Home
ಸುದ್ದಿಜಾಲ

ಶೀಘ್ರದಲ್ಲೇ OnePlus Nord CE 5 ಫೋನ್ ಬಿಡುಗಡೆ: ನಿರೀಕ್ಷಿತ ವೈಶಿಷ್ಟ್ಯಗಳು ಇವು!

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒನ್‌ಪ್ಲಸ್ ಶೀಘ್ರದಲ್ಲೇ ತನ್ನ ಹೊಸ ಮಾದರಿಯಾದ OnePlus Nord CE 5 ಸ್ಮಾರ್ಟ್‌ಫೋನನ್ನು ಅನಾವರಣಗೊಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಒನ್‌ಪ್ಲಸ್ ಕಂಪನಿಯು ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡದಿದ್ದರೂ, ಈ ಮುಂಬರುವ OnePlus Nord CE 5 ಫೋನ್ ಕುರಿತಾದ ನಿರೀಕ್ಷಿತ ವೈಶಿಷ್ಟ್ಯಗಳ ಬಗ್ಗೆ ಆನ್‌ಲೈನ್‌ನಲ್ಲಿ ಕೆಲವು ಮಾಹಿತಿ ಸೋರಿಕೆಯಾಗಿದೆ. ಇತ್ತೀಚಿನ ವರದಿಯೊಂದು, OnePlus Nord CE 5 ಫೋನಿನ ಪ್ರಮುಖ ವಿಶೇಷಣಗಳಾದ ಚಿಪ್‌ಸೆಟ್, ಸಂಗ್ರಹಣೆ ಮತ್ತು ಬ್ಯಾಟರಿಯ ವಿವರಗಳನ್ನು ಬಹಿರಂಗಪಡಿಸಿದ್ದು, OnePlus Nord CE 4 ರ ಉತ್ತರಾಧಿಕಾರಿಯಾಗಿ ಬರಲಿರುವ ಈ ಹೊಸ ಫೋನ್, ಇದರ ಹಿಂದಿನ ಮಾದರಿಗಿಂತ ಗಮನಾರ್ಹವಾಗಿ ದೊಡ್ಡ ಬ್ಯಾಟರಿಯನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.

ಸ್ಮಾರ್ಟ್‌ಪ್ರಿಕ್ಸ್‌ನ ವರದಿಯ ಪ್ರಕಾರ, ಮುಂಬರುವ OnePlus Nord CE 5 ಸ್ಮಾರ್ಟ್‌ಫೋನ್ ಬೃಹತ್ 7,100mAh ಬ್ಯಾಟರಿಯಿಂದ ಶಕ್ತಿಯನ್ನು ಪಡೆಯುವ ಸಾಧ್ಯತೆ ಇದೆ. ಇದು ಕಳೆದ ಬಾರಿಯ OnePlus Nord CE 4 ಫೋನಿನ 5,500mAh ಬ್ಯಾಟರಿಗೆ ಹೋಲಿಸಿದರೆ ಗಣನೀಯ ಪ್ರಮಾಣದ ಹೆಚ್ಚಳವಾಗಿದೆ. ಈ ದೊಡ್ಡ ಬ್ಯಾಟರಿಯು OnePlus Nord CE 5 ಸ್ಮಾರ್ಟ್‌ಫೋನ್ ತನ್ನ ವಿಭಾಗದಲ್ಲಿ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ನೀಡಲು ಸಹಾಯ ಮಾಡುತ್ತದೆ ಎಂದು ವರದಿ ಹೇಳುತ್ತದೆ. ವರದಿಯು, ಈ OnePlus Nord CE 5 ಸ್ಮಾರ್ಟ್‌ಫೋನ್ ಶಕ್ತಿಶಾಲಿ ಸ್ನಾಪ್‌ಡ್ರಾಗನ್ 7 Gen 4 SoC ಅಥವಾ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಮತ್ತು ವೇಗದ ಡೇಟಾ ವರ್ಗಾವಣೆಗಾಗಿ UFS 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಸಹ ಬೆಂಬಲಿಸಲಿದೆ ಎಂದು ಹೇಳಿದೆ.

ಶೀಘ್ರದಲ್ಲೇ OnePlus Nord CE 5 ಫೋನ್ ಬಿಡುಗಡೆ: ನಿರೀಕ್ಷಿತ ವೈಶಿಷ್ಟ್ಯಗಳು ಇವು!

ಇದರ ಹಿಂದಿನ ಮಾದರಿಯಾದ OnePlus Nord CE 4 ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಏಪ್ರಿಲ್ 2024 ರಲ್ಲಿ ಬಿಡುಗಡೆ ಮಾಡಲಾಗಿತ್ತು ಮತ್ತು ಇದು 5,500mAh ಬ್ಯಾಟರಿ, 8GBRAM ಮತ್ತು 256GB ವರೆಗಿನ UFS3.1 ಸಂಗ್ರಹಣೆಯೊಂದಿಗೆ ಸ್ನಾಪ್‌ಡ್ರಾಗನ್ 7 Gen 3 SoC ಪ್ರೊಸೆಸರ್‌ನೊಂದಿಗೆ ಬಂದಿತ್ತು. ಹಾಗೂ ದೇಶದಲ್ಲಿ 8GB RAM ಮತ್ತು 128GB ಸಂಗ್ರಹಣೆಯ ರೂಪಾಂತರಕ್ಕೆ ರೂ. 24,999 ರ ಆರಂಭಿಕ ಬೆಲೆ ಹೊಂದಿತ್ತು. ಆದರೆ, ಮುಂಬರುವ OnePlus Nord CE 5 ಸ್ಮಾರ್ಟ್‌ಫೋನ್ ಬೆಲೆಯ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ. ವರದಿಯ ಪ್ರಕಾರ, ನಿರೀಕ್ಷಿತ OnePlus Nord CE 5 ಫೋನ್ ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಆದಾಗ್ಯೂ, ಕಂಪನಿಯು ಇನ್ನೂ ನಿಖರವಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಮುಂಬರುವ ದಿನಗಳಲ್ಲಿ ಈ ಫೋನ್‌ನ ಕುರಿತು ಇನ್ನಷ್ಟು ಅಧಿಕೃತ ಮಾಹಿತಿಗಳು ಲಭ್ಯವಾಗುವ ನಿರೀಕ್ಷೆಯಿದೆ.

ನಾವು ಗಮನಿಸುವುದಾದರೆ, OnePlus Nord CE 4 ನಂತರ, OnePlus ಕಂಪನಿಯು ಜೂನ್ 2024 ರಲ್ಲಿ ಭಾರತದಲ್ಲಿ OnePlus Nord CE 4 Lite 5G ಎಂಬ ಮತ್ತೊಂದು ಮಾದರಿಯ ಬಜೆಟ್ ಬೆಲೆಯ ಸ್ಮಾರ್ಟ್‌ಫೋನನನ್ನು ಸಹ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್, ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಮತ್ತು 5,500mAh ಬ್ಯಾಟರಿಯಂತಹ ಮುಖ್ಯ ಒಳಗೊಂಡಿದೆ. ಹೀಗಾಗಿ, OnePlus ಕಂಪೆನಿಯು ಮುಂಬರುವ ಹೊಸ OnePlus Nord CE 5 ಸ್ಮಾರ್ಟ್‌ಫೋನಿನ ಸಹಾಯದಿಂದ ತನ್ನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ವಿಭಾಗವನ್ನು ಬಲಪಡಿಸಲು ಸಜ್ಜಾಗಿದೆ ಎಂದು ತೋರುತ್ತಿದೆ. ಮುಂಬರುವ ದಿನಗಳಲ್ಲಿ ಈ ಸ್ಮಾರ್ಟ್‌ಫೋನ್ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಲಿವೆ. ಈ ಬಗ್ಗೆ ನೀವು ಹೆಚ್ಚು ಮಾಹಿತಿಯನ್ನು ತಿಳಿಯಲು ಕನ್ನಡ ಗಿಜ್‌ಬಾಟ್‌ನಲ್ಲಿ ಯಾವಾಗಲೂ ಆಕ್ಟೀವ್ ಆಗಿರಿ.!

Best Mobiles in India

English summary
The OnePlus Nord CE 4 came with a robust 5,500 mAh battery, but OnePlus is set to make an even bolder move this time. According to a tip we received, the OnePlus Nord CE 5 will boast an impressive 7,100 mAh battery, marking a significant enhancement over the 5,500 mAh capacity of the CE 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+