ವಿದ್ಯಾರ್ಥಿಗಳನ್ನೇ ರಾಯಭಾರಿ ಮಾಡ್ತಿದೆ ಒನ್‌ಪ್ಲಸ್‌..! ನೀವು ಆಗಬಹುದು ರಾಯಭಾರಿ!!

By Avinash
|

ಪ್ರಖ್ಯಾತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಹಾಗೂ ಆಪಲ್ ಐಪೋನ್‌ನ ಸಮೀಪದ ಪ್ರತಿಸ್ಪರ್ಧಿ ಒನ್‌ಪ್ಲಸ್‌ ಹೊಸ ಯೋಜನೆಯೊಂದನ್ನು ಸಿದ್ಧಮಾಡಿಕೊಂಡಿದ್ದು, ತನ್ನ ಉತ್ಪನ್ನಗಳ ಮಾರುಕಟ್ಟೆ ವಿಭಾಗದಲ್ಲಿ ವಿದ್ಯಾರ್ಥಿಗಳನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುತ್ತಿದೆ. ಭಾರತದ ವಿದ್ಯಾರ್ಥಿಗಳಿಗಾಗಿಯೇ ಹೊಸ ಪ್ಲಾನ್ ಜಾರಿಗೆ ತಂದಿದೆ.

ವಿದ್ಯಾರ್ಥಿಗಳನ್ನೇ ರಾಯಭಾರಿ ಮಾಡ್ತಿದೆ ಒನ್‌ಪ್ಲಸ್‌..! ನೀವು ಆಗಬಹುದು ರಾಯಭಾರಿ!!

ಹೀಗಾಗಲೇ ತನ್ನ ಸ್ಮಾರ್ಟ್‌ಫೋನ್‌ಗಳಿಂದ ಸದ್ದುಮಾಡುತ್ತಿದ್ದ ಒನ್‌ಪ್ಲಸ್ 'ವಿದ್ಯಾರ್ಥಿ ರಾಯಭಾರಿ' ಎಂಬ ಹೊಸ ಪ್ಲಾನ್‌ನೊಂದಿಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿದೆ. ಎಲ್ಲ ಸ್ಮಾರ್ಟ್‌ಫೋನ್ ಕಂಪನಿಗಳು ಸೆಲೆಬ್ರಿಟಿಗಳ ಹಿಂದೆ ಬಿದ್ದಿರುವಾಗ ಒನ್‌ಪ್ಲಸ್‌ ಹೊಸ ಪ್ಲಾನ್‌ನಿಂದ ವಿಭಿನ್ನವಾಗಿ ಕಾಣುತ್ತಿದೆ. ಒನ್‌ಪ್ಲಸ್‌ ಕಂಪನಿ ವಿದ್ಯಾರ್ಥಿಗಳನ್ನು ಪುಕ್ಕಟೆಯಾಗಿ ರಾಯಭಾರಿಯನ್ನಾಗಿ ನೇಮಕ ಮಾಡುತ್ತಿಲ್ಲ ಬದಲಾಗಿ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸಲಿದೆ.

ಏನೀದು ವಿದ್ಯಾರ್ಥಿ ರಾಯಭಾರಿ?

ಏನೀದು ವಿದ್ಯಾರ್ಥಿ ರಾಯಭಾರಿ?

ಇದೊಂದು ಕ್ಯಾಂಪಸ್ ಬೆಸೆಯುವಂತಹ ಕಾರ್ಯಕ್ರಮವಾಗಿದ್ದು, ಭಾರತದಾದ್ಯಂತವಿರುವ ಒಂದೇ ಅಭಿರುಚಿ ಹೊಂದಿರುವ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ತರುವ ಯೋಜನೆಯನ್ನು ಹೊಂದಲಾಗಿದೆ. 6 ತಿಂಗಳ ಅವಧಿಗೆ ಮಾತ್ರ ವಿದ್ಯಾರ್ಥಿ ರಾಯಭಾರಿ ಕಾರ್ಯಕ್ರಮವಿದ್ದು, ಸೆಪ್ಟೆಂಬರ್ 01, 2018ರಿಂದ ಪ್ರಾರಂಭವಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒನ್‌ಪ್ಲಸ್‌ ಸಹಯೋಗದಲ್ಲಿ ಅವರ ಕೌಶಲ್ಯ ಪ್ರಸ್ತುತಪಡಿಸಲು ಅವಕಾಶ ನೀಡಲಾಗುತ್ತದೆ.

ಯಾರು ಅರ್ಹರು?

ಯಾರು ಅರ್ಹರು?

ಒನ್‌ಪ್ಲಸ್‌ನ ವಿದ್ಯಾರ್ಥಿ ರಾಯಭಾರಿಗೆ ಅರ್ಜಿ ಸಲ್ಲಿಸುವವವರು ಕೆಳಗಿನ ಅರ್ಹತೆಗಳನ್ನು ಹೊಂದಿರುವುದು ಅವಶ್ಯ.
1. ಕನಿಷ್ಟ 18 ವರ್ಷದವರಾಗಿರಬೇಕು.
2. ಇಂಗ್ಲೀಷ್‌ನಲ್ಲಿ ಅದ್ಭುತ ಬರವಣಿಗೆ ಮತ್ತು ಮಾತನಾಡುವ ಕೌಶಲ್ಯ ಹೊಂದಿರಬೇಕು.
3. ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿ ರಾಯಭಾರಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ನೇರವಾಗಿ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ https://www.oneplus.in/campus ಅರ್ಜಿ ಸಲ್ಲಿಸಬಹುದು. ಅಥವಾ [email protected] ಮೇಲ್‌ ಮೂಲಕವು ಒನ್‌ಪ್ಲಸ್‌ ಸಂಪರ್ಕಿಸಬಹುದು. ನೀವು ಆಯ್ಕೆಯಾದರೆ ಒನ್‌ಪ್ಲಸ್ ನಿಮ್ಮನ್ನು 6 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳುತ್ತದೆ.

ಎಷ್ಟು ಅವಧಿಯ ಕಾರ್ಯಕ್ರಮ?

ಎಷ್ಟು ಅವಧಿಯ ಕಾರ್ಯಕ್ರಮ?

ಒನ್‌ಪ್ಲಸ್ ವಿದ್ಯಾರ್ಥಿ ರಾಯಭಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿ 6 ತಿಂಗಳ ಅವಧಿಯಲ್ಲಿ ಕನಿಷ್ಟ 100 ಗಂಟೆ ಕಾರ್ಯಕ್ರಮದ ಭಾಗವಾಗಬೇಕು ಎಂಬ ನಿಯಮವಿದೆ.

ವಿದ್ಯಾರ್ಥಿ ರಾಯಭಾರಿಯ ಜವಾಬ್ದಾರಿಗಳು

ವಿದ್ಯಾರ್ಥಿ ರಾಯಭಾರಿಯ ಜವಾಬ್ದಾರಿಗಳು

ಒನ್‌ಪ್ಲಸ್‌ನ ವಿದ್ಯಾರ್ಥಿ ರಾಯಭಾರಿ ಕೆಳಗಿನ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ.
1. ಸೃಜನಾತ್ಮಕ ಪ್ರಚಾರಾಂದೋಲನಗಳನ್ನು ಸೃಷ್ಟಿಸಿ ಕಾರ್ಯರೂಪಕ್ಕೆ ತರಬೇಕು.
2. ಒನ್‌ಪ್ಲಸ್ ಬ್ರಾಂಡ್‌ಗೆ ಸಂಬಂಧಿಸಿದಂತೆ ಮಾರುಕಟ್ಟೆ ಯೋಜನೆಗಳಲ್ಲಿ ಕಾರ್ಯನಿರ್ವಹಿಸಬೇಕು.
3. ಕ್ಯಾಂಪಸ್‌ನ ಕಾರ್ಯಕ್ರಮ ಹಾಗೂ ಚಟುವಟಿಕೆಗಳಲ್ಲಿ ಒನ್‌ಪ್ಲಸ್ ಹೆಸರು ಬರುವಂತೆ ಯೋಜನೆ ರೂಪಿಸಬೇಕು.

Oneplus 6 First Impressions - Gizbot Kannada
ಪ್ರಚಾರಾಂದೋಲನಗಳಿಗೆ ಒನ್‌ಪ್ಲಸ್ ಸಹಯೋಗ

ಪ್ರಚಾರಾಂದೋಲನಗಳಿಗೆ ಒನ್‌ಪ್ಲಸ್ ಸಹಯೋಗ

ವಿದ್ಯಾರ್ಥಿ ರಾಯಭಾರಿಗಳು ಕೈಗೊಳ್ಳುವ ಕ್ಯಾಂಪಸ್ ಪ್ರಚಾರಾಂದೋಲನಗಳಿಗೆ ಒನ್‌ಪ್ಲಸ್ ಸಹಯೋಗ ನೀಡಲಿದ್ದು, ಬೇಕಾದ ಸಂಪನ್ಮೂಲ, ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ಮಾರ್ಗದರ್ಶನವನ್ನು ಒನ್‌ಪ್ಲಸ್ ನೀಡುತ್ತದೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಯಾವುದೇ ಒತ್ತಡವಾಗುವುದಿಲ್ಲ.

ಏನೆಲ್ಲಾ ಸಿಗುತ್ತೇ?

ಏನೆಲ್ಲಾ ಸಿಗುತ್ತೇ?

ಒನ್‌ಪ್ಲಸ್‌ನ ವಿದ್ಯಾರ್ಥಿ ರಾಯಭಾರಿಗಳಿಗೆ ಅನೇಕ ಸೌಲಭ್ಯಗಳು ಸಿಗಲಿವೆ. ನಿಮ್ಮಲ್ಲಿನ ತಂತ್ರಗಾರಿಕೆ, ಸಂವಹನ, ನಾಯಕತ್ವ ಗುಣವನ್ನು ವೃದ್ಧಿಸುತ್ತದೆ. ಮತ್ತು ಇವುಗಳಿಂದ ನಿಮ್ಮನ್ನು ಜನ ಗುರುತಿಸುವಂತಾಗುತ್ತದೆ. ಔದ್ಯೋಗಿಕ ಅಂಧಗಳನ್ನು ಹೊರತು ಪಡಿಸಿದರೆ ಇತ್ತೀಚಿನ ಒನ್‌ಪ್ಲಸದ ಉತ್ಪನ್ನಗಳು, ಎಕ್ಸಕ್ಲೂಸವ್ ಅಕ್ಸೇಸರಿಸ್, ಮಾಸಿಕ ವೇತನ ಇರುತ್ತದೆ. ಹಾಗೂ ಒನ್‌ಪ್ಲಸ್‌ನ ಜಾಗತಿಕ ಕಚೇರಿಗಳಲ್ಲಿ ಇಂಟರ್ನ್‌ ಆಗಿ ಆಯ್ಕೆಯಾಗುವ ಅವಕಾಶವನ್ನು ನೀಡಲಾಗಿದೆ.

Best Mobiles in India

English summary
OnePlus Student Ambassador Program. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X