Home
ಸುದ್ದಿಜಾಲ

ಒನ್‌ಪ್ಲಸ್‌ ನಾರ್ಡ್‌ N300 ಸ್ಮಾರ್ಟ್‌ಫೋನ್‌ ಲಾಂಚ್‌! ಫೀಚರ್ಸ್‌ ಏನಿದೆ?

ಟೆಕ್‌ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಕಂಪೆನಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಗಮನಸೆಳೆದಿದೆ. ಸದ್ಯ ಇದೀಗ ಒನ್‌ಪ್ಲಸ್‌ ನಾರ್ಡ್‌ N300 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 810 SoC 5G ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್ಅಪ್‌ ಅನ್ನು ಪಡೆದುಕೊಂಡಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಹೊಸ ಒನ್‌ಪ್ಲಸ್‌ ನಾರ್ಡ್‌ N300 ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಇದು 6.65 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೊನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ಒನ್‌ಪ್ಲಸ್‌ ನಾರ್ಡ್‌ N300 ಸ್ಮಾರ್ಟ್‌ಫೋನ್‌ 6.65-ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1612 × 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದೆ. ಇದು 20:9 ರಚನೆಯ ಅನುಪಾತವನ್ನು ಒಳಗೊಂಡಿದ್ದು, 84.0% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದಿದೆ.

ಪ್ರೊಸೆಸರ್‌ ಬಲ ಹೇಗಿದೆ?

ಪ್ರೊಸೆಸರ್‌ ಬಲ ಹೇಗಿದೆ?

ಒನ್‌ಪ್ಲಸ್‌ ನಾರ್ಡ್‌ N300 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 810 SoC 5G ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೊ-SD ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಒನ್‌ಪ್ಲಸ್‌ ನಾರ್ಡ್‌ N300 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಒನ್‌ಪ್ಲಸ್‌ ನಾರ್ಡ್‌ N300 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, ವೈಫೈ 802.11 ac , ಬ್ಲೂಟೂತ್ 5.1, ಜಿಪಿಎಸ್‌, ಗ್ಲೋನಾಸ್‌, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಅಕ್ಸಿಲೆರೊಮೀಟರ್, ಗೈರೊ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್‌ ನಾರ್ಡ್‌ N300 ಸ್ಮಾರ್ಟ್‌ಫೋನ್‌ ಪ್ರಸ್ತುತ ಯುಎಸ್‌ನಲ್ಲಿ ಮಾತ್ರ ಲಾಂಚ್‌ ಆಗಿದೆ. ಆದರಿಂದ ಯುಎಸ್‌ನಲ್ಲಿ ಇದರ ಬೆಲೆ $228 (ಅಂದಾಜು 19,000ರೂ)ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ US ನಲ್ಲಿ, T-ಮೊಬೈಲ್ ಮೂಲಕ ಲಭ್ಯವಿರುತ್ತದೆ. ಇದು ಯಾವ ಬಣ್ಣದ ಆಯ್ಕೆಗಳಲ್ಲಿ ಬರಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

ಒನ್‌ಪ್ಲಸ್‌

ಇದಲ್ಲದೆ ಒನ್‌ಪ್ಲಸ್‌ ಕಂಪೆನಿ ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಕಾರ್ಯನಿರತವಾಗಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಆದರಿಂದ ಈ ಫೋನ್‌ನ ಫೀಚರ್ಸ್‌ಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ 6.7 ಇಂಚಿನ QHD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1440 x 3216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರಲಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿರಲಿದೆ. ಇದು 100W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

Best Mobiles in India

English summary
OnePlus Nord N300 with 90Hz refresh rate display launched!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+