Home
ಸುದ್ದಿಜಾಲ

ಎರಡೇ ದಿನದಲ್ಲಿ ಗಿನ್ನಿಸ್ ರೆಕಾರ್ಡ್ ಸೃಷ್ಟಿಸಿತು 'ಒನ್‌ಪ್ಲಸ್ 6T'!

ಭಾರತದ ನಂ.1 ಪ್ರೀಮಿಯಮ್ ಬ್ರ್ಯಾಂಡ್ ಮೊಬೈಲ್ ಮಾರಾಟಗಾರ ಕಂಪೆನಿ 'ಒನ್‌ಪ್ಲಸ್' ಗಿನ್ನಿಸ್ ದಾಖಲೆ ಸೃಷ್ಟಿಸಿದೆ. ಚೀನಾದ ಒನ್‌ಪ್ಲಸ್ ಕಂಪೆನಿಯ ಅತ್ಯಾಧುನಿಕ ಫ್ಲಾಗ್‌ಶಿಪ್ ಸ್ಮಾರ್ಟ್‌ ಫೋನ್ 'ಒನ್‌ಪ್ಲಸ್ 6T' ಬಿಡುಗಡೆಯಾದ ಮೊದಲ 48 ಗಂಟೆಗಳಲ್ಲೇ, ಏಕಕಾಲದಲ್ಲಿ ಅತಿ ಹೆಚ್ಚಿನ ಜನರಿಂದ ಅನ್‌ಬಾಕ್ಸ್ ಆದ ಹೊಸ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗೆ ಈಗ ಸೇರ್ಪಡೆಯಾಗಿದೆ.

ನವೆಂಬರ್ 1 ರಂದು ಗುರುವಾರ ರಾತ್ರಿ 8.30ಕ್ಕೆ ಗಿನ್ನಿಸ್ ದಾಖಲೆಯ ಪ್ರಯತ್ನ ಪ್ರಾರಂಭಿಸಿದ ಒನ್‌ಪ್ಲಸ್ ಕಂಪೆನಿಯು ಭಾರತದಲ್ಲಿ ಗಿನ್ನಿಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದು, ಒಂದೇ ಬಾರಿಗೆ 559 ಜನ ಒನ್‌ಪ್ಲಸ್ ಸಮುದಾಯ ಸದಸ್ಯರು 'ಒನ್‌ಪ್ಲಸ್ 6T' ಅನ್‌ಬಾಕ್ಸ್ ಮಾಡಿ ದಾಖಲೆ ನಿರ್ಮಿಸಿದ್ದನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ ಅಡ್ಜ್ಯೂಡಿಟರ್ 'ರಿಷಿ ನಾಥ್' ಅವರು ಸ್ಪಷ್ಟಪಡಿಸಿದ್ದಾರೆ.

ಎರಡೇ ದಿನದಲ್ಲಿ ಗಿನ್ನಿಸ್ ರೆಕಾರ್ಡ್ ಸೃಷ್ಟಿಸಿತು 'ಒನ್‌ಪ್ಲಸ್ 6T'!

ಈ ದಾಖಲೆಯ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಅಡ್ಜ್ಯೂಡಿಟರ್ ಆಗಿದ್ದ 'ರಿಷಿ ನಾಥ್' ಅವರು ಒನ್‌ಪ್ಲಸ್ ಕಂಪೆನಿಯನ್ನು ಕೊಂಡಾಡಿದ್ದಾರೆ. ಒನ್‌ಪ್ಲಸ್ ಸಮುದಾಯದಿಂದ ಪ್ರದರ್ಶಿತವಾದ ಈ ರೀತಿಯ ಶಕ್ತಿ ಹಾಗೂ ಉತ್ಸಾಹದಿಂದ ಆಶ್ಚರ್ಯಚಕಿತನಾದೆ. ಈ ದಾಖಲೆಯು ಭಾರತದಲ್ಲಿ ಒನ್‌ಪ್ಲಸ್ ಕಂಪೆನಿಯ ಬ್ರ್ಯಾಂಡ್‌ನ ಜನಪ್ರಿಯತೆಯ ಬಲವರ್ಧನೆಯಾಗಿದೆ ಎಂದು ಹೇಳಿದ್ದಾರೆ.

ಎರಡೇ ದಿನದಲ್ಲಿ ಗಿನ್ನಿಸ್ ರೆಕಾರ್ಡ್ ಸೃಷ್ಟಿಸಿತು 'ಒನ್‌ಪ್ಲಸ್ 6T'!

ಇನ್ನು ಒನ್‌ಪ್ಲಸ್ ಇಂಡಿಯಾ ಜನರಲ್ ಮ್ಯಾನೇಜರ್ ವಿಕಾಸ್ ಅಗರ್ವಾಲ್, ಬಳಕೆದಾರ ಅನುಭವವನ್ನು ರಚಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಇತ್ತೀಚಿನ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಯತ್ನವು ಅಂತಹ ಒಂದು ಪ್ರಯತ್ನವಾಗಿತ್ತು ಎಂದು ಹೇಳಿದ್ದಾರೆ. ಹಾಗಾದರೆ, ಮೊನ್ನೆಯಷ್ಟೆ ಬಿಡುಗಡೆಯಾದ 'ಒನ್‌ಪ್ಲಸ್ 6T' ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡ್ಯಾಶ್‌ ಚಾರ್ಜಿಂಗ್

ಡ್ಯಾಶ್‌ ಚಾರ್ಜಿಂಗ್

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಹಿಂದಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಕಂಪನಿಯ ಟ್ರಾಕ್‌ ರೆಕಾರ್ಡ್‌ನ್ನು ಗಮನಿಸಿದರೆ, ಒನ್‌ಪ್ಲಸ್‌ ಡಿವೈಸ್‌ಗಳು ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಈ ಬಾರಿಯ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸಮಯ ಬಳಸಲು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌

ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಇತ್ತೀಚಿನ ಆಂಡ್ರಾಯ್ಡ್ ಪೈ ಒಎಸ್‌ನೊಂದಿಗೆ ಬಂದಿದೆ. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ ಹೊರತುಪಡಿಸಿ ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌ ಒಎಸ್‌ನೊಂದಿಗೆ ಮಾರುಕಟ್ಟೆಗೆ ಬಂದಿರುವ ಮೊದಲ ಸ್ಮಾರ್ಟ್‌ಫೋನ್‌ ಆಗಿದೆ. Google I/O ದಲ್ಲಿ ಪರಿಚಯಿಸಲ್ಪಟ್ಟ ಗೂಗಲ್‌ನ ಗೆಸ್ಚರ್‌ ನ್ಯಾವಿಗೇಷನ್‌ ಫೀಚರ್‌ನ್ನುಆಂಡ್ರಾಯ್ಡ್‌ಪೈ ಬೆಂಬಲಿತ Oxyzen OS ಒನ್‌ಪ್ಲಸ್‌ನಲ್ಲಿ ಇದೆ. ಇದು ಹೊಸ ಬ್ಯಾಟರಿ ಫೀಚರ್ ಹೊಂದಿದ್ದು, ಈ ಆಪ್‌ ಮೊಬೈಲ್ ಬಳಕೆಯನ್ನು ವಿಶ್ಲೇಷಿಸಿ, ಬಳಕೆದಾರನ ಬಳಕೆಗೆ ತಕ್ಕಂತೆ ಬ್ಯಾಟರಿ ಸಾಮರ್ಥ್ಯವನ್ನು ವಿನಿಯೋಗಿಸುತ್ತದೆ. ಆಂಡ್ರಾಯ್ಡ್ ಪೈ ಆಧಾರಿತ OxygenOS 9.0 ಒಎಸ್‌ನ್ನು ಹಿಂದಿನ ಆವೃತ್ತಿ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ಗೂ ರೋಲ್‌ ಔಟ್‌ ಮಾಡುತ್ತಿದೆ.

ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು

ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು

ಒನ್‌ಪ್ಲಸ್‌ 6T ಬಿಡುಗಡೆ ಮಾಡುವುದರ ಜತೆ ಕಂಪನಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಏನನ್ನಾದರೂ ನೀಡಬೇಕೆಂಬ ಉದ್ದೇಶದಿಂದ ಸ್ಮಾರ್ಟ್‌ಫೋನಿನಲ್ಲಿ ಟೈಪ್-ಸಿ ಜ್ಯಾಕ್ ಜತೆ ಬರುವ ಹೊಸ ಬುಲೆಟ್‌ ಇಯರ್‌ಫೋನ್‌ಗಳನ್ನು ನೀಡಿದೆ. ಲಾಂಚ್‌ ಆದಾಗಿನಿಂದ ಸ್ಮಾರ್ಟ್‌ಫೋನ್‌ ಆಸಕ್ತರ ಬಾಯಲ್ಲಿ ಹೆಚ್ಚು ಹರಿದಾಡುತ್ತಿರದ್ದ ಮಾತು ಈಗ ನಿಜವಾಗಿದೆ. ಯಾವುದೇ ಅಡೆತಡೆಯಿಲ್ಲದ, ಎಫೆಕ್ಟ್‌ಗಳನ್ನು ಕಳೆದುಕೊಳ್ಳದೆ ಧ್ವನಿ ಮತ್ತು ಸಂಗೀತದ ಅನುಭವವನ್ನು ಪಡೆಯಬೇಕೆನ್ನುವವರಿಗೆ ಈ ಹೆಡ್‌ಫೋನ್ ಹತ್ತಿರವಾಗಬಹುದು.

3700 mAh ಬ್ಯಾಟರಿ ಸಾಮರ್ಥ್ಯ

3700 mAh ಬ್ಯಾಟರಿ ಸಾಮರ್ಥ್ಯ

ಹೊಸ ಸ್ಮಾರ್ಟ್‌ಫೋನ್‌ನ ಬ್ಯಾಟರಿ 3700 mAh ಸಾಮರ್ಥ್ಯ ಹೊಂದಿದ್ದು, ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ನ 3300 mAh ಬ್ಯಾಟರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚು ಸಮಯ ಬಳಸಲು ಇದು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ತನ್ನ ಬೆಲೆ ವರ್ಗದ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಆಕರ್ಷಕವಾದ ಮಲ್ಟಿಮೀಡಿಯಾ ಅನುಭವವನ್ನು ನೀಡುತ್ತದೆ. 6.4 ಇಂಚು AMOLED ಡಿಸ್‌ಪ್ಲೇ, ಫುಲ್ ಹೆಚ್‌ಡಿ ಪ್ಲಸ್ 2340p x 1080 ರೆಸೊಲ್ಯುಶನ್ ದೊಡ್ದ್ ಡಿಸ್‌ಪ್ಲೇ ಹೊಂದಿದ್ದು, ಬೆಜೆಲ್‌ ಲೆಸ್‌ AMOLED ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನೋಚ್‌ನೊಂದಿಗೆ ಅಳವಡಿಸಲಾಗಿದೆ. ಫ್ರಾಂಟ್ ಕ್ಯಾಮೆರಾವನ್ನು ಸಣ್ಣ ನೀರಿನ ಬಿಂದುವಿನಂತ ಜಾಗದಲ್ಲಿ ಅಳವಡಿಸಿದ್ದು, ಆಕರ್ಷಕವಾಗಿದೆ. ಎಡ್ಜ್‌-ಟು-ಎಡ್ಜ್‌ ಸ್ಕ್ರೀನ್ ವೀಕ್ಷಣೆ ಅನುಭವವನ್ನು ನೀಡುವ ಒನ್‌ಪ್ಲಸ್‌ 6T ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಹೇಳಿ ಮಾಡಿಸಿದಂತಿದೆ.

ಸ್ಮಾರ್ಟ್‌ಫೋನ್ ಜೊತೆಗಿನ ಲಾಭಗಳು!

ಸ್ಮಾರ್ಟ್‌ಫೋನ್ ಜೊತೆಗಿನ ಲಾಭಗಳು!

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಖರೀದಿ ಜತೆಗೆ ಒನ್‌ಪ್ಲಸ್ ಬ್ಯಾಕ್‌ಪ್ಯಾಕ್ (4,999) ಮತ್ತು ಟೈಪ್ ಸಿ ಬುಲೆಟ್ಸ್ (ಇಯರ್ ಫೋನ್) 1499 ರೂ.ಗೆ ಲಭ್ಯವಾಗಲಿದೆ ಎಂದು ಘೋಷಿಸಲಾಗಿದೆ. 2 ವರ್ಷ ಸಾಫ್ಟ್‌ವೇರ್ ಅಪ್‌ಡೇಟ್ಸ್ ಹಾಗೂ 3 ವರ್ಷ ಸೆಕ್ಯುರಿಟಿ ಅಪ್‌ಡೇಟ್ಸ್ ದೊರೆಯಲಿದೆ ಎಂದು ಒನ್‌ಪ್ಲಸ್ ಕಂಪೆನಿ ಪ್ರಕಟಿಸಿದೆ. ಅಮೆಜಾನ್ ಪೇ ಜೊತೆಗೆ 1000 ಹೆಚ್ಚುವರಿ ಡಿಸ್ಕೌಂಟ್ ಸಿಗಲಿದೆ. ಮತ್ತು ನೋ ಕಾಸ್ಟ್ ಇಎಂಐ ಮೂಲಕ ಸ್ಮಾರ್ಟ್‌ಪೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ರಿಲಯನ್ಸ್ ಸ್ಟೋರ್‌ಗಳಲ್ಲಿ ಕೂಡ ಲಭ್ಯ!

ರಿಲಯನ್ಸ್ ಸ್ಟೋರ್‌ಗಳಲ್ಲಿ ಕೂಡ ಲಭ್ಯ!

ಅಮೆಜಾನ್ ಪ್ರೈಮ್ ನೌ ಗ್ರಾಹಕರಿಗೆ ಇದು ನವೆಂಬರ್ 1ರಂದೇ ಕೈಗೆ ಸಿಗಲಿದೆ. ಗರಿಷ್ಠ ಸಂಖ್ಯೆಯಲ್ಲಿ ಅನ್‌ಬಾಕ್ಸಿಂಗ್ ಮಾಡುವ ಅಭಿಯಾನವನ್ನು ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳಿಸಲು ಕಂಪನಿ ಉತ್ಸುಕವಾಗಿದೆ. ಇದಕ್ಕಾಗಿಯೇ ನವೆಂಬರ್ 1ರಂದು ಮುಂಬಯಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕಂಪನಿಯ ವೆಬ್‌ಸೈಟು, ಕ್ರೋಮಾ ಸ್ಟೋರ್ ಹಾಗೂ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಕೂಡ ಒನ್‌ಪ್ಲಸ್ 6ಟಿ ಲಭ್ಯವಿರುತ್ತದೆ. ರಿಲಯನ್ಸ್ ಜಿಯೋ ಜತೆಗೆ ಕ್ಯಾಶ್‌ಬ್ಯಾಕ್ ಆಫರ್ ಕೂಡ ದೊರೆಯಲಿದೆ.

ಬೆಂಗಳೂರಿನಲ್ಲಿ ಒನ್‌ಪ್ಲಸ್ 6ಟಿ

ಬೆಂಗಳೂರಿನಲ್ಲಿ ಒನ್‌ಪ್ಲಸ್ 6ಟಿ

ನವೆಂಬರ್ 2ರಂದು ಬೆಂಗಳೂರಿನಲ್ಲಿ ಒನ್‌ಪ್ಲಸ್ 6ಟಿ ಫೋನನ್ನು ಬ್ರಿಗೇಡ್ ರೋಡ್ ಹಾಗೂ ಜಯನಗರ 4ನೇ ಬ್ಲಾಕ್‌ನಲ್ಲಿರುವ ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್‌ನಲ್ಲಿ ನೋಡಿ ಖರೀದಿಸಬಹುದು. ಬುಕಿಂಗ್‌ಗೆ ಅದ್ಭುತ ಕೊಡುಗೆಗಳೂ ಇವೆ. ಮೊದಲ 5 ಖರೀದಿದಾರರಿಗೆ ಟ್ರಾವೆಲ್ ಬ್ಯಾಕ್‌ಪ್ಯಾಕ್, ಒನ್‌ಪ್ಲಸ್ 6ಟಿ ಕೇಸ್‌ಗಳು ಮತ್ತು ಸ್ಕೆಚ್ ಬುಕ್, ಮೊದಲ 50 ಖರೀದಿದಾರರಿಗೆ ಒನ್‌ಪ್ಲಸ್ ಸ್ಕೆಚ್ ಬುಕ್ ಮತ್ತು ಎನ್ಎಸ್ ಟಿ-ಶರ್ಟ್, ಮುಂದಿನ 50 ಖರೀದಿದಾರರಿಗೆ ಒನ್‌ಪ್ಲಸ್ ಸ್ಕೆಚ್ ಬುಕ್ ಹಾಗೂ ಒಂದು ಟೋಟ್ ಬ್ಯಾಗ್ ಸಿಗಲಿದೆ.

ಭಾರತದಲ್ಲಿ ಸ್ಮಾರ್ಟ್‌ಫೋನ್ ಬೆಲೆಗಳು

ಭಾರತದಲ್ಲಿ ಸ್ಮಾರ್ಟ್‌ಫೋನ್ ಬೆಲೆಗಳು

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬೆಲೆ 37,999 ರೂ.ಗಳಿಂದ ಆರಂಭವಾಗಿದೆ. 64 ಜಿಬಿ ಸ್ಟೋರೇಜ್‌ನ ಆವೃತ್ತಿಯ ಬದಲು 128 ಜಿಬಿಯಲ್ಲಿ 6 ಜಿಬಿ ಮತ್ತು 8 ಜಿಬಿ RAM ಇರುವ ಹಾಗೂ 256 ಜಿಬಿ, 8 ಜಿಬಿ RAM - ಹೀಗೆ ಒಟ್ಟು ಮೂರು ವಿಧಗಳಲ್ಲಿ ಲಭ್ಯವಿದ್ದು, 6 GB+128 GB ಆವೃತ್ತಿಗೆ 37,999 ರೂ. 8GB + 128 GB ಆವೃತ್ತಿಗೆ 41,999 ರೂ. ಹಾಗೂ 8 GB+ 256 GB ಆವೃತ್ತಿಗೆ 45,999 ರೂ. ಬೆಲೆಗಳು ನಿಗದಿಯಾಗಿವೆ. 8GB RAM / 256GB ಸಂಗ್ರಹ ಮಾದರಿಯು ಮಿಡ್ನೈಟ್ ಬ್ಲ್ಯಾಕ್ ಬಣ್ಣ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ.

Best Mobiles in India

English summary
OnePlus set a new GUINNESS WORLD RECORDS title for the Most people unboxing simultaneously. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+