Home
ಸುದ್ದಿಜಾಲ

OnePlus: ಜೂನ್ 24ರಂದು ಗ್ರ್ಯಾಂಡ್ ಎಂಟ್ರಿ ಕೊಡಲಿದೆ 'OnePlus Nord CE 4 lite': ವಿನ್ಯಾಸ ಘೋಷಣೆ

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಒನ್‌ಪ್ಲಸ್ (OnePlus) ಮೊಬೈಲ್‌ಗಳು ವಿಶೇಷ ಬೇಡಿಕೆ ಹೊಂದಿವೆ. ತನ್ನ ವಿಭಿನ್ನ ಹಾಗೂ ವಿಶೇಷ ಫೀಚರ್ಸ್‌ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೆಲವರಂತೂ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಬರುವಿಕೆಗಾಗಿ ಕಾದು ಮೊಬೈಲ್‌ ಖರೀದಿಸುವುದನ್ನು ನಾವು ನೋಡಬಹುದಾಗಿದೆ. ಇನ್ನು ಈ ಸಂಸ್ಥೆ ಕೂಡ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಎಲ್ಲಾ ವರ್ಗದ ಜನರಿಗಾಗಿ ಹೊಸ ಬಗೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಒನ್‌ಪ್ಲಸ್ ಸಂಸ್ಥೆ ಜೂನ್ 24 OnePlus Nord CE 4 lite ಹೆಸರಿನ ನೂತನ ಸ್ಮಾರ್ಟ್‌ಫೋನ್‌ ಒಂದನ್ನು ಲಾಂಚ್ ಮಾಡಲಿದೆ ಎಂದು ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.

waiting is Over ಎಂಬಂತೆ ಒನ್‌ಪ್ಲಸ್ ಸಂಸ್ಥೆ ಕೊನೆಗೂ OnePlus Nord CE 4 Lite 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆಯ ದಿನಾಂಕವನ್ನು ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿಸಿದೆ. ಇಂದು ನಡೆದ ಸ್ಮಾರ್ಟ್‌ಫೋನ್‌ ಬಿಡುಗಡೆ ಈವೆಂಟ್‌ನಲ್ಲಿ ಸಂಸ್ಥೆ ತನ್ನ ಮುಂಬರುವ ಮೊಬೈಲ್‌ ಬಿಡುಗಡೆ ದಿನಾಂಕ ಹಾಗೂ ಅದರ ವಿನ್ಯಾಸದ ಜೊತೆಗೆ ಸ್ಮಾರ್ಟ್‌ಫೋನ್‌ನ ಕೆಲವು ವಿಶೇಷತೆಗಳನ್ನು ಸಹ ಬಹಿರಂಗಪಡಿಸಿದೆ.

ಜೂನ್ 24ರಂದು ಗ್ರ್ಯಾಂಡ್ ಎಂಟ್ರಿ ಕೊಡಲಿದೆ OnePlus Nord CE 4 lite ಮೊಬೈಲ್

ಮುಂದಿನ ತನ್ನ ಫೋನ್ ಅನ್ನು ಜೂನ್ 24 ರಂದು ಬಿಡುಗಡೆಗೊಳಿಸಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. OnePlus ಸಂಸ್ಥೆ ತನ್ನ ಹೊಸ OnePlus Nord CE 4 Lite ಫೋನ್‌ಗೆ ದೀರ್ಘ ಬ್ಯಾಟರಿ ಬಾಳಿಕೆ, ವೇಗದ ಚಾರ್ಜಿಂಗ್ ಮತ್ತು ಅದರ ಹಿಂದಿನ ಸರಣಿಯ ಫೋನ್‌ಗಳಿಗೆ ಹೋಲಿಸಿದರೆ ಉತ್ತಮ ಛಾಯಾಗ್ರಹಣ ಸಾಮರ್ಥ್ಯವನ್ನು ನೀಡುತ್ತದೆ ಎಂದು ಭರವಸೆ ನೀಡಿದೆ.

ಇಂದು ನಡೆದ ಈವೆಂಟ್‌ನಲ್ಲಿ ಮಾತನಾಡಿದ OnePlus ನ ಅಧ್ಯಕ್ಷ ಮತ್ತು COO ಕಿಂಡರ್ ಲಿಯು (Kinder Liu) "OnePlus Nord CE4 Lite 5G ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಲು ಸಿದ್ಧವಾಗಿರುವ ಸಾಧನವಾಗಿದ್ದು, ಈ ಸ್ಮಾರ್ಟ್‌ಫೋನ್ ಧೀರ್ಘ ಬ್ಯಾಟರಿ ಬಾಳಿಕೆ, ಚಾರ್ಜಿಂಗ್ ವೇಗ, ಡಿಸ್‌ಪ್ಲೇ ಗುಣಮಟ್ಟ ಮತ್ತು ಉತ್ತಮ ಛಾಯಾಗ್ರಹಣದ ಅನುಭವವನ್ನು ನೀಡುವ ಮೂಲಕ ಬೆಲೆಗೆ ತಕ್ಕುನಾದ ಸಾಧನವನ್ನು ಒದಗಿಸಲಿದೆ, ಇದು ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ವಿಭಾಗಕ್ಕೆ ಹೊಸ ಮಾನದಂಡ ನೀಡಲು ಜನಸಂದಣಿಯಿಂದ ಭಿನ್ನವಾಗಿದೆ ಎಂದು ತಿಳಿಸಿದ್ದಾರೆ.

ಬಿಡುಗಡೆ ಕಾರ್ಯಕ್ರಮಕ್ಕೂ ಮುನ್ನಾ, ಕಂಪನಿಯು ಕೆಲವು ವಿಶೇಷಣಗಳನ್ನು ದೃಢಪಡಿಸಿದ್ದು, ಇದು 80W ವೇಗದ ಚಾರ್ಜಿಂಗ್ ತಂತ್ರಜ್ಞಾನದ ಬೆಂಬಲದೊಂದಿಗೆ 5,500mAh ಬ್ಯಾಟರಿಯನ್ನು ಬಾಕ್ಸ್‌ ನಲ್ಲಿ ನೀಡಲಿದೆ ಎಂದು ಸಂಸ್ಥೆ ದೃಢೀಕರಿಸಿದೆ.

ಇದು OnePlus 12R ಸ್ಮಾರ್ಟ್‌ಫೋನ್‌ನಂತೆ ಆಕ್ವಾ ಟಚ್ ಟೆಕ್ನೊಂದಿಗೆ 120Hz AMOLED ಡಿಸ್‌ಪ್ಲೇ ಹೊಂದಿದೆ. ಆಕ್ವಾ ಟಚ್ ಎಂದರೆ ನಿಮ್ಮ ಕೈಗಳು ಒದ್ದೆಯಾಗಿದ ಸಂದರ್ಭದಲ್ಲಿಯೂ ಡಿವೈಸ್‌ನ ಡಿಸ್‌ಪ್ಲೇ ಸರಿಯಾಗಿ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸಲು ಸಹಕಾರಿಯಾಗುವ ಸಾಧನವಾಗಿದೆ. ಇದರ ಡಿಸ್‌ಪ್ಲೇ 2100 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದು 5W ರಿವರ್ಸ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ ಎಂದು ತಿಳಿಸಿದೆ. ಇನ್ನುಳಿದ ವಿವರಗಳನ್ನು ಕಂಪನಿ ಇನ್ನಷ್ಟೇ ಬಹಿರಂಗಪಡಿಸಬೇಕಿದೆ.

ಸೋರಿಕೆಯಾದ ಮಾಹಿತಿ ಪ್ರಕಾರ ಇದು 6.67 ಇಂಚಿನ AMOLED ಡಿಸ್‌ಪ್ಲೇ ಹೊಂದಿದ್ದು, ಫುಲ್HD+ ರೆಸಲ್ಯೂಶನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಬ್ಯಾಕ್ ಕ್ಯಾಮರಾ ಸೆಟಪ್ 50MP ಪ್ರಾಥಮಿಕ ಸೆನ್ಸಾರ್‌ ಕ್ಯಾಮೆರಾ ಒಳಗೊಂಡಿರಬಹುದು. ಮುಂಭಾಗದಲ್ಲಿ 16 MP ಕ್ಯಾಮೆರಾ ಇರುವ ನಿರೀಕ್ಷೆ ಇದೆ. ಇದು 25,000 ರೂ. ಬೆಲೆ ವಿಭಾಗದಲ್ಲಿ ಬರುವ ನಿರೀಕ್ಷೆ ಇದೆ ಮತ್ತು ಅದರ ಲೈಟ್ ಆವೃತ್ತಿಯು ಅದರ ಹಿಂದಿನದಂತೆಯೇ ರೂ 20,000 ಕ್ಕಿಂತ ಕಡಿಮೆ ಬೆಲೆಯನ್ನು ನಿರೀಕ್ಷಿಸಲಾಗಿದೆ.

Best Mobiles in India

English summary
OnePlus has officially announced that it will launch a new smartphone called OnePlus Nord CE 4 lite on June 24.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+