ಒನ್‌ಪ್ಲಸ್‌ನಿಂದ ಹೊಸ ಸ್ಮಾರ್ಟ್ ಟ್ಯಾಬ್ಲೆಟ್ ಅನಾವರಣ! ಭಾರತದಲ್ಲಿ ಬೆಲೆ ಎಷ್ಟು ಗೊತ್ತಾ?
ಒನ್‌ಪ್ಲಸ್ ಕಂಪೆನಿ ತನ್ನ ವಿಭಿನ್ನ ಶ್ರೇಣಿಯ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಸ್ಮಾರ್ಟ್ ಟ್ಯಾಬ್ಲೆಟ್‌ಗಳನ್ನು ಸಹ ಪರಿಚಯಿಸುತ್ತಾ ಬಂದಿದೆ. ಇದೀಗ ಭಾರತದಲ್ಲಿ ಹೊಸ ಒನ್‌ಪ್ಲಸ್ ಪ್ಯಾಡ್ Go ಅನ್ನು ಬಿಡುಗಡೆ ಮಾಡಿದೆ. ಇದು ಒನ್‌ಪ್ಲಸ್ ಕಂಪೆನಿಯ ಎರಡನೇ ಟ್ಯಾಬ್ಲೆಟ್ ಆಗಿದ್ದು, ಕ್ವಾಡ್ ಸ್ಪೀಕರ್ ಸೆಟ್‌ಅಪ್ ಹೊಂದಿದೆ.
ಹೌದು, ಒನ್‌ಪ್ಲಸ್ ಪ್ಯಾಡ್ Go ಸ್ಮಾರ್ಟ್ ಟ್ಯಾಬ್ಲೆಟ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಟ್ಯಾಬ್ಲೆಟ್ ಮೀಡಿಯಾ ಟೆಕ್‌ನ ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರಲಿದೆ. ಇನ್ನು ಸ್ಮಾರ್ಟ್ ಟ್ಯಾಬ್ಲೆಟ್ Wi-Fi ಮತ್ತು LTE ಆಯ್ಕೆಗಳಲ್ಲಿ ಬರುತ್ತದೆ. ಜೊತೆಗೆ 33W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್ ಟ್ಯಾಬ್ಲೆಟ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ ಪ್ಯಾಡ್ Go ಫೀಚರ್ಸ್ ಹೇಗಿದೆ?
ಒನ್‌ಪ್ಲಸ್ ಪ್ಯಾಡ್ Go ಸ್ಮಾರ್ಟ್ ಟ್ಯಾಬ್ 11.35 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಪ್ಯಾನೆಲ್ ಅನ್ನು TÜV ರೈನ್‌ಲ್ಯಾಂಡ್ ಪ್ರಮಾಣೀಕರಿಸಿದೆ. ಇದು 400 ನೀಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ. ಇದಲ್ಲದೆ ಡಿಸ್‌ಪ್ಲೇ 7:5 ರಚನೆಯ ಅನುಪಾತವನ್ನು ಸಹ ಪಡೆದಿದೆ. ಇನ್ನು ಡಿಸ್‌ಪ್ಲೇ 260 PPI ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, 86.40% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ.
ಒನ್‌ಪ್ಲಸ್ ಪ್ಯಾಡ್ Go ಟ್ಯಾಬ್ ಆಕ್ಟಾ-ಕೋರ್ Helio G99 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದರ LTE ಮಾದರಿ 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದಲ್ಲಿ ಬರಲಿದೆ. ಇದರ ವೈಫೈ ಮಾಡೆಲ್ 8GB RAM ಮತ್ತು 128/256GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ.
ಇನ್ನು ಒನ್‌ಪ್ಲಸ್ ಪ್ಯಾಡ್ Go ಟ್ಯಾಬ್ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ. ಇದರ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದು 8,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಟ್ಯಾಬ್ಲೆಟ್ ಭದ್ರತಾ ಉದ್ದೇಶಕ್ಕಾಗಿ ಫೇಸ್ ಅನ್‌ಲಾಕ್ ಬೆಂಬಲವನ್ನು ಸಹ ಹೊಂದಿದೆ.
ಭಾರತದಲ್ಲಿ ಒನ್‌ಪ್ಲಸ್ ಪ್ಯಾಡ್ Go ಟ್ಯಾಬ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಒನ್‌ಪ್ಲಸ್ ಪ್ಯಾಡ್ Go ಟ್ಯಾಬ್ ವೈ-ಫೈ ಮಾದರಿಯ 8GB RAM + 128GB ಇಂಟರ್ ಸ್ಟೋರೇಜ್ ಆಯ್ಕೆಯು 19,999ರೂ.ಬೆಲೆಯನ್ನು ಹೊಂದಿದೆ. ಇನ್ನು ಇದರ LTE ರೂಪಾಂತರದ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯು 21,999ರೂ.ಬೆಲೆಯಲ್ಲಿ ಸಿಗಲಿದೆ. ಇದು ಅಕ್ಟೋಬರ್ 20 ರಿಂದ ಸೇಲ್ ಆಗಲಿದ್ದು, ಒನ್‌ಪ್ಲಸ್ ಇಂಡಿಯಾ ವೆಬ್‌ಸೈಟ್, ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್, ಫ್ಲಿಪ್‌ಕಾರ್ಟ್, ಅಮೆಜಾನ್, ರಿಲಯನ್ಸ್, ಕ್ರೋಮಾದಂತಹ ಆಫ್‌ಲೈನ್ ಔಟ್‌ಲೆಟ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ.
ಲಾಂಚ್ ಆಫರ್ ಏನಿದೆ?
ಈ ಸ್ಮಾರ್ಟ್ ಟ್ಯಾಬ್ಲೆಟ್ ಖರೀದಿಸುವ ಗ್ರಾಹಕರು 2,000ರೂ. ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1,399ರೂ. ಮೌಲ್ಯದ ಫೋಲಿಯೊ ಕವರ್ ಅನ್ನು ಸಹ ಪಡೆದುಕೊಳ್ಳಲಿದ್ದಾರೆ. ಇನ್ನು ಈ ಸ್ಮಾರ್ಟ್ ಟ್ಯಾಬ್ಲೆಟ್ ಟ್ವಿನ್ ಮಿಂಟ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.


Click it and Unblock the Notifications








