Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಸಿಹಿಸುದ್ದಿ! ಒನ್‌ಪ್ಲಸ್‌ನ ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

ಒನ್‌ಪ್ಲಸ್‌ ಕಂಪೆನಿ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದೆ. ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಒನ್‌ಪ್ಲಸ್‌ ನಾರ್ಡ್‌ CE 3 5G ಸ್ಮಾರ್ಟ್‌ಫೋನ್‌ ಬೆಲೆಯನ್ನು ಕಡಿತಗೊಳಿಸಿದೆ. ಈ ಮೂಲಕ ಒನ್‌ಪ್ಲಸ್‌ ನಾರ್ಡ್‌ CE 3 5G ಫೋನ್‌ ಖರೀದಿಸುವುದಕ್ಕೆ ಒಳ್ಳೆಯ ಅವಕಾಶವನ್ನು ನೀಡಿದೆ.

ಹೌದು, ಒನ್‌ಪ್ಲಸ್‌ ನಾರ್ಡ್‌ CE 3 5G ಸ್ಮಾರ್ಟ್‌ಫೋನ್‌ ಬೆಲೆ ಕಡಿತಗೊಂಡಿದೆ. ಇದು 8GB RAM + 128GB ಸ್ಟೋರೇಜ್ ಆಯ್ಕೆಗೆ ಅನ್ವಯವಾಗಲಿದೆ. ಇದರಿಂದ ಭಾರತದ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 5G ಮತ್ತೊಮ್ಮೆ ಅಬ್ಬರಿಸುವುದಕ್ಕೆ ಮುಂದಾಗಿದೆ. ಹಾಗಾದ್ರೆ ಒನ್‌ಪ್ಲಸ್‌ ನಾರ್ಡ್‌ CE 3 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಎಷ್ಟು ಕಡಿತವಾಗಿದೆ? ಇದು ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಸಿಹಿಸುದ್ದಿ! ಈ ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

ಒನ್‌ಪ್ಲಸ್‌ ನಾರ್ಡ್‌ CE 3 5G ಬೆಲೆ ಕಡಿತ?
ಒನ್‌ಪ್ಲಸ್‌ ನಾರ್ಡ್‌ CE 3 5G ಸ್ಮಾರ್ಟ್‌ಫೋನ್‌ನ 8GB RAM + 128GB ಸ್ಟೋರೇಜ್‌ ಆಯ್ಕೆಯ ಬೆಲೆಯಲ್ಲಿ 2,000ರೂ ಗಳಷ್ಟು ಕಡಿತವಾಗಿದೆ. ಇದರಿಂದ 26,999ರೂ ಬೆಲೆಯಲ್ಲಿ ಲಭ್ಯವಾಗುತ್ತಿದ್ದ ಈ ಸ್ಮಾರ್ಟ್‌ಫೋನ್‌ ಇದೀಗ 24,999ರೂ ಬೆಲೆಗೆ ಖರೀದಿಸಬಹುದಾಗಿದೆ. ಇದರೊಂದಿಗೆ 12GB RAM +256GB ಸ್ಟೋರೇಜ್ ಸಾಮರ್ಥ್ಯದ ಟಾಪ್ ಎಂಡ್ ಮಾಡೆಲ್ 28,999ರೂ. ಬದಲಿಗೆ 27,999ರೂ ಬೆಲೆಯಲ್ಲಿ ದೊರೆಯಲಿದೆ. ಇದನ್ನು ಆಕ್ವಾ ಸರ್ಜ್ ಮತ್ತು ಗ್ರೇ ಶಿಮ್ಮರ್ ಶೇಡ್‌ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪ್ರಸ್ತುತ ಈ ಹೊಸ ಬೆಲೆಯನ್ನು ಅಮೆಜಾನ್‌ ತಾಣದಲ್ಲಿ ಪಟ್ಟಿ ಮಾಡಲಾಗಿದೆ.

ಒನ್‌ಪ್ಲಸ್‌ ನಾರ್ಡ್‌ CE 3 5G ಫೀಚರ್ಸ್‌ ಹೇಗಿದೆ?
ಒನ್‌ಪ್ಲಸ್‌ ನಾರ್ಡ್‌ CE 3 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 87.9% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಸಿಹಿಸುದ್ದಿ! ಈ ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

ಒನ್‌ಪ್ಲಸ್‌ ನಾರ್ಡ್‌ CE 3 5G ಪ್ರೊಸೆಸರ್‌ ಯಾವುದು?
ಒನ್‌ಪ್ಲಸ್‌ ನಾರ್ಡ್‌ CE 3 5G ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 782G SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM + 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ 12GB RAM +256GB ಸ್ಟೋರೇಜ್ ವೇರಿಯೆಂಟ್‌ ಆಯ್ಕೆಯಲ್ಲಿಯೂ ಕೂಡ ದೊರೆಯಲಿದೆ.

ಒನ್‌ಪ್ಲಸ್‌ ನಾರ್ಡ್‌ CE 3 5G ಕ್ಯಾಮೆರಾ ಸೆಟ್‌ಅಪ್‌
ಒನ್‌ಪ್ಲಸ್‌ ನಾರ್ಡ್‌ CE 3 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ 4cm ಮ್ಯಾಕ್ರೋ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಸಿಹಿಸುದ್ದಿ! ಈ ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

ಒನ್‌ಪ್ಲಸ್‌ ನಾರ್ಡ್‌ CE 3 5G ಬ್ಯಾಟರಿ ಮತ್ತು ಇತರೆ
ಒನ್‌ಪ್ಲಸ್‌ ನಾರ್ಡ್‌ CE 3 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W SuperVOOC ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ 5.2, NFC, GPS, A-GPS ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌, ಇ-ಕಂಪಾಸ್‌, ಐಆರ್ ಬ್ಲಾಸ್ಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್‌ ಮತ್ತು ಟೆಂಪ್‌ರೇಚರ್‌ ಸೆನ್ಸಾರ್‌ ಒಳಗೊಂಡಿದೆ.

ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 5G ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 5G ಸ್ಮಾರ್ಟ್‌ಫೋನ್‌ 8GB RAM + 128GB ಸ್ಟೋರೇಜ್ ಆಯ್ಕೆಯು ಪ್ರಸ್ತುತ 24,999ರೂ ಬೆಲೆಯಲ್ಲಿ ಬರಲಿದೆ.

Best Mobiles in India

English summary
OnePlus Nord CE 3 5G Smartphone Receives Massive Price Cut in India: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+