'ಒನ್‌ಪ್ಲಸ್ ಟಿವಿ': ಬ್ರ್ಯಾಂಡ್ ಹೆಸರು ಮತ್ತು ಲೋಗೋ ಬಿಡುಗಡೆ!

|

ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿರುವ ಒನ್‌ಪ್ಲಸ್ ಸ್ಮಾರ್ಟ್ ಟಿವಿಯ ಬ್ರ್ಯಾಂಡ್ ಹೆಸರು ಮತ್ತು ಲೋಗೋವನ್ನು ಬಿಡುಗಡೆ ಮಾಡಿ ಒನ್‌ಪ್ಲಸ್ ಕಂಪೆನಿ ಸಿಹಿಸುದ್ದಿ ನೀಡಿದೆ. 'ಒನ್‌ಪ್ಲಸ್ ಟಿವಿ' ಎನ್ನುವುದು ಕಂಪೆನಿಯ ಹೊಸ ಟಿವಿಯ ಹೆಸರಾಗಿದ್ದು, ಒನ್‌ಪ್ಲಸ್ ಲೋಗೋ ಪಕ್ಕದಲ್ಲಿ ಟಿವಿ ಎನ್ನುವ ಅಕ್ಷರಗಳಿರುವ ಲೋಗೋವನ್ನು ಒನ್‌ಪ್ಲಸ್ ಕಂಪೆನಿ ಪರಿಚಯಿಸಿದೆ.

'ಒನ್‌ಪ್ಲಸ್ ಟಿವಿ': ಬ್ರ್ಯಾಂಡ್ ಹೆಸರು ಮತ್ತು ಲೋಗೋ ಬಿಡುಗಡೆ!

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಒನ್‌ಪ್ಲಸ್ ಸ್ಮಾರ್ಟ್‌ಟಿವಿ ಬಿಡುಗಡೆಗೆ ಮುಂದಾಗಿದೆ. ಹೊಸ ಟಿವಿ ಪ್ರಮಾಣೀಕೃತ ವೆಬ್‌ಸೈಟ್‌ಗಳಲ್ಲಿ ಪರೀಕ್ಷಾರ್ಥ ಬಳಕೆಯಲ್ಲಿದ್ದು, ಸಂಬಂಧಿತ ಸಂಸ್ಥೆಗಳಲ್ಲಿ ಪ್ರಮಾಣೀಕರಣಗೊಂಡ ಬಳಿಕ ಹೊಸ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಲಿದೆ. ವಿಶೇಷವೆಂದರೆ, ಭಾರತಕ್ಕೆ ಒಂದು ಪ್ರತ್ಯೇಕ ಮಾದರಿಯಲ್ಲಿ ಟಿವಿ ಲಭ್ಯವಾಗಲಿದೆ.

'ಒನ್‌ಪ್ಲಸ್ ಟಿವಿ': ಬ್ರ್ಯಾಂಡ್ ಹೆಸರು ಮತ್ತು ಲೋಗೋ ಬಿಡುಗಡೆ!

(ಬ್ರ್ಯಾಂಡ್ ಹೆಸರು ಮತ್ತು ಲೋಗೋ)

ಚೀನಾ ಮತ್ತು ಅಮೆರಿಕಾದಲ್ಲಿ ಒನ್‌ಪ್ಲಸ್ ಟಿವಿಯು 55, 65 ಮತ್ತು 75 ಇಂಚಿನ ಮಾದರಿಗಳಲ್ಲಿ ಲಭ್ಯವಾಗಲಿದೆ. ಆದರೆ, ಭಾರತದಲ್ಲಿ 43 ಇಂಚಿನ ರೂಪಾಂತರದ ಟಿವಿ ಸೇರಿದಂತೆ ಎಲ್ಲಾ ಮಾದರಿಗ ಟಿವಿಗಳು ಬಿಡುಗಡೆಯಾಗಲಿವೆ. ಹಾಗಾದರೆ, ಟಿವಿ ಮಾರುಕಟ್ಟೆಯಲ್ಲಿ ಬಿರುಗಾಳಿ ಬೀಸಲು ಬರುತ್ತಿರುವ 'ಒನ್‌ಪ್ಲಸ್ ಟಿವಿ' ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಒನ್‌ಪ್ಲಸ್ ಮುಂದಿನ ನಡೆಯೇನು?

ಒನ್‌ಪ್ಲಸ್ ಮುಂದಿನ ನಡೆಯೇನು?

ಭಾರತದ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ದಿಗ್ಗಜ ಒನ್‌ಪ್ಲಸ್ ಮತ್ತೊಂದು ಹೆಜ್ಜೆಯನ್ನು ಇಡುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ, ನಮ್ಮ ಕಲ್ಪನೆಯು ಅಂತ್ಯವಿಲ್ಲ. ನಾವು ಭವಿಷ್ಯದ ಮುಂದೆ ನೋಡುತ್ತಿದ್ದೇವೆ ಎಂದುಒನ್‌ಪ್ಲಸ್ ಕಂಪೆನಿ ಸಹ ಸಂಸ್ಥಾಪಕ ಪೀಟ್ ಲೌ ಅವರು ಹೇಳಿದ್ದಾರೆ. ಹಾಗಾಗಿ, ಒನ್‌ಪ್ಲಸ್ ಪ್ರೀಮಿಯಮ್ ಟಿವಿ ಕುತೂಹಲ ಮೂಡಿಸಿದೆ.

ನಿರೀಕ್ಷೆಗೂ ಮೀರಿದ ಸ್ಮಾರ್ಟ್‌ಟಿವಿ!

ನಿರೀಕ್ಷೆಗೂ ಮೀರಿದ ಸ್ಮಾರ್ಟ್‌ಟಿವಿ!

ಮೊಬೈಲ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಕಂಪೆನಿಯಷ್ಟು ಅರ್ಥಮಾಡಿಕೊಂಡ ಮತ್ತೊಂದು ಕಂಪೆನಿ ಇಲ್ಲ ಎನ್ನುತ್ತಾರೆ. ಅದೇ ದೃಷ್ಟಿಯಲ್ಲಿ ನೋಡುವುದಾದರೆ, ಒನ್‌ಪ್ಲಸ್ ಕಂಪೆನಿ ಟೆಲಿವಿಷನ್ ಉದ್ಯಮದಲ್ಲಿ ಅಂತರವನ್ನು ಪರಿಹರಿಸಲು ಸಿದ್ಧವಾಗಿರುವುದಾಗಿ ಹೇಳಿಕೊಂಡಿದೆ. ಇದು ಪ್ರೀಮಿಯಂ ಟಿವಿ ವಿಭಾಗದಲ್ಲಿ ನಿರೀಕ್ಷೆಯನ್ನು ಮೀರಿರುವ ಸಾಧ್ಯತೆಗಳನ್ನು ಹೊಂದಿದೆ.

ಮಿತಿಯಿಲ್ಲದ ತಂತ್ರಜ್ಞಾನಗಳು

ಮಿತಿಯಿಲ್ಲದ ತಂತ್ರಜ್ಞಾನಗಳು

ಇಂದು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಟಿವಿಗಳು ಕೇವಲ ಟಿವಿಗಳಾಗಿ ಉಳಿದಿಲ್ಲ. ಹಾಗಾಗಿ, ಒನ್‌ಪ್ಲಸ್ ಕಂಪೆನಿ ತನ್ನ ಮುಂಬರುವ ಪ್ರೀಮಿಯಂ ಟಿವಿ ವಿಭಾಗದಲ್ಲಿ ಉತ್ತಮ ಗುಣಮಟ್ಟದ ಹಾರ್ಡ್ವೇರ್ಗಳನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಕೃತಕ ಬುದ್ದಿಮತ್ತೆ ತಂತ್ರಜ್ಞಾನಮಿತಿಯಿಲ್ಲದ ಬಳಕೆದಾರರ ಅನುಭವವನ್ನು ಸೃಷ್ಟಿಸುತ್ತವೆ ಎಂದು ಒನ್‌ಪ್ಲಸ್ ಕಂಪೆನಿಯೇ ಹೇಳಿಕೊಂಡಿದೆ.

ವಿನ್ಯಾಸಕ್ಕೆ ಸಾಟಿಯೇ ಇಲ್ಲವಂತೆ.!

ವಿನ್ಯಾಸಕ್ಕೆ ಸಾಟಿಯೇ ಇಲ್ಲವಂತೆ.!

ಭಾರತದ ಟಿವಿ ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಆವೃತ್ತಿಯಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿರುವ ಒನ್‌ಪ್ಲಸ್ ಈ ವರೆಗೂ ಟಿವಿಗೆ ಹೆಸರನ್ನು ನಿಗದಿಪಡಿಸಿಲ್ಲ. ಆದರೆ, ಒನ್‌ಪ್ಲಸ್ ಕಂಪೆನಿಯ ಟಿವಿ ತನ್ನ ವಿನ್ಯಾಸದಿಂದಲೇ ಹೆಚ್ಚು ಸದ್ದು ಮಾಡಲಿದೆ ಎಂದು ಒನ್‌ಪ್ಲಸ್ ಮಾಹಿತಿ ಬಿಟ್ಟುಕೊಟ್ಟಿದೆ. ಇದು ಸ್ಯಾಮ್‌ಸಂಗ್ ಕಂಪೆನಿಗೆ ನೇರ ಸವಾಲಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಏನೆನೆಲ್ಲಾ ನಿರೀಕ್ಷಿಸಬಹುದು?

ಏನೆನೆಲ್ಲಾ ನಿರೀಕ್ಷಿಸಬಹುದು?

ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಕಣ್ಣಿಗೆ ಬೇಕಾದಂತಹ ಸ್ಮಾರ್ಟ್‌ಟಿವಿಗಳು ಲಭ್ಯವಿವೆ. ಆದರೆ, ಒನ್‌ಪ್ಲಸ್ ಟಿವಿ ಇಷ್ಟು ಕುತೋಹಲ ಮುಡಿಸಲು ಅದರ ತಂತ್ರಜ್ಞಾನ ಕೂಡ ಕಾರಣ. ಹಾಗಾಗಿ, 4K ಮೀರಿದ ಡಿಸ್‌ಪ್ಲೇ, ಆಂಡ್ರಾಯ್ಡ್ ಪ್ಯಾಕ್, ಸಂಪೂರ್ಣ ವಾಯ್ಸ್ ಅಸಿಸ್ಟೆಂಟ್, ಬೆಸ್ಟ್ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್‌ಗಳನ್ನು ಒನ್‌ಪ್ಲಸ್ ಅಭಿಮಾನಿಗಳು ನಿರೀಕ್ಷಿಸಬಹುದು.

Best Mobiles in India

English summary
OnePlus said that it is committed to the vision of a connected home environment. The company will continue to evolve the OnePlus TV, as well as the brand’s other mobile devices. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X