಅನ್ನು ಹೊಂದಿರಲಿದೆ. ಜೊತೆಗೆ ಈ ಇಯರ್‌ಬಡ್ಸ್‌ ಒನ್‌ಪ್ಲಸ್‌ ಫಾಸ್ಟ್ ಪೇರ್ ಬೆಂಬಲಿಸಲಿದೆ.

ಇನ್ನು ಡ್ಯುಯಲ್ ಮೈಕ್ರೊಫೋನ್‌ಗಳು, 94ms ಲೋ ಲೇಟೆನ್ಸಿ ಮೋಡ್‌ ಅನ್ನು ಹೊಂದಿರಲಿದೆ. ಮ್ಯೂಸಿಕ್‌ ಕಂಟ್ರೋಲ್‌ಗಾಗಿ ಟಚ್‌ ಕಂಟ್ರೋಲ್‌ಗಳನ್ನು ಸಹ ಒಳಗೊಂಡಿದೆ. ಇದು ಬ್ಲೂಟೂತ್ v5.3 ಬೆಂಬಲ, ಬಾಸ್‌ವೇವ್ ವರ್ಧನೆ ಅಲ್ಗಾರಿದಮ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಪಡೆದಿರಲಿದೆ ಎಂದು ವರದಿಯಾಗಿದೆ. ಇನ್ನು ಈ ಇಯರ್‌ಬಡ್ಸ್‌ ANC ಆಫ್‌ ಇದ್ದಾಗ 7 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದ್ದು, ANC ಆನ್‌ ಇದ್ದಾಗ 5 ಗಂಟೆಗಳ ಬ್ಯಾಟರಿ ಅವಧಿ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಸದ್ಯ ಅಮೆಜಾನ್ ಸೈಟ್‌ನಲ್ಲಿ ಒನ್‌ಪ್ಲಸ್‌ ನಾರ್ಡ್‌ ಬಡ್ಸ್ 2R ಗಾಗಿ ಉತ್ಪನ್ನ ಪುಟವನ್ನು ಲೈವ್ ಮಾಡಿದೆ. ಇದು ಶೀಘ್ರದಲ್ಲೇ ಈ ಇಯರ್‌ಬಡ್ಸ್‌ ಲಾಂಚ್‌ ಆಗೋದನ್ನು ದೃಢೀಕರಿಸಿದೆ. ಹಲವು ಆನ್‌ಲೈನ್‌ ಸೋರಿಕೆ ವರದಿಗಳ ನಂತರ ಈ ಸುದ್ದಿ ಕನ್ಫರ್ಮ್‌ ಆಗಿದೆ. ಅದರಂತೆ ಅಮೆಜಾನ್ ಮೈಕ್ರೋಸೈಟ್‌ ಕೂಡ ಇಯರ್‌ಬಡ್ಸ್‌ಗಳ ಚಿತ್ರವನ್ನು ಹಂಚಿಕೊಂಡಿದೆ. ಆದರೆ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿಲ್ಲ. ಸದ್ಯ ಉತ್ಪನ್ನ ಪುಟವು ಮುಂಬರುವ ಇಯರ್‌ಬಡ್‌ಗಳ ವಿನ್ಯಾಸ ಮತ್ತು ಬಣ್ಣ ಆಯ್ಕೆಗಳನ್ನು ಸಹ ಬಹಿರಂಗಪಡಿಸಿದೆ.

ಇನ್ನು ಈ ನಡುವೆ ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌ ಜೂನ್ ಮತ್ತು ಜುಲೈ ನಡುವೆ ಬಿಡುಗಡೆಯಾಗಬಹುದು ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದ್ದು, 1,080x2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಬಹುದು ಎನ್ನಲಾಗಿದೆ. ಜೊತೆಗೆ 120Hz ರಿಫ್ರೆಶ್‌ ರೇಟ್‌ ಹೊಂದಿರಲಿದ್ದು, ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.

ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಡೈಮೆನ್ಸಿಟಿ 9000SoC ಪ್ರೊಸೆಸರ್‌ನಲ್ಲಿ ವೇಗವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ 16GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
OnePlus Nord Buds 2R Launch date Set For July 5 in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+