Home
ಸುದ್ದಿಜಾಲ

OnePlus 13 ಮತ್ತು 13s ಫೋನ್ ಬಳಕೆದಾರರು ಈ ಭರ್ಜರಿ ಸಿಹಿಸುದ್ದಿ ನೋಡಿ!

ಭಾರತದಲ್ಲಿ OnePlus ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಾದ OnePlus 13 ಮತ್ತು OnePlus 13s‌ಗೆ ಹೊಸ OxygenOS 16 ಅಪ್‌ಡೇಟ್‌ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಅಪ್‌ಡೇಟ್ ದೇಶದಲ್ಲಿ ಹಂತ ಹಂತವಾಗಿ ಲಭ್ಯವಾಗುತ್ತಿದ್ದು, ಮೊದಲು OnePlus 13 ಬಳಕೆದಾರರಿಗೆ CPH2649_16.0.0.210 (EX01) ಹಾಗೂ OnePlus 13s ಬಳಕೆದಾರರಿಗೆ CPH2723_16.0.0.211 (EX01) ಆವೃತ್ತಿ ಲಭ್ಯವಾಗಿದೆ. ಇದರಿಂದ ಈ ಎರಡೂ ಫೋನ್‌ಗಳ ಬಳಕೆದಾರರು ಸಾಕಷ್ಟು ಬದಲಾವಣೆಯನ್ನು ಕಾಣಲಿದ್ದಾರೆ. ಹಾಗಾದರೆ, ಹೊಸ OxygenOS 16 ಅಪ್‌ಡೇಟ್‌ ಹೇಗಿದೆ?, ಏನೆಲ್ಲಾ ಬದಲಾವಣೆಗಳನ್ನು ಕಾಣಬಹುದು ಎಂಬುದನ್ನು ನೋಡೋಣ ಬನ್ನಿ.

ಹೊಸ ಯೂಐ ವಿನ್ಯಾಸ ಮತ್ತು ಅನಿಮೇಷನ್‌ಗಳು
OxygenOS 16 ಅಪ್‌ಡೇಟ್‌ನ ಪ್ರಮುಖ ಬದಲಾವಣೆಯೆಂದರೆ ಅದರ ನವೀಕರಿಸಿದ ಯೂಐ ವಿನ್ಯಾಸವಾಗಿದೆ. ಈ ಅಪ್‌ಡೇಟ್ ಸಿಸ್ಟಮ್ ಆ್ಯಪ್‌ಗಳಲ್ಲಿ ಮತ್ತು ಹೋಮ್ ಸ್ಕ್ರೀನ್‌ನಲ್ಲಿ ಅನಿಮೇಷನ್‌ಗಳನ್ನು ಹೆಚ್ಚು ನೈಸರ್ಗಿಕವಾಗಿ ಮತ್ತು ಸ್ಮೂತ್ ಆಗಿ ಬದಲಾಯಿಸುತ್ತದೆ. ಐಕಾನ್‌ಗಳು, ವಿಜೆಟ್‌ಗಳು, ಫೋಲ್ಡರ್‌ಗಳು ಹಾಗೂ ಸ್ಮಾರ್ಟ್ ಸೈಡ್‌ಬಾರ್‌ಗಳಲ್ಲಿ ಈಗ ಹೆಚ್ಚು ನಿಖರವಾದ ಚಲನೆ ಮತ್ತು ಇಂಟರಾಕ್ಷನ್ ಅನುಭವ ದೊರೆಯುತ್ತದೆ. ಬಳಕೆದಾರರು ಹೋಮ್ ಸ್ಕ್ರೀನ್‌ನಲ್ಲೇ ಆ್ಯಪ್‌ಗಳನ್ನು ವೇಗವಾಗಿ ತೆರೆಯಬಹುದು ಮತ್ತು ಬಳಸಬಹುದು.

ವೇಗ ಮತ್ತು ಬ್ಯಾಟರಿ ಉಳಿತಾಯದ ಸುಧಾರಣೆ
ಹೊಸ ಅಪ್‌ಡೇಟ್‌ನಲ್ಲಿ ಆ್ಯಪ್ ಲೋಡಿಂಗ್ ಸಮಯ ಕಡಿಮೆಯಾಗಿದೆ ಹಾಗೂ ಫೋಟೋ ಆ್ಯಲ್ಬಂಗಳು ಈಗ ಹೆಚ್ಚು ವೇಗವಾಗಿ ಲೋಡ್ ಆಗುತ್ತವೆ. ಹೊಸ ನೆಟ್‌ವರ್ಕ್ ಪವರ್-ಸೇವಿಂಗ್ ಮೋಡ್ ಬ್ಯಾಟರಿ ಸವಕಳಿಯನ್ನು ಕಡಿಮೆಗೊಳಿಸುತ್ತದೆ, ವಿಶೇಷವಾಗಿ ನೀವು ಆಫ್ಲೈನ್ ಅಥವಾ ರೋಮಿಂಗ್‌ನಲ್ಲಿ ಇದ್ದಾಗ.ಇದೇ ಸಮಯದಲ್ಲಿ, ಪವರ್-ಸೇವಿಂಗ್ ಮೋಡ್‌ಗೆ ಟಿಯರ್ಡ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ ಸೇರಿಸಲಾಗಿದೆ. ಇದು ಬ್ಯಾಟರಿ ಮಟ್ಟಕ್ಕೆ ಅನುಗುಣವಾಗಿ ಕಾರ್ಯಕ್ಷಮತೆಯನ್ನು ಹೊಂದಿಸುತ್ತದೆ, ಇದರಿಂದ ಸಾಧನದ ಸ್ಮೂತ್ ಕಾರ್ಯಾಚರಣೆ ಮತ್ತು ದೀರ್ಘ ಬ್ಯಾಟರಿ ಆಯುಷ್ಯ ದೊರೆಯುತ್ತದೆ.

OnePlus 13 ಮತ್ತು 13s ಫೋನ್ ಬಳಕೆದಾರರು ಈ ಭರ್ಜರಿ ಸಿಹಿಸುದ್ದಿ ನೋಡಿ!

Mind Space ಮತ್ತು AI ವೈಶಿಷ್ಟ್ಯಗಳ ನವೀಕರಣ
Mind Space ಈಗ ಹೆಚ್ಚು ಬುದ್ಧಿವಂತವಾಗಿದೆ. ಹೊಸ ವಾಯ್ಸ್ ಮೆಮೊರಿ ವೈಶಿಷ್ಟ್ಯದ ಮೂಲಕ ಪ್ಲಸ್ ಕೀ ಒತ್ತಿ ಹಿಡಿದರೆ ನಿಮ್ಮ ಯೋಚನೆಗಳನ್ನು ತಕ್ಷಣ ಧ್ವನಿಯಾಗಿ Mind Space‌ನಲ್ಲಿ ದಾಖಲಿಸಬಹುದು. Mind Assistant ಉಪಕರಣದಿಂದ ನಿಮ್ಮ ಉಳಿಸಿದ ವಿಷಯವನ್ನು ಹುಡುಕಲು, ಫೇವರಿಟ್ ಮಾಡಲು ಮತ್ತು ನಕಲಿಸಲು ಸಹಾಯವಾಗುತ್ತದೆ.

ಅದೇ ರೀತಿ, AI ಆಧಾರಿತ ಫೋಟೋ ವಿಭಾಗವು ಈಗ ಹೊಸ ವಿನ್ಯಾಸದಲ್ಲಿ ಬರುತ್ತದೆ. ಚಿತ್ರಗಳು ಸ್ಪಷ್ಟ ವಿಭಾಗಗಳಲ್ಲಿ ವರ್ಗೀಕರಿಸಲ್ಪಟ್ಟಿದ್ದು, ಹೆಚ್ಚು ಬಳಸುವ ಆ್ಯಲ್ಬಂಗಳು ಮೊದಲು ತೋರಿಸಲಾಗುತ್ತವೆ. ಜೊತೆಗೆ ಹೊಸ ವಿಡಿಯೋ ಎಡಿಟಿಂಗ್ ಟೂಲ್ಸ್‌ಗಳು ಸ್ಪ್ಲಿಟ್, ಮರ್ಜ್, ಟ್ರಾನ್ಸಿಷನ್, ವೇಗ ಬದಲಾವಣೆ ಮುಂತಾದ ಆಯ್ಕೆಗಳನ್ನು ಒಳಗೊಂಡಿವೆ. ಇದು ಕಂಟೆಂಟ್ ಕಕ್ರಿಯೇಟರ್‌ಗಳಿಗೆ ಹೆಚ್ಚು ನೆರವಾಗುವ ನಿರೀಕ್ಷೆ ಇದೆ.

ಹೊಸ ರೆಕಾರ್ಡರ್ ಮತ್ತು AI Writer
ರೆಕಾರ್ಡರ್ ಆ್ಯಪ್ ಈಗ ಸಂಪೂರ್ಣವಾಗಿ ಹೊಸ ಇಂಟರ್‌ಫೇಸ್ ಹೊಂದಲಿದೆ AI ಆಧಾರಿತ ಶಬ್ದ ನಿರ್ವಹಣೆಯಿಂದ ಹಿನ್ನೆಲೆ ಶಬ್ದ ಕಡಿಮೆಯಾಗುತ್ತದೆ ಮತ್ತು ಧ್ವನಿ ಹೆಚ್ಚು ಸ್ಪಷ್ಟವಾಗಿ ದಾಖಲಿಸುತ್ತದೆ. AI Writer ವೈಶಿಷ್ಟ್ಯ ಬಳಕೆದಾರರಿಗೆ ಆಲೋಚನೆಗಳನ್ನು ಸರಳವಾಗಿ ಪದಗಳಲ್ಲಿ ರೂಪಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೋಮ್ ಸ್ಕ್ರೀನ್‌ನಲ್ಲಿ ಐಕಾನ್‌ಗಳು, ವಿಜೆಟ್‌ಗಳು ಮತ್ತು ಶಾರ್ಟ್‌ಕಟ್‌ಗಳನ್ನು ಇಷ್ಟಕ್ಕೆ ತಕ್ಕಂತೆ ಮರುಹೊಂದಿಸಲು ಹಾಗೂ ವೈಯಕ್ತಿಕ ರೀತಿಯಲ್ಲಿ ಕಸ್ಟಮೈಸ್ ಮಾಡಲು ಅವಕಾಶವಿದೆ.

ಒಟ್ಟಾರೆಯಾಗಿ, OxygenOS 16 ಅಪ್‌ಡೇಟ್‌ನಿಂದ OnePlus ಬಳಕೆದಾರರಿಗೆ ಹೆಚ್ಚು ನವೀನ, ವೇಗದ ಮತ್ತು ಬುದ್ಧಿವಂತ ಅನುಭವ ದೊರೆಯಲಿದೆ. ಹೊಸ ವಿನ್ಯಾಸ, ಸುಧಾರಿತ ಬ್ಯಾಟರಿ ನಿರ್ವಹಣೆ ಮತ್ತು AI ವೈಶಿಷ್ಟ್ಯಗಳ ಸಂಯೋಜನೆಯಿಂದ ಈ ಅಪ್‌ಡೇಟ್ OnePlus ಸಾಧನಗಳಲ್ಲಿ ಇನ್ನಷ್ಟು ಪ್ರೀಮಿಯಂ ಅನುಭವವನ್ನು ಒದಗಿಸಲಿವೆ. ಈ ಅಪ್‌ಡೇಟ್ ದೇಶದಲ್ಲಿ ಹಂತ ಹಂತವಾಗಿ ಲಭ್ಯವಾಗುತ್ತಿದ್ದು, ಮುಂದಿನ ಕೆಲವು ವಾರಗಳಲ್ಲಿ ಇತರ ಫೋನ್‌ಗಳಿಗೂ ಲಭ್ಯವಾಗುವ ನಿರೀಕ್ಷೆ ಇದೆ.

Best Mobiles in India

English summary
OnePlus has officially released the new OxygenOS 16 update for its flagship smartphones OnePlus 13 and OnePlus 13s. The update is rolling out in a phased manner in the country, with the first version being CPH2649_16.0.0.210 (EX01) for OnePlus 13 users and CPH2723_16.0.0.211 (EX01) for OnePlus 13s users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+