Home
ಸುದ್ದಿಜಾಲ

ದೀಪಾವಳಿ ಹಬ್ಬದ ವೇಳೆ ದಾಖಲೆ ಮೊತ್ತದ 'ಒನ್‍ಪ್ಲಸ್' ಉತ್ಪನ್ನಗಳ ಮಾರಾಟ!

ವಿಶ್ವ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಯಶಸ್ಸಿನಲ್ಲಿ ತೇಲುತ್ತಿರುವ ಒನ್‍ಪ್ಲಸ್ ಮೊಬೈಲ್ ಕಂಪೆನಿ ಈ ಬಾರಿಯ ದೀಪಾವಳಿಯಲ್ಲಿ ದೇಶದಲ್ಲಿ ದಾಖಲೆ ಮಾರಾಟ ಮಾಡಿದೆ. ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಅತ್ಯಂತ ಜನಪ್ರಿಯವಾಗಿರುವ ಒನ್‍ಪ್ಲಸ್ ಸಾಧನಗಳು ಆಫ್‌ಲೈನ್ ಮತ್ತು ಆನ್‌ಲೈನ್ ಮಾರಾಟದಲ್ಲಿ ದಾಖಲೆಯಾಗಿ 1500 ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದು, ಸೆಪ್ಟಂಬರ್ 28 ರಿಂದ ಅಕ್ಟೋಬರ್ 24 ರವರೆಗೆ ಇಂತಹದೊಂದು ಅಭೂತಪೂರ್ವವಾದ ಈ ಸಾಧನೆಯನ್ನು ಮಾಡಿರುವುದಾಗಿ ಕಂಪೆನಿ ಹೇಳಿಕೊಂಡಿದೆ.

ಒನ್‍ಪ್ಲಸ್ ಇಂಡಿಯಾ

ಈ ಯಶಸ್ಸಿನ ಬಗ್ಗೆ ಮಾತನಾಡಿದ ಒನ್‍ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್‍ವಾಲ್ ಅವರು ತಿಳಿಸಿದ್ದು, ದೇಶಾದ್ಯಂತ ನಮ್ಮ ಗ್ರಾಹಕರು ಒನ್‍ಪ್ಲಸ್ ಉತ್ಪನ್ನಗಳ ಖರೀದಿಯಲ್ಲಿ ತೋರಿರುವ ಉತ್ಸಾಹವನ್ನು ಕಂಡು ನಮಗೆ ಅತೀವ ಆನಂದವಾಗಿದೆ. ಅವರ ಈ ಉತ್ಸಾಹದಿಂದಲೇ ನಾವು ಈ ಗಣನೀಯ ಸಾಧನೆ ಮಾಡಲು ಸಾಧ್ಯವಾಗಿದೆ. ಇದಕ್ಕಾಗಿ ನಾವು ನಮ್ಮ ಗ್ರಾಹಕ ಸಮುದಾಯಕ್ಕೆ ಆಭಾರಿಯಾಗಿದ್ದೇವೆ. ಈ ಯಶಸ್ಸು ನಮಗೆ ಇನ್ನೂ ಅತ್ಯುತ್ತಮವಾದ ಉತ್ಪನ್ನಗಳನ್ನು ಪರಿಚಯಿಸಲು ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ದೀಪಾವಳಿ ಮಾರಾಟ

ದೀಪಾವಳಿ ಮಾರಾಟದಲ್ಲಿ ಒಟ್ಟು ವಾಣಿಜ್ಯ ಮೌಲ್ಯ (ಜಿಎಂವಿ) ಮೌಲ್ಯದ 1,500 ಕೋಟಿ ರೂ.ಗಳ ಮಾರಾಟವನ್ನು ಗಳಿಸಿರುವುದಾಗಿ ಹೇಳಿರುವ ಒನ್‌ಪ್ಲಸ್ ಇದೇ ವೇಳೆ ಮತ್ತೊಂದು ದಾಖಲೆಯನ್ನು ಸಹ ತನ್ನ ಹೆಸರಿಗೆ ಬರೆದುಕೊಂಡಿದೆ. ಒನ್‌ಪ್ಲಸ್ ಆಂಡ್ರಾಯ್ಡ್ ಟಿವಿ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾದ ಉತ್ಪನ್ನಗಳ ಯಶಸ್ಸಿನ ಮೇಲೆ ಕಂಪನಿಯು ಅಮೆಜಾನ್ ಮತ್ತು ಆಫ್‌ಲೈನ್ ಪಾಲುದಾರ ಮಳಿಗೆಗಳಲ್ಲಿ ಸ್ಮಾರ್ಟ್ ಟಿವಿ ಮತ್ತು ಸ್ಮಾರ್ಟ್‌ಫೋನ್ ವಿಭಾಗಗಳಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಬ್ರಾಂಡ್ ಆಗಿ ಹೊರಹೊಮ್ಮಿದೆ ಎಂದು ಹೇಳಲಾಗಿದೆ.

ದೀಪಾವಳಿ ಮಾರಾಟ

ಆರ್ಥಿಕ ಕುಸಿತವನ್ನು ಎದುರಿಸುತ್ತಿರುವ ಹಲವಾರು ಕ್ಷೇತ್ರಗಳ ಹೊರತಾಗಿಯೂ ಎಲೆಕ್ಟ್ರಾನಿಕ್ಸ್ ಉದ್ಯಮವು ದೀಪಾವಳಿ ಮಾರಾಟ ಋತುವಿನಲ್ಲಿ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದ್ದು, ಹಬ್ಬದ ಸಂದರ್ಭದಲ್ಲಿ ಆಫ್‌ಲೈನ್ ಮತ್ತು ಆನ್‌ಲೈನ್ ಮಾರಾಟ ಪಾಲುದಾರಿಕೆ ಸ್ಟೋರ್‌ಗಳಲ್ಲಿ ಅಭೂತಪೂರ್ವವಾದ ಮಾರಾಟವನ್ನು ಕಂಡಿದ್ದೇವೆ. ಒನ್‍ಪ್ಲಸ್ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇತ್ತೀಚೆಗೆ ಬಿಡುಗಡೆ ಮಾಡಲಾದ ಒನ್‍ಪ್ಲಸ್ ಟಿವಿ ಆಫ್‌ಲೈನ್ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಅತ್ಯಧಿಕ ಮಾರಾಟವನ್ನು ಕಂಡಿರುವುದಾಗಿ ಒನ್‌ಪ್ಲಸ್ ಕಂಪೆನಿ ತಿಳಿಸಿದೆ.

ಕೌಂಟರ್ಪಾಯಿಂಟ್ ರಿಸರ್ಚ್

ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ, ಆರ್ಥಿಕ ಕುಸಿತವು ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿದ್ದರೂ ಸಹ, 2019ರ ಮೂರನೇ ತ್ರೈಮಾಸಿಕದಲ್ಲಿ ಭಾರತವು 4.9 ಕೋಟಿ ಸ್ಮಾರ್ಟ್‌ ಫೋನ್‌ಗಳ ಮಾರಾಟ ದಾಖಲಿಸಿದೆ. ಹೊಸ ಉಡಾವಣೆಗಳು, ರಿಯಾಯಿತಿಗಳು ಸ್ಮಾರ್ಟ್‌ ಫೋನ್‌ಗಳ ಮಾರಾಟವನ್ನು ಹೆಚ್ಚಿಸಿದ್ದು, ಒನ್‌ಪ್ಲಸ್‌, ರಿಯಲ್‌ಮಿ, ವಿವೊ, ಐಟೆಲ್ ಮತ್ತು ಕಂಪೆನಿಗಳು ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ಗಳಾಗಿವೆ, ಇನ್ನು ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ ಪ್ರಾಬಲ್ಯ ಮುಂದುವರಿಸಿದೆ.

Best Mobiles in India

English summary
Oneplus Smartphones, TV sales break records in Diwali season.- OnePlus TV has also witnessed commendable sales across both online and offline platforms. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+