Home
ಸುದ್ದಿಜಾಲ

ಇಂದೇ ಲಾಂಚ್ ಆಗಲಿದೆ OnePlus Nord CE 4 Lite: ಲೈವ್ ವೀಕ್ಷಣೆ ಹೇಗೆ?

ಓನ್‌ಪ್ಲಸ್ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಇದೆ. ತನ್ನ ಆಕರ್ಷಕ ಫೀಚರ್ಸ್‌ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಒನ್‌ಪ್ಲಸ್ (OnePlus) ಸಂಸ್ಥೆ ಇದೀಗ ತನ್ನ OnePlus Nord CE 4 Lite ಹೆಸರಿನ ನೂತನ ಸ್ಮಾರ್ಟ್‌ಫೋನ್‌ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ನ ಕುರಿತು ಈಗಾಗಲೆ ಹಲವು ಪ್ರಮುಖ ವಿಚಾರಗಳು ಬಹಿರಂಗವಾಗಿದ್ದು, ಇದೀಗ ಸ್ಮಾರ್ಟ್‌ಫೋನ್‌ನ ಬೆಲೆ ಕುರಿತು ಮಾಹಿತಿ ಸೋರಿಕೆಯಾಗಿದೆ. ಹಾಗೂ ಸ್ಮಾರ್ಟ್‌ಫೋನ್‌ ಎಲ್ಲಿ ಬಿಡುಗಡೆಯಾಗಲಿದೆ ಲೈವ್‌ ವೀಕ್ಷಣೆ ಹೇಗೆ, ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಬೆಲೆ ಎಷ್ಟಿರಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

Nord CE 4 Lite 5G ಈ ಮೊಬೈಲ್‌ 2,100 nits ನ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಅಮೋಲ್ಡ್‌ ಪ್ಯಾನೆಲ್ ಅನ್ನು ಹೊಂದಿದೆ ಎಂದು ಸಂಸ್ಥೆ ದೃಢಪಡಿಸಿದೆ. ನಾರ್ಡ್ ಸರಣಿಯ ಈ ಹಿಂದಿನ ಸ್ಮಾರ್ಟ್‌ಫೋನ್‌ಗಳಂತೆ ಈ ಫೋನ್ ಕೂಡ 5,500mAh ಬ್ಯಾಟರಿ ಹೊಂದಿರುತ್ತದೆ ಮತ್ತು ರಿವರ್ಸ್ ವೈರ್ಡ್ ಚಾರ್ಜಿಂಗ್ ಜೊತೆಗೆ 80W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ. 50 MP ಸೋನಿ LYTIA ಪ್ರಾಥಮಿಕ ಸೆನ್ಸಾರ್ ಕ್ಯಾಮೆರಾ ಹೊಂದಿರಲಿದೆ ಎಂದು ಮಾಹಿತಿ ನೀಡಿದ್ದು, ದ್ವಿತೀಯ ಕ್ಯಾಮೆರಾ ಕುರಿತು ಇನ್ನಷ್ಟೆ ಮಾಹಿತಿ ಬರಬೇಕಿದೆ.

ಇಂದೇ ಲಾಂಚ್ ಆಗಲಿದೆ OnePlus Nord CE 4 Lite!

OnePlus Nord CE 4 Lite ಬಿಡುಗಡೆ ಯಾವಾಗ ? ವೀಕ್ಷಣೆ ಹೇಗೆ ?:
ಈ ಸ್ಮಾರ್ಟ್‌ಫೋನ್ ಅನ್ನು ಇಂದು ಅಂದರೆ 25-6-2024 ರಂದು ಸಂಜೆ 7 ಗಂಟೆಗೆ ನಡೆಯುವ ಮೊಬೈಲ್‌ ಲಾಂಚಿಂಗ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದೆ. ಈವೆಂಟ್ ಅನ್ನು OnePlus ನ ಅಧಿಕೃತ YouTube ಚಾನಲ್ ಮೂಲಕ ಲೈವ್ ಸ್ಟ್ರೀಮ್ ಮಾಡಲಿದ್ದು ನೀವು ವೀಕ್ಷಣೆ ಮಾಡಬಹುದಾಗಿದೆ.

OnePlus Nord CE 4 Lite ನಿರೀಕ್ಷಿತ ಬೆಲೆ:
ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರ ಪ್ರಕಾರ, ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ₹19,999 ಬೆಲೆಗೆ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಇದರ ಹೊರತಾಗಿಯೂ OnePlus ಸಂಸ್ಥೆ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಲು ಕೆಲವು ಆರಂಭಿಕ ಸೇಲ್ ಆಫರ್ ನೀಡುವ ನಿರೀಕ್ಷೆಯಿದೆ.

OnePlus Nord CE 4 Lite ನಿರೀಕ್ಷಿತ ಫೀಚರ್ಸ್:
Nord CE 4 Lite ಇದು Oppo K12x ನ ರೀ ಬ್ರಾಂಡೆಡ್ ಆವೃತ್ತಿಯಾಗಿರಬಹುದು ಎಂದು ವರದಿಗಳು ಸೂಚಿಸುತ್ತವೆ. ಈ ವರದಿ ನಿಜವಾಗಿದ್ದರೆ ಫೋನ್ 6.67 ಇಂಚಿನ ಫುಲ್ HD+ ಅಮೋಲ್ಡ್‌ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಹೊಂದಿರಲಿದೆ. ಶ ಮೊಬೈಲ್‌ Qualcomm Snapdragon 695 ಪ್ರೊಸೆಸರ್‌ನಿಂದ ರನ್ ಆಗುವ ನಿರೀಕ್ಷೆ ಇದೆ ಮತ್ತು ಗ್ರಾಫಿಕ್ಸ್ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು Adreno 619 GPU ನೊಂದಿಗೆ ಜೋಡಿಸಬಹುದು. ಫೋನ್ 12GB ವರೆಗೆ LPDDR4x RAM ಮತ್ತು 512GB UFS 2.2 ಸ್ಟೋರೆಜ್ ಸಂಗ್ರಹಣೆಯೊಂದಿಗೆ ಬರಬಹುದು.

ಕ್ಯಾಮೆರಾ:
ಈ ಸ್ಮಾರ್ಟ್‌ಫೋನ್‌ನ ಪ್ರಾಥಮಿಕ ಸೆನ್ಸಾರ್ ಮತ್ತು 2MP ಡೆಪ್ತ್ ಸೆನ್ಸಾರ್‌ ಜೊತೆಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಮುಂಭಾಗದ ಶೂಟರ್ ಅನ್ನು ಸಹ ಒಳಗೊಂಡಿರಲಿದೆ.

ಬ್ಯಾಟರಿ:
80W SuperVOOC ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 5,500mAh ಬ್ಯಾಟರಿಯೊಂದಿಗೆ ಈ ಸ್ಮಾರ್ಟ್‌ಫೋನ್ ಬರುವ ಸಾಧ್ಯತೆಯಿದೆ. ಇದು Android 14 ಅನ್ನು ಆಧರಿಸಿದ OxygenOS 14 ನಲ್ಲಿ ರನ್ ಆಗುವ ಸಾಧ್ಯತೆ ಇದೆ.

Best Mobiles in India

English summary
OnePlus will launch a new smartphone called OnePlus Nord CE 4 Lite in India today. Many features have been leaked about this mobile
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+