Home
ಸುದ್ದಿಜಾಲ

ಜೂನ್ 24 ರಂದು OnePlus Nord CE 4 Lite ಲಾಂಚ್; 50MP ಸೋನಿ LYTIA ಕ್ಯಾಮೆರಾ ಫಿಕ್ಸ್‌ !

ಜಾಗತಿಕ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ (OnePlus Smartphones) ವಿಶೇಷ ಬೇಡಿಕೆ ಇದೆ. ತನ್ನ ಅತ್ಯಾಕರ್ಷಕ ಫೀಚರ್ಸ್‌ ಮೂಲಕ ಎಲ್ಲಾ ವರ್ಗದವರನ್ನು ಸೆಳೆಯುವಲ್ಲಿ ಒನ್‌ಪ್ಲಸ್ ಸಂಸ್ಥೆಯ ಫೋನ್‌ಗಳು ಯಶಸ್ವಿಯಾಗಿವೆ. ಒನ್‌ಪ್ಲಸ್‌ನ ಹೊಸ ಸರಣಿಯ ಮೊಬೈಲ್‌ಗಳಿಗೆ ಕಾದು ಕುಳಿತು ಖರೀದಿ ಮಾಡುವುದನ್ನು ಕಾಣಬಹುದಾಗಿದೆ. ಈ ನಡುವೆ ಒನ್‌ಪ್ಲಸ್ ಸಂಸ್ಥೆ ತನ್ನ ನಾರ್ಡ್‌ CE ಸರಣಿಯ ನೂತನ ಮೊಬೈಲ್ ಒಂದನ್ನು ಜೂನ್ 24 ರಂದು ಬಿಡುಗಡೆ ಮಾಡಲು ಸಿದ್ದವಾಗಿದೆ. ಈ ಮೊಬೈಲ್‌ ಕುರಿತಾದ ಕಲವು ಮಾಹಿತಿಯನ್ನು ಬಿಡುಗಡೆಗೂ ಮುನ್ನವೇ ಬಹಿರಂಗಪಡಿಸಿದೆ. ಬಹಿರಂಗವಾಗಿರುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

OnePlus ತನ್ನ ಬಜೆಟ್ ಸ್ನೇಹಿ ನಾರ್ಡ್ ಸರಣಿಯ OnePlus Nord CE 4 Lite 5G ಹೆಸರಿನ ನೂತನ ಸ್ಮಾರ್ಟ್‌ಫೋನ್ ಅನ್ನು ಜೂನ್ 24 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. ಆದರೆ ಮೊಬೈಲ್‌ ಬಿಡುಗಡೆಗೂ ಮುನ್ನವೇ ಒನ್‌ಪ್ಲಸ್ ಅದರ ಬ್ಯಾಟರಿ, ಡಿಸ್‌ಪ್ಲೇ, ಕ್ಯಾಮರಾ ಮತ್ತು ಚಾರ್ಜಿಂಗ್ ಸೇರಿದಂತೆ ಸಾಧನದ ಹಲವಾರು ಪ್ರಮುಖ ವಿಶೇಷತೆಗಳನ್ನು ಬಹಿರಂಗಪಡಿಸಿದೆ.

ಜೂನ್ 24 ರಂದು OnePlus Nord CE 4 Lite ಸ್ಮಾರ್ಟ್‌ಫೋನ್ ಲಾಂಚ್

Nord CE 4 Lite 5G ಇದು 2,100 nits ನ ಗರಿಷ್ಠ ಬ್ರೈಟ್‌ನೆಸ್‌ ಹೊಂದಿರುವ AMOLED ಪ್ಯಾನೆಲ್ ಅನ್ನು ಹೊಂದಿದೆ ಎಂದು ದೃಢೀಕರಿಸಲಾಗಿದೆ. ಅದರ ಈ ಹಿಂದಿನ ಸರಣಿಯಂತೆ ಈ ಫೋನ್ 5,500mAh ಬ್ಯಾಟರಿ ಹೊಂದಿರುತ್ತದೆ ಮತ್ತು ರಿವರ್ಸ್ ವೈರ್ಡ್ ಚಾರ್ಜಿಂಗ್ ಜೊತೆಗೆ 80W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ. ಇದು 50MP ಸೋನಿ LYTIA ಪ್ರಾಥಮಿಕ ಸೆನ್ಸಾರ್‌ ಕ್ಯಾಮರಾ ಹೊಂದಿರುತ್ತದೆ ಎಂದು ಮಾಹಿತಿ ನೀಡಿದೆ, ಆದರೆ ದ್ವಿತೀಯ ಕ್ಯಾಮೆರಾ ಕುರಿತು ಮಾಹಿತಿ ಬಹಿರಂಗಪಡಿಸಿಲ್ಲ.

OnePlus Nord CE 4 Lite 5G ನಿರೀಕ್ಷಿತ ಫೀಚರ್ಸ್:

Nord CE 4 Lite ಇದು ಒಪ್ಪೋ K12x ನ ರೀಬ್ರಾಂಡ್ ಆವೃತ್ತಿಯಾಗಿರಬಹುದು ಎಂದು ವರದಿಗಳು ಸೂಚಿಸುತ್ತವೆ. ಈ ವರದಿ ನಿಜವಾಗಿದ್ದರೆ ಮುಂಬರು ಫೋನ್‌ 6.67 ಇಂಚಿನ ಫುಲ್ HD+ AMOLED ಡಿಸ್‌ಪ್ಲೇ ಜೊತೆಗೆ120Hz ರಿಫ್ರೆಶ್ ರೇಟ್‌ ಹೊಂದಿರಲಿದೆ.

CE 4 Lite ಇದು Qualcomm Snapdragon 695 ಪ್ರೊಸೆಸರ್‌ನಿಂದ ರನ್ ಆಗಬಹುದು ಮತ್ತು ಗ್ರಾಫಿಕ್ಸ್ ಕಾರ್ಯಗಳನ್ನು ಹೆಚ್ಚಿಸಲು Adreno 619 GPU ನೊಂದಿಗೆ ಜೋಡಿಸಬಹುದು ಎಂದು ಹೇಳಲಾಗುತ್ತಿದೆ. ಫೋನ್ 12GB ವರೆಗೆ LPDDR4x RAM ಮತ್ತು 512GB UFS 2.2 ಸ್ಟೋರೆಜ್ ಜೊತೆಗೆ ಬರಬಹುದು ಎಂದು ಹೇಳಲಾಗುತ್ತಿದೆ.

ಕ್ಯಾಮೆರಾ:
CE 4 Lite ಈ ಸ್ಮಾರ್ಟ್‌ಫೋನ್ 50MP ಪ್ರಾಥಮಿಕ ಸೆನ್ಸಾರ್ ಹೊಂದಿದೆ ಮತ್ತು 2MP ಡೆಪ್ತ್ ಸೆನ್ಸಾರ್‌ ಜೊತೆಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿರಬಹುದು. ಇದು ಸೆಲ್ಫಿಗಾಗಿ ಮತ್ತು ವೀಡಿಯೊ ಕರೆಗಳಿಗಾಗಿ 16MP ಮುಂಭಾಗದ ಶೂಟರ್ ಅನ್ನು ಸಹ ಒಳಗೊಂಡಿರಲಿದೆ.

ಬ್ಯಾಟರಿ:
80W SuperVOOC ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,500mAh ಬ್ಯಾಟರಿ ವ್ಯವಸ್ಥೆಯನ್ನು ಈ ಫೋನ್ ಹೊಂದಿರುತ್ತದೆ ಎಂದು ಹೇಳಲಾಗಿದೆ. ಇದು Android 14 ಅನ್ನು ಆಧರಿಸಿದ OxygenOS 14 ನಲ್ಲಿ ರನ್ ಆಗಬಹುದು.

OnePlus Nord CE 4 Lite 5G ನಿರೀಕ್ಷಿತ ಬೆಲೆ:
Oppo K12x ಚೀನಾದಲ್ಲಿ $179 ಅಂದರೆ ಸುಮಾರು ₹ 15,000 ಬೆಲೆಯಲ್ಲಿ ಪ್ರಾರಂಭವಾಯಿತು ಮತ್ತು ಉನ್ನತ ಶ್ರೇಣಿಯ ಮಾದರಿಗಾಗಿ $248 ಅಂದರೆ ಸುಮಾರು ₹ 21,000 ಬೆಲೆ ಹೊಂದಿದೆ. ಈ ಬೆಲೆಗಳನ್ನು ಗಮನಿಸಿದರೆ CE 4 Lite ಅದರ ರೀಬ್ರಾಂಡ್ ಆಗಿರಬಹುದು ಎಂದು ಹೇಳಲಾಗುತ್ತಿರುವುದರಿಂದ ಹೆಚ್ಚು ಕಮ್ಮಿ ಅದೇ ಬೆಲೆ ಇರಬಹುದು ಎನ್ನಲಾಗುತ್ತಿದೆ. ಇದು ಕೇವಲ ವದಂತಿ ಆಧಾರದ ಬೆಲೆಯಾಗಿದೆ. ನಿಖರವಾದ ಬೆಲೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾದ ಬಳಿಕವಷ್ಟೆ ತಿಳಿಯಲಿದೆ.

Best Mobiles in India

English summary
OnePlus Nord CE 4 Lite 5G smartphone is all set to launch on June 24. Ahead of the mobile's launch, OnePlus has revealed several key specifications of the device, including its battery, display, camera and charging.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+