ಈಗ ಬೇಡ TV, ದೀಪಾವಳಿಗೆ ಒನ್‌ಪ್ಲಸ್‌ ಸ್ಮಾರ್ಟ್‌ TV: ರಿಮೋಟ್ ಬೇಕಾಗಿಲ್ಲ, ಮಾತಿನಲ್ಲಿಯೇ ಎಲ್ಲಾ...!

|

ಭಾರತೀಯ ಮಾರುಕಟ್ಟೆಯೂ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯ ರುಚಿ ನೋಡಿರುವ ಕಂಪನಿಗಳು ಒಂದ ಹಿಂದೆ ಒಂದರಂತೆ ಹಲವು ವಸ್ತುಗಳನ್ನು ತಮ್ಮದಲ್ಲದ ವಿಭಾಗದಿಂದ ಲಾಂಚ್ ಮಾಡುತ್ತಿವೆ. ಇದೇ ಮಾದರಿಯಲ್ಲಿ ಮಾರುಕಟ್ಟೆಗೆ ಶಿಯೋಮಿ TVಯನ್ನು ಲಾಂಚ್ ಮಾಡಿದೆ. ಇದನ್ನು ಅನುಸರಿಸಲು ಮುಂದಾಗಿರುವ ಪ್ರೀಮಿಯಮ್ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್‌ಪ್ಲಸ್ ಈ ಬಾರಿ ಮಾರುಕಟ್ಟೆಗೆ ಪ್ರೀಮಿಯಮ್ ಸ್ಮಾರ್ಟ್TVಯನ್ನು ಲಾಂಚ್ ಮಾಡಲು ಮುಂದಾಗಿದೆ.

ಈಗ ಬೇಡ TV, ದೀಪಾವಳಿಗೆ ಒನ್‌ಪ್ಲಸ್‌ ಸ್ಮಾರ್ಟ್‌ TV: ರಿಮೋಟ್ ಬೇಕಾಗಿಲ್ಲ..!

ಈಗಾಗಲೇ ಮಾರುಕಟ್ಟೆಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆಯನ್ನು ನಡೆಸಿರುವ ಒನ್‌ಪ್ಲಸ್, ಇದರೊಂದಿಗೆ ಸ್ಮಾರ್ಟ್‌ TVಯತನ್ನು ಲಾಂಚ್ ಮಾಡಲು ಸಿದ್ಧತೆಯನ್ನು ನಡೆಸಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯಲಿದ್ದು, ನೇರವಾಗಿ ಸ್ಯಾಮ್‌ಸಂಗ್‌ಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದ್ದು, ಮಾರುಕಟ್ಟೆಯ ಸ್ವರೂಪವನ್ನು ಬದಲಾಯಿಸುವ ಕಾರ್ಯಕ್ಕೆ ಮುಂದಾಗಲಿದೆ.

ಒನ್‌ಪ್ಲಸ್ TV:

ಒನ್‌ಪ್ಲಸ್ TV:

ಮಾರುಕಟ್ಟೆಯಲ್ಲಿ ಈಗಾಗಲೇ ದೊರೆಯುತ್ತಿರುವ ಸ್ಮಾರ್ಟ್‌TVಗಳಿಗೆ ಒನ್‌ಪ್ಲಸ್ TV ಸೆಡ್ಡು ಹೊಡೆಯಲಿದ್ದು, ಇದರಲ್ಲಿ ಸ್ಮಾರ್ಟ್‌ AI ಅಸಿಸ್ಟೆಂಟ್ ಇರಲಿದೆ. ಇದಕ್ಕಾಗಿಯೇ ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಮಾದರಿಯಲ್ಲಿ ತನ್ನದೇ ಒನ್‌ಪ್ಲಸ್ ವಾಯ್ಸ್ ಅಸಿಸ್ಟೆಂಟ್ ಅನ್ನು ಅಭಿವೃದ್ಧಿ ಪಡಿಸಲಿದೆ ಎನ್ನಲಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಶಕೆಗೆ ಕಾರಣವಾಗಲಿದೆ.

ಬೆಸ್ಟ್ ವಿನ್ಯಾಸ:

ಬೆಸ್ಟ್ ವಿನ್ಯಾಸ:

ಒನ್‌ಪ್ಲಸ್ TV ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಆವೃತ್ತಿಯಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿದೆ. ಈಗಾಗಲೇ ಟಾಪ್ ಟಿವಿ ಕಂಪನಿಗಳು ಲಾಂಚ್ ಮಾಡುತ್ತಿರುವ ಟಿವಿಗಳಿಗೆ ಸಮನಾಗಿ ಕಾಣಿಸಿಕೊಳ್ಳು ಒನ್‌ಪ್ಲಸ್ TV, ವಿನ್ಯಾಸದಿಂದಲೇ ಸದ್ದು ಮಾಡಲಿದೆ. ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಳ್ಳುವ ಮಾದರಿಯಲ್ಲಿ ಇರಲಿದೆ.

ಬೆಸ್ಟ್ ಸಾಫ್ಟ್‌ವೇರ್:

ಬೆಸ್ಟ್ ಸಾಫ್ಟ್‌ವೇರ್:

ಇದಲ್ಲದೇ ಒನ್‌ಪ್ಲಸ್ TVಯಲ್ಲಿ ಉತ್ತಮ ಗುಣಮಟ್ಟದ ಸಾಫ್ಟ್‌ವೇರ್ ಅನ್ನು ನೀಡಲು ಒನ್‌ಪ್ಲಸ್ ಮುಂದಾಗಿದ್ದು, ಸ್ಮಾರ್ಟ್‌ಫೋನ್ ಮಾದರಿಯಲ್ಲಿಯೇ ಆಪ್‌ಡೇಟ್‌ಗಳನ್ನು ನೀಡುತ್ತಾ, ಸ್ಮಾರ್ಟ್‌ TV ವಿನ್ಯಾಸವನ್ನು ಮತ್ತು ಅರ್ಥವನ್ನು ಬದಲಾಯಿಸುವ ಯೋಜನೆಯನ್ನು ಹೊಂದಿದೆ.

4K ಗುಣಮಟ್ಟ:

4K ಗುಣಮಟ್ಟ:

ಇದಲ್ಲದೆ ಒನ್‌ಪ್ಲಸ್ TV 4K ಗುಣಮಟ್ಟವನ್ನು ಹೊಂದಿರಲಿದೆ. ಇದಲ್ಲದೇ ಮಾರುಕಟ್ಟೆಯಲ್ಲಿ TV ನೋಡುವ ವಿಧಾನವನ್ನು ಇದು ಬದಲಾಯಿಸಲಿದೆ ಎನ್ನಲಾಗಿದೆ. ಸ್ಯಾಮ್‌ಸಂಗ್ ದುಬಾರಿ ಬೆಲೆಗೆ ಲಾಂಚ್ ಮಾಡುವ ಸ್ಮಾರ್ಟ್‌ಟಿವಿಗಳನ್ನು ಅತ್ಯಂದ ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ ಎನ್ನಲಾಗಿದೆ.

ಮಾತಿನಲ್ಲೆ ಎಲ್ಲಾ:

ಮಾತಿನಲ್ಲೆ ಎಲ್ಲಾ:

ಒನ್‌ಪ್ಲಸ್ TV೭ಯಲ್ಲಿ ರಿಮೋಟ್ ಬಳಕೆಗೆ ಬೇಕಾಗಿಯೇ ಇರುವುದಿಲ್ಲ, ಕೇವಲ ನೀವು ಮಾತನಾಡಿದರೆ ಸಾಕು ಆದರೆ ತಾನಾಗಿ ಕಾರ್ಯವನ್ನು ನಿರ್ವಹಿಸಲಿದೆ. ಇದಕ್ಕದಾಗಿಯೇ ವಾಯ್ಡ್ ಅಸಿಸ್ಟೆಂಟ್ ಅನ್ನು ನೀಡಲಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಭಾಷ್ಯ.

Best Mobiles in India

English summary
OnePlus release its first-ever TV, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X