OnePlus Open: ಭಾರತದಲ್ಲಿ ಒನ್‌ಪ್ಲಸ್ ಓಪನ್ ಸ್ಮಾರ್ಟ್‌ಫೋನ್ ಲಾಂಚ್ ಡೇಟ್ ಬಹಿರಂಗ!
ಇತ್ತೀಚಿನ ದಿನಗಳಲ್ಲಿ ಫೋಲ್ಡಬಲ್ ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ಫೋಲ್ಡಬಲ್ ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿರುವ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕುವ ಭರದಲ್ಲಿ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ಪ್ರಯತ್ನಿಸುತ್ತಿವೆ. ಇದೇ ಒನ್‌ಪ್ಲಸ್ ಕಂಪೆನಿ ಕೂಡ ತನ್ನ ಮೊದಲ ಫೋಲ್ಡಬಲ್ ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಹೌದು, ಒನ್‌ಪ್ಲಸ್ ಕಂಪೆನಿ ತನ್ನ ಮೊದಲ ಫೋಲ್ಡಬಲ್ ಫೋನ್ ಒನ್‌ಪ್ಲಸ್ ಓಪನ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಒಪ್ಪೋ ಫೈಂಡ್ N3 ಸ್ಮಾರ್ಟ್‌ಫೋನ್ ಬಿಡುಗಡೆ ಆದ ಸಂದರ್ಭದಲ್ಲಿಯೇ ಒನ್‌ಪ್ಲಸ್ ಓಪನ್ ಬಿಡುಗಡೆ ದಿನಾಂಕ ರಿವೀಲ್ ಆಗಿರೋದು ವಿಶೇಷವಾಗಿದೆ. ಇನ್ನು ಒನ್‌ಪ್ಲಸ್ ಓಪನ್ ಫೋನ್ ಮೂಲಕ ಬಳಕೆದಾರರು ವೇಗವಾಗಿ ಮತ್ತು ಸುಗಮ ಕಾರ್ಯಕ್ಷಮತೆಯನ್ನು ಪಡೆಯಲಿದ್ದಾರೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾದ್ರೆ ಒನ್‌ಪ್ಲಸ್ ಓಪನ್ ಫೋನ್‌ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ ಓಪನ್ ಡಿಸ್‌ಪ್ಲೇ ರಚನೆ ಹೇಗಿದೆ?
ಒನ್‌ಪ್ಲಸ್ ಓಪನ್ ಸ್ಮಾರ್ಟ್‌ಫೋನ್ 7.82 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 2,268 x 2,440 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರಲಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿರಬಹುದು ಎನ್ನಲಾಗಿದೆ. ಇದಲ್ಲದೆ ಸ್ಮಾರ್ಟ್‌ಫೋನ್ 6.31 ಇಂಚಿನ ಕವರ್ ಡಿಸ್‌ಪ್ಲೇಯನ್ನು ಹೊಂದಿರಬಹುದು. ಇದು 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 1,116 x 2,484 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಬಹುದು ಎನ್ನಲಾಗಿದೆ.
ಒನ್‌ಪ್ಲಸ್ ಓಪನ್ ಪ್ರೊಸೆಸರ್ ನಿರೀಕ್ಷೆ ಏನು?
ಒನ್‌ಪ್ಲಸ್ ಓಪನ್ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 OS ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಹಾಗೆಯೇ 18 GB RAM ಮತ್ತು 512 GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಮೆಮೊರಿ ಕಾರ್ಡ್ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.
ಒನ್‌ಪ್ಲಸ್ ಓಪನ್ ಕ್ಯಾಮೆರಾ ಸೆಟ್‌ಅಪ್ ಏನಿರಬಹುದು?
ಒನ್‌ಪ್ಲಸ್ ಓಪನ್ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಮೂರನೇ ಕ್ಯಾಮೆರಾ 64-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರಲಿದೆ. ಇದಲ್ಲದೆ 32-ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ ಎನ್ನಲಾಗಿದೆ.
ಒನ್‌ಪ್ಲಸ್ ಓಪನ್ ಬ್ಯಾಟರಿ ಮತ್ತು ಇತರೆ ಫೀಚರ್ಸ್
ಒನ್‌ಪ್ಲಸ್ ಓಪನ್ ಸ್ಮಾರ್ಟ್‌ಫೋನ್ 4,805mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಬ್ಲೂಟೂತ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿರಬಹುದು ಎಂಬ ನಿರೀಕ್ಷೆಯಿದೆ. ಇದರಲ್ಲಿ ಅಲರ್ಟ್ ಸ್ಲೈಡರ್ ಕೂಡ ಇರಲಿದೆ ಎಂದು ಅಧಿಕೃತ ಟೀಸರ್‌ಗಳು ತೋರಿಸಿವೆ.
ಒನ್‌ಪ್ಲಸ್ ಓಪನ್ ಬೆಲೆ ಮತ್ತು ಲಭ್ಯತೆ
ಒನ್‌ಪ್ಲಸ್ ಓಪನ್ ಬೆಲೆ $1,699 (ಸುಮಾರು 1,41,490ರೂ) ಆಗಿರಬಹುದು. ಈ ಸ್ಮಾರ್ಟ್‌ಫೋನ್ ಒಂದೇ ರೀತಿಯ ಶ್ರೇಣಿಯ ಬೆಲೆಯನ್ನು ಹೊಂದಿರಬಹುದು ಅಥವಾ US ಮಾರುಕಟ್ಟೆಗಿಂತ ಭಾರತದಲ್ಲಿ ಕಡಿಮೆಯಿರಬಹುದು ಎನ್ನಲಾಗಿದೆ. ಒನ್‌ಪ್ಲಸ್ ತನ್ನ ಮೊದಲ ಮಡಿಸಬಹುದಾದ ಫೋನ್‌ಗೆ ಭಾರತದಲ್ಲಿ ಬೆಲೆ ಹೇಗೆ ನಿಗದಿಪಡಿಸಲಿದೆ ಅನ್ನೊದನ್ನ ಕಾದು ನೋಡಬೇಕಿದೆ. ಇದಲ್ಲದೆ OnePlus ಓಪನ್ ಎಮರಾಲ್ಡ್ ಎಕ್ಲಿಪ್ಸ್ ಮತ್ತು ವಾಯೇಜ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ.


Click it and Unblock the Notifications








