ಶೀಘ್ರದಲ್ಲೇ OnePlus Nord CE4 Lite ಸ್ಮಾರ್ಟ್‌ಫೋನ್ ಬಿಡುಗಡೆ ! ಡಿಸೈನ್, ಲೈವ್ ಇಮೇಜ್ ಲೀಕ್ ?
ಮೊಬೈಲ್ ಮಾರುಕಟ್ಟೆ ಅತೀ ಹೆಚ್ಚು ಬೇಡಿಕೆ ಹೊಂದಿರುವ ಒನ್‌ಪ್ಲಸ್ (OnePlus) ಸಂಸ್ಥೆ, ತನ್ನದೇ ಆದ ವಿಶೇಷ ಫೀಚರ್ಸ್ ಮತ್ತು ವಿನ್ಯಾಸದ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸದ್ಯ ಒನ್‌ಪ್ಲಸ್ ಸಂಸ್ಥೆ ನಾರ್ಡ್ ಸಿಇ ಸರಣಿಯ ನೂತನ ಸ್ಮಾರ್ಟ್‌ಫೋನ್ ಒಂದನ್ನು ಶೀಘ್ರದಲ್ಲೇ ಹೊರತರಲಿದೆ ಎಂಬ ಅಂಶ ಹಲವಾರು ಪ್ರಮಾಣಿಕೃತ ವೆಬ್‌ಸೈಟ್‌ಗಳ ಮೂಲಕ ತಿಳಿದು ಬಂದಿದೆ. ಹಾಗದ್ರೆ ಒನ್‌ಪ್ಲಸ್ ಸಂಸ್ಥೆ ಜಾರಿಗೆ ತರಲಿರುವ ಸ್ಮಾರ್ಟ್‌ಫೋನ್ ಯಾವುದು.? ವೆಬ್‌ಸೈಟ್‌ಗಳು ನೀಡಿರುವ ಮಾಹಿತಿ ಆಧಾರದಲ್ಲಿ ಮುಂಬರು ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿರಲಿದೆ ಎಂಬ ಅಂಶಗಳ ಕುರಿತು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಹೌದು ಒನ್‌ಪ್ಲಸ್ ಸಂಸ್ಥೆ ತನ್ನ ಬಹುನಿರೀಕ್ಷಿತ OnePlus Nord CE4 Lite ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಕೆಲವು ಪ್ರಮಾಣೀಕರಣ ಸೈಟ್‌ಗಳು ಗುರುತಿಸಿವೆ. ಈಗ ಈ ಫೋನ್ ಅನ್ನು ಗೀಕ್‌ಬೆಂಚ್ ವೆಬ್‌ಸೈಟ್ ಗುರುತಿಸಿದೆ. ಅದರ ಹೊರತಾಗಿಯೂ ಮೊಬೈಲ್‌ನ ಪ್ರಮುಖ ವಿಶೇಷತೆಗಳು ಮತ್ತು ನಾರ್ಡ್ ಸಿಇ 4 ಲೈಟ್ ನ ಲೈವ್ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಈ ಚಿತ್ರದಲ್ಲಿ ವಿನ್ಯಾಸ ಒನ್‌ಪ್ಲಸ್ ಮೊಬೈಲ್ ಪ್ರಿಯರ ಕಣ್ಣಿಗೆ ಹಬ್ಬ ಉಂಟು ಮಾಡಿದೆ.

OnePlus Nord CE4 Lite ಲೈವ್ ಚಿತ್ರ ಸೋರಿಕೆ:
ಎಕ್ಸ್ ಬಳಕೆದಾರ ಗ್ಯಾಜೆಟ್ ಬಿಟ್ಸ್ ಈ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ನಾವು CPH2621 ಮಾದರಿ ಸಂಖ್ಯೆ ಜೊತೆಗೆ OnePlus ಫೋನ್ ಅನ್ನು ನೋಡಬಹುದು ಹಾಗೂ ಈ ಸ್ಮಾರ್ಟ್‌ಫೋನ್ ಅನ್ನು ನಾರ್ಡ್ CE4 ಲೈಟ್ ಎಂದು ಊಹಿಸಲಾಗಿದೆ. ಸೋರಿಕೆಯಾಗಿರುವ ಚಿತ್ರಗಳಲ್ಲಿ ನಾವು ಫೋನ್‌ನ ಹಿಂಭಾಗದ ಡ್ಯುಯಲ್ ಕ್ಯಾಮೆರಾಗಳನ್ನು ನೋಡಬಹುದು.
ಸೋರಿಕೆಯಾದ ಚಿತ್ರಗಳ ಪ್ರಕಾರ, ಈ ಮೊಬೈಲ್‌ನ ಮುಖ್ಯ ಕ್ಯಾಮೆರಾವು 50MP ಸೆನ್ಸಾರ್ ಹೊಂದಿದೆ. ಜೊತೆಗ ಲೆನ್ಸ್ ರಿಂಗ್‌ಗಳು ಮಾತ್ರೆ ಆಕಾರದಲ್ಲಿ ಲಂಬವಾಗಿ ಜೋಡಿಸಲಾಗಿದೆ. ಕ್ಯಾಮೆರಾಗಳ ಕೆಳಗೆ ಎರಡು ಫ್ಲ್ಯಾಷ್ ಲೈಟ್ ಲೆನ್ಸ್‌ಗಳನ್ನು ಕೂಡ ಜೋಡಿಸಲಾಗಿದೆ. ಇದು ಸಿಲ್ವರ್ ಬಣ್ಣದಲ್ಲಿದ್ದು, ಇದು ಅದರ ನಿಜವಾದ ಬಣ್ಣವಾಗಿದೆಯೇ ಎಂಬುದು ಕೂಡ ಸ್ಪಷ್ಟವಾಗಿಲ್ಲ.
ಅದರ ಬ್ಯಾಕ್ ಸೈಡ್ ಗಾಜಿನಂತೆ ಕಂಡು ಬಂದಿದೆ ಮತ್ತು ಅಂಚುಗಳು ಚಪ್ಪಟೆಯಾಗಿವೆ. ಗ್ಯಾಜೆಟ್ ಬಿಟ್ಸ್ ಈ ಫೋನ್ ಮುಂದಿನ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿಕೊಂಡಿದ್ದಾರೆ, ಆದರೆ ಕೆಲವು ಮಾಹಿತಿಯ ಪ್ರಕಾರ ಇದೇ ತಿಂಗಳು ಬಿಡುಗಡೆಯಾಗಲಿದೆ ಎಂದು ತಿಳಿಸಿವೆ.
ಗೀಕ್‌ಬೆಂಚ್ ಪಟ್ಟಿಯಲ್ಲಿ OnePlus Nord CE4 Lite: ಗೀಕ್‌ಬೆಂಚ್ ಪಟ್ಟಿಯಲ್ಲಿ CPH2621 ಮಾದರಿ ಸಂಖ್ಯೆ ಹೊಂದಿದೆ ಮತ್ತು ಅದರ ಅದರ ಪರೀಕ್ಷಾ ವರದಿ ಹೊರಬಂದಿದೆ. Nord CE4 Lite ಸಿಂಗಲ್ ಕೋರ್ ಪರೀಕ್ಷೆಯಲ್ಲಿ 896 ಅಂಕಗಳನ್ನು ಮತ್ತು ಮಲ್ಟಿ ಕೋರ್ ಪರೀಕ್ಷೆಯಲ್ಲಿ 2002 ಅಂಕಗಳನ್ನು ಪಡೆದಿದೆ. ಇದು Nord CE3 Lite 5G ಪರೀಕ್ಷೆಯಲ್ಲಿ ಗಳಿಸಿದ್ದ ಅಂಕಕ್ಕೆ ಹತ್ತಿರದಲ್ಲಿದೆ.
ವಿಶೇಷತೆಗಳಿಗೆ ಸಂಬಂಧಿಸಿದಂತೆ ಸ್ಮಾರ್ಟ್‌ಫೋನ್ ಏನನ್ನು ಹೊಂದಿರಬಹುದು ಎಂದು ನೋಡುವುದಾದರೆ, ಇದರ ಪ್ರೊಸೆಸರ್ ಹುಡ್ ಅಡಿಯಲ್ಲಿ ಕಂಡು ಬಂದಿದೆ, ಇದು ಸ್ನಾಪ್‌ಡ್ರಾಗನ್ 695 5G (2.21GHz ನಲ್ಲಿ 2 ಕಾರ್ಯಕ್ಷಮತೆಯ ಕೋರ್‌ಗಳು ಮತ್ತು 1.80 GHz ಫ್ರೀಕ್ವೆನ್ಸಿ 6 ದಕ್ಷತೆಯ ಕೋರ್‌ಗಳನ್ನು ಹೊಂದಿದೆ). Nord CE4 Lite ಅನ್ನು ಮರುಬ್ರಾಂಡ್ ಮಾಡಲಾಗಿದೆ ಎಂದು ನಂಬಲಾದ OPPO K12x ಸಹ ಅದೇ ಚಿಪ್ ಅನ್ನು ಹೊಂದಿದೆ.
ಇನ್ನೂ ಈ ಸ್ಮಾರ್ಟ್‌ಫೋನ್‌ನ ಕುರಿತಾಗಿ ಈಗಾಗಲೆ ಪ್ರಸಿದ್ದ ಇ-ಕಾಮರ್ಸ್ ಸಂಸ್ಥೆ ಅಮೇಜಾನ್ ಈ ಸ್ಮಾರ್ಟ್‌ಫೋನ್‌ಗಾಗಿ ಮೈಕ್ರೋ ಸೈಟ್ ಒಂದನ್ನು ತೆರೆದಿದ್ದು ಅದು, ಜೂನ್ 18ರಂದು ಮಧ್ಯಾಹ್ನ 12 ಗಂಟೆಗೆ ಬಹಿರಂಗವಾಗಲಿದೆ ಎಂದು ಬರೆದುಕೊಂಡಿದೆ. ಆದರೆ ಈ ಕುರಿತು ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಈ ಸ್ಮಾರ್ಟ್‌ಫೋನ್ ಕುರಿತಾದ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಬರಲಿದೆ.


Click it and Unblock the Notifications








