Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಅಚ್ಚರಿಯ ನ್ಯೂಸ್‌ ನೀಡಿದ ಒನ್‌ಪ್ಲಸ್‌!..ಬರಲಿದೆ ಫೋಲ್ಡ್‌ ಫೋನ್‌!

ಒನ್‌ಪ್ಲಸ್‌ ಕಂಪೆನಿ ತನ್ನ ಒನ್‌ಪ್ಲಸ್‌ ಕ್ಲೌಡ್‌ 11 ಈವೆಂಟ್‌ನಲ್ಲಿ ಹಲವು ಡಿವೈಸ್‌ಗಳನ್ನು ಅನಾವರಣಗೊಳಿಸಿದೆ. ಇದರೊಂದಿಗೆ ಮೂರನೇ ತ್ರೈಮಾಸಿಕದಲ್ಲಿ ತಾನು ಪರಿಚಯಿಸಲಿರುವ ಅಚ್ಚರಿಯ ಡಿವೈಸ್‌ಗಳ ಬಗ್ಗೆ ಸೂಚನೆ ನೀಡಿದೆ. ಈ ಒಂದು ಸಂಗತಿ ಇದೀಗ ಭಾರತದ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಸೃಷ್ಟಿಸಿದೆ. ಒನ್‌ಪ್ಲಸ್‌ 11 ಫೋನ್‌ ಲಾಂಚ್‌ ಆಗ್ತಿದ್ದ ಹಾಗೇ ಮಾರುಕಟ್ಟೆಯಲ್ಲಿ ಹಲ್‌ಚಲ್‌ ಎಬ್ಬಿಸಿರುವ ಒನ್‌ಪ್ಲಸ್‌ ತನ್ನ ಮುಂದಿನ ಫೋಲ್ಡ್‌ ಫೋನ್‌ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದೆ.

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಅಚ್ಚರಿಯ ನ್ಯೂಸ್‌ ನೀಡಿದ ಒನ್‌ಪ್ಲಸ್‌!

ಹೌದು, ಒನ್‌ಪ್ಲಸ್‌ ಕಂಪೆನಿ ಶೀಘ್ರದಲ್ಲೇ ತನ್ನ ಫೋಲ್ಡ್‌ ಫೋನ್‌ ಅನ್ನು ಪರಿಚಯಿಸುವ ಸುಳಿವು ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಒನ್‌ಪ್ಲಸ್‌ V ಫೋಲ್ಡ್‌ ಮತ್ತು ಒನ್‌ಪ್ಲಸ್‌ V ಫ್ಲಿಪ್‌ ಫೋನ್‌ಗಳನ್ನು ಪರಿಚಯಿಸುವ ಟೀಸ್‌ ಅನ್ನು ಪ್ರದರ್ಶಿಸಿದೆ. ಈ ಮೂಲಕ ಶೀಘ್ರದಲ್ಲೇ ತನ್ನ ಮೊಟ್ಟಮೊದಲ ಫೋಲ್ಡ್‌ ಫೋನ್‌ ಅನ್ನು ಬಡುಗಡೆ ಮಾಡುವ ಸೂಚನೆ ನೀಡಿದೆ. ಈ ಮೂಲಕ ಫೋಲ್ಡೇಬಲ್‌ ಮೊಬೈಲ್‌ ಮಾರುಕಟ್ಟೆಯಲ್ಲಿಯೂ ತನ್ನ ಪ್ರಾಬಲ್ಯ ತೋರಲು ಮುಂದಾಗಿದೆ. ಹಾಗಾದ್ರೆ ಒನ್‌ಪ್ಲಸ್‌ V ಫೋಲ್ಡ್‌ ಫೋನ್‌ ಬಗ್ಗೆ ಏನೆಲ್ಲಾ ನಿರೀಕ್ಷೆ ಇಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬರಲಿದೆ ಒನ್‌ಪ್ಲಸ್‌ V ಫೋಲ್ಡ್‌ ಮತ್ತು ಒನ್‌ಪ್ಲಸ್‌ V ಫ್ಲಿಪ್‌

ಒನ್‌ಪ್ಲಸ್‌ ತನ್ನ ಕ್ಲೌಡ್‌ 11 ಈವೆಂಟ್‌ನ ಕೊನೆಯ ಭಾಗದಲ್ಲಿ ಒನ್‌ಪ್ಲಸ್‌ V ಫೋಲ್ಡ್‌ ಮತ್ತು ಒನ್‌ಪ್ಲಸ್‌ V ಫ್ಲಿಪ್‌ ಟೀಸರ್‌ ಪ್ರದರ್ಶಿಸಿದೆ. ಈ ಮೂಲಕ ಶೀಘ್ರದಲ್ಲೇ ಒನ್‌ಪ್ಲಸ್‌ V ಫೋಲ್ಡ್‌ ಮತ್ತು ಒನ್‌ಪ್ಲಸ್‌ V ಫ್ಲಿಪ್‌ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ಹೇಳಿದೆ. ಈ ಮೂಲಕ ಒನ್‌ಪ್ಲಸ್‌ ಕಂಪೆನಿ ಫೋಲ್ಡ್‌ಬಲ್‌ ಸ್ಮಾರ್ಟ್‌ಫೊನ್‌ ವಲಯಕ್ಕೆ ಎಂಟ್ರಿ ನೀಡೋದು ಅಧಿಕೃತವಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್‌ಗಳು ಮೂರನೇ ತ್ರೈಮಾಸಿಕದಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಅಚ್ಚರಿಯ ನ್ಯೂಸ್‌ ನೀಡಿದ ಒನ್‌ಪ್ಲಸ್‌!

ಒನ್‌ಪ್ಲಸ್‌ V ಫೋಲ್ಡ್‌ ಫೀಚರ್ಸ್‌ ನಿರೀಕ್ಷೆ ಏನು?

ಒನ್‌ಪ್ಲಸ್‌ V ಫೋಲ್ಡ್‌ ಸ್ಮಾರ್ಟ್‌ಫೋನ್‌ 8.3 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 1080 x 3200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಈ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಇದು 65W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಅಚ್ಚರಿಯ ನ್ಯೂಸ್‌ ನೀಡಿದ ಒನ್‌ಪ್ಲಸ್‌!

ಒನ್‌ಪ್ಲಸ್‌ V ಫ್ಲಿಪ್‌ ಫೀಚರ್ಸ್‌ ನಿರೀಕ್ಷೆ ಏನು?

ಒನ್‌ಪ್ಲಸ್‌ V ಫ್ಲಿಪ್‌ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿರಬಹುದು. ಇದು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಬಹುದು ಎಂದು ಅಂದಾಜಿಸಲಾಗಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಬಹುದು. ಇದರ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.

Best Mobiles in India

English summary
OnePlus surprised everyone by teasing the arrival of its first-ever foldable smartphones.know more details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+