Home
ಸುದ್ದಿಜಾಲ

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ CE ಇಯರ್‌ಬಡ್ಸ್‌ ಲಾಂಚ್‌! ಬಿಗ್‌ ಬ್ಯಾಟರಿ ಬ್ಯಾಕಪ್‌!

ಟೆಕ್‌ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಕಂಪೆನಿ ವಿವಿಧ ಗ್ಯಾಜೆಟ್ಸ್‌ಗಳ ಮೂಲಕ ಗುರುತಿಸಿಕೊಂಡಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ಸ್ಮಾರ್ಟ್‌ಟಿವಿ, ಇಯರ್‌ಬಡ್ಸ್‌ ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ತನ್ನ ಹೊಸ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ CE ಇಯರ್‌ಬಡ್ಸ್‌ ಲಾಂಚ್‌ ಮಾಡಿದೆ. ಈ ಇಯರ್‌ಬಡ್ಸ್‌ 13.4mm ಡೈನಾಮಿಕ್ ಡ್ರೈವರ್‌ಗಳು ಮತ್ತು 94ms ಅಲ್ಟ್ರಾ-ಲೋ ಲೇಟೆನ್ಸಿಯನ್ನು ಹೊಂದಿದೆ.

ಒನ್‌ಪ್ಲಸ್‌ ಕಂಪೆನಿ

ಹೌದು, ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಹೊಸ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ CE ಇಯರ್‌ಬಡ್ಸ್‌ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಕರೆಗಳಿಗಾಗಿ AI ನಾಯ್ಸ್‌ ಕ್ಯಾನ್ಸಲೇಶನ್‌ ಟೆಕ್ನಾಲಜಿಯನ್ನು ಹೊಂದಿದೆ. ಅಲ್ಲದೆ ನೀರಿನ ಪ್ರತಿರೋಧಕ್ಕಾಗಿ IPX4 ನ ರೇಟಿಂಗ್ ಅನ್ನು ಒಳಗೊಂಡಿದೆ. ಇನ್ನು ಈ ಇಯರ್‌ಬಡ್ಸ್‌ 50% ವಾಲ್ಯೂಮ್‌ನಲ್ಲಿ 4.5 ಗಂಟೆಗಳವರೆಗೆ ಆಲಿಸುವ ಸಮಯವನ್ನು ಮತ್ತು 3 ಗಂಟೆಗಳವರೆಗೆ ಫೋನ್ ಕರೆ ಸಮಯವನ್ನು ನೀಡಲಿದೆ ಎಂದು ಹೇಳಲಾಗಿದೆ.

ಒನ್‌ಪ್ಲಸ್‌

ಇನ್ನು ಒನ್‌ಪ್ಲಸ್‌ ನಾರ್ಡ್ ಬಡ್ಸ್‌ CE ಇಯರ್‌ಬಡ್ಸ್‌ ಚಾರ್ಜಿಂಗ್ ಕೇಸ್‌ನೊಂದಿಗೆ 20 ಗಂಟೆಗಳವರೆಗೆ ಮತ್ತು ಕೇಸ್ ಇಲ್ಲದೆ 4.5 ಗಂಟೆಗಳವರೆಗೆ ಕ್ಲೈಮ್ ಮಾಡಲಾದ ಒಟ್ಟು ಆಲಿಸುವ ಸಮಯವನ್ನು ನೀಡಲಿದೆ. ಈ ಎರಡೂ ಇಯರ್‌ಬಡ್‌ಗಳು ತಲಾ ಒಂದು 27mAh ಬ್ಯಾಟರಿಯನ್ನು ಹೊಂದಿವೆ. ಆದರೆ ಚಾರ್ಜಿಂಗ್ ಕೇಸ್ 300mAh ಬ್ಯಾಟರಿಯನ್ನು ಪಡೆಯುತ್ತದೆ. ಇನ್ನು ಈ ಇಯರ್‌ಬಡ್ಸ್‌ ಒನ್‌ಪ್ಲಸ್‌ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಆಗಸ್ಟ್ 4 ರಂದು ಮಧ್ಯಾಹ್ನ 12 ಗಂಟೆಗೆ ಮೊದಲ ಸೇಲ್‌ ನಡೆಸಲಿದೆ. ಇನ್ನುಳಿದಂತೆ ಈ ಹೊಸ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒನ್‌ಪ್ಲಸ್‌

ಒನ್‌ಪ್ಲಸ್‌ ಕಂಪೆನಿಯ ಹೊಸ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ CE ಮ್ಯೂಸಿಕ್‌ ಪ್ರಿಯರಿಗೆ ಸೂಕ್ತವಾದ ವಿನ್ಯಾಸವನ್ನು ಹೊಂದಿದೆ. ಒನ್‌ಪ್ಲಸ್‌ ನಾರ್ಡ್ ಬಡ್ಸ್‌ CE ಇಯರ್‌ಬಡ್ಸ್‌ ಕರೆಗಳಿಗಾಗಿ AI ನಾಯ್ಸ್‌ ಕ್ಯಾನ್ಸಲೇಶನ್‌ ಟೆಕ್ನಾಲಜಿಯನ್ನು ಹೊಂದಿದೆ. ಹಾಗೆಯೇ ನೀರಿನ ಪ್ರತಿರೋಧಕ್ಕಾಗಿ IPX4 ನ ರೇಟಿಂಗ್ ಅನ್ನು ಒಳಗೊಂಡಿವೆ. ಜೊತೆಗೆ ಒನ್‌ಪ್ಲಸ್‌ ನಾರ್ಡ್ ಬಡ್ಸ್‌ CE ಇಯರ್‌ಬಡ್ಸ್‌ 20Hz ನಿಂದ 20,000Hz ಫ್ರೀಕ್ವೆನ್ಸಿ ರೆಸ್ಪಾನ್ಸ್‌ ಅನ್ನು ಹೊಂದಿದ್ದು, 13.4mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ.

ಒನ್‌ಪ್ಲಸ್‌

ಇನ್ನು ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ CE ಬ್ಲೂಟೂತ್ 5.2 ಅನ್ನು ಬೆಂಬಲಿಸಲಿದೆ. ಇದು 10m ವಾಯರ್‌ಲೆಸ್ ರೇಂಜ್‌ ನೀಡಲಿದೆ. ಇದು AAC ಮತ್ತು SBC ಆಡಿಯೊ ಸ್ವರೂಪಗಳಿಗೆ ಬೆಂಬಲವನ್ನು ಸಹ ನೀಡಲಿದೆ. ಈ TWS ಇಯರ್‌ಬಡ್ಸ್‌ 94ms ಅಲ್ಟ್ರಾ-ಲೋ ಲೇಟೆನ್ಸಿಯನ್ನು ಹೊಂದಿದೆ. ಇದು ಕನೆಕ್ಟ್‌ ಆಗಿರುವ ಸ್ಮಾರ್ಟ್‌ಫೋನ್ ಅನ್ನು ಆಧರಿಸಿ ಬದಲಾಗಬಹುದು. ಈ ಇಯರ್‌ಬಡ್ಸ್‌ಗಳನ್ನು ಕಂಪ್ಲೀಟ್‌ ಚಾರ್ಜ್‌ ಮಾಡಿದಾಗ 50% ವಾಲ್ಯೂಮ್‌ನಲ್ಲಿ 4.5 ಗಂಟೆಗಳವರೆಗಿನ ಆಲಿಸುವ ಸಮಯವನ್ನು ನೀಡಲಿದೆ. ಹಾಗೆಯೇ 3 ಗಂಟೆಗಳವರೆಗೆ ಫೋನ್ ಕಾಲ್‌ ಟೈಂ ಅನ್ನು ನೀಡಲಿದೆ.

ಇಯರ್‌ಬಡ್ಸ್‌

ಇದಲ್ಲದೆ ಈ ಇಯರ್‌ಬಡ್ಸ್‌ ಚಾರ್ಜಿಂಗ್ ಕೇಸ್‌ನೊಂದಿಗೆ, ಫುಲ್‌ ಚಾರ್ಜ್ ಮಾಡಿದಾಗ ಮತ್ತು 50 ಪ್ರತಿಶತ ವಾಲ್ಯೂಮ್‌ನಲ್ಲಿ ಪ್ಲೇ ಮಾಡಿದಾಗ 20 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ನೀಡಲಿದೆ. ಚಾರ್ಜಿಂಗ್‌ ಕೇಸ್‌ನೊಂದಿಗೆ ಸೇರಿ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 81 ನಿಮಿಷಗಳವರೆಗೆ ಪ್ಲೇಬ್ಯಾಕ್ ನೀಡಲಿದೆ ಎಂದು ಒನ್‌ಪ್ಲಸ್‌ ಹೇಳಿಕೊಂಡಿದೆ. ಜೊತೆಗೆ ಈ ಎರಡೂ ಇಯರ್‌ಬಡ್ಸ್‌ಗಳು ತಲಾ ಒಂದು 27mAhಬ್ಯಾಟರಿಯನ್ನು ಪ್ಯಾಕ್ ಮಾಡುತ್ತವೆ. ಆದರೆ ಚಾರ್ಜಿಂಗ್ ಕೇಸ್ 300mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ ಎಂದು ಒನ್‌ಪ್ಲಸ್‌ ಕಂಪೆನಿ ಹೇಳಿಕೊಂಡಿದೆ.

ಒನ್‌ಪ್ಲಸ್‌

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ CE ಇಯರ್‌ ಬಡ್ಸ್‌ ವೇಗದ ಜೋಡಿ ಫೀಚರ್ಸ್‌ ಅನ್ನು ನೀಡುತ್ತದೆ. ಇದು ಇಯರ್‌ಬಡ್‌ಗಳನ್ನು ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕನೆಕ್ಟ್‌ ಮಾಡಲು ಅನುಮತಿಸುತ್ತದೆ. ಇದಕ್ಕಾಗಿ ಸೌಂಡ್ ಮಾಸ್ಟರ್ ಈಕ್ವಲೈಸರ್ ಅನ್ನು ನೀಡಲಾಗಿದೆ. ಅಲ್ಲದೆ HeyMelody ಅಪ್ಲಿಕೇಶನ್‌ಗೆ ಸಹ ಹೊಂದಿಕೊಳ್ಳಲಿದೆ. ಇನ್ನು ಈ ಇಯರ್‌ಬಡ್ಸ್‌ಗಳು ಸುಮಾರು 3.5g ತೂಗುತ್ತದೆ ಮತ್ತು ಚಾರ್ಜಿಂಗ್ ಕೇಸ್ ಸುಮಾರು 33g ತೂಕವನ್ನು ಹೊಂದಿದೆ.

ಒನ್‌ಪ್ಲಸ್‌

ಇನ್ನು ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ CE ಇಯರ್‌ ಬಡ್ಸ್‌ಗಳು ಅಧಿಕೃತ ಕಂಪನಿಯ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಆಗಸ್ಟ್ 4ರ ಮಧ್ಯಾಹ್ನ 12 ಗಂಟೆಗೆ ಸೇಲ್‌ ಆಗಲಿದೆ. ಇದು ಭಾರತದಲ್ಲಿ MRP ಬೆಲೆ 2,699ರೂ. ಆಗಿದ್ದು, ಲಾಂಚ್‌ ಆಫರ್‌ನಲ್ಲಿ 2,299ರೂ. ಬೆಲೆಗೆ ದೊರೆಯಲಿದೆ. ಇದು ಮೂನ್‌ಲೈಟ್ ವೈಟ್ ಮತ್ತು ಮಿಸ್ಟಿ ಗ್ರೇ ಬಣ್ಣದ ಆಯ್ಕೆಗಳನ್ನು ಒಳಗೊಂಡಿದೆ.

ಒನ್‌ಪ್ಲಸ್‌

ಇನ್ನು ಒನ್‌ಪ್ಲಸ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ 2T 5G ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲವನ್ನು ಹೊಂದಿದೆ.

ಒನ್‌ಪ್ಲಸ್‌

ಒನ್‌ಪ್ಲಸ್‌ ನಾರ್ಡ್‌ 2T 5G ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS/ NavIC, NFC, ಮತ್ತು USB ಟೈಪ್-C ಪೋರ್ಟ್ ಸೇರಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್‌ ಮತ್ತು SAR ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಫೋನ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿದೆ.

Best Mobiles in India

English summary
OnePlus Nord Buds CE With Bluetooth 5.2 Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+