Home
ಸುದ್ದಿಜಾಲ

40,000 ಡಿಸ್ಕೌಂಟ್! 64MP ಕ್ಯಾಮೆರಾ.. 512GB ಸ್ಟೋರೇಜ್.. ಒನ್‌ಪ್ಲಸ್ ಓಪನ್ ಬೆಲೆ ಭಾರೀ ಇಳಿಕೆ

ಫೋಲ್ಡ್ ಫೋನ್ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ. ಬರೋಬ್ಬರಿ 40 ಸಾವಿರ ರೂ. ಕಡಿಮೆ ಬೆಲೆಗೆ ಒನ್‌ಪ್ಲಸ್ ಮೊಬೈಲ್ ಖರೀದಿಸುವ ಸುವರ್ಣಾವಕಾಶ ಇದೆ. ಹೌದು, ಒನ್‌ಪ್ಲಸ್ ತನ್ನ ಒನ್‌ಪ್ಲಸ್ ಓಪನ್ (Oneplus Open) ಫೋಲ್ಡ್ ಫೋನಿನ ದರ ಕಡಿತಗೊಳಿಸಿದೆ. ಅಮೆಜಾನ್ ಸೈಟ್‌ನಲ್ಲಿ ಶೇ.29 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ ನೋ ಕಾಸ್ಟ್ ಇಎಂಐ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಬನ್ನಿ, ಈ ದೈತ್ಯ ಫೋನಿನ ಹೊಸ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಒನ್‌ಪ್ಲಸ್ ಓಪನ್ ಫೋಲ್ಡ್ ಮೊಬೈಲ್ ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಗಿತ್ತು. ಇದು ಸ್ನಾಪ್ ಡ್ರಾಗನ್ ಜೆನ್ 2 ಪ್ರೊಸೆಸರ್‌ ಹೊಂದಿದೆ. ಈ ಫೋನಿನಲ್ಲಿ 7.82 ಇಂಚಿನ 2K ಡಿಸ್ಪ್ಲೇ ಲಭ್ಯವಿದೆ. ಇದರಲ್ಲಿ 16GB RAM + 512GB ಸ್ಟೋರೇಜ್ ಇದೆ. ಹಾಗೆಯೇ 48 ಮೆಗಾಪಿಕ್ಸೆಲ್, 64 ಮೆಗಾಪಿಕ್ಸೆಲ್ ಮತ್ತು 48 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಮೊಬೈಲ್ 4805mAh ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

40,000 ಡಿಸ್ಕೌಂಟ್! 64MP ಕ್ಯಾಮೆರಾ.. ಒನ್‌ಪ್ಲಸ್ ಓಪನ್ ಬೆಲೆ ಭಾರೀ ಇಳಿಕೆ

ಒನ್‌ಪ್ಲಸ್ ಓಪನ್ ಬೆಲೆ ಮತ್ತು ಆಫರ್

ಒನ್‌ಪ್ಲಸ್ ಓಪನ್ ಮೊಬೈಲ್ ಪ್ರಸ್ತುತ 99,999 ರೂ.ಗೆ ಲಭ್ಯವಿದೆ. ಈ ಫೋಲ್ಡಬಲ್ ಫೋನನ್ನು ಕಂಪನಿಯು 1,39,999 ರೂ.ಗೆ ಬಿಡುಗಡೆ ಮಾಡಿತ್ತು. ಸದ್ಯ, ಅಮೆಜಾನ್ ನಲ್ಲಿ ಈ ಫೋನಿನ ಖರೀದಿ ಮೇಲೆ ಶೆ.29 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ 40,000 ರೂ. ಅಗ್ಗದ ಬೆಲೆಯಲ್ಲಿ ನೀವು ಖರೀದಿಸಬಹುದು. ಜೊತೆಗೆ, 3 ರಿಂದ 6 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯ ನೀಡಲಾಗುತ್ತಿದೆ. ಹಾಗೆಯೇ 22,800 ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಸಿಗುತ್ತದೆ. ಇದು ಎಮರಾಲ್ಡ್ ಡಸ್ಕ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ.


ಡಿಸ್ಪ್ಲೇ ಹೇಗಿದೆ

ಒನ್‌ಪ್ಲಸ್ ಓಪನ್ ಫೋಲ್ಡ್ ಮೊಬೈಲ್ 7.82 ಇಂಚಿನ ಅಮೋಲೆಡ್ ಮುಖ್ಯ ಡಿಸ್ಪ್ಲೇ ಹೊಂದಿದೆ. ಇದು 2K ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 2,800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಹಾಗೆಯೇ 6.31 ಇಂಚಿನ ಅಮೋಲೆಡ್ ಆಂತರಿಕ ಡಿಸ್ಪ್ಲೇ ಹೊಂದಿದೆ. ಇದು 2K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಈ ಡಿಸ್ಪ್ಲೇಯು ಅಲ್ಟ್ರಾ ತೆಳುವಾದ ಗಾಜಿನ ರಕ್ಷಣೆಯನ್ನು ಹೊಂದಿದೆ. ಮತ್ತು ಕವರ್ ಡಿಸ್ಪ್ಲೇಯು ಸೆರಾಮಿಕ್ ಗಾರ್ಡ್ ಹೊಂದಿದೆ.

ಪ್ರೊಸೆಸರ್ ಯಾವುದು

ಒನ್‌ಪ್ಲಸ್ ಓಪನ್ ಫೋಲ್ಡ್ ಫೋನ್ ಸ್ನಾಪ್ ಡ್ರಾಗನ್ 8 ಜೆನ್ 2 ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 13 ಆಧಾರಿತ OxygenOS 13.2 ನೊಂದಿಗೆ ಕೆಲಸ ಮಾಡುತ್ತದೆ. ಒನ್‌ಪ್ಲಸ್ ಓಪನ್ ಸ್ಮಾರ್ಟ್ ಫೋನ್ 16GB RAM ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿದೆ.

64MP ಟೆಲಿಫೋಟೋ ಕ್ಯಾಮೆರಾ

ಒನ್‌ಪ್ಲಸ್ ಓಪನ್ ಫೋನ್ 32 ಮೆಗಾಪಿಕ್ಸೆಲ್ ಕವರ್ ಸ್ಕ್ರೀನ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮತ್ತೊಂದು 20 ಮೆಗಾಪಿಕ್ಸೆಲ್ ಕ್ಯಾಮೆರಾ ಸಹ ಲಭ್ಯವಿದೆ. ಈ ಮೊಬೈಲ್ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 64 ಮೆಗಾಪಿಕ್ಸೆಲ್ 3X ಟೆಲಿಫೋಟೋ ಜೂಮ್ ಕ್ಯಾಮೆರಾ ಮತ್ತು 48 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆಂಗಲ್ ಲೆನ್ಸ್ ಒಳಗೊಂಡಿದೆ.

ಪವರ್ ಫುಲ್ ಬ್ಯಾಟರಿ

ಒನ್‌ಪ್ಲಸ್ ಓಪನ್ ಮೊಬೈಲ್ 4805mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 67W ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಒನ್‌ಪ್ಲಸ್ ಓಪನ್ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಅಲರ್ಟ್ ಸ್ಲೈಡರ್, 5G, ವೈ-ಫೈ 7, ಬ್ಲೂಟೂತ್ 5.3, ಯುಎಸ್‌ಬಿ ಸಿ ಪೋರ್ಟ್, ಡಾಲ್ಬಿ ಅಟ್ಮಾಸ್ ಸೌಂಡ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Oneplus Open available with Rs 40,000 Discount on amazon: check price, offers and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+