ಒನ್‌ಪ್ಲಸ್ 'ರೆಡ್ ರಶ್ ಡೇಸ್' ಸೇಲ್ ಮತ್ತೆ ಆರಂಭ: ರಿಯಾಯಿತಿಗಳ ಸುರಿಮಳೆ!
ಚೀನಾದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಒನ್‌ಪ್ಲಸ್, ಭಾರತೀಯ ಮಾರುಕಟ್ಟೆಯಲ್ಲಿ ತನ್ನ 'ರೆಡ್ ರಶ್ ಡೇಸ್' ಮಾರಾಟವನ್ನು ಮತ್ತೆ ಘೋಷಿಸಿದೆ. ಇದೇ ಏಪ್ರಿಲ್ 8 ರಿಂದ 14 ರವರೆಗೆ ಮತ್ತೊಮ್ಮೆ ಒನ್‌ಪ್ಲಸ್ ತನ್ನ 'ರೆಡ್ ರಶ್ ಡೇಸ್' ಸೇಲ್ ಅನ್ನು ಆಯೋಜಿಸಿದ್ದು, ಈ ಮಾರಾಟದ ವೇಳೆಯಲ್ಲಿ ಒನ್‌ಪ್ಲಸ್ 13 ಸರಣಿ, 12 ಸರಣಿ ಮತ್ತು ಒನ್‌ಪ್ಲಸ್ ನಾರ್ಡ್ ಸರಣಿಯ ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ಈ ಎಲ್ಲಾ ರಿಯಾಯಿತಿಗಳನ್ನು ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್, ಅಂಗಡಿಗಳು ಮತ್ತು ಕ್ರೋಮಾ, ವಿಜಯ್ ಸೇಲ್ಸ್ ಸೇರಿದಂತೆ ಇತರ ಚಿಲ್ಲರೆ ಪಾಲುದಾರರ ಮೂಲಕ ಪಡೆಯಬಹುದು. ರಿಯಾಯಿತಿಗಳ ವಿವರಗಳು ಹೀಗಿವೆ,
ರಿಯಾಯಿತಿಗಳ ವಿವರ:
ಒನ್‌ಪ್ಲಸ್ 13 ಸರಣಿ: ಒನ್‌ಪ್ಲಸ್ 13 ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ರೂ. 5,000 ತ್ವರಿತ ರಿಯಾಯಿತಿ, ವಿನಿಮಯ ಮತ್ತು ನೋ ಕಾಸ್ಟ್ ಇಎಂಐ ಸೌಲಭ್ಯ ಲಭ್ಯವಿದೆ. ಒನ್‌ಪ್ಲಸ್ 13 ಆರ್ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ರೂ. 3,000 ರಿಯಾಯಿತಿ ಮತ್ತು 16+512 ಜಿಬಿ ವೇರಿಯಂಟ್ ಮೇಲೆ ಹೆಚ್ಚುವರಿ ರೂ. 2,000 ರಿಯಾಯಿತಿ ಸಿಗಲಿದೆ. ಇವುಗಳಲ್ಲಿ ಒನ್‌ಪ್ಲಸ್ 13 ಸ್ಮಾರ್ಟ್‌ಫೋನ್ ಮೇಲೆ ರೂ. 7,000 ವಿನಿಮಯ ಬೋನಸ್ ಮತ್ತು ಒನ್‌ಪ್ಲಸ್ 13 ಆರ್ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ರೂ. 4,000 ವಿನಿಮಯ ಬೋನಸ್ ದೊರೆಯುತ್ತದೆ.
ಒನ್‌ಪ್ಲಸ್ 12 ಸರಣಿ: ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ರೂ. 13,000 ವರೆಗೆ ಬೆಲೆ ಇಳಿಕೆ ಮತ್ತು ರೂ. 6,000 ಬ್ಯಾಂಕ್ ರಿಯಾಯಿತಿ ಲಭ್ಯವಿದೆ. ಜೊತೆಗೆ, 6 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯವೂ ಇದೆ.
ಒನ್‌ಪ್ಲಸ್ ನಾರ್ಡ್ 4: ಈ ಜನಪ್ರಿಯ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಗೆ ರೂ. 4,500 ಬ್ಯಾಂಕ್ ರಿಯಾಯಿತಿ ಮತ್ತು ಹೆಚ್ಚುವರಿ ರೂ. 500 ರಿಯಾಯಿತಿ ಲಭ್ಯವಿದೆ. ಗ್ರಾಹಕರು 6 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಸಹ ಪಡೆಯಬಹುದು.
ಒನ್‌ಪ್ಲಸ್ ನಾರ್ಡ್ ಸಿಇ4 ಮತ್ತು ಒನ್‌ಪ್ಲಸ್ ಸಿಇ4 ಲೈಟ್: ಒನ್‌ಪ್ಲಸ್ ನಾರ್ಡ್ ಸಿಇ4 ಸ್ಮಾರ್ಟ್‌ಫೋನ್ ಖರೀದಿದಾರರಿಗೆ ರೂ. 2,000 ಬ್ಯಾಂಕ್ ರಿಯಾಯಿತಿ ಮತ್ತು ರೂ. 1,000 ರಿಯಾಯಿತಿ ಲಭ್ಯವಿದೆ. ಒನ್‌ಪ್ಲಸ್ ನಾರ್ಡ್ ಸಿಇ4 ಲೈಟ್ ಸ್ಮಾರ್ಟ್‌ಫೋನ್ ರೂ. 1,500 ಬ್ಯಾಂಕ್ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಈ ಎರಡೂ ಸ್ಮಾರ್ಟ್‌ಫೋನ್‌ಗಳಿಗೆ 6 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯವಿದೆ.

ಒನ್‌ಪ್ಲಸ್ ಟ್ಯಾಬ್ಲೆಟ್‌ಗಳು: ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ಲೆಟ್ ಖರೀದಿಸುವ ಗ್ರಾಹಕರಿಗೆ ರೂ. 2,000 ಬ್ಯಾಂಕ್ ರಿಯಾಯಿತಿ ಮತ್ತು ರೂ. 5,000 ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ. ವಿದ್ಯಾರ್ಥಿಗಳಿಗೆ ಹೆಚ್ಚುವರಿ ರೂ. 1,000 ರಿಯಾಯಿತಿ ದೊರೆಯುತ್ತದೆ. ಗ್ರಾಹಕರು 9 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಸಹ ಪಡೆಯಬಹುದು.
ಒನ್‌ಪ್ಲಸ್ ಪ್ಯಾಡ್ ಗೋ: ಒನ್‌ಪ್ಲಸ್ ಪ್ಯಾಡ್ ಗೋ ಟ್ಯಾಬ್ಲೆಟ್ ಖರೀದಿಸುವ ಗ್ರಾಹಕರಿಗೆ ರೂ. 2,000 ಬ್ಯಾಂಕ್ ರಿಯಾಯಿತಿ ಮತ್ತು ಹೆಚ್ಚುವರಿ ರೂ. 1,000 ರಿಯಾಯಿತಿ ಲಭ್ಯವಿದೆ. ಗ್ರಾಹಕರು 6 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯ ಮತ್ತು ರೂ. 1,000 ವಿದ್ಯಾರ್ಥಿ ರಿಯಾಯಿತಿಯನ್ನು ಸಹ ಪಡೆಯಬಹುದು.
ಎಲ್ಲಿ ಲಭ್ಯವಿದೆ?
ಈ ರಿಯಾಯಿತಿಗಳನ್ನು ಇದೇ ಏಪ್ರಿಲ್ 8 ರಿಂದ 14 ರವರೆಗೆ ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್, ಅಂಗಡಿಗಳು ಮತ್ತು ಕ್ರೋಮಾ, ವಿಜಯ್ ಸೇಲ್ಸ್ ಸೇರಿದಂತೆ ಇತರ ಚಿಲ್ಲರೆ ಪಾಲುದಾರರ ಮೂಲಕ ಪಡೆಯಬಹುದು.


Click it and Unblock the Notifications








